CrimeNEWSದೇಶ-ವಿದೇಶನಮ್ಮರಾಜ್ಯ

ಸರ್ಕಾರಿ ಬಸ್‌ನ ಫುಟ್‌ಬೋರ್ಡ್‌ನಲ್ಲಿ ದೊಡ್ಡರಂಧ್ರ: ಬಿದ್ದು ರಸ್ತೆಗೆ ಜಾರಿದ ಮಹಿಳೆ

ವಿಜಯಪಥ ಸಮಗ್ರ ಸುದ್ದಿ

ಚೆನ್ನೈ: ಚಲಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ಕುಳಿತಿದ್ದ ಸೀಟ್‌ನಲ್ಲಿ ಕಾಲು ಬಿಟ್ಟುಕೊಳ್ಳುವ ಸ್ಥಳ ಕುಸಿದಬಿದ್ದ ಪರಿಣಾಮ ಮಹಿಳೆಯೊಬ್ಬರು ಆ ರಂಧ್ರದ ಮೂಲಕ ಸೀದ ರಸ್ತೆಗೆ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್‌ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೌದು! ಸಾಮಾನ್ಯವಾಗಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದನ್ನು ನೋಡಿರುತ್ತೇವೆ. ಆದರೆ ಬಸ್​ನಲ್ಲೂ ರಸ್ತೆಗಳಲ್ಲಿ ಬಿದ್ದ ಗುಂಡಿಗಳ ರೀತಿಯಲ್ಲಿ ದೊಡ್ಡ ರಂಧ್ರವಾಗಿರುವುದನ್ನು ನೀವು ಎಲ್ಲಾದರೂ ನೋಡಲು ಸಾಧ್ಯವೆ? ಆದರೆ ಸರ್ಕಾರಿ ಬಸ್‌ಗಳಲ್ಲಿ ಅಂಥ​​ ರಂಧ್ರವನ್ನು ನೀವು ಕಾಣಬಹುದು.

ಈ ಘಟನೆ ತಿರುವೆರ್ಕಾಡುನಿಂದ ವಲ್ಲಲಾರ್ ನಗರಕ್ಕೆ ತೆರಳುತ್ತಿದ್ದ ತಮಿಳುನಾಡು ಸಾರಿಗೆ ಬಸ್ ಅಮಿಂಜಿಕರೈ ಬಳಿ ಬಂದಾಗ ನಡೆದಿದೆ. 42 ವರ್ಷದ ಮಹಿಳೆಯೊಬ್ಬರು ಬಸ್​ನ ದೊಡ್ಡ ರಂಧ್ರದಿಂದ ದೊಪ್ಪನೆ​​ ರಸ್ತೆಗೆ ಬಿದ್ದಿದ್ದಾರೆ. ಸದ್ಯ ಆ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ರಾಜ್ಯದಲ್ಲಿ ಡಿಎಂಕೆ ಸರ್ಕಾರದ ಆಡಳಿತವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಅದೃಷ್ಟವಶಾತ್ ಆ ಮಹಿಳೆ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ತಮಿಳುನಾಡಿನ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ಜೀವಕ್ಕೆ ರಕ್ಷಣೆ ಇಲ್ಲದ ಸ್ಥಿತಿ ಬಂದಿದೆ. ಸಾರಿಗೆ ಕ್ಷೇತ್ರದಲ್ಲಿ ಏನೆಲ್ಲ ಭ್ರಷ್ಟಾಚಾರ ಮಾಡಬಹುದು ಎಂದು ಯೋಚಿಸುವ ಸಚಿವರು, ಸರ್ಕಾರಿ ಬಸ್‌ಗಳ ನಿರ್ವಹಣೆಯಲ್ಲಿ ಗಮನ ಹರಿಸಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.

ಈ ಘಟನೆ ನಡೆದಿದ್ದು ಹೇಗೆ?: ಮಹಿಳೆ ಬಸ್‌ನ ಹಿಂಭಾಗದಲ್ಲಿ ಕುಳಿತುಕೊಂಡಿದ್ದರು. ಬಸ್ ಇನ್ನೂ ಚಲಿಸುತ್ತಿರುವಾಗ ಆಕಸ್ಮಿಕವಾಗಿ ಬಸ್‌​ನಲ್ಲಿ ದೊಡ್ಡದಾದ ರಂಧ್ರ ಕಾಣಿಸಿಕೊಂಡಿದೆ. ಇದೇ ವೇಳೆ ಇದನ್ನು ಗಮನಿಸದೇ ಮಹಿಳೆ ಬಸ್‌ನಿಂದ ಜಾರಿ ಕೆಳಗೆ ಬಿದಿದ್ದಾರೆ. ಕೂಡಲೇ ಬಸ್​ನಲ್ಲಿದ್ದರು ಕೂಗಾಡಿ ಬಸ್​ ಅನ್ನು ನಿಲ್ಲಿಸಿದ್ದಾರೆ.

ನಂತರ ನೆಲದ ಮೇಲೆ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆ ಕೂಡಲೇ ಆಕೆಯನ್ನು ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು.

ಬಳಿಕ ಪ್ರಯಾಣಿಕರು ಬಸ್‌ನಿಂದ ಇಳಿದು ಮತ್ತೊಂದು ಬಸ್‌ಗೆ ಹೋಗಿದ್ದಾರೆ. ಇನ್ನು ಈ ಘಟನೆಯ ನಂತರ, ಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆಲ್ಬಿ ಜಾನ್ ವರ್ಗೀಸ್ ಅವರು ಬೇಸಿನ್ ಬ್ರಿಡ್ಜ್ ಡಿಪೋ ಮ್ಯಾನೇಜರ್ ಮತ್ತು ಬಸ್‌ನ ನಿರ್ವಹಣೆ ತಾಂತ್ರಿಕ ಸಹಾಯಕ ಇಬ್ಬರನ್ನೂ ಅಮಾನತುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ