NWKRTC: ಸೋರುತಿಹುದು ಬಸ್ ಮಾಳಿಗೆ ಅಧಿಕಾರಿಗಳ ಅಜ್ಞಾನದಿಂದ ಮಳೆಗೆ ಸೋರುತಿಹುದು..!!
ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ಮಾಳಿಗೆ ಮಳೆಗೆ ಸೋರುತಿದ್ದು ಇದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.
ಸಂಸ್ಥೆಯ ಧಾರವಾಡ ಘಟಕದ ಬಸ್ ಛಾವಣಿ ತೂತು ಬಿದ್ದಿದ್ದು ಮಳೆಗೆ ಅದು ಸೋರುತ್ತಿದೆ. ಆ ಬಸ್ಸನ್ನೇ ಚಾಲಕ ಕೊಡೆ ಹಿಡಿದುಕೊಂಡು ಮಳೆಯೊಳಗೆ ಓಡಿಸುತ್ತಿರುವುದನ್ನು ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ.
ಇದು ಘಟಕದ ಅಧಿಕಾರಿಗಳು ಮತ್ತು ಸಂಸ್ಥೆಯ ಅಧಿಕಾರಿಗಳ ನಡೆಯನ್ನು ತೋರಿಸುವಂತಿದೆ. ಬಸ್‌ಗಳನ್ನು ರಿಪೇರಿ ಮಾಡದೆ ಬಸ್‌ಗಳ ಫಿಟ್‌ನೆಸ್ ನೋಡದೆ ಚಾಲಕರ ಕೈಗೆ ಬಸ್‌ಕೊಟ್ಟು ಕಳುಹಿಸುವ ಚಾಳಿಯಿಂದ ಈ ರೀತಿಯ ಅವಾಂತರಗಳು ನಡೆಯುತ್ತಿವೆ.
ಇನ್ನು ಚಾಲಕರು ಇಂಥ ಬಸ್ ಬೇಡ ಎಂದು ಹೇಳಿದರೆ ಅವರಿಗೆ ಮೆಮೋ ಕೊಡುವುದು ಇಲ್ಲ ಬೇರೆ ಬಸ್ ಕೊಡದೆ ಡಿಪೋನಲ್ಲೇ ಕೂರಿಸಿ ಬಳಿಕ ಗೈರು ಹಾಜರಿ ಮಾಡಿ ವೇತನ ಬರದಂತೆ ಮಾಡುವುದು.
ಇದನ್ನು ಪ್ರಶ್ನಿಸಿದರೆ ಮೇಲಧಿಕಾರಿಗಳಿಗೆ ಎದುರು ಮಾತನಾಡಿದ ಎಂದು ಹೇಳಿ ಮೆಮೋ ಕೊಟ್ಟು ಬಳಿಕ ಅಮಾನತು ಮಾಡುವುದು. ಇಲ್ಲಿ ಚಾಲಕರು ಬಸ್ ಸರಿಯಿಲ್ಲ ಎಂದು ಹೇಳುವುದಕ್ಕೂ ಬಿಡದೆ ಈ ರೀತಿ ಅಧಿಕಾರಿಗಳು ದಬ್ಬಾಳಿಕ ಮಾಡುತ್ತಿರುವುದರಿಂದ ಇಂದು ಕೊಡೆ ಹಿಡಿದುಕೊಂಡು ಬಸ್ ಓಡಿಸುವ ಸ್ಥಿತಿ ಚಾಲಕರಿಗೆ ಬಂದಿದೆ.
ಇನ್ನಾದರೂ ಈ ಬಗ್ಗೆ ಸಾರಿಗೆ ಸಚಿವರು ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಗಮನ ಹರಿಸಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರಯಾಣಿಕರೆ ಒತ್ತಾಯಿಸಿದ್ದಾರೆ.
- ಸ್ಪಷ್ಟನೆ: ಈ ಮೊದಲು ಅಂದರೆ ಗುರುವಾರ ನ್ಯೂಸ್ ಬಂದ ಸಮಯದಲ್ಲಿ ಧಾರವಾಡ ಗ್ರಾಮಾಂತರ ಘಟಕ ಎಂಬುದರ ಬದಲಿಗೆ ಹಾವೇರಿ ವಿಭಾಗದ ಹಾವೇರಿ ಘಟಕದ ಬಸ್ ಮಳೆಗೆ ಸೋರುತ್ತಿದೆ ಎಂದು ವರದಿ ಪ್ರಸಾರವಾಗಿದ್ದಕ್ಕೆ ವಿಷಾದಿಸುತ್ತೇವೆ. -ಸಂ