ಬೆಂಗಳೂರು: ಬಿಎಂಟಿಸಿ ರಾಜ್ಯ ರಾಜಧಾನಿ ಸಾರಿಗೆ ವ್ಯವಸ್ಥೆಯ ಜೀವಾಳ. ಒಂದು ಹಂತಕ್ಕೆ ಬಿಎಂಟಿಸಿಯೇ ಎಲ್ಲ ವರ್ಗದ ಜನರ ಓಡಾಟ ಬೆಸೆಯುವ ಮುಖ್ಯ ಕೊಂಡಿ. ಜನರಿಗೆ ಸುರಕ್ಷಿತ ಮತ್ತು ಅಗ್ಗದ ದರದಲ್ಲಿ ಸೇವೆ ಒದಗಿಸುವ ರಥಾವರ.
ಅಂಥ ರಥಾವರ ಬಿಎಂಟಿಸಿಯ ಸಿಬ್ಬಂದಿಗೆ ಸರಿಯಾಗಿ ಸಂಬಳ ಕೊಡೋಕು ಆಗದ ದುಸ್ಥಿತಿಗೆ ಬಿಎಂಟಿಸಿ ತಲುಪಿದೆ. ಹೀಗಿದ್ದರೂ ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತಿನಂತೆ ಸುಖಾಸುಮ್ಮನೇ ಕೋಟಿ ಕೋಟಿ ರೂ. ಖರ್ಚು ಮಾಡಿ, ಜನರ ಹಣವನ್ನು ದುಂದು ವೆಚ್ಚ ಮಾಡುತ್ತಿದೆ.
ಈಗಾಗಲೇ ಬಿಎಂಟಿಸಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಬಸ್ಗಳಿವೆ. ಈ ಪೈಕಿ ಪ್ರತಿ ದಿನ 2500 ಬಸ್ಗಳು ಮಾತ್ರ ಪ್ರತಿದಿನ ಕಾರ್ಯಾಚರಣೆ ಮಾಡುತ್ತಿದೆ. ಉಳಿದಂತೆ ಗುತ್ತಿಗೆ ಆಧಾರದ ಮೇಲೆ ಸೇವೆ ನೀಡುತ್ತಿದೆ.
ಇನ್ನು ಬಿಎಂಟಿಸಿ ಪಾಲಿಗೆ ವೋಲ್ವೋ ಬಸ್ಗಳನ್ನು ಬಿಳಿ ಆನೆ ಸಾಕಿದಂತೆ. ರಸ್ತೆಗೆ ಇಳಿದರೂ, ಸುಮ್ಮನೆ ಡಿಪೋದಲ್ಲಿ ನಿಂತರೂ ಅದರ ನಿರ್ವಹಣಾ ವೆಚ್ಚವನ್ನು ಸಂಸ್ಥೆ ನೋಡಿಕೊಳ್ಳಲೇ ಬೇಕು. ಈಗ ಬಿಎಂಟಿಸಿ ವೋಲ್ವೋ ಬಸ್ಗಳಿಗೆ ಸುಖಾಸುಮ್ಮನೆ ಕೋಟಿ ಕೋಟಿ ರೂಪಾಯಿ ನಿರ್ವಹಣಾ ವೆಚ್ಚ ಮಾಡಿ ಹಣವನ್ನು ಪೋಲು ಮಾಡುತ್ತಿದೆ.
ಅತ್ತ ಸಿಬ್ಬಂಗೆ ವೇತನ ಕೊಡುವುದಕ್ಕೂ ಹಣವಿಲ್ಲ ಎಂದು ಅಳುವ ಬಿಎಂಟಿಸಿ ಅಧಿಕಾರಿಗಳು ವೋಲ್ವೋ ಬಸ್ಗಳನ್ನು ಸುಖಾಸುಮ್ಮನೆ 10 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ವಹಣೆ ಮಾಡುತ್ತಿದೆ. ಒಟ್ಟು ಬಿಎಂಟಿಸಿ ಬಳಿ 800 ವೋಲ್ವೋ ಬಸ್ಗಳಿವೆ. ಆದರೆ ಈ ಪೈಕಿ 230 ಬಸ್ಗಳು ಮಾತ್ರ ನಿತ್ಯ ರಸ್ತೆಗಳಿಯುತ್ತಿದೆ. ಉಳಿದಂತೆ 570 ಬಸ್ಗಳು ಡಿಪೋದಲ್ಲಿ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ. ಹೀಗಿದ್ದರೂ ಈ 570 ವೋಲ್ವೋ ಬಸ್ಗಳಿಗೆ ಪ್ರತಿ ವರ್ಷ 10 ಕೋಟಿ ರೂ. ವೆಚ್ಚ ಮಾಡಿ ನಿರ್ವಹಣೆ ಮಾಡುತ್ತಿದೆ.
ಅಲ್ಲ ಬೇಡದ ನಿಂತಲೇ ನಿಂತಿರುವ ಬಸ್ಗಳಿಗೆ ಕೋಟಿ ಕೋಟ ಹಣ ವ್ಯಯಿಸುವ ಅಧಿಕಾರಿಗಳು ನಿಯತ್ತಾಗಿ ದುಡಿಯುವ ಕೈಗಳಿಗೆ ಸರಿಯಾದ ಸಮಯಕ್ಕೆ ವೇತನ ನೀಡಿದರೆ ಎಷ್ಟು ಖುಷಿಯಾಗುತ್ತಿದೆ ಅಲ್ವ. ಅದನ್ನು ಬಿಟ್ಟು ತುಕ್ಕು ಹಿಡಿಯುತ್ತಿರುವ ಬಸ್ಗಳ ಹಿಂದೆ ಚಾಕರಿ ಮಾಡಿಕೊಂಡು ಹಣ ವ್ಯಯಿಸುವುದರಿಂದ ಬರುವ ಲಾಭವಾದರೂ ಏನು. ಇಂಥ ಮೂರ್ಖ ಅಧಿಕಾರಿಗಳು ಆಡಳಿತ ವರ್ಗಕ್ಕೆ ಏನು ಹೇಳಬೇಕು.
ಲೂಟಿ ಹೊಡೆಯುವುದೇ ಉದ್ದೇವಾಗಿಸಿಕೊಂಡು ಬೇರೆ ಬೇರೆ ರೂಪದಲ್ಲಿ ಖರ್ಚು ತೋರಿಸಿ ಗುಳುಂ ಮಾಡುವ ಆಡಳಿತ ವರ್ಗ ಅಧಿಕಾರಿಗಳಿಗೆ ಈ ಜನ್ಮದಲ್ಲಿ ಸಾರಿಗೆ ಸಂಸ್ಥೆಯನ್ನು ಉದ್ಧಾರ ಮಾಡುವ ಆಲೋಚನೆ ಇಲ್ಲ ಬಿಡಿ. ಒಂದು ವೇಳೆ ಇದ್ದಿದ್ದರೆ ಮೊದಲು ಸುಖಸುಮ್ಮನೆ ವೆಚ್ಚವಾಗುತ್ತಿರುವುದಕ್ಕೆ ಕಡಿವಾಣ ಹಾಕಲು ಯೋಜನೆ ರೂಪಿಸುತ್ತಿದ್ದರು. ಆದರೆ ಸರ್ಕಾರಿ ಕೆಲಸ ದೇವರ ಕೆಲಸವಲ್ಲವೇ ದೇವರು ಕೇಳಲ್ಲ ಇವರು ಮಾಡಲ್ಲ ಅಷ್ಟೇ ಬಿಡಿ.
ಇನ್ನು ಸಂಚರಿಸುವ 230 ಬಸ್ ಗಳಿಂದ ಒಂದು ವಾರದಲ್ಲಿ 97,78,664 ರೂ. ಸಂಸ್ಥೆಗೆ ಆದಾಯ ಬರುತ್ತಿದೆ. ಎಂದರೆ ಒಂದು ತಿಂಗಳಿಗೆ ಹೆಚ್ಚು ಕಮ್ಮಿ 40 ಲಕ್ಷ ರೂಪಾಯಿ ಆದಾಯ ಸದ್ಯ ರಸ್ತೆಯಲ್ಲಿರುವ ವೋಲ್ವೋ ಬಸ್ಗಳಿಂದ ಆದಾಯ ಸಂಸ್ಥೆಯ ಬೊಕ್ಕಸಕ್ಕೆ ಬರುತ್ತಿದೆ. ಇದರ ಬಹುಪಾಲ ಹಣ ಡಿಪೋದಲ್ಲೇ ನಿಂತು ತುಕ್ಕು ಹಿಡಿಯುತ್ತಿರುವ ಬಸ್ಗಳ ನಿರ್ವಹಣೆಗೆಂದೇ ಖರ್ಚಾಗುತ್ತಿರುವು ಮಾತ್ರ ವಿಪರ್ಯಾಸ.