ಬಾಂಗ್ಲಾ: ಒಂದೊಂದು ದೇಶದಲ್ಲಿ ಒಂದೊಂದು ಸಂಪ್ರದಾಯ ಅದೇ ರೀತಿ ಒಂದೊಂದು ಸಮುದಾಯಗಳಲ್ಲಿ ಒಂದೊಂದು ಸಂಪ್ರದಾಯ ಸಂಸ್ಕೃತಿ ಬೆಳೆದು ಬಂದಿದೆ. ಇಲ್ಲಿ ಮಂಡಿ ಎನ್ನುವ ಬುಡಕಟ್ಟು ಸಮುದಾಯದಲ್ಲಿ ಅಪ್ಪ ಮಗಳನ್ನು ಮದುವೆಯಾಗಬೇಕು. ಆತ ಸತ್ತುಹೋದರೆ, ಆಕೆ ಬೇರೊಬ್ಬರನ್ನು ಮದುವೆಯಾಗಬೇಕು ಎಂದು ವಿಚಿತ್ರವಾದ ಸಂಪ್ರದಾಯವಿದೆ ಎಂದರೆ ನಂಬುತ್ತೀರಾ?
ಇದು ಇದೇ ಎಂಬುದನ್ನು ನೀವು ನಂಬಲೇಬೇಕು. ಅಷ್ಟಕ್ಕೂ ಈ ಸಂಪ್ರದಾಯ ಎಲ್ಲಿದೆ. ಏಕೆ ಜಾರಿಗೆ ಬಂತು ಎಂಬುದರ ಬಗ್ಗೆ ಹೇಳುವುದಾದರೆ, ಬಾಂಗ್ಲಾದೇಶದ ಸ್ಥಳೀಯ ಸಮುದಾಯಗಳಲ್ಲಿ ಒಂದಾದ ಮಂಡಿ ಸಮುದಾಯದಲ್ಲಿ ಈ ಸಂಪ್ರದಾಯ ಈಗಲೂ ನಡೆಯುತ್ತಿದೆ.
ಈ ಸಮುದಾಯದ ವಿಚಿತ್ರ ಮದುವೆ ಪದ್ದತಿಯ ವಿಷಯ ಕೇಳಿ ಇಂದಿನ ದಿನಮಾನದಲ್ಲೂ ಈ ರೀತಿ ಇದೆಯೇ ಎಂದು ವಿಶ್ವವೇ ಶಾಕ್ ಆಗಿದೆ. ಹೌದು! ಮಂಡಿ ಸಮುದಾಯದ ಕುಟುಂಬದಲ್ಲಿ ತಂದೆಯೇ ಮಗಳನ್ನು ಮದುವೆ ಆಗುತ್ತಾನೆ. ಮದುವೆ ನಂತರದ ದಿನಗಳಲ್ಲಿ ತಂದೆ ಸಾವನ್ನಪ್ಪಿದರೆ ಮಗಳು ವಿಧವೆ ಆದಂತೆ. ಈ ವಿಧವೆಯನ್ನು ಅದೇ ಸಮುದಾಯದ ಬೇರೆ ವ್ಯಕ್ತಿ ವಿವಾಹ ಆಗುತ್ತಾನೆ.
ಇಲ್ಲಿ ವಿಧವೆಗೆ ಮಗಳಿದ್ದರೆ ಆಕೆ ಮಲತಂದೆಯನ್ನು ಅಪ್ಪ ಎಂದು ಬಾಲ್ಯದಲ್ಲಿ ಕರೆಯಬೇಕು. ಆದ್ರೆ ಮಗಳು ವಯಸ್ಸಿಗೆ ಬರುತ್ತಿದ್ದಂತೆ ಆ ಮಲತಂದೆಯನ್ನು ಗಂಡನೆಂದು ಒಪ್ಪಿಕೊಳ್ಳಬೇಕು. ಆ ಅಭ್ಯಾಸ ಮಾಡಿಕೊಂಡು ಮದುವೆ ಆಗಬೇಕು. ಇಲ್ಲಿ ಮಲತಂದೆ ಸಾವನ್ನಪ್ಪಿದ ಮೇಲೆ ಎಲ್ಲ ಮಕ್ಕಳಿಗೆ ಕೊಡುವಂತೆ ಆಸ್ತಿಯಲ್ಲಿ ಪಾಲು ಈಕೆಗೂ ಸಿಗುತ್ತದೆ. ಈ ಸಂಪ್ರಾದಯ ಇಂದಿಗೂ ಬಾಂಗ್ಲಾದೇಶದಲ್ಲಿ ರೂಢಿಯಲ್ಲಿರುವುದು ಏನಪ್ಪ ಎಂದು ಅಚ್ಚರಿ ಪಡುವಂತಾಗಿದೆ.
ಇನ್ನು ಇಂತಹ ಸಂಪ್ರದಾಯದ ವಿರುದ್ಧ ಓರೋಲಾ ಎನ್ನುವ ಬಾಲಕಿಯೊಬ್ಬಳು ಧ್ವನಿ ಎತ್ತಿದ್ದಾಳೆ. ಇತ್ತೀಚೆಗೆ ನನ್ನ ನಿಜವಾದ ತಂದೆ ಸಾವನ್ನಪ್ಪಿದರು. ತಾಯಿ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆರಂಭದಲ್ಲಿ ಮಲತಂದೆಯನ್ನು ಅಪ್ಪ ಎಂದೆ ಕರೆಯುತ್ತಿದ್ದೆ. ಇತ್ತೀಚೆಗೆ ಅಪ್ಪ ಎಂದು ಕರೆಯುವ ವ್ಯಕ್ತಿಯನ್ನೇ ಮದುವೆಯಾಗು ಎಂದು ಕುಟುಂಬದಲ್ಲಿ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ತಾಯಿಯ 2ನೇ ಗಂಡನನ್ನು ನಾನೇಕೆ ಮದುವೆಯಾಗಬೇಕು ಎಂದು ಓರೋಲಾ ಪ್ರಶ್ನೆ ಮಾಡಿದ್ದಾಳೆ.