ಹನೂರು: ಒಡೆಯರಪಾಳ್ಯ ಕೆರೆ ಅಭಿವೃದ್ಧಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯಡಿಯಲ್ಲಿ ಸಹಕರಿಸಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರವೀಣ್ ತಿಳಿಸಿದ್ದಾರೆ.
ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಚೇರಿಗೆ ಭೇಟಿ ನೀಡಿ ಶ್ರೀ ಕ್ಷೇತ್ರದ ಧರ್ಮಸ್ಥಳದ 2023ರ ನೂತನ ಡೈರಿಯನ್ನು ಸದಸ್ಯರಿಗೆ ನೀಡಿ ನೂತನ ಪತ್ರಕರ್ತರ ಸಂಘಕ್ಕೆ ಶುಭ ಹಾರೈಸಿ ಮಾತನಾಡಿದರು.
ಪತ್ರಕರ್ತರು ತಾಲೂಕಿನ ಗಡಿಯಂಚಿನಲ್ಲಿರುವಂತಹ ಒಡೆಯರಪಾಳ್ಯದ ದೊಡ್ಡ ಕೆರೆಯ ಅಭಿವೃದ್ಧಿಗೆ ನಿಮ್ಮ ಸಂಸ್ಥೆ ಮೂಲಕವೂ ಸಹಕರಿಸಿ ಎಂದು ಕೋರಿದಾಗ ಯೋಜನಾಧಿಕಾರಿ, ನಾನು ಒಡೆಯರಪಾಳ್ಯಕ್ಕೆ ಹಲವು ಬಾರು ಭೇಟಿ ನೀಡಿದಾಗ ಆ ಕೆರೆ ಅನೈರ್ಮಲ್ಯದಿಂದ ಕೂಡಿ ಗಬ್ಬುನಾರುತ್ತಿದ್ದನ್ನು ಗಮನಿಸಿದ್ದೇನೆ.
ಅಲ್ಲದೆ ಈ ಕೆರೆ ಒತ್ತುವರಿ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿದ್ದನ್ನು ಗಮನಿಸಿದ್ದೇನೆ. ನಮ್ಮ ಸಂಸ್ಥೆಯಲ್ಲಿ ಸುಮಾರು 10 ಲಕ್ಷದವರೆಗೂ ಕೆರೆ ಅಭಿವೃದ್ಧಿ ಮಾಡಲು ಅವಕಾಶವಿದ್ದು ಗ್ರಾಮಸ್ಥರನ್ನು ಒಳಗೊಂಡು ಒಂದು ಸಮಿತಿ ರಚನೆ ಮಾಡಿ ಮುಂದಿನ ದಿನಗಳಲ್ಲಿ ಮಾದರಿ ಕೆರೆಯನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಕುಮಾರ್ ದೊರೆ, ಕಾರ್ಯದರ್ಶಿ ಅಭಿಲಾಶ್ ಗೌಡ, ಸದಸ್ಯ ವಿಜಯ್ ಸೇರದಂತೆ ಧರ್ಮಸ್ಥಳ ಯೋಜನೆಯ ಸಿಬ್ಬಂದಿಗಳು ಇದ್ದ