ಇಂದು ಸಾರಿಗೆ ನಿಗಮಗಳಲ್ಲಿ ಚಾಲಕರ ದಿನದ ಸಂಭ್ರಮ – ಘಟಕಗಳಲ್ಲಿ ಹೂಗುಚ್ಛ ನೀಡಿ ಶುಭ ಕೋರಿದ ಸಹೋದ್ಯೋಗಿಗಳು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಚಾಲಕರು ಸೇರಿದಂತೆ ರಾಜ್ಯದ ಹಾಗೂ ದೇಶದ ಪ್ರತಿಯೊಬ್ಬರ ಚಾಲಕರ ಬಾಂಧವರಿಗೂ ಚಾಲಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಪ್ರೀತಿಯ ಸಾರಥಿಗಳೇ ನಿಮಗೆಲ್ಲರ ಏಕಾಗ್ರತಾ ಚಾಲನೆಯಿಂದ ಇಂದು ರಾಜ್ಯದೊಳಗೆ ಮತ್ತು ಹೊರಗೆ ಪ್ರಯಾಣಿಸುವ ಸಾರ್ವಜನಿಕರು ಅವರು ಅಂದುಕೊಂಡ ಸಮಯದಕ್ಕೆ ಸರಿಯಾಗಿ ತಲುಪಬೇಕಾದ ಸ್ಥಳವನ್ನು ತಲುಪುತ್ತಿದ್ದಾರೆ.
ರಾಜ್ಯದ ಸರ್ಕಾರಿ ಸಾರಿಗೆ ಬಸ್‌ಗಳು ಎಂದರೆ ಬಹುತೇಕ ವಿಐಪಿಗಳು ಹಾಗೂ ವಿವಿಐಪಿಗಳು ಪ್ರಯಾಣಿಸುವ ವಾಹನಗಳಲ್ಲ. ಇವು ಜನಸಾಮಾನ್ಯರ ಜೀವನದ ರಥಗಳು. ಇಂಥ ರಥಗಳ ಸಾರಥಿಗಳಾಗಿ ಹಗಲು ರಾತ್ರಿ ಎನ್ನದೆ ಸಾರ್ವಜನಿಕರಿಗೆ ಸೇವೆ ನೀಡುತ್ತಿರುವ ನೀವು ಎಲ್ಲರ ಬಂಧುಗಳಾಗಿದ್ದೀರಿ.
ತಾವು ಸಮಯ ಪ್ರಜ್ಞೆ, ಶ್ರದ್ಧೆ, ಪ್ರಾಮಾಣಿಕತೆ ಮತ್ತು ಶಿಸ್ತಿನ ಸಿಪಾಯಿಗಳಾಗಿ ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತಾ ಚಾಲನೆ ಮಾಡುವ ಮೂಲಕ ಜನಸಾಮಾನ್ಯರ ಮನೆಗೆದ್ದಿರುವ ಸಾರಥಿಗಳು ನೀವಾಗಿದ್ದೀರಿ. ನೀವು ಪ್ರಯಾಣಿಕರ ಪಾಲಿನ ನಿಜವಾದ ದೇವರುಗಳಾಗಿದ್ದೀರಿ.
ಚಾಲಕರಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ಅಮೂಲ್ಯವಾದ ಸಾರ್ವಜನಿಕ ಸೇವೆಯನ್ನು ಮಾಡುವ ಮೂಲಕ ಚಾಲಕರು ದೇಶದ ಸಂಪತ್ತಿನ ಒಂದು ಭಾಗವೆಂದು ಹೆಮ್ಮೆಯಿಂದ ಹೇಳಬಹುದಾಗಿದೆ. ಸಾರಥಿಗಳೇ ನಿಮ್ಮ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕು ಯಾವಾಗಲೂ ಸುಖ ಶಾಂತಿಯಿಂದ ಕೂಡಿರಲಿ.
ಈ ಕಾರ್ಮಿಕರ ದಿನದಂದು ಸಾರಿಗೆ ನಿಗಮಗಳ ಚಾಲಕರು ಸೇರಿದಂತೆ ರಾಜ್ಯದ ಹಾಗೂ ದೇಶದ ಪ್ರತಿಯೊಬ್ಬರ ಚಾಲಕರಿಗೂ ಈ ಜನವರಿ 24ರ ಚಾಲಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳನು ಮತ್ತೊಮ್ಮೆ ತಿಳಿಸುತ್ತಿದ್ದೇವೆ. ಧನ್ಯವಾದಗಳು.