NEWSನಮ್ಮಜಿಲ್ಲೆನಮ್ಮರಾಜ್ಯ

KSRTC ರಿಯಾಯಿತಿ ದರದ ಪಾಸ್‌ ಇದ್ದರೂ ತಾರತಮ್ಯತೆ: ನಿವೃತ್ತರಾದ ಮೇಲೆ ಅಧಿಕಾರಿಗಳಿಗೆ ಬಡತನ- ನೌಕರರಿಗೆ ಸಿರಿತನ !!

ವಿಜಯಪಥ ಸಮಗ್ರ ಸುದ್ದಿ
  • ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಅಧಿಕಾರಿಗಳ ಅಂಧ ದರ್ಬಾರ್‌ಗೆ ಇದೇ ಸಾಕ್ಷಿ
  • ಅಧಿಕಾರಿಗಳು ಮತ್ತು ಕುಟುಂಬಕ್ಕೆ ಶೇ.50ರಷ್ಟು ರಿಯಾಯಿತಿ
  • ನೌಕರರು ಮತ್ತು ಕುಟುಂಬಕ್ಕೆ ಶೇ.25ರಷ್ಟು ರಿಯಾಯಿತಿ
  • ಸಾರಿಗೆಯಲ್ಲಿ ಊಸರವಳ್ಳಿ ವಂಶಸ್ಥರೇ ಹೆಚ್ಚು- ಹೇಳೋರಿಲ್ಲ ಕೇಳೋರಿಲ್ಲ !

ಬೆಂಗಳೂರು: ನಿವೃತ್ತ ಅಧಿಕಾರಿ/ನೌಕರರಿಗೆ ನೀಡಿರುವ ರಿಯಾಯಿತಿ ದರದ ಪಾಸುಗಳನ್ನು ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಅನುಮತಿಸುವ ಬಗ್ಗೆ KSRTC ಮುಖ್ಯ ಸಂಚಾರ ವ್ಯವಸ್ಥಾಪಕರು (CTM) ಆದೇಶವೊಂದನ್ನು ಹೊರಡಿಸಿದ್ದಾರೆ.

CTM ಹೊರಡಿಸುರವ ಆದೇಶ ಹೇಗಿದೆ ಎಂದರೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಇಲ್ಲಿ ನಿವೃತ್ತರಾದ ಅಧಿಕಾರಿಗಳು/ನೌಕರರಲ್ಲೂ ಭೇದಭಾವ ಮಾಡಲಾಗುತ್ತಿದೆ. ಆದರೂ ಇಲ್ಲೂ ಅಧಿಕಾರಿಗಳಿಗೆ ಸಿಂಹಪಾಲು ಸಿಗಬೇಕು. ನೌಕರರಿಗೆ ಹೊರೆಯಾಗಬೇಕು ಎಂಬ ನಿರ್ಧಾರ ತೆಗೆದುಕೊಂಡಿದ್ದಾರೆ.

ಇನ್ನು ಇದನ್ನು ಕೇಳಲು ನೌಕರರಿಗೆ ಆಗುವುದಿಲ್ಲ. ಕಾರಣ ಅಧಿಕಾರಿಗಳು ಮಾಡಿದ್ದೆ ಶಾಸನವಾಗಿದೆ ಅದಕ್ಕೆ. ನಿವೃತ್ತರಾದ ಮೇಲಾದರೂ ಇಬ್ಬರು ಸಂಸ್ಥೆಗಾಗಿ ದುಡಿದವರು ಎಂಬ ಭಾವನೆಯಿಂದ ನೋಡವ ಪ್ರವೃತ್ತಿ ಬೆಳೆಸಿಕೊಂಡರೆ ಒಳ್ಳೆಯದು.

ಈ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ನಿವೃತ್ತ ಅಧಿಕಾರಿಗಳು 100ಕ್ಕೆ 50 ರೂ.ಕೊಟ್ಟರೆ ಸಾಕು. ಅದೇ ನಿವೃತ್ತ ನೌಕರರ 100ಕ್ಕೆ 75 ರೂಪಾಯಿ ಕೊಟ್ಟು ಪ್ರಯಾಣಿಸಬೇಕು. ಏಕೆಂದರೆ ನೌಕರರು ಬಹುತೇಕ ಅಧಿಕಾರಿಗಳ ರೀತಿ ಲಂಚ ಬಾಕಿಕೊಂಡು ಬ್ಲಾಕ್‌ಮನಿ ಇಟ್ಟಿದ್ದಾರಲ್ಲ ಅದನ್ನು ಈ ರೀತಿ ಕೊಡಲಿ ಎಂದು ಸಿಟಿಎಂ ನಿರ್ಧರಿಸಿರಬೇಕು ಅಲ್ವಾ?

ಈ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತ ಅಧಿಕಾರಿಗಳು (ದರ್ಜೆ-2 ಮತ್ತು ಮೇಲ್ಪಟ್ಟು) ಹಾಗೂ ಅವರ ಪತ್ನಿ/ಪತಿ ರಾಜಹಂಸ ಮತ್ತು ಹವಾ ನಿಯಂತ್ರಿತ ಸಾರಿಗೆಗಳಿಗೆ ಮಾತ್ರ ಅನ್ವಯಿಸುವಂತೆ (ನಗರ ಸಾರಿಗೆ ವೋಲ್ಲೋ/ಹವಾನಿಯಂತ್ರಿಕ ಸಾರಿಗೆಗಳನ್ನು ಒಳಗೊಂಡಂತೆ) ಆಯಾ ವರ್ಗಗಳ ಸಾರಿಗೆಗಳಿಗೆ (ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳನ್ನು ಹೊರತುಪಡಿಸಿ) ಪೂರಕವಾದ ಮೂಲ ಪ್ರಯಾಣ ದರದ (Basic fare) ಶೇ.50 ರಷ್ಟು (half of the bus fares for the destination of travel) ಹಾಗೂ ಟೋಲ್ ಫೀ/ಅಪಘಾತ/ಪರಿಹಾರ ನಿಧಿ/ಅನ್ವಯವಾಗುವ ಇತರೆ ಎಲ್ಲ ಶುಲ್ಕ/ತೆರಿಗೆಗಳ ಪೂರ್ಣ ಮೊತ್ತವನ್ನು ಒಳಗೊಂಡ ಪ್ರಯಾಣ ದರವನ್ನು ನೀಡಿ, ನಿರ್ವಾಹಕರಿಂದ ಅಧಿಕೃತ ಬಸ್ ಚೀಟಿ ಪಡೆದು ಪ್ರಯಾಣಿಸಲು ಅನುಮತಿ ಕಲ್ಪಿಸಿ ಸಿಟಿಎಂ ಆದೇಶ ಹೊರಡಿಸಿದ್ದಾರೆ.

ಮುಂದುವರೆದು, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾದ ದರ್ಜೆ-3 ಮತ್ತು ದರ್ಜೆ-4 ನೌಕರರಿಗೆ ಮಾತ್ರ ಅನ್ವಯಿಸುವಂತೆ ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಇರುವ ಅವಕಾಶದ ಜೊತೆಗೆ ಹಾಲಿ ಇರುವ ಪಾಸುಗಳನ್ನು ಬಳಸಿಕೊಂಡು, ರಾಜಹಂಸ ಮತ್ತು ಹವಾನಿಯಂತ್ರಿತ ಸಾರಿಗೆಗಳು ಸೇರಿದಂತೆ ಎಲ್ಲ ಪ್ರತಿಷ್ಠಿತ ಸಾರಿಗಳಲ್ಲಿ ಆಯಾ ವರ್ಗಗಳ ಸಾರಿಗೆಗಳಿಗೆ ಪೂರಕವಾದ ಮೂಲ ಪ್ರಯಾಣ ದರದ (Basic fare) ಶೇ.75 ರಷ್ಟು ಪ್ರಯಾಣ ದರ (Seventy five percent of the bus fares for the destination of travel) ಟೋಲ್ ಫೀ/ಅಪಘಾತ/ಪರಿಹಾರ ನಿಧಿ/ಅನ್ವಯವಾಗುವ ಇತರೆ ಎಲ್ಲ ಶುಲ್ಕ/ತೆರಿಗೆಗಳ ಪೂರ್ಣ ಮೊತ್ತವನ್ನು ಒಳಗೊಂಡ ಪ್ರಯಾಣ ದರವನ್ನು ಅವರಿಂದ ಪಡೆದು ಇಟಿಎಂ ಯಂತ್ರದಲ್ಲಿ ಅಧಿಕೃತ ಬಸ್ ಚೀಟಿ ನೀಡಿ, ಪ್ರಯಾಣಿಸಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ.

ಇನ್ನು ಈ ಸುತ್ತೋಲೆಗಳ ನಿರ್ದೇಶನಗಳನ್ನು ಸಂಬಂಧಪಟ್ಟವರು ಮನದಟ್ಟು ಮಾಡಿಕೊಂಡು ನಿಗಮದ ನಿವೃತ್ತ ಅಧಿಕಾರಿ/ನೌಕರ ಹೊಂದಿರುವ ಅಧಿಕೃತ ಬಸ್ ಪಾಸನ್ನು ಪರಿಶೀಲಿಸಿ, ಪ್ರಯಾಣಿಸಲು ಅವಕಾಶ ಮಾಡಿಕೊಡುವಂತೆ ಹಾಗೂ ಈ ಸಂಬಂಧ ಯಾವುದೇ ದೂರು/ಲೋಪಗಳಿಗೆ ಅವಕಾಶವಾಗದಂತೆ ಕ್ರಮವಹಿಸುವಂತೆ ಸ್ಪಷ್ಟ ಸೂಚನೆಗಳಿದ್ದರೂ ಸಹ ನಾಲ್ಕು ಸಾರಿಗೆ ನಿಗಮ/ಸಂಸ್ಥೆಗಳಲ್ಲಿ ಕೆಲವು ನಿರ್ವಾಹಕರು/ಚಾಲಕ-ಕಂ-ನಿರ್ವಾಹಕ ಸಿಬ್ಬಂದಿಗಳು ಸುತ್ತೋಲೆಗಳ ನಿರ್ದೇಶನ ಹಾಗೂ ಅವಕಾಶ ಕಲ್ಪಿಸಿರುವುದರ ಬಗ್ಗೆ ಮಾಹಿತಿ ಇರುಲ್ಲ ಎಂದು ತಿಳಿಸಿ ಪೂರ್ಣ ಪ್ರಯಾಣ ದರ ಪಡೆದು ಟಿಕೆಟ್ ವಿತರಿಸುತ್ತಿರುವ ಬಗ್ಗೆ ದೂರುಗಳು ಬರಲು ಕಾರಣರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ನಾಲ್ಕು ಸಾರಿಗೆ ನಿಗಮ/ ಸಂಸ್ಥೆಗಳಲ್ಲಿ ಕರ್ತವ್ಯ ನಿರತ ನಿರ್ವಾಹಕರು/ ಚಾಲಕ-ಕಂ-ನಿರ್ವಾಹಕರುಗಳು, ನಿವೃತ್ತ ಅಧಿಕಾರಿಗಳು (ದರ್ಜೆ-2 ಮತ್ತು ಮೇಲ್ಪಟ್ಟು) ಹಾಗೂ ಅವರ ಪತ್ನಿ/ಪತಿಗೆ ಶೇ.50ರಷ್ಟು ಹಾಗೂ ನಿವೃತ್ತರಾದ ದರ್ಜೆ-3 ಮತ್ತು ದರ್ಜೆ-4 ನೌಕರರಿಗೆ ಶೇ.75ರಷ್ಟು ದರ ಪಡೆಯಬೇಕು.

ಈ ಸೂಚನೆಗಳನ್ನು ತಪ್ಪದೆ ಪಾಲಿಸಿ, ನಿಗದಿತ ರಿಯಾಯಿತಿ ದರಗಳ ಆಯಾ ವರ್ಗಗಳ ಸಾರಿಗೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವಂತೆ ಅನುವು ಮಾಡಿಕೊಡಲು ಹಾಗೂ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಕ್ರಮವಹಿಸುವಂತೆ ಕರ್ತವ್ಯ ನಿರತ ನಿರ್ವಾಹಕರು/ಚಾಲಕ-ಕಂ-ನಿರ್ವಾಹಕರಿಗೆ ಸೂಕ್ತ ತರಬೇತಿ/ ತಿಳುವಳಿಕೆ ನೀಡಬೇಕು ಎಂದು 4 ನಿಗಮಗಳ ಡಿಸಿಗಳಿಗೆ ಸೂಚನೆ ನೀಡಿದ್ದಾರೆ.

1 Comment

  • ಹೌದು, ಅಧಿಕಾರಿಗಳು ಸಂಸ್ಥೆಯಲ್ಲಿ ಕಿತ್ತು, ಕಿತ್ತು ಗುಡ್ಡೆ ಹಾಕಿರ್ತಾರೆ, ನೌಕರರು ಆಫೀಸಲ್ಲಿ ಫ್ಯಾನ್ ಕೆಳಗೆ ಕೂತು ಆರಾಮಾಗಿ ನಿವೃತ್ತಿ ಹೊಂದಿರ್ತಾರೆ. ಅವನು ಯಾರು ಇದನ್ನ ಆರ್ಡರ್ ಮಾಡಿದ ಮೂರ್ಖ, ಹೊಟ್ಟೆಗೆ ಏನ್ ತಿಂತಾನೆ

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
KSRTC ತುಮಕೂರು: ಡಿಸಿ ಚಂದ್ರಶೇಖರ್ ಅಮಾನತಿಗೆ ದೂರುಕೊಟ್ಟು ಎಂಡಿಗೆ ಒತ್ತಾಯ KSRTC ಅಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್‌: HRMS ತಂತ್ರಾಂಶದ ಮೂಲಕವೇ ರಜೆ ಅರ್ಜಿ ಸಲ್ಲಿಸಬೇಕು- ಮುಖ್ಯ ಸಿಬ್ಬಂದಿ ವ್ಯವಸ... KSRTC ಉತ್ತಮ ಸಾಧನೆ ತೋರಿದ ಡಿಸಿಗಳು, ಉಸ್ತುವಾರಿ ಅಧಿಕಾರಿಗಳು, ಘಟಕ ವ್ಯವಸ್ಥಾಪಕರಿಗೆ ನಗದು ಪುರಸ್ಕಾರ ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ- ನಿಲ್ದಾಣಕ್ಕೂ ಮೊದಲೆ ಇಳಿದ ಮಹಿಳೆ ಪರ ನಿಂತು ನಾನು ಪೊಲೀಸ್‌ ಎಂದಳು!! KSRTC ಚಾಲನಾ ಸಿಬ್ಬಂದಿಗಳು ಅಮ್ಮನ್.., ಅಕ್ಕನ್.. ಅಂತ ಬೈಸಿಕೊಳ್ಳೋದಕ್ಕೆ ಇರುವವರಲ್ಲ: ಶಿಲ್ಪ ಆರ್‌.ಗೌಡ ಗೆದ್ದಲು ಹಿಡಿದು ನುಸಿಯಾದ ಕೆನರಾ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 8 ಲಕ್ಷ ರೂಪಾಯಿ ಈ ಬಾರಿ ಬೀಡನಹಳ್ಳಿ ಹೊರತುಪಡಿಸಿ ಆರೂರುಗಳಲ್ಲಿ ಇಂದು- ನಾಳೆ ಮಾರಿಹಬ್ಬ ಮಾರ್ಚ್‌ 7ರಂದು 2025-26ನೇ ಸಾಲಿನ ಬಜೆಟ್‌ ಮಂಡನೆ: ಸಿಎಂ ಸಿದ್ದರಾಮಯ್ಯ KSRTC: ಸರಿಸಮಾನ ವೇತನ ಘೋಷಣೆ ಮಾಡಿ ಇಲ್ಲ ತೀವ್ರ ಹೋರಾಟ- ಎಚ್ಚರಿಕೆ ಕೊಟ್ಟ 4 ಸಾರಿಗೆ ನಿಗಮಗಳ ಅಧಿಕಾರಿಗಳು/ನೌಕರರು ಮಂಡ್ಯ: ಆಟವಾಡುತ್ತ ಅಣ್ಣ ಸಿಡಿಸಿದ ಗುಂಡಿಗೆ ಮೂರು ವರ್ಷದ ತಮ್ಮ ಬಲಿ