NEWSಬೆಂಗಳೂರು

ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದರೆ ನಿವೇಶನ ಮಾಲೀಕರಿಗೆ ದಂಡ ವಿಧಿಸಿ: ಸ್ನೇಹಲ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದಲ್ಲಿ ನಿವೇಶನ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸುವಂತೆ ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೂರ್ವ ವಲಯ ಆಯುಕ್ತರ ಕಚೇರಿಯಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆಯ ಅಹವಾಲಿನ ಕಾರ್ಯಕ್ರಮದಲ್ಲಿ ಇಂದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ವೇಳೆ, ಸಾರ್ವಜನಿಕರೊಬ್ಬರು ಮಾತನಾಡಿ ಹೆಚ್.ಆರ್.ಬಿ.ಆರ್ ಲೇಔಟ್ ನ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷಗಳ ಸಂಗ್ರಹದಿಂದಾಗಿ ನೆರೆಹೊರೆಯವರಿಗೆ ತೊಂದರೆಯಾಗುತ್ತಿರುವುದರ ಕುರಿತು ಅಹವಾಲು ಸಲ್ಲಿಸಿದರು.

ಅಹವಾಲಿಗೆ ಪ್ರತಿಕ್ರಿಯಿಸಿದ ವಲಯ ಆಯುಕ್ತರು ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷ ಸಂಗ್ರಹವಾದಲ್ಲಿ ನಾಗರಿಕರಿಗೆ ತೊಂದರೆಯಾದಂತಹ ಸಂದರ್ಭದಲ್ಲಿ ಅಂತಹ ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಿ, ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಮಶಾನ ಭೂಮಿಯ ದುರಸ್ತಿ ಮಾಡಿ: ಕೆ.ಎಸ್.ಎಫ್.ಸಿ ಲೇ ಔಟ್ ನ ಸ್ಮಶಾನ ಭೂಮಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು, ಸದರಿ ಸ್ಥಳದ ದುರಸ್ತಿ ಕಾರ್ಯ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಸ್ವಚ್ಛತಾ ಅಭಿಯಾನ ಕೈಗೊಳ್ಳಿ: ಎಚ್.ಆರ್.ಬಿ.ಆರ್ ಲೇ ಔಟ್‌ನಲ್ಲಿ ಹಂಚಿಕೆಯಾಗದ ಹಾಗೂ ಹಕ್ಕುದಾರರಿಲ್ಲದ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹವಾಗಿರುವುದಲ್ಲದೇ ಸ್ಥಳದ ದುರುಪಯೋಗವಾಗುತ್ತಿದ್ದು, ಮುಂದಿನ ಶುಕ್ರವಾರದಂದು ಸ್ಥಳವನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ತಿಳಿಸಿದರು. ಸದರಿ ಸ್ಥಳವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಬಳಸುವಂತೆ ತಿಳಿಸಲಾಯಿತು.

ದೂರುಗಳಿಗೆ ಶೀಘ್ರ ಸ್ಪಂದನೆ: ಸಾರ್ವಜನಿಕರ ಕುಂದುಕೊರತೆಯ ಅಹವಾಲಿನ ಕಾರ್ಯಕ್ರಮದಲ್ಲಿ ನಾಗರೀಕರಿಂದ ಬರುವ ದೂರುಗಳಿಗೆ ಶೀಘ್ರ ಸ್ಪಂದನೆಗೆ ಸೂಚನೆ ನೀಡಲಾಯಿತು. ಪೂರ್ವ ವಲಯದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ನಾಗರೀಕರು ಆಗಮಿಸಿ ವಲಯ ಆಯುಕ್ತರಿಗೆ ಧನ್ಯವಾದಗಳನ್ನು ತಿಳಿಸಿದರು.

23 ದೂರುಗಳ ಸ್ವೀಕಾರ: ಪೂರ್ವ ವಲಯ ವ್ಯಾಪ್ತಿಯಲ್ಲಿ ಇಂದು 23 ದೂರುಗಳನ್ನು ಸ್ವೀಕರಿಸಲಾಗಿದ್ದು, ಕಾಲಮಿತಿಯೊಳಗಾಗಿ ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಪೂರ್ವ ವಲಯ ಆಯುಕ್ತರು ಸೂಚನೆ ನೀಡಿದರು.

ಸಾರ್ವಜನಿಕರಿಂದ ಸ್ವೀಕರಿಸಿದ ಪ್ರಮುಖ ಅಹವಾಲುಗಳು: 1. ಬಂಬೂ ಬಜಾರ್ ಸಿಟಿ ಗ್ರಂಥಾಲಯದಲ್ಲಿ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವಂತೆ ವಿನಂತಿಸಿದರು. 2. ಹೈನ್ಸ್ ರಸ್ತೆ ಶಾಖೆ ನಗರ ಕೇಂದ್ರ ಗ್ರಂಥಾಲಯದ ಕಟ್ಟಡ ಅವಶೇಷ ತೆರವಿಗೆ ಹಾಗೂ ನೀರಿನ ವ್ಯವಸ್ಥೆಗೆ ಮನವಿ ನೀಡಿದರು. 3. ಅನಧಿಕೃತ ಕಟ್ಟಡಗಳ ನಿರ್ಮಾಣದಿಂದಾಗಿ ನೆರೆಹೊರೆಯವರಿಗೆ ತೊಂದರೆಯಾಗುತ್ತಿದ್ದು ಅವುಗಳ ತೆರವಿಗೆ ಮನವಿ ಮಾಡಿದರು.

4. ಕೆ.ಎಸ್.ಎಫ್ ಸಿ ಲೇಔಟ್ ನ ಪಾಲಿಕೆಯ ಸಮುದಾಯ ಭವನವನ್ನು ಸಾರ್ವಜನಿಕ ಗ್ರಂಥಾಲಯವನ್ನಾಗಿ ಪರಿವರ್ತಿಸಲು ವಿನಂತಿಸಿದರು. 5. ವಲಯದ ಹಲವು ಪ್ರದೇಶಗಳಲ್ಲಿ ಬೀದಿ ದೀಪಗಳ ಅಳವಡಿಕೆಗೆ ಮನವಿ ನೀಡಿದರು. 6. ನಮ್ಮ ಕ್ಲಿನಿಕ್ ನ ಸೂಕ್ತ ನಿರ್ವಹಣೆಗೆ ಮನವಿ ನೀಡಲಾಯಿತು.

7. ಪಾದಾಚಾರಿಯನ್ನು ಬೀದಿಬದಿ ವ್ಯಾಪಾರಿಗಳು ಒತ್ತುವರಿ ಮಾಡಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿರುವುದರಿಂದ ಅಂಗಡಿಗಳ ತೆರವಿಗೆ ವಿನಂತಿಸಿದರು. 8. ಹಂಚಿಕೆಯಾಗದ ಹಾಗೂ ಹಕ್ಕುದಾರರಿಲ್ಲದ ನಿವೇಶನಗಳ ಸಮಸ್ಯೆ ಬಗೆಹರಿಸಲು ಮನವಿ. 9. ಹೈನ್ಸ್ ರಸ್ತೆಯ ಪಾದಚಾರಿ ಮಾರ್ಗ ದುರಸ್ತಿಗೆ ಮನವಿ ನೀಡಿದರು.

ಈ ವೇಳೆ ಜಂಟಿ ಆಯುಕ್ತರಾದ ಸರೋಜ, ಉಪ ಆಯುಕ್ತರಾದ ರಾಜು, ಮುಖ್ಯ ಅಭಿಯಂತರರಾದ ಸುಗುಣ, ಆರೋಗ್ಯಾಧಿಕಾರಿಯಾದ ಭಾಗ್ಯಲಕ್ಷ್ಮಿ, ಕಾರ್ಯಪಾಲಕ ಅಭಿಯತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಡಿಜಿಎಂ, ಎಜಿಎಂ, ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಿಸಿದ ಅಧಿಕಾರಿಗಳು ಇದ್ದರು.

Megha
the authorMegha

Leave a Reply

error: Content is protected !!
Latest news
KKRTC: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಂಡಿಗೆ ಲಿಖಿತ ದೂರು ಕೊಟ್ಟು 3 ತಿಂಗಳುಗಳು ಕಳೆದರೂ ಯಾವುದೇ ಕ್ರಮವಿಲ್ಲ ಏಕೆ- ಯಾ... KSRTC- ನಮ್ಮ ಹೋರಾಟ ಕಡೆಗಣಿಸುತ್ತಿದ್ದೀರಿ ಇದು ನಿಮಗೆ ಸಲ್ಲ- ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ ಕೇಂದ್ರ ಸರ್... ಸಾರಿಗೆ ನೌಕರರಿಗೆ 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಮೊದಲ ಹಂತವಾಗಿ 450 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ ! KSRTC: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗುಡ್ಡಕ್ಕೆ ಡಿಕ್ಕಿ ಹೊಡೆದು ನಿಂತ ಬಸ್‌- ತಪ್ಪಿದ ಭಾರಿ ಅನಾಹುತ KSRTC ಪ್ರಮುಖ ಬೇಡಿಕೆಗಳ ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ: ಜ್ಯೋತಿ ಅನಂತಸುಬ್ಬರಾವ್ ಅಸಮಾಧಾನ ಇಂದು ಸಾರಿಗೆ ಸಚಿವರ ಅಧ್ಯಕ್ಷತೇಲಿ ನೌಕರರ ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿ ಕುರಿತು ಮತ್ತೇ ಒಕ್ಕೂಟದ ಜತೆ ಸಭೆ ಕೆಲ ಸಾರಿಗೆ ಅಧಿಕಾರಿಗಳಿಗೆ ವರದಾನವಾದ 17/1ನಿಯಮ- ಮೇ 10ರೊಳಗೆ ರದ್ದುಗೊಳಿಸಿ ಮೂಲ ಹುದ್ದೆಗೆ ನಿಯೋಜಿಸಲು ಎಂಡಿಗೆ ಸಾರಿ... ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಓಕೆನಾ ಅಥವಾ ವೇತನ ಆಯೋಗನಾ? ನೌಕರರ ಅಭಿಪ್ರಾಯವೇನು? KKRTC ವಿಜಯಪುರ: ಪ್ರತಿಷ್ಠಿತ ಸಾರಿಗೆ ಕಲ್ಯಾಣ ರಥ ಸ್ವಂತಕ್ಕೆ ಬಳಸುತ್ತಿರುವ ಕೆಲ ಅಧಿಕಾರಿಗಳು- ಮೌನವಾಗಿರುವ ಡಿಸಿ ಅಮಾ... ಕೇಂದ್ರ ಸರ್ಕಾರ 1966ರ ಸಕ್ಕರೆ ನಿಯಂತ್ರಣ ಕಾಯ್ದೆ ಬಗ್ಗೆ ಕೇಳಿರುವ ಅಭಿಪ್ರಾಯಕ್ಕೆ ರಾಜ್ಯ ಸರ್ಕಾರ ಸಮಿತಿ ರಚಿಸಿ ವರದಿ ...