ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕೆಲ ಅಧಿಕಾರಿಗಳೇ ಸ್ವತಃ ತಪ್ಪು ಮಾಡಿದರು ಅದನ್ನು ಚಾಲನಾ ಸಿಬ್ಬಂದಿಗಳ ಮೇಲೆ ಸಾರಸಗಟಾಗಿ ಹಿಂದೆಮುಂದೆ ನೋಡದೆ ಹೊರಿಸುವುದಕ್ಕೆ ಸ್ವಲ್ಪವು ನಾಚಿಕೆ ಅನ್ನೋದೆ ಆಗುವುದಿಲ್ಲ.
ಇಂಥ ನಾಚಿಗೆಗೆಟ್ಟ ಅಧಿಕಾರಿಗಳು ಮಾಡುವ ತಪ್ಪಿಗೆ ಇಲ್ಲಿ ಚಾಲಕರು ಕಾರಣ ಕೊಡಬೇಕಂತೆ. ಅದು ಕೂಡ ನಿಮ್ಮ ನಿರ್ಲಕ್ಷ್ಯದಿಂದಲೇ ಆಗಿರುವುದು ಎಂದು ಇವರು ಮಾಡಬೇಕಿರುವ ಕೆಲಸವನ್ನು ಚಾಲಕರ ಮೇಲೆ ಹೊರಿಸುವುದರಲ್ಲಿ ಎಂಥ ನಿಸ್ಸಿಮರು ಎಂದರೆ ಅದನ್ನು 11ನೇ ಘಟಕದ ವ್ಯವಸ್ಥಾಪಕ ಕೊಟ್ಟಿರುವ ಮೆಮೋನೇ ಹೇಳುತ್ತಿದೆ.
ಹೌದು! ಬಿಎಂಟಿಸಿ ಘಟಕ -11ರ ಯಲಹಂಕದ ಘಟಕ ವ್ಯವಸ್ಥಾಪಕ ಇದೇ ನವೆಂಬರ್ 8ರಂದು ತಮ್ಮ ಘಟಕದ ಚಾಲಕ ಅಶ್ಪಕ್ ಎಂಬುವರಿಗೆ ಇವರೇ (ಡಿಎಂ) ಮಾಡಿದ ತಪ್ಪಿಗೆ ಕಾರಣ ಕೇಳಿ ಸೂಚನ ಪತ್ರ ಕೊಟ್ಟಿದ್ದಾರೆ.
ನೀವು ಕೆಎ57- ಎಫ್3715 ವಾಹನದಲ್ಲಿ ಸೆಪ್ಟಂಬರ್ 13-2023ರಂದು ಮಾರ್ಗಸಂಖ್ಯೆ 500D/50 ಕಾರ್ಯಾಚರಣೆ ಮಾಡುತ್ತಿರುವಾಗ ಸಮಯ 7.45ರ ರಾತ್ರಿ ನೀವು ಬಸ್ ಓಡಿಸುತ್ತಿದ್ದಾಗ ಈ ಬಸ್ ಮಳೆಗಾಲದಲ್ಲಿ ತುಂಬ ಕಳಪೆಯಾಗಿದೆ. ಅಂದು ಬಂದ ಮಳೆಯಿಂದ ಬಸ್‌ನ ಪ್ರತಿ ಸೀಟ್‌ನಲ್ಲಿ ಮಳೆ ನೀರು ತುಂಬಿತ್ತು.
ಹೀಗಾಗಿ ಬಸ್‌ನ ಮೇಲ್ಛಾವಣಿಯ ಬಗ್ಗೆ ದಯವಿಟ್ಟು ಕಾಳಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಾರ್ವಜನಿಕರಿಂದ ನಮಗೆ ದೂರು ಬಂದಿದೆ. ಇದು ನಿಮ್ಮ ಕರ್ತವ್ಯದಲ್ಲಿನ ನಿರ್ಲಕ್ಷತೆಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿ, ಸಂಸ್ಥೆಗೆ ಕೆಟ್ಟ ಹೆಸರು ಬರಲು ಕಾರಣವಾಗಿದೆ. ಆದ್ದರಿಂದ ನಿಮ್ಮ ಮೇಲೆ ಏಕೆ ಸೂಕ್ತ ಶಿಸ್ತಿನ ಕ್ರಮ ಜರುಗಿಸಬಾರದು ಎಂದು ಕೇಳಿದ್ದಾರೆ.
ಅಲ್ಲದೇ ನಾನು ಮಾಡಿರುವ ಆರೋಪವು ನಿಮ್ಮ ಕರ್ತವ್ಯದಲ್ಲಿನ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷತನದಿಂದ ಉಂಟಾಗಿದ್ದು, ನಿಮ್ಮ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳದಿರಲು ಸಮರ್ಥನೆಗಳೇನಾದರೂ ಇದ್ದರೆ ನಿಮ್ಮ ಲಿಖಿತ ಹೇಳಿಕೆಯನ್ನು ಈ ಕಾರಣ ಕೇಳುವ ಸೂಚನಾ ಪತ್ರ ತಲುಪಿದ 7 ದಿನಗಳೊಳಗಾಗಿ ಸಲ್ಲಿಸತಕ್ಕದ್ದು. ಇಲ್ಲವಾದರೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೆಮೋ ಕೊಟ್ಟಿದ್ದಾರೆ.
ಅಂದರೆ ಇಲ್ಲಿ ಈ ಘಟಕ ವ್ಯವಸ್ಥಾಪಕನ ಕೆಲಸವೇನು? ಬಸ್‌ಗಳು ಫೀಟ್‌ಆಗಿವೆಯೋ ಇಲ್ಲವೋ ಎಂದು ನೋಡುವುದು ಇವರ ಕೆಲಸವಲ್ಲವೇ? ಹೀಗಿದ್ದರೆ ಅದನ್ನು ಚಾಲಕನ ಮೇಲೆ ಹೊರಿಸಿ ಕಾರಣ ಕೇಳಿ ಮೆಮೋ ಕೊಟ್ಟಿರುವ ಈತನಿಗೆ ಸ್ವಲ್ಪವಾಗದರೂ ತನ್ನ ಜವಾಬ್ದಾರಿಯ ಅರಿವಿದೆಯೇ? ಇಲ್ಲ ಚಾಲಕನ ಮೇಲೆ ತನ್ನ ತಪ್ಪನ್ನು ಹಾಕಿ ಮೇಲಧಿಕಾರಿಗಳಿಗೆ ಚಾಲಕ ಕೊಟ್ಟ ಕಾರಣ ಪತ್ರ ನೀಡಿ ಆತನನ್ನು ಆಮಾನತು ಮಾಡಿಸಿ ತಾನು ಏನು ತಪ್ಪೆ ಮಾಡಿಲ್ಲ ಎಂಬುದನ್ನು ಸಾಬೀತುಪಡಿಸಲು ಹೊರಟ್ಟಿದ್ದಾರೆಯೆ?
ಇಲ್ಲಿ ನಿಜವಾಗಲು ಕಾರಣ ಕೊಡಬೇಕಿರುವುದು ಘಟಕ ವ್ಯವಸ್ಥಾಪಕನೆ. ಕಾರಣ ಬಸ್‌ನ ಮೇಲ್ಛಾಣಿ ಸೋರುತ್ತಿದ್ದರೆ ಅದಕ್ಕೆ ಕಾರಣ ಯಾವು ಚಾಲಕನೆ? ಒಂದು ವೇಳೆ ಚಾಲಕ ಈ ಬಸ್‌ನ ಛಾವಣಿ ಮಳೆ ಬಂದರೆ ಸೋರುತ್ತದೆ ನಾನು ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳಿದ್ದರೆ ಅದಕ್ಕೆ ಅಧಿಕಾರಿಗಳಿಗೆ ತಿರುಗಿ ಮಾತನಾಡಿದ ಎಂದು ಹೇಳಿ ಅಮಾನತು ಮಾಡಿಸುತ್ತಿದ್ದ. ಅಲ್ಲದೆ ನಾನು ಕೊಟ್ಟ ಬಸ್ ತೆಗೆದುಕೊಂಡು ಹೋಗಬೇಕು ಎಂದು ಗದರುತ್ತಿದ್ದ.
ಇಂಥ ಪರಿಸ್ಥಿತಿಯಲ್ಲಿ ಚಾಲಕ ಏನು ಮಾಡಬೇಕು? ಈಗ ಇತ್ತ ಕಳಪೆಯಾಗಿದ್ದ ಬಸ್ ತೆಗೆದುಕೊಂಡು ಹೋಗಿದ್ದಕ್ಕೆ ಚಾಲಕನನ್ನೇ ಹೊಣೆ ಮಾಡುವ ಈ ಡಿಎಂ ತಾನು ಮಾಡಬೇಕಾದ ಕೆಲಸವನ್ನು ಮಾಡಿದ್ದರೆ ಬಸ್‌ನ ಛಾವಣಿ ಏಕೆ ಸೋರುತ್ತಿತ್ತು ಎಂಬುದರ ಬಗ್ಗೆ ಏಕೆ ಯೋಚನೆ ಮಾಡಲಿಲ್ಲ. ಇನ್ನು ಪ್ರಯಾಣಿಕರು ಏಕೆ ದೂರು ನೀಡುತ್ತಿದ್ದರು. ಈತನ ಕರ್ತವ್ಯ ನಿರ್ಲಕ್ಷದಿಂದಾಗಿರುವುದಕ್ಕೆ ಸಾರ್ವಜನಿಕರು ದೂರು ಕೊಟ್ಟಿದ್ದಾರೆ.
ಆ ದೂರಿಗೆ ತನ್ನದೇ ತಪ್ಪು ಎಂಬುದನ್ನು ಅರಿತು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವ ಬದಲಿಗೆ ಇಲ್ಲಿ ಚಾಲಕನಿಗೆ ಮೆಮೋ ಕೊಟ್ಟಿದ್ದಾರೆ ಈ ಬೇಜವಾಬ್ದಾರಿ ಡಿಎಂ. ಇದಕ್ಕೆ ಚಾಲಕ ಕಾರಣ ಬೇರೆ ಕೊಡಬೇಕಂತೆ. ಪಾಪ ಆ ಚಾಲಕ ಏನಂತ ಕಾರಣ ಕೊಡುತ್ತಾನೆ. ನಿಮ್ಮ ನಿರ್ಲಕ್ಷದಿಂದ ಇದು ಆಗಿರುವುದು ನನ್ನಿಂದ ಆಗಿದಲ್ಲ ಎಂದು ಕೊಡಬೇಕಷ್ಟೆ.
ಇಂಥ ಬೇಜವಾಬ್ದಾರಿತನವನ್ನು ಬಿಟ್ಟು ಚಾಲಕರು ನೆಮ್ಮದಿಯಿಂದ ಅವರು ಪ್ರಾಮಾಣಿಕವಾಗಿ ಕರ್ತವ್ಯಮಾಡುವುದಕ್ಕೆ ಬೇಕಾದ ರೀತಿಯಲ್ಲಿ ಫೀಟ್ ಆಗಿರುವ ವಾಹನಗಳನ್ನು ಕೊಟ್ಟು ಕಳುಹಿಸಿ. ಕಳಪೆ ವಾಹನಗಳನ್ನು ಕೊಟ್ಟು ಚಾಲಕ ಮನೆಯಿಂದ ವಾಹನ ತಂದಿದ್ದಾನೆ ಎಂಬಂತೆ ಮೆಮೋ ಕೊಟ್ಟಿದ್ದೀರಲ್ಲ ನಿಮಗೆ ನಾಚಿಕೆ ಆಗುವುದಿಲ್ಲವೇ ಡಿಎಂ ಎಂದು ಸಾರ್ವಜನಿಕರು ಕ್ಯಾಕರಿಸಿ ಉ.. ಮುನ್ನ ಎಚ್ಚೆತ್ತುಕೊಳ್ಳಿ ಎಂಡಿ ಸಹೇಬರೆ.
ಇದು ಅತಿರೇಕದ ಆಪಾದನ ಪತ್ರ ಕೊಟ್ಟು ಅಸಹಾಯಕ ನೌಕರರ ಮೇಲೆ ಅಧಿಕಾರಿಗಳು ದರ್ಪ ಮೇರೆಯುತ್ತಿದ್ದಾರೆ. ಬಸ್ಸು ಮಳೆ ಬಂದು ಸೋರಿದರೆ ಅದ್ಹೇಗೆ ಚಾಲಕನ ನಿರ್ಲಕ್ಷ್ಯ ಆಗುತ್ತದೆ ಎಂಬುದು ಆ ಅಧಿಕಾರಿಯೆ ಸಾರ್ವಜನಿಕವಾಗಿ ಸಮಜಾಯಿಷಿ ನೀಡಬೇಕು ಎಂದು ನೊಂದ ನೌಕರನ ಪರವಾಗಿ ಒಕ್ಕೋರಲಿನಿಂದ ಒತ್ತಾಯ.
l ಬಿಎಂಟಿಸಿ ಸಮಸ್ತ ಚಾಲಕರು
![](https://vijayapatha.in/wp-content/uploads/2023/11/23-Nov-bmtc-11-depot-247x300.jpg)
![](https://vijayapatha.in/wp-content/uploads/2024/02/QR-Code-VP-1-1-300x62.png)