CrimeNEWSನಮ್ಮರಾಜ್ಯ

ವಂಚಕರ ನಂಬಿ ಹಣ ದುಪ್ಪಟ್ಟು ಆಸೆಗೆ ಬಿದ್ದ ಮಹಿಳೆ ಕೋಟಿ ರೂ. ಕಳೆದುಕೊಂಡರು!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಯೂಟ್ಯೂಬ್​ ಹಾಗೂ ಇನ್​ಸ್ಟಾಗ್ರಾಮ್​​​ ಬಳಕೆದಾರರೇ​​ ಬಿ ಅಲರ್ಟ್​. ಹಣ ಸಿಗುತ್ತೆ ಅಂತ ನೀವೇನಾದ್ರೂ ಬಿಟ್ಟಿ ದುಡ್ಡಿಗೆ ಆಸೆ ಪಟ್ರೆ ನಿಮ್ಮ ಬ್ಯಾಂಕ್​ ಬ್ಯಾಲೆನ್ಸ್ ಕೂಡ ಇಲ್ಲವಾಗುವುದು ಎಚ್ಚರ..! ಹೌದು! ಬಿಟ್ಟಿ ಹಣ ಸಿಗುತ್ತೆ ಅಂತ ಮಹಿಳೆಯೊಬ್ಬಳು ಕಳೆದೊಕೊಂಡಿರೋದು ಬರೋಬ್ಬರಿ ಎರಡೂವರೆ ಕೋಟಿ.

ಈ ನಡುವೆಯೂ ತುಸು ಖುಷಿಯ ವಿಯ ಎಂದರೆ ಮಹಿಳೆ ಮಾಡಿದ ಅದೊಂದು ಚಾಲಾಕಿತನದಿಂದ ಇಲ್ಲಿ ಕಳೆದುಕೊಂಡಿದ್ದ ಎರಡೂವರೆ ಕೋಟಿ ರೂ.ಗಳಲ್ಲಿ ಒಂದೂವರೆ ಕೋಟಿ ವಾಪಸ್​​ ಪಡೆದಿದ್ದಾರೆ.

ಯೂಟ್ಯೂಬ್​​ ಲಿಂಕ್​ ಲೈಕ್​ ಮಾಡಿ ಹಣ ಗೆಲ್ಲಿ ಅಂತಾ ಮೆಸೇಜ್​​ ಬಂದಿದೆ. ಇದನ್ನು ನೋಡಿದ ಕೂಡಲೇ ಮಹಿಳೆ ಲಿಂಕ್​ ಮೇಲೆ ಕ್ಲಿಕ್​ ಮಾಡಿದ್ದಾಳೆ. ಅದಕ್ಕೆ ವಂಚಕರು ಥ್ಯಾಂಕ್ಯೂ ಅಂತಾ ಮೆಸೇಜ್​ ಕಳುಹಿಸಿದ್ದಾರೆ. ಬಳಿಕ ಇದೇ ರೀತಿ ಹಣ ಇನ್ವೆಸ್ಟ್​​​ ಮಾಡಿ ಡಬಲ್​ ಆಗುತ್ತೆ ಅಂತಾ ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ ಡಬಲ್​ ಆಗುತ್ತದೆ ಎಂಬುವುದನ್ನು ನಂಬಿ ಇನ್ವೆಸ್ಟ್​ ಮಾಡ್ತೀನಿ ಅಂತಾ ಹೇಳಿದ್ದಾಳೆ.

ಹೀಗೆ ಶುರುವಾಗಿದ್ದ ವಂಚಕರ ಜಾಲಕ್ಕೆ ಬಿದ್ದಿದ್ದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಆಂಟ್ರಪ್ರನ್ಯೂವರ್​ ಆಗಿ ಕೆಲಸ ಮಾಡ್ತಿದ್ದ 52 ವರ್ಷದ ಮಹಿಳೆ. ಹಂತ ಹಂತವಾಗಿ ಬರೋಬ್ಬರಿ 2.7 ಕೋಟಿ ಹಣ ಇನ್ವೆಸ್ಟ್​​ ಮಾಡಿದ್ರು. ಆದ್ರೆ ಕಳೆದುಕೊಂಡಿದ್ದ 2.7 ಕೋಟಿ ಹಣದಲ್ಲಿ 1.7 ಕೋಟಿ ಹಣವನ್ನ ಮಹಿಳೆ ವಾಪಸ್​ ಪಡೆಯೋದರಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ? ಏಪ್ರಿಲ್​ನಲ್ಲಿ ಖದೀಮರಿಂದ ಮಹಿಳೆಗೆ ಒಂದು ಮೆಸೇಜ್​ ಬಂದಿತ್ತು. ಆ ಮೆಸೇಜ್​ನಲ್ಲಿ ಯೂಟ್ಯೂಬ್​ ಲಿಂಕ್​ ಲೈಕ್​ ಮಾಡುವಂತೆ ಆಮೀಶ ಒಡ್ಡಿದ್ರು. ಈ ಮೆಸೇಜ್​​ಗೆ ಮಹಿಳೆ ರಿಪ್ಲೆ ಮಾಡಿ ಬಳಿಕ ಯೂಟ್ಯೂಬ್​ ಚಾನೆಲ್​ಗೆ ಲೈಕ್ ಮಾಡಿದ್ರು. ಹೀಗೆ ಲೈಕ್​ ಮಾಡಿದ್ರಿಂದ ಮಹಿಳೆಗೆ 10 ಸಾವಿರ ಅಮೌಂಟ್‌ಗೆ​ ಬಂದಿತ್ತು. ಬಳಿಕ ಮಹಿಳೆ ಜಾಲಕ್ಕೆ ಬಿದ್ದಿದ್ದು, ಕನ್ಫರ್ಮ್​​ ಆದ ಮೇಲೆ ಇನ್ವೆಸ್ಟ್​​ ಮಾಡುವಂತೆ ಹಾಗೂ ಹಣ ಡಬಲ್​ ಆಗುತ್ತದೆ ಎಂದು ವಂಚಕರು ಆಫರ್ ಕೊಟ್ಟಿದ್ದರು.

ಅದಕ್ಕೆ ಮಹಿಳೆ ಯೆಸ್​ ಎಂದಿದ್ರು, ಬಳಿಕ ಮಹಿಳೆಯನ್ನ ಟೆಲಿಗ್ರಾಂ ಗ್ರೂಪ್​ಗೆ ಸೇರಿಸಿಕೊಂಡರು. ಈ ​ಗ್ರೂಪ್​ನಲ್ಲಿದ್ದ ನೂರಾರು ಮಂದಿ ಹಣ ಡಬಲ್​ ಆದ ಬಗ್ಗೆ ಮೆಸೇಜ್​ ಹಾಕ್ತಿದ್ರು. ಇದನ್ನು ನಂಬಿದ್ದ ಮಹಿಳೆ ಹಣವನ್ನು ಹಂತಹಣತವಾಗಿ ಅಂದರೆ 2.7 ಕೋಟಿ ಹಣ ಇನ್ವೆಸ್ಟ್​ ಮಾಡಿದ್ರು.

ಬಳಿಕ ಪದೇಪದೆ ಬರ್ತಿದ್ದ ಮೆಸೇಜ್​ನಿಂದ ಅನುಮಾನ ಬಂದಿದ್ದ ಮಹಿಳೆ ಮನೆಯವರಿಗೆ ವಿಚಾರ ತಿಳಿಸಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕೊಟ್ಟ ದೂರಿನಿಂದ ಖದೀಮರ ಬ್ಯಾಂಕ್​​ ಅಕೌಂಟ್​ ಟ್ರೇಸ್​ ಮಾಡಿ ಫ್ರೀಜ್​ ಮಾಡಿದ್ರಿಂದ ಮಹಿಳೆ ಕಳೆದುಕೊಂಡಿದ್ದ 2.7 ಕೋಟಿ ಹಣದಲ್ಲಿ 1.7 ಕೋಟಿ ವಾಪಸ್ಸಾಗಿದೆ. ಅದೇನೆ ಇರಲಿ ಪೊಲೀಸ್​​ ಇಲಾಖೆ ಹಾಗೂ ಸರ್ಕಾರ ಎಷ್ಟೇ ಎಚ್ಚರವಹಿಸಿದ್ರೂ ಖದೀಮರ ಆಟಕ್ಕಂತೂ ಕಡಿವಾಣ ಬೀಳುತ್ತಿಲ್ಲ. ಇನ್ಮುಂದೆ ಗೊತ್ತಿಲ್ಲದ ಲಿಂಕ್​ ಕ್ಲಿಕ್​ ಮಾಡೋ ಮುನ್ನ ಹುಷಾರಾಗಿರಿ.

ಇನ್ನು ಆ ಮಹಿಳೆ ಒಂದು ಕೋಟಿ ಕಳೆದುಕೊಂಡಿದ್ದು ಅದನ್ನು ಸಂಪಾದಿಸಲು ಎಷ್ಟು ವರ್ಷಗಳು ಬೇಕೋ ಗೊತ್ತಿಲ್ಲ. ಅದರೆ ಕಳೆದುಕೊಂಡಿರುವುದು ಮಾತ್ರ ಸಣ್ಣ ಅಮೌಂಟ್‌ ಅಲ್ಲ…!?

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು