ಬೆಂಗಳೂರು: ಕಳೆದ ಏಪ್ರಿಲ್ನಲ್ಲಿ ನಡೆದ ಮುಷ್ಕರ ವೇಳೆ ಮಾಡಿದ ಸಾರಿಗೆ ನೌಕರರ ವಜಾ, ವರ್ಗಾವಣೆ, ಅಮಾನತು ಆದೇಶವನ್ನು ವಾಪಸ್ಪಡೆಯುತ್ತೇವೆ ಎಂದು ಹೇಳಿಕೊಂಡು ಬರುತ್ತಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತಿಗೆ ತಪ್ಪುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದೇವೆ.
ಮುಷ್ಕರದ ಸಮಯದಲ್ಲಿ ಆಗಿರುವ ವಜಾ, ವರ್ಗಾವಣೆ, ಅಮಾನತು ಮತ್ತು ಪೊಲೀಸ್ಪ್ರಕರಣಗಳನ್ನು ವಾಪಸ್ಪಡೆದಿರುವುದಾಗಿ ಈ ಹಿಂದೆ ಹಲವಾರು ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದರು. ಆದರೆ ಆ ಘೋಷಣೆಗಳು ಮಾತ್ರ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಸಚಿವರು ಮುಷ್ಕರದ ವೇಳೆ ಸುಮಾರು 6 ಸಾವಿರ ನೌಕರರು ಶಿಕ್ಷೆಗೆ ಒಳಗಾಗಿದ್ದರು. ಅವರಲ್ಲಿ 4 ಸಾವಿರ ನೌಕರರ ಮೇಲಿನ ಶಿಕ್ಷೆ ಆದೇಶವನ್ನು ವಾಪಸ್ಪಡೆಯಲಾಗಿದೆ ಎಂದು ವಿವರಿಸಿದ್ದರು. ಆದರೆ ಈವರೆಗೂ ಎಷ್ಟು ನೌಕರರನ್ನು ವಾಪಸ್ ತೆಗೆದುಕೊಂಡಿದ್ದಾರೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.
ಮುಷ್ಕರದ ಸಮಯದಲ್ಲಿ ಎಫ್ಐಆರ್ಆಗಿರುವ ನೌಕರರ ಬಗ್ಗೆ ಮುಂದಿನ ದಿನಗಳಲ್ಲಿ ಒಳ್ಳೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಆ ಬಗ್ಗೆಯೂ ಯಾವ ನೌಕರರು ಭಯ ಪಡುವ ಅಗತ್ಯವಿಲ್ಲ ಎನ್ನವನ್ನು ಸರಿಪಡಿಸಿಕೊಡುತ್ತೇವೆ ಎಂದು ತಿಳಿಸಿದ್ದರು. ಆದರೆ ಈಗ 4 ಸಾವಿರ ನೌಕರರ ಮೇಲಿನ ಶಿಕ್ಷೆ ಆದೇಶವನ್ನೇ ವಾಪಸ್ಪಡೆದಿಲ್ಲ ಇನ್ನೂ ವಾಪಸ್ ಪಡೆದಿಲ್ಲ ಇನ್ನು 2 ಸಾವಿರ ನೌಕರರ ಭವಿಷ್ಯ ಇನ್ಣಾವ ರೀತಿಯಾಗುತ್ತದೆಯೋ ಗೊತ್ತಿಲ್ಲ.
ಇನ್ನು ಶಿಕ್ಷೆಗೆ ಒಳಗಾಗಿರುವ ಎಲ್ಲ ನೌಕರರ ಎಲ್ಲ ಪ್ರಕರಣಗಳನ್ನು ವಾಪಸ್ಪಡೆಯುವ ಬಗ್ಗೆ ಸಚಿವರು ಹೋದ ಕಡೆ ಅವರನ್ನು ಭೇಟಿ ಮಾಡಿದ ನೌಕರರು ಮತ್ತು ಸಂಘಟನೆಗಳ ಪದಾಧಿಕಾರಿಗಳು ಮಾಡಿಕೊಂಡಿದ್ದ ಮನವಿ ವೇಳೆ ಭರಸವೆ ನೀಡಿದ್ದರು. ಆದರೆ ಅದರಂತೆ ನಡೆದುಕೊಳ್ಳುವಲ್ಲಿ ಸಚಿವರು ವಿಫಲರಾಗಿದ್ದಾರೆ.
ಹೀಗಾಗಿ ಸಾರಿಗೆಯ ನಾಲ್ಕೂ ನಿಗಮಗಳ ಕೆಲ ಕಾನೂನು ಬಾಹಿರ ನಡೆಯು ಇಲ್ಲಿ ಇನ್ನೂ ಜೀವಂತವಾಗಿದೆ. ಜತೆಗೆ ಮುಂದಿನ ದಿನಗಳಲ್ಲಿ ನೌಕರರಿಗೆ ಯಾವಯಾವ ಸಮಸ್ಯೆ ತಂದೊಡ್ಡುತ್ತಾರೋ ಎಂಬ ಆತಂಕವು ಎದುರಾಗಿದೆ.
ಇದರಿಂದ ವಿಚಲಿತರಾದಂತೆ ಕಾಣುತ್ತಿರುವ ನೌಕರರು ಈಗ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ಕಾನೂನು ಹೋರಾಟ ಮಾಡುವ ಮೂಲಕ ಅದು ಎಷ್ಟೇ ವರ್ಷಗಳಾದರೂ ಸರಿ ಅಧಿಕಾರಿಗಳಿಗೆ ಪಾಠ ಕಲಿಸಲೇ ಬೇಕು ಎಂಬು ನಿರ್ಧಾರಕ್ಕೆ ಬರುತ್ತಿದ್ದಾರೆ.
ಅಲ್ಲದೆ ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿರುವ ಅಧಿಕಾರಿಗಳ ಹೆಸರುಗಳನ್ನು ತಾವು ದಾಖಲಿಸುತ್ತಿರುವ ದೂರುನಲ್ಲಿ ಸೇರಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇದು ನಾವು ಮಾಡಿದಲ್ಲ ಅಂದು ಇದ್ದ ಅಧಿಕಾರಿಗಳು ಮಾಡಿ ಹೋಗಿರುವುದು ಎಂದು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳು ಅವಕಾಶವಿರುವುದರಿಂದ ಈ ರೀತಿ ನೌಕರರು ಅಧಿಕಾರಿಗಳ ಹೆಸರುಗಳು ಮತ್ತು ಅವರ ಹುದ್ದೆಗಳನ್ನು ಸೇರಿಸುತ್ತಿದ್ದಾರಂತೆ.
ಮುಷ್ಕರ ಸಂದರ್ಭದಲ್ಲಿ ವಜಾ ಆಗಿದ್ದ ನೌಕರರನ್ನು ನಾಲ್ಕು ವಾರದೊಳಗೆ ನೇಮಕ ಮಾಡಿಕೊಳ್ಳಬೇಕು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಸಾರಿಗೆ ಇಲಾಖೆ ಅವರು ಪತ್ರ ನೀಡಿದ್ದರು ಇದುವರೆಗೂ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವ ಬಗ್ಗೆ ಸಾರಿಗೆ ಸಚಿವರ ಮಾತಿಗೂ ಬೆಲೆಕೊಡದ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡುವುದೇ ಅನಿವಾರ್ಯವಾಗಿದೆ ಎಂಬ ನಿಲುವಿಗೆ ನೌಕರರು ಬರುತ್ತಿದ್ದಾರೆ ಎನ್ನಲಾಗುತ್ತಿದೆ.