NEWSನಮ್ಮಜಿಲ್ಲೆನಮ್ಮರಾಜ್ಯ

ಅಣ್ಣಾ ಹಜಾರೆ ಜತೆಗಿನ ಸತ್ಯಾಗ್ರಹದ ಸಂದರ್ಭದಲ್ಲಿ ಎದುರಾದ ಸವಾಲಿನಿಂದ ಹುಟ್ಟಿದ್ದೇ ಎಎಪಿ: ಮುಖ್ಯಮಂತ್ರಿ ಚಂದ್ರು

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಅಣ್ಣಾ ಹಜಾರೆ ಅವರ ಜತೆಗಿನ ಸತ್ಯಾಗ್ರಹ ಹೋರಟದಲ್ಲಿ ಭಾಗಿಯಾಗಿದ್ದ ಅರವಿಂದ ಕೇಜ್ರಿವಾಲ್‌ ಅವರಿಗೆ ಆಗಿನ ಕೇಂದ್ರ ಸರ್ಕಾರ ಚುನಾವಣೆಗೆ ನಿಂತು ಗೆದ್ದು ತೋರಿಸುವಂತೆ ಸವಾಲು ಹಾಕಿತ್ತು. ಆ ಸವಾಲಿಗೆ ಉತ್ತರವಾಗಿ ಆಮ್‌ ಆದ್ಮಿ ಪಕ್ಷವು ಹುಟ್ಟಿಕೊಂಡಿತು ಎಂದು ಎಎಪಿ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದರು.

ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಚಂದ್ರು ಅವರು ಭಾನುವಾರ ವಿಜಯಪುರ ಜಿಲ್ಲಾ ಪ್ರವಾಸ ಮಾಡಿದರು. ಜಿಲ್ಲೆಯ ಸಿದ್ದೇಶ್ವರ ಸ್ವಾಮಿಗಳ ಸನ್ನಿಧಿ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂಬ ಉದ್ದೇಶದಿಂದಲೇ ಅಣ್ಣಾ ಹಜಾರೆ ಅವರು ಸತ್ಯಾಗ್ರಹ ನಡೆಸಿದರು ಎಂಬ ಆರೋಪವನ್ನು ನೇರವಾಗಿ ತಳ್ಳಿಹಾಕಿದ ಮುಖ್ಯಮಂತ್ರಿ ಚಂದ್ರು, ಎಎಪಿ ಹುಟ್ಟಿಕೊಂಡ ಬಳಿಕ ಅಣ್ಣಾ ಹಜಾರೆ ಅವರು ಅಧಿಕಾರದ ಹಿಂದೆ ಹೋಗುವುದಿಲ್ಲ ಎಂದು ಅಂತರ ಕಾಯ್ದುಕೊಂಡರು. ಅಣ್ಣಾ ಹಜಾರೆ ಅವರ ಹೋರಾಟವು ಲೋಕಪಾಲ್‌ ಬಿಲ್‌ ಮೂಲಕ ಭ್ರಷ್ಟ ರಹಿತ ಸರ್ಕಾರದ ವ್ಯವಸ್ಥೆ ತರಬೇಕು ಎಂಬುದಾಗಿತ್ತು ಎಂದರು.

ಇನ್ನು ಅವರಿಗೆ ನಾನು ಮುಖ್ಯಮಂತ್ರಿಯಾಗಬೇಕು, ಪ್ರಧಾನಿಯಾಗಬೇಕು ಎಂಬ ಅಧಿಕಾರದ ಮೋಹ ಇರಲಿಲ್ಲ. ಈಗ ದೆಹಲಿ ಮತ್ತು ಪಂಜಾಬ್‌ನಲ್ಲಿ ಭ್ರಷ್ಟ ರಹಿತ ಸರ್ಕಾರಗಳು ರಚನೆಯಾಗಿವೆ. ಪಕ್ಷವು ರಾಷ್ಟ್ರಾದ್ಯಂತ ವಿಸ್ತರಿಸುತ್ತಿದೆ. ಈ ಮೂಲಕ ಅವರ ಆಶಯ ಈಡೇರುತ್ತಿದೆ ಎಂದು ವಿವರಿಸಿದರು.

ದೆಹಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ನಮ್ಮ ಸರ್ಕಾರವು ರಾಷ್ಟ್ರಕ್ಕೆ ಮಾದರಿಯಾಗಿವೆ. ಜನರಿಂದ ಸಂಗ್ರಹವಾಗುವ ತೆರಿಗೆ ಹಣವನ್ನು ರಾಜ್ಯದ ಅಭಿವೃದ್ಧಿಗೆ ಹೇಗೆ ಬಳಕೆ ಮಾಡಬೇಕು ಎಂಬುದಕ್ಕೆ ಅನುಕರಣೀಯವಾಗಿವೆ. ಅತ್ಯುತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆ ಉಚಿತವಾಗಿ ಲಭ್ಯವಿದ್ದರೆ ರಾಜ್ಯದ ಅಭಿವೃದ್ಧಿ ನಿರೀಕ್ಷೆಗೆ ಮೀರಿದಂತೆ ಆಗುತ್ತದೆ. ನಮ್ಮ ಯೋಜನೆಗಳನ್ನು ಕದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಅವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಲ್ಲಿ ಎಡವಿದೆ. ತರಾತುರಿಯಿಂದ, ಅವೈಜ್ಞಾನಿಕವಾಗಿ ಗ್ಯಾರಂಟಿಗಳನ್ನು ಜಾರಿಗೆ ತಂದು ರಾಜ್ಯದ ಮೇಲೆ ಸಾಲ ಹೊರಿಸಿದೆ ಎಂದು ಕಿಡಿಕಾರಿದರು.

ತಮಿಳುನಾಡಿಗೆ ಇರುವ ಧೈರ್ಯ ನಿಮಗೇಕಿಲ್ಲ?: ಸಂಕಷ್ಟದ ಸಂದರ್ಭದಲ್ಲಿ ನೀರನ್ನು ಬಿಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ತಮಿಳುನಾಡಿನಲ್ಲಿ ತುರ್ತು ಸದನವನ್ನು ಕರೆದು ನೀರು ಬಿಡಲೇ ಬೇಕು ಎಂದು ಒತ್ತಾಯ ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ. ಆ ಧೈರ್ಯ ನಮ್ಮ ಸರ್ಕಾರಕ್ಕೆ ಏಕೆ ಇಲ್ಲ? ತಕ್ಷಣ ಸದನ ಕರೆದು ಸರ್ವಾನುಮತದಿಂದ ನೀರು ಬಿಡಲು ಸಾಧ್ಯವಿಲ್ಲ ಎಂಬ ನಿರ್ಣಯ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಇದೇ ವೇಳೆ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯನ್ನು ಕಳ್ಳರ ಸಂತೆ ಎಂದು ಟೀಕಿಸಿದರು. ಆಗ ಪೇಟಿಎಂ ಸರ್ಕಾರದ ಹೆಸರಲ್ಲಿ ಭ್ರಷ್ಟಾಚಾರ ಚಾಲ್ತಿಯಲ್ಲಿತ್ತು. ಈಗ ಎಟಿಎಂ ಸರ್ಕಾರದ ಹೆಸರಲ್ಲಿ ಭ್ರಾಷ್ಟಾಚಾರ ಚಾಲ್ತಿಯಲ್ಲಿದೆ. ಈ ಮೂರು ಪಕ್ಷಗಳು ರಾಜ್ಯವನ್ನು ಲೂಟಿ ಹೊಡೆಯುತ್ತಿವೆ ಎಂದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ರೋಹನ್‌ ಐನಾಪುರ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರ್ಜುನಪ್ಪ ಹಲಗೀಗೌಡರ್‌, ರಾಜ್ಯ ಕಾರ್ಯದರ್ಶಿ ಬಸವರಾಜ್‌ ಮುದಿಗೌಡರ್‌, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ.ಸದಂ, ಜಿಲ್ಲಾಧ್ಯಕ್ಷ ಭೋಗೇಶ್‌ ಸೋಲಾಪುರ, ಕಾರ್ಯದರ್ಶಿ ರವಿಕುಮಾರ್‌ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ