ಬೆಂಗಳೂರು: ರಾಜಧಾನಿ ಜನರ ಜೀವನಾಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲೆಕ್ಟ್ರಿಕ್ ಬಸ್ಗಳಿಗೆ ಕನ್ನಡ ಬರದ ಮತ್ತು ಚಾಲನೆಯ ಅನುಭವವೇ ಇಲ್ಲದ ಸಣ್ಣಪುಟ್ಟ ಮಲಯಾಳಿ ಹುಡುಗರನ್ನು ನೇಮಿಸಿಕೊಂಡು ಬಸ್ ನೀಡಿದ್ದ ಬಗ್ಗೆ ವಿಜಯಪಥ ಸಮಗ್ರ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ತನಿಖೆ ನಡೆಸಿ 50ಕ್ಕೂ ಹೆಚ್ಚು ಚಾಲಕರನ್ನು ಕೆಲಸದಿಂದ ಬಿಡಿಸಿದೆ.
ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ಗಳಲ್ಲಿ ಕೇರಳದ ಚಾಲಕರನ್ನು ನೇಮಕ ಮಾಡಿಕೊಂಡಿದ್ದರಿಂದ ಕನ್ನಡಿಗರಿಗೆ ಉದ್ಯೋಗವಿಲ್ಲದಂತಾಗಿತ್ತು. ಇನ್ನು ಕೆಲಸಕ್ಕೆ ಸೇರಿಕೊಳ್ಳುವಾಗ 22500 ರೂ. ವೇತನ ಕೊಡುತ್ತೇವೆಂದು ಹೇಳಿ ಕೆಲಸಕ್ಕೆ ನೇಮಕಗೊಂಡ ಮೇಲೆ ಚಾಲಕರಿಗೆ ಕೇವಲ 18 ಸಾವಿರ ರೂಪಾಯಿ ಮಾತ್ರ ವೇತನ ನೀಡುತ್ತಿದೆ, ಹೀಗಾಗಿ ಇದರಿಂದ ಕನ್ನಡಿಗ ಚಾಲಕರು ಕೆಲವರು ಬಿಟ್ಟು ಹೋಗಿದ್ದು, ಸದ್ಯ ಯಾರು ಕೆಲಸಕ್ಕೆ ಬರುತ್ತಿಲ್ಲ.
ಹೀಗಾಗಿ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಏಜೆನ್ಸಿಗಳು ಕೇರಳದ ಹೆವಿ ಲೈಸೆನ್ಸ್ ಮತ್ತು ಅನುಭವ ಇಲ್ಲದ ಚಾಲಕರಿಗೆ ಬಸ್ ಕೊಟ್ಟಿದ್ದವು. ಈ ಬಗ್ಗೆ ವಿಜಯಪಥ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು 50ಕ್ಕೂ ಹೆಚ್ಚು ಮಂದಿಯನ್ನು ತೆಗೆದು ಹಾಕಿದ್ದಾರೆ.
ಎಲೆಕ್ಟ್ರಿಕ್ ಬಸ್ ಕಂಪನಿಗಳು ನೇಮಕ ಮಾಡಿಕೊಂಡ ಚಾಲಕರಿಗೆ ಸರಿಯಾದ ವೇತನ ನೀಡದಿದ್ದರಿಂದ ಕಳೆದ ತಿಂಗಳು ಪ್ರತಿಭಟನೆ ಮಾಡಿ 60 ಕ್ಕU ಹೆಚ್ಚು ಚಾಲಕರು ಬಿಟ್ಟು ಹೋಗಿದ್ದಾರೆ. ಹೀಗಾಗಿ ಚಾಲಕರಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಇನ್ನು ಶಕ್ತಿ ಯೋಜನೆ ಆರಂಭವಾದ ಮೇಲೆ ಶಾಲಾ-ಕಾಲೇಜುಗಳಿಗೆ ಮತ್ತು ಕೆಲಸಕ್ಕೆ ತೆರಳುವ ಮಹಿಳೆಯರು ಲಕ್ಷಾಂತರ ಸಂಖ್ಯೆಯಲ್ಲಿ ಬಿಎಂಟಿಸಿಯನ್ನು ಅವಲಂಬಿಸಿದ್ದಾರೆ. ಆದರೆ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಬಸ್‌ಗಳು ಬರುತ್ತಿಲ್ಲ. ಇತ್ತ ಅರ್ಧಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ಡಿಪೋನಲ್ಲೇ ನಿಂತಿರುವುದರಿಂದ ಸಮಸ್ಯೆಯಾಗುತ್ತಿದೆ.
ಎಲೆಕ್ಟ್ರಿಕ್ ಬಸ್ಗಳಿಗೆ ನಾವು ಯಾರನ್ನೂ ನೇಮಕ ಮಾಡಿಕೊಂಡಿಲ್ಲ. ಇದು ಕೇಂದ್ರ ಸರ್ಕಾರದ ಯೋಜನೆ, ಎಲೆಕ್ಟ್ರಿಕ್ ಬಸ್ಗಳಿಗೆ ಖಾಸಗಿ ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಂಡಿದ್ದಾರೆ. ನಾವು ಈಗಾಗಲೇ ನೋಟಿಸ್ ನೀಡಿದ್ದೀವೆ ತನಿಖೆ ಮಾಡಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.