ಮಡಿಕೇರಿ: ತಲಕಾವೇರಿ ಬಳಿ ಗುಡ್ಡ ಕುಸಿತವಾಗಿದ್ದ ಸ್ಥಳದಲ್ಲಿ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ಆರು ದಿನದ ಬಳಿಕ ಪತ್ತೆಯಾಗಿದೆ.
ಬ್ರಹ್ಮಗಿರಿ ಬೆಟ್ಟದ ಆಚಾರ್ ಅವರ ಮನೆಯಿಂದ ಸುಮಾರು 500 ಮೀಟರ್ ಅಂತರದಲ್ಲಿ ಇಂದು ಶವ ಸಿಕ್ಕಿದೆ. ಇನ್ನು ಆಚಾರ್ ಅವರ ಪತ್ನಿ ಮತ್ತು ಸಹಾಯಕರಿಬ್ಬರ ಮೃತದೇಹಗಳು ಪತ್ತೆಯಾಗಬೇಕಿದೆ.
ಇದನ್ನೂ ಓದಿರಿ: ಬ್ರಹ್ಮಗಿರಿ ಬೆಟ್ಟದ 60 ಅಡಿ ಆಳದಲ್ಲಿ 2 ಕಾರುಗಳು ಪತ್ತೆ
ಈ ನಡುವೆ ಇನ್ನು ಮೂವರ ಪತ್ತೆಯಾಗಬೇಕಿದ್ದು, ಮಳೆ ಬರುತ್ತಿರುವುದರಿಂದ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಆದರೂ ಜೆಸಿಬಿ ಜತೆಗೆ ಎನ್ಡಿಆರ್ಎಫ್, ಪೊಲೀಸ್ ತಂಡಗಳು ಕಾರ್ಯಚರಣೆ ಮುಂದುವರಿಸಿವೆ.