ಮಡಿಕೇರಿ: ತಲಕಾವೇರಿ ಬಳಿ ಗುಡ್ಡ ಕುಸಿತವಾಗಿದ್ದ ಸ್ಥಳದಲ್ಲಿ ಅರ್ಚಕ ನಾರಾಯಣ ಆಚಾರ್ ಅವರಿಗೆ ಸೇರಿದ ಎರಡು ಕಾರುಗಳು ಪತ್ತೆಯಾಗಿವೆ.
ಬ್ರಹ್ಮಗಿರಿ ಬೆಟ್ಟದ ಆಚಾರ್ ಅವರ ಮನೆಯ ಶೆಡ್‌ನಲ್ಲಿ ಈ ಕಾರುಗಳು ಸಿಕ್ಕಿದ್ದು ಸಂರ್ಪೂಣ ನಜ್ಜುಗುಜ್ಜಾಗಿವೆ. ಆದರೆ ಈ ವರೆಗೂ ಅವರ ಮತ್ತು ಕುಟುಂಬದವರ ಸುಳಿವು ಸಿಕ್ಕಲ್ಲ. ಈ ನಡುವೆ ಮೊನ್ನೆ ಅರ್ಚಕರ ಅಣ್ಣ ಆನಂದ ತೀರ್ಥಸ್ವಾಮಿ ಅವರ ಶವ ಮತ್ತೆಯಾಗಿತ್ತು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಈ ನಡುವೆ ಮಳೆ ಬರುತ್ತಿರುವುದರಿಂದ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಆದರೂ ಜೆಸಿಬಿ ಜತೆಗೆ ಎನ್‌ಡಿಆರ್‌ಎಫ್, ಪೊಲೀಸ್ ತಂಡಗಳು ಕಾರ್ಯಚರಣೆ ಮಾಡುತ್ತಿವೆ. ಈ ನಡುವೆ ಆಚಾರ್ ಅವರ ಮನೆಯಲ್ಲಿ ಇದ್ದ ಮಂಚ ಸೇರಿ ಇತರ ಕೆಲ ವಸ್ತುಗಳು ಸಿಕ್ಕಿವೆ. ಇನ್ನೂ ಹಲವು ವಸ್ತುಗಳು ಸಿಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನು ನಾರಾಯಣ ಆಚಾರ್ ಅವರ ಮನೆಯಲ್ಲಿ ಭಾರಿ ಸಂಪತ್ತು ಇತ್ತಾ ಎಂಬ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಮನೆಯಲ್ಲಿ ಭಾರಿ ಪ್ರಮಾಣ ಚಿನ್ನ, ಏಲಕ್ಕಿ, ಕಾಳು ಮೆಣಸು ಮತ್ತು ಇತ್ತೀಚೆಗೆ ಜಮೀನನ್ನು ಮಾರಿದ್ದು ಅದರ ಹಣವು ಅಲ್ಲಿ ಇದ್ದಿದ್ದರಿಂದ ಅವರು ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕಿದ್ದರೆ ಎಂಬ ಪ್ರಶ್ನೆ ಜಿಲ್ಲಾಡಳಿತವನ್ನು ಕಾಡುತ್ತಿದೆ.
ಎಷ್ಟೋ ಬಾರಿ ಸರ್ಕಾರಿ ಅಧಿಕಾರಿಗಳು ಅಪಾಯದ ಬಗ್ಗೆ ಎಚ್ಚರಿಕೆ ನೀಡಿ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದ್ದರು. ಆದರೂ ಅವರು ಅಧಿಕಾರಿಗಳ ಮನವಿಗೆ ಸ್ಪಂದಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail