CrimeNEWSನಮ್ಮಜಿಲ್ಲೆನಮ್ಮರಾಜ್ಯ

BMTC – ಅಧಿಕಾರಿಗಳ ಹಗರಣ ಬಗೆದಷ್ಟು ಬಯಲಿಗೆ- ಭ್ರಷ್ಟರ ಹೆಡೆಮುರಿಕಟ್ಟುತ್ತಾರಾ ಎಂಡಿ ..!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಅಧಿಕಾರಿಗಳು ಎಸಗುತ್ತಿರುವ ಭ್ರಷ್ಟಾಚಾರ, ನಕಲಿಸಹಿ ಹೀಗೆ ಹತ್ತು ಹಲವು ಹಗರಣಗಳು ಪ್ರಸ್ತುತ  ಬಗೆದಷ್ಟೂ ಬಯಲಿಗೆ ಬರುತ್ತಲೇ ಇವೆ.

ವ‌ರ್ಷದೊಳಗೇ 20ಕ್ಕೂ ಹೆಚ್ಚು ಫೋರ್ಜರಿ ಕಡತಗಳು ಬಯಲಿಗೆ ಬಂದಿದ್ದು, ಪ್ರಭಾವಿಗಳೂ ಶಾಮೀಲಾಗಿದ್ದಾರೆ ಎಂಬ ಶಂಕೆ ಮೂಡಿದೆ. ಇದರ ನಡುವೆಯೇ ಅಧಿಕಾರಿಗಳು ಎಸಗಿರುವ ಹಗರಣ ತೀವ್ರತೆ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿಐಡಿ ಅಥವಾ ಲೋಕಾಯುಕ್ತದಂತಹ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂಬ ಕೂಗು ಬಿಎಂಟಿಸಿ ನೌಕರರು ಮತ್ತು ಕೆಲ ನಿಷ್ಠಾವಂತ ಅಧಿಕಾರಿಗಳಿಂದಲೇ ಕೇಳಿಬರುತ್ತಿದೆ.

ಇನ್ನು ಬಿಎಂಟಿಸಿ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಫ್ಲ್ಯಾಟ್‌ಗಳು, ವಾಣಿಜ್ಯ ಮಳಿಗೆಗಳು, ಪಾರ್ಕಿಂಗ್‌ ಜಾಗಗಳು, ಶೌಚಾಲಯಗಳನ್ನು ಒಳಗೊಂಡಂತೆ ವಿವಿಧ ಪ್ರಕಾರದ ಟೆಂಡರ್‌ ಮತ್ತು ಪರವಾನಗಿ ನವೀಕರಣ ಹಾಗೂ ಮರುಟೆಂಡರ್‌ನಲ್ಲಿ ಹತ್ತಾರು ಕೋಟಿ ರೂ.ಗಳನ್ನು ನೇವಾಗಿಯೇ ಕೊಳ್ಳೆ ಹೊಡೆದಿರುವುದು ಬಯಲಾಗುತ್ತಿದೆ.

ಒಂದಲ್ಲ ಎರಡಲ್ಲ ಇಂತಹ 20ಕ್ಕೂ ಹೆಚ್ಚು ಕಡತಗಳಿಗೆ ಹಿಂದಿದ್ದ ಮತ್ತು ಈಗಿನವರದ್ದು ಸೇರಿ ನಿಗಮದ ಮೂರ್ನಾಲ್ಕು ವ್ಯವಸ್ಥಾಪಕ ನಿರ್ದೇಶಕರ ಸಹಿ ನಕಲು ಮಾಡಿರುವುದು ಇಲಾಖಾ ತನಿಖೆಯಿಂದ ಬೆಳಕಿಗೆ ಬಂದಿದೆ ಹಾಗೂ ತನಿಖೆ ಮುಂದುವರಿದಂತೆ ಇನ್ನಷ್ಟು ಹಗರಣಗಳು ಬರುವುದು ಕೂಡ ಖಚಿತವಾಗಿದೆ.

ಇನ್ನೂ ಇದರ ಹಿಂದೆ ಕೆಲ ಪ್ರಭಾವಿಗಳ ಕೈವಾಡವೂ ಇದ್ದು, ಹಗರಣದಲ್ಲಿ ಶಾಮೀಲಾಗಿರುವುದು ತನಿಖೆಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಮಧ್ಯೆ ಆರೋಪಿಗಳ ವಿರುದ್ಧ ಮೂರು ಎಫ್ಐಆರ್‌ ದಾಖಲಾಗಿದ್ದು, ಇದುವರೆಗೆ ಎಂಟು ಜನರನ್ನು ಅಮಾನತು ಮಾಡಲಾಗಿದೆ.

ಇನ್ನು ಪ್ರಕರಣದ ತನಿಖೆಯಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಂಡುಬರುತ್ತಿಲ್ಲ. ಎಂದಿನಂತೆ ಆರೋಪಿಗಳಿಗೆ ಅರ್ಧದಷ್ಟು ವೇತನ ಪ್ರತಿ ತಿಂಗಳು ಅನಾಯಾಸವಾಗಿ ಸಿಗುತ್ತಿದೆ. ಇದನ್ನು ಗಮನಿಸಿದರೆ ಇದೂ ಕೂಡ ಹತ್ತರೊಂದಿಗೆ ಹನ್ನೊಂದು ಎಂಬಂತಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

ನಿರಂತರವಾಗಿ ಮೂರು ವರ್ಷಗಳ ಕಾಲ ಹಲವು ವಿಭಾಗಗಳಲ್ಲಿ ಎಂಡಿಗಳ ಸಹಿಗಳು ಫೋರ್ಜರಿ ಮಾಡಲಾಗಿದ್ದು, ಅದರಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ)ರಿಂದ ಹಿಡಿದು ವಿವಿಧ ಹಂತಗಳಲ್ಲಿನ ಅಧಿಕಾರಿಗಳ ತಂಡ ಒಟ್ಟಿಗೆ ಕೊಳ್ಳೆಹೊಡೆದಿದೆ. ಹೀಗಿರುವಾಗ, ಇಲಾಖೆ ಹಂತದಲ್ಲಿ ಪಾರದರ್ಶಕ ತನಿಖೆ ಅನುಮಾನ.

ಹೀಗಾಗಿ ಸಂಸ್ಥೆಯಿಂದ ಹೊರತಾದ ಯಾವುದಾದರೂ ತನಿಖಾ ಸಂಸ್ಥೆಯಿಂದ ಹಗರಣದ ತನಿಖೆಯ ಅವಶ್ಯಕತೆ ಇದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿಯ ಕೆಲ ಅಧಿಕಾರಿಗಳು ಹಾಗೂ ಸಾರಿಗೆ ನೌಕರರ ಸಂಘಟನೆಗಳು ಒತ್ತಾಯ ಮಾಡಿವೆ.

ಸಾರಿಗೆ ನೌಕರರು ಈ ಹಿಂದೆ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಾಗ ಇದೇ ಅಧಿಕಾರಿಗಳು ನೂರಾರು ನೌಕರರನ್ನು ವಜಾಗೊಳಿಸಿದರು. ವರ್ಷ ಕಳೆದರೂ ಇನ್ನೂ ನೂರಾರು ಪ್ರಕರಣಗಳು ಇತ್ಯರ್ಥವಾಗಿಲ್ಲ. ಮತ್ತೊಂದೆಡೆ ಹತ್ತಾರು ಫೋರ್ಜರಿ ಮಾಡಿ ಲೂಟಿ ಮಾಡಿದ ಅಧಿಕಾರಿಗಳ ತಂಡವನ್ನು ಬರೀ ಅಮಾನತುಗೊಳಿಸಿ, ಅರ್ಧ ಸಂಬಳ ನೀಡುತ್ತಿದೆ. ಇದನ್ನು ಗಮನಿಸಿದರೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ. ಈ ಧೋರಣೆ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ ನೌಕರರು.

ಇನ್ನು ಹಗರಣದ ವಿರುದ್ಧ ತೀವ್ರ ಸ್ವರೂಪದ ತನಿಖೆ ನಡೆಸಲು ಆದೇಶಿಸುವಂತೆ ಸಾರಿಗೆ ಸಚಿವರನ್ನು ಖುದ್ದು ಭೇಟಿಯಾಗಿ ಮನವಿ ಮಾಡಲಾಗುವುದು. ಈಗಾಗಲೇ ಸಮಯವನ್ನೂ ಕೇಳಿದ್ದೇವೆ. ಇನ್ನೂ ಸಿಕ್ಕಿಲ್ಲ ಎಂದು ನೌಕರರ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ಆಕಸ್ಮಿಕವಾಗಿ ಬಿಎಂಟಿಸಿ ಎಂಡಿ ಕಣ್ಣಿಗೆ ಬಿದ್ದ ಕಡತ: ವರ್ಷದ ಹಿಂದೆ ಒಂದು ನಂದಿನಿ ಬೂತ್‌ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದ ಕಡತ ಆಕಸ್ಮಿಕವಾಗಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಕಣ್ಣಿಗೆ ಬಿತ್ತು. ಅದರ ಜಾಡುಹಿಡಿದು ಹೋದಾಗ ಫೋರ್ಜರಿ ಆಗಿರುವುದು ಬಯಲಾಗಿದೆ.

ಬಳಿಕ ಮೇಲ್ನೋಟಕಕ್ಕೆ ಇನ್ನಷ್ಟು ಕಡತಗಳನ್ನು ಪರಿಶೀಲಿಸಿದಾಗ ಅಂತಹದ್ದೇ ಫೋರ್ಜರಿ ಕೇಸುಗಳು ಗುತ್ತಿಗೆ ನವೀಕರಣ ಕುರಿತ ಕಡತಗಳಲ್ಲೂ ಕಂಡುಬಂದಿದೆ. ಅಲ್ಲಿಂದ ಬಿಎಂಟಿಸಿಯಲ್ಲಿ ಕಡತ ಶೋಧನೆಯ ಯಜ್ಞ ಶುರುವಾಗಿದ್ದು, ಈಗಲೂ ಮುಂದುವರಿದಿದೆ. ಇತ್ತ ಪ್ರಕರಣದಲ್ಲಿ ಐವರನ್ನು ಅಮಾನತುಗೊಳಿಸಲಾಗಿತ್ತು. ಈಗ ಅದೇ ತಂಡದ ವಿರುದ್ಧ ಮತ್ತೆರಡು ಎಫ್ಐಆರ್‌ಗಳನ್ನು ದಾಖಲು ಮಾಡಲಾಗಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು