Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ಮುಂದೆ ಹುಲಿ ಸರ್ಕಾರದ ಮುಂದೆ ನರಿ – ಇಂಥ ಸಂಘಟನೆಗಳಿಂದ  ಯಾವೊಬ್ಬ ನೌಕರನಿಗೂ ನಯ ಪೈಸೆ ಕೊಡಿಸಲು ಸಾಧ್ಯವಿಲ್ಲ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಇನ್ನೂ 100 ಸಂಘಟನೆಗಳು ಹುಟ್ಟಿ ಬಂದರು ಒಬ್ಬ ಸಾರಿಗೆ ನೌಕರನಿಗೂ ಒಂದು ನಯ ಪೈಸೆಯಷ್ಟು ಏನನ್ನು ಕೊಡಿಸಲು ಸಾಧ್ಯವಿಲ್ಲ.

ಹೌದು! ಈಗಿರುವ ಸಂಘಟನೆಗಳಿಂದ ಈವರೆಗೂ ಏನನ್ನು ಕೊಡಿಸಲು ಸಾಧ್ಯವಾಗಿಲ್ಲ. ನಾಲ್ಕು ವರ್ಷಕೊಮ್ಮೆ ಮಾಡುವ ವೇತನ ಹೆಚ್ಚಳದ ಅಗ್ರಿಮೆಂಟ್‌ ವೇಳೆ ಹುಲಿಗಳಂತೆ ಘರ್ಜಿಸಿ ನರಿಯಂತೆ ನಾಟಕವಾಡಿಕೊಂಡು ಬರುತ್ತಿರುವ ಈ ಸಂಘಟನೆಗಳಿಂದ ಈವರೆಗೂ ನೌಕರರಿಗೆ ಸೌಲಭ್ಯ ಕೊಡಿಸಿದ್ದಕ್ಕಿಂತ ಮಾನಸಿಕ ಮತ್ತು ದೈಹಿಕವಾಗಿ ನೋವು ಕೊಟ್ಟಿದ್ದೇ ಹೆಚ್ಚು.

ಈ ಹಿಂದೆಯೂ ಸರ್ಕಾರದಿಂದ ಇವರು ಏನನ್ನು ಕೊಡಿಸಿಲ್ಲ. ಸರ್ಕಾರ ಅಗ್ರಿಮೆಂಟ್‌ ವೇಳೆ ಘೋಷಣೆ ಮಾಡಿದ ಶೇ… ಇಷ್ಟನ್ನು ನಾವು ಒಪ್ಪಲು ಸಾಧ್ಯವಿಲ್ಲ. ನಾವು ಒಪ್ಪಿಲ್ಲ ಕೂಡ ಎಂದು ಹೇಳಿ ಸಭೆಯಿಂದ ಹೊರಬಂದು ಹೋರಾಟ ಮಾಡುವ ರೀತಿ ನಾಟಕವಾಡಿ, ಇದು ಸರ್ಕಾರದ ಏಕಪಕ್ಷೀಯ ನಿರ್ಧಾರ ಇದನ್ನು ನಾವು ಒಪ್ಪಿಲ್ಲ ಎನ್ನುತ್ತಾರೆ.

ಆದರೆ, ಸರ್ಕಾರ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರದ ವಿರುದ್ಧ ಈವರೆಗೂ ಪ್ರಬಲವಾದ ಹೋರಾಟವನ್ನು ಮಾಡಿಲ್ಲ. ಬಳಿಕ ಸರ್ಕಾರ ಘೋಷಣೆ ಮಾಡಿದ ಶೇ.. ಇಷ್ಟು ಪರ್ಸೆಂಟ್‌ ವೇತನ ಹೆಚ್ಚಳ ಎಂಬುದನ್ನೇ ಕೊನೆಗೆ ಸ್ವಾಗತಿಸಿ ಮುಖ್ಯಮಂತ್ರಿಗಳು ಸಚಿವರನ್ನು ಸನ್ಮಾನಿಸುವತ್ತಲೇ ಬಂದಿವೆ ಈ ಸಂಘಟನೆಗಳು.

ಇನ್ನು ಕಳೆದ 2020ರ ಜನವರಿಯಿಂದ ಆಗಬೇಕಿದ್ದ ವೇತನ ಹೆಚ್ಚಳದ ಅಗ್ರಿಮೆಂಟ್‌ ವೇಳೆಯೂ ಇದೇ ನಾಟಕ ಮರುಕಳಿಸಿತು. ಅದು ಕೂಡ 2020ರ ಜ.1ರಿಂದ ಅನ್ವಯವಾಗಬೇಕಿದ್ದನ್ನು 2023ರ ಮಾರ್ಚ್‌ನಲ್ಲಿ ಆಯಿತು. ಅಂದು ಶೇ.15ರಷ್ಟು ವೇತನ ಹೆಚ್ಚಿಸಿ ಸರ್ಕಾರ ಘೋಷಣೆ ಮಾಡಿತು. ಆ ವೇಳೆ ವಿಧಾನಸಭೆ ಚುನಾವಣೆ ಬರುತ್ತಿದ್ದರಿಂದ ಸರ್ಕಾರ ಇವರು ಹೇಳಿದಂತೆಯೇ ಏಕಪಕ್ಷೀಯವಾಗಿಯೇ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಘೋಷಣೆ ಮಾಡಿತು.

ಅಂದರೆ ಸಾರಿಗೆ ಸಂಘಟನೆಗಳ ಮುಖಂಡರು ಶೇ.25ರಷ್ಟು ವೇತನ ಹೆಚ್ಚಳ ಮಾಡಲೇಬೇಕು ಎಂದು ತಿಪ್ಪರಲಾಗಹಾಕಿದರು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅವರ ಒತ್ತಾಯವನ್ನು ಮೂಲೆಗೆ ಸರಿಸಿ ಇವರೇ ಹೇಳಿದಂತೆ ಏಕಪಕ್ಷೀಯವಾಗಿ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದರು.

ಆ ಬಳಿಕ ಈ ಶೇ.15ರಷ್ಟು ವೇತನ ಹೆಚ್ಚಳ ನಮಗೆ ತೃಪ್ತಿತಂದಿಲ್ಲ ಹೀಗಾಗಿ ನಾವು ಮುಷ್ಕರ ಮಾಡುತ್ತೇವೆ ಎಂದು ಹೇಳಿ ಹುಲಿಯಂತೆ ಘರ್ಜಿಸಿ ಮತ್ತೆ ನರಿಯಂತೆ ಒಳಹೊಕ್ಕು ಸಿಎಂ ಅವರ ನಿರ್ಧಾರವನ್ನೇ ಸ್ವಾಗತಿಸಿ ನೌಕರರ ಜೀವನಕ್ಕೆ ಕೊಳ್ಳಿಯಿಟ್ಟು ಸಿಎಂ ಅವರಿಗೇ ಸನ್ಮಾನ ಮಾಡಿ ಬಳಿಕ ಈ ಶೇ.15ರಷ್ಟು ವೇತನ ಹೆಚ್ಚಳಕ್ಕೆ ನಾವೇ ಕಾರಣ ಎಂದು ಈಗಲೂ ಬೊಬ್ಬೆ ಹೊಡೆಯುತ್ತಿದ್ದಾರೆ.

ಆದರೆ, ಶೇ.15ರಷ್ಟು ವೇತನ ಹೆಚ್ಚಳವಾಗಿದ್ದು 2020ರ ಜನವರಿ 1ರಿಂದ ಅನ್ವಯವಾಗುಂತೆ. ಅದನ್ನು 2023ರ ಮಾರ್ಚ್‌ನಲ್ಲಿ ಘೋಷಣೆ ಮಾಡಲಾಗಿದೆ. ಇನ್ನು ಸಾರಿಗೆಯ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ 38 ತಿಂಗಳ ಆ ವೇತನ ಹೆಚ್ಚಳದ ಹಿಂಬಾಕಿ ಇನ್ನು ಕೊಡಿಸಲು ಸಾಧ್ಯವಾಗಿಲ್ಲ ಏಕೆ? ತಾನೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿಸಿದ್ದು ಎಂದು ಬೊಬ್ಬೆಹೊಡೆದ ಮೇಲೆ 38 ತಿಂಗಳ ಹಿಂಬಾಕಿ ಕೊಡಿಸಲು ಏಕೆ ಇವರಿಂದ ಆಗುತ್ತಿಲ್ಲ.

ಏಕೆಂದರೆ ಇವರು ನೌಕರರ ಮುಂದೆ ಹುಲಿಗಳು, ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿ ಮುಂದೆ ನರಿಗಳು. ಹೀಗಾಗಿ ಈವರೆಗೂ ಇವರಿಂದ 38 ತಿಂಗಳ ವೇತನ ಹಿಂಬಾಕಿ ಕೊಡಿಸಲು ಸಾಧ್ಯವಾಗಿಲ್ಲ. ನೆನಪಿನಲ್ಲಿ ಇಟ್ಟುಕೊಳ್ಳಿ ಮುಂದೆಯೂ ಇವರಿಂದ ಕೊಡಿಸಲು ಸಾಧ್ಯವಾಗುವುದಿಲ್ಲ. ಸರ್ಕಾರ ಮತ್ತು ಆಡಳಿತ ಮಂಡಳಿ ಮನಸ್ಸು ಮಾಡಿದರೆ ಮಾತ್ರ ಅದು ಸಾಧ್ಯ.

ಇನ್ನು ಸರ್ಕಾರ 38 ತಿಂಗಳ ಈ ಹಿಂಬಾಕಿ ಹಣವನ್ನು ಕೊಡುವುದಕ್ಕೆ ತೀರ್ಮಾನ ಮಾಡಿದ ಮೇಲೆ ಮತ್ತೆ ಈ ನರಿಗಳು ಅವರ ಮುಂದೆ ಬಾಲ ಮುದುರಿಕೊಂಡು ನಮಸ್ಕರಿಸಿ ಬಳಿಕ ನೌಕರರ ಮುಂದೆ ಹುಲಿಯಂತೆ ನಿಂತು ನೋಡಿ ನಮ್ಮಿಂದಲೇ ಇದು ಆಗಿದ್ದು ಇಲ್ಲ ಅಂದಿದ್ದರೆ ಸರ್ಕಾರ ಕೊಡುತ್ತಿರಲಿಲ್ಲ ಎಂದು ಫೋಸುಕೊಡುತ್ತಾರೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಎಂಬುವುದು ಸ್ವಲ್ಪವಾದರೂ ಇದೆಯೇ?

ಹೀಗಾಗಿ ಹೇಳುತ್ತಿದ್ದೇವೆ ಸ್ವಲ್ಪವಾದರೂ ತಿಳಿದುಕೊಳ್ಳಿ ಇವರಿಂದ ನೌಕರರಿಗೆ ಮುಂದೆಯೂ ಏನನ್ನು ಕೊಡಿಸಲು ಸಾಧ್ಯವಿಲ್ಲ. ಸರ್ಕಾರ ಕೊಟ್ಟಿದ್ದೆ ನಮಗೆ ಸಿಗೋದು. ಆದ್ದರಿಂದ ಎಲ್ಲ ಸಂಘಟನೆಗಳು ಈವರೆಗೂ ನೌಕರರಿಗೆ ಕೊಟ್ಟಿದ್ದು ಸಾಕು. ಇನ್ನಾದರೂ ಸಾರಿಗೆ ಸಂಸ್ಥೆಯಲ್ಲಿ ಒಂದೇ ಸಂಘಟನೆ ಅದು ಒಬ್ಬ ನುರಿತ ಅಧ್ಯಕ್ಷನ ಒಳಗೊಂಡಂತೆ ಉದಯವಾದರೆ ಮಾತ್ರ ನಾವು ಇತರೆ ನಿಗಮಗಳ ಮತ್ತು ಸರ್ಕಾರಿ ನೌಕರರು ಪಡೆಯುತ್ತಿರುವಂತೆ ಸೌಲಭ್ಯ ಪಡೆಯಲು ಸಾಧ್ಯ.

ಉದಾಹರಣೆಗೆ: ಸರ್ಕಾರಿ ಇಲಾಖೆಗಳ ಸರ್ಕಾರಿ ನೌಕರರ ಸಂಘ ಹೇಗೆ ಇದೆಯೋ ಹಾಗೆಯೇ ಹೋರಾಟಕ್ಕೆ ಕರೆ ಕೊಟ್ಟಾಗ ಸಾರಿಗೆ ನಿಗಮದ ಅಧಿಕಾರಿಗಳು ಸಹ ಬಂದು ಭಾಗವಹಿಸಿದಾಗ ಮಾತ್ರ ಸಾರಿಗೆ ನೌಕರರ ಎಲ್ಲ ಬೇಡಿಕೆಗಳು ಈಡೇರುವುದು ಸತ್ಯ. ಅಲ್ಲಿಯವರೆಗೂ ಇಂಥ ಇನ್ನೂ ನೂರು ಸಂಘಟನೆ ಹುಟ್ಟಿ ಬಂದರು ಸಾರಿಗೆ ನೌಕರರಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ.

ಆದ್ದರಿಂದ ನೌಕರರು ಮೊದಲು ಬುದ್ದಿ ಕಲಿಬೇಕು. ಇದು ನನ್ನ ಸಂಘಟನೆ ಇದು ಅವನ ಸಂಘಟನೆ ಅವನನ್ನು ತುಳಿಬೇಕು. ನಾವು ಮೇಲೆ ಬರಬೇಕು ಎಂಬುದನ್ನು ಬಿಡಬೇಕು. ಈ ತತ್ವವನ್ನು ಎಂದು ನಾವೆಲ್ಲರೂ ತಿಳಿಯುತ್ತೇವೆಯೋ ಆ ದಿನ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ, ಇಲ್ಲದಿದ್ದರೆ ನಮ್ಮ ಕನಸು ತಿರುಕನ ಕನಸಾಗುತ್ತದೆ ಎಂದು ನೊಂದ ನೌಕರರು ಮನದಾಳವನ್ನು ಹಂಚಿಕೊಂಡಿದ್ದಾರೆ.

Leave a Reply

error: Content is protected !!
LATEST
ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ ಇಂದಿನಿಂದ ನಿವೃತ್ತ ಸಾರಿಗೆ ನೌಕರರಿಗೆ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಪಾವತಿಗೆ ಎಂಡಿ ಆದೇಶ BMTC: ಡಿ.24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಎಂಡಿ ಆದೇಶ KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ ಹೈಕೋರ್ಟ್‌ ಆದೇಶದ ಬೆನ್ನಲ್ಲೇ ದಾವಣಗೆರೆಯಲ್ಲಿ ಪೊಲೀಸರಿಂದ ಸಿ.ಟಿ.ರವಿ ಬಿಡುಗಡೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಮಂಡ್ಯಕ್ಕೆ ಆಗಮಿಸಿದ ಸಮ್ಮೇಳನಾಧ್ಯಕ್ಷರಿಗೆ ಸ್ವಾಗತ ಉತ್ತಮ ಆಡಳಿತ ಸಪ್ತಾಹ: ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಿದ ಡಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ: ಸಿ.ಟಿ.ರವಿ ಬಂಧನ ಸಾರ್ವಜನಿಕರ ಸಮಸ್ಯೆ ಶೀಘ್ರ ಪರಿಹರಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ