ನ್ಯೂಡೆಲ್ಲಿ: ವಿಶ್ವದ ಅತಿದೊಡ್ಡ ಲಸಿಕೆಗಳನ್ನು ತಯಾರಿಸುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಅಸ್ಟ್ರಾಜೆನೆಕಾ ಪಿಎಲ್‌ಸಿಯ ಕೋವಿಡ್ -19 ಲಸಿಕೆಯನ್ನು ಇತರ ದೇಶಗಳಿಗೆ ವಿತರಿಸುವ ಮೊದಲು ಭಾರತೀಯರಿಗೆ ಪೂರೈಸುವತ್ತ ಗಮನ ಹರಿಸಲಿದೆ ಎಂದು ಎಸ್‌ಐಐ ಮುಖ್ಯ ಕಾರ್ಯನಿರ್ವಾಹಕ ಆದಾರ್ ಪೂನವಾಲ್ಲಾ ತಿಳಿಸಿದ್ದಾರೆ.
131 ಕೋವಿಡ್ -19 ಕೊರೊನಾ ರೋಗಿಗಳ ಮೇಲೆ ಲಸಿಕೆಯನ್ನು ಪ್ರಯೋಗಿಸಿದ್ದು ಅವರಲ್ಲಿ ಯಾವುದಕ್ಕೂ ಗಂಭೀರವಾದ ಕಾಯಿಲೆ ಅಥವಾ ಆಸ್ಪತ್ರೆಯ ಅಗತ್ಯ ಕಾಣಿಸಲಿಲ್ಲ. ಜತೆಗೆ ಯಾವುದೇ ರೀತಿಯ ದುಷ್ಪರಿಣಾಮ ಬೀರಿಲ್ಲ. ಇನ್ನು ಕೊರೊನಾ ರೋಗಿಯಲ್ಲಿ ಶೇ.70ರಷ್ಟು ಗುಣಮುಖ ಕಂಡುಬಂದಿದ್ದು, ಇದರಿಂದ ಇದು ಸೋಂಕನ್ನು ಶೇ.99ರಷ್ಟು ನಿಯಂತ್ರಿಸಲಿದೆ ಎಂದು ಹೇಳಿದರು.
ಈ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬಹುದಾಗಿದೆ. ಅಡೆನೊವೈರಸ್‌ನಿಂದ ಅಭಿವೃದ್ಧಿಪಡಿಸಿದ ಲಸಿಕೆ ಜೊತೆ ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನಾ ಪಾಲುದಾರನಾಗಿದ್ದು ಕೋವಿಶೀಲ್ಡ್ ಭಾರತದಲ್ಲಿ ಮೊದಲ ಕೋವಿಡ್ -19 ಲಸಿಕೆ ಯಾಗುವ ಸಾಧ್ಯತೆಯಿದೆ ಎಂದರು.
“ಈ ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷತೆಯು ದೃಷ್ಟಿಯಿಂದ ಕೋವಿಡ್ -19 ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಲಿದೆ. ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ ಎಂದು ಖಚಿತಪಡಿಸುತ್ತದೆ ಎಂದು ಸಿಇಒ ತಿಳಿಸಿದ್ದಾರೆ.
ಇನ್ನು ಭಾರತ ಸರ್ಕಾರಕ್ಕೆ ಪ್ರತಿ ಡೋಸ್‌ಗೆ ಸುಮಾರು 250 ರೂ. (3 ಡಾಲರ್)ಗೆ ಕೋವಿಶೀಲ್ಡ್ ಲಸಿಕೆಯನ್ನು ಮಾರಾಟ ಮಾಡಲು ನಿರ್ಧಿಸಿದ್ದು, ಔಷಧ ಅಂಗಡಿಯಲ್ಲಿ 1 ಸಾವಿರ ರೂ. ಆಗಲಿದೆ ಎಂದು ಹೇಳಲಾಗಿದೆ. ಆದರೆ ಈ ಔಷಧ ಮಾರಾಟಕ್ಕೆ ಡಿಸೆಂಬರ್‌ನಲ್ಲಿ ಅನುಮತಿ ಸಿಗುವ ಸಾಧ್ಯತೆ ಇದ್ದು, ಜನವರಿಯಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.