ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಿಬ್ಬಂದಿಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಉಚಿತವಾಗಿ 50 ಲಕ್ಷ ರೂ.ಗಳ ಅಪಘಾತ ವಿಮೆಯನ್ನು ಮಾಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ನಿಗಮವು ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ, ಮಿತವ್ಯಯ ಹಾಗೂ ಸುರಕ್ಷಿತ ಸಾರಿಗೆ ಸೌಲಭ್ಯವನ್ನು ಒದಗಿಸುತ್ತದೆ. ಹಗಲಿರಳು ಶ್ರಮಿಸುತ್ತಿರುವ ಸಿಬ್ಬಂದಿಗಳಿಗಾಗಿ ಸಂಸ್ಥೆಯಿಂದ ಹಲವಾರು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿಯೇ ಸ್ಟೇಟ್ ಬ್ಯಾಕ್ ಆಫ್ ಇಂಡಿಯಾದ Corporate Salary Package(CSP)ಯೋಜನೆಯಡಿ ಅಪಘಾತ ವಿಮಾ ಸೌಲಭ್ಯ ಕಲ್ಪಿಸಲಾಗಿದೆ.
ಸಂಸ್ಥೆಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ. ಸಿಬ್ಬಂದಿ ಸೇವೆಯಲ್ಲಿರುವಾಗಲೇ ಅಪಘಾತದಿಂದಾಗಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅಂಗನ್ಯೂನ್ಯತೆಗೆ ಒಳಗಾದಲ್ಲಿ ಗಣನೀಯ ಮೊತ್ತದಷ್ಟು ಹಣ ದೊರೆಯುವಂತೆ ಮಾಡುವ ಉದ್ದೇಶದಿಂದ ನಿಗಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತರುವ ಮೂಲಕ ನೌಕರರು ಹಾಗೂ ಅವರ ಅವಲಂಬಿತರಿಗೆ ಆರ್ಥಿಕ ಭದ್ರತೆ ಒದಗಿಸಲು ಯೋಜಿಸಿ ಈ ಕಾರ್ಯ ಕೈಗೊಳ್ಳಲಾಗಿದೆ.
ವಿವಿಧ ಬ್ಯಾಂಕ್‌ಗಳನ್ನು ಸಂರ್ಪಕಿಸಲಾಗಿತ್ತು ಮತ್ತು ಬ್ಯಾಂಕ್‌ಗಳಲ್ಲಿ ವೇತನ ಖಾತೆಯನ್ನು ಹೊಂದಿರುವ ನೌಕರರಿಗೆ CSP ಯೋಜನೆಯಡಿ ವಿಮಾ ಸೌಲಭ್ಯವನ್ನು ನೀಡಲು ಸಿದ್ಧವಿರುವ ಬ್ಯಾಂಕ್‌ಗಳ ಮಾಹಿತಿ ಸಂಗ್ರಹ ಮಾಡಲಾಗಿತ್ತು. ಸ್ಟೇಟ್ ಬ್ಯಾಕ್ ಆಫ್ ಇಂಡಿಯಾದವರು ಹೆಚ್ಚಿನ ವಿಮಾ ಪರಿಹಾರ ಹಾಗೂ ಇತರೇ ಸೌಲಭ್ಯಗಳನ್ನು ನೀಡಲು ಮುಂದೆ ಬಂದಿದ್ದು, ಈ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ.
- ವೈಯಕ್ತಿಕ ಅಪಘಾತ ವಿಮೆ : ಎಲ್ಲ CSP ಬ್ಯಾಂಕ್ ಖಾತೆದಾರರು ರೂ. 50ಲಕ್ಷಗಳ ವೈಯಕ್ತಿಕ ಅಪಘಾತ ವಿಮೆಗೆ ಒಳಪಡುತ್ತಾರೆ. ಇಂದೊಂದು ಪ್ರೀಮಿಯಂ ರಹಿತ ಪಾಲಿಸಿ ಆಗಿದ್ದು, ಸ್ಟೇಟ್ ಬ್ಯಾಕ್ ಆಫ್ ಇಂಡಿಯಾದಲ್ಲಿ ವೇತನ ಖಾತೆ ಹೊಂದಿರುವ ಸಿಬ್ಬಂದಿ ಉಚಿತವಾಗಿ ಈ ವೈಯಕ್ತಿಕ ವಿಮಾ ಪಾಲಿಸಿಯನ್ನು ಪಡೆಯುತ್ತಾರೆ.
-
ಪಾಲಿಸಿದಾರರು ಕರ್ತವ್ಯ ನಿರತ ಅಥವಾ ಇತರ ವೈಯಕ್ತಿಕ ಅಪಘಾತದಿಂದಾಗಿ ಮೃತಪಟ್ಟ ಪ್ರಕರಣಗಳಲ್ಲಿ ರೂ. 50 ಲಕ್ಷಗಳ ವಿಮಾ ಪರಿಹಾರಕ್ಕೆ ಅವಲಂಬಿತರರು ಅರ್ಹರು.
-
ಪಾಲಿಸಿದಾರರು ಕರ್ತವ್ಯ ನಿರತ ಅಥವಾ ಇತರ ವೈಯಕ್ತಿಕ ಅಪಘಾತದಿಂದಾಗಿ ಶಾಶ್ವತ ಪೂರ್ಣ ಅಂಗನ್ಯೂನ್ಯತೆಗೆ ಒಳಪಟ್ಟಲ್ಲಿ ರೂ. 20 ಲಕ್ಷ ಮೊತ್ತದ ಪರಿಹಾರಕ್ಕೆ ಅರ್ಹರು. ವೈಯಕ್ತಿಕ ಅಪಘಾತದಿಂದಾಗಿ ಶಾಶ್ವತ ಭಾಗಶಃ ಅಂಗನ್ಯೂನ್ಯತೆಗಳು ಸಂಭವಿಸಿದಲ್ಲಿ ರೂ. 10 ಲಕ್ಷಗಳ ಪರಿಹಾರಕ್ಕೆ ಅರ್ಹರಾಗಿದ್ದಾರೆ.
ಪಾಲಿಸಿದಾರರು ಅಪಘಾತದಿಂದ ಮರಣ ಹೊಂದಿದ್ದಲ್ಲಿ (Add on covers on death due to Accident) ಖಾತೆಗೆ ಪ್ರತಿ ತಿಂಗಳು ಜಮಾ ಆಗುವ ವೇತನದ ಆಧಾರದ ಮೇಲೆ CSP ಬ್ಯಾಂಕ್ ಖಾತೆದಾರರನ್ನು Silver (ರೂ. 10,000 ದಿಂದ 25,000). Gold (ರೂ. 25,001 ದಿಂದ 50,000). Diamond (ರೂ 50,001 ದಿಂದ 1,00,000). Platinum (ರೂ. =1,00,000 ಮೇಲ್ಪಟ್ಟು) ಎಂದು ವಿಂಗಡಿಸಿದ್ದು, ಆ ಪ್ರಕಾರ ಪಾಲಿಸಿದಾರರು ಅಪಘಾತದಿಂದ ಮರಣ ಹೊಂದಿದ್ದಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ನೀಡಲಾಗುತ್ತದೆ.
ಡೆಬಿಟ್ ಕಾರ್ಡ್ (Master/ Visa) ಬಳಕೆದಾರರಿಗೆ ಹೆಚ್ಚುವರಿ ವೈಯಕ್ತಿಕ ಅಪಘಾತ ವಿಮೆ ಇದರಲ್ಲಿ Platinum ಖಾತೆದಾರರಿಗೆ ರೂ. 5 ಲಕ್ಷ (On platinum debit card) Diamond & Gold ಖಾತೆದಾರರಿಗೆ ರೂ. 2 ಲಕ್ಷಗಳ ಹೆಚ್ಚುವರಿಯಾಗಿ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯವಿದೆ.
ವಾಯು ಅಪಘಾತ ವಿಮೆ (Complimentary Air Accidental Insurance) (ಮರಣ) SBI Debit Card ಅಥವಾ SBI Internet banking ಮೂಲಕ ಏರ್ ಟಿಕೆಟ್ ಬುಕ್ ಮಾಡಿದ್ದರೆ ಅಥವಾ ಅಧಿಕೃತ ಕಚೇರಿ ಕರ್ತವ್ಯದ ಮೇಲೆ ಹೋಗಲು ನಿಗಮವು ಏರ್ ಟಿಕೆಟ್ ನೀಡಿದ್ದಲ್ಲಿ Air Accidental Insurance (Death) Cover ರೂ. 1 ಕೋಟಿಗಳ ವಿಮಾ ಸೌಲಭ್ಯವಿದೆ.
ಡೆಬಿಟ್ ಕಾರ್ಡ್ (Master / Visa) ಬಳಕೆದಾರರಿಗೆ ಹೆಚ್ಚುವರಿ ವಾಯು ಅಪಘಾತ ವಿಮೆ ಇದೆ. ಪಾಲಿಸಿದಾರರು ವಾಯು ಅಪಘಾತಗಳಲ್ಲಿ ಮೃತಟಪಟ್ಟಲ್ಲಿ ಹೆಚ್ಚುವರಿಯಾಗಿ Platinum ಖಾತೆದಾರರಿಗೆ ರೂ. 10 ಲಕ್ಷಗಳ (On platinum debit card) Diamond & Gold ಖಾತೆದಾರರಿಗೆ ರೂ. 4 ಲಕ್ಷಗಳ ಹೆಚ್ಚುವರಿಯಾಗಿ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯವಿದೆ.
ಸುಟ್ಟ ಗಾಯಗಳ ಪ್ರಕರಣಗಳಲ್ಲಿ ಪ್ಲಾಸ್ಟಿಕ್ ಸರ್ಜರಿಗಾಗಿ ಗರಿಷ್ಠ ರೂ. 10 ಲಕ್ಷಗಳ ವರಗೆ, ಆಮದು ಮಾಡಿಕೊಂಡಿರುವ ಔಷಧಗಳ ಸಾಗಾಣಿಕೆ ವೆಚ್ಚ ಗರಿಷ್ಠ ರೂ. 5 ಲಕ್ಷಗಳ ವರಗೆ ಇದೆ. Death in Coma After Accident (After more than 48 Hours)- ಗರಿಷ್ಠ ರೂ. 2 ಲಕ್ಷಗಳ ವರಗೆ. Air Ambulance ಗರಿಷ್ಟ ರೂ. 10 ಲಕ್ಷಗಳ ವರಗೆ ಸೌಲಭ್ಯವಿದೆ. ಉನ್ನತ ಶಿಕ್ಷಣಕ್ಕಾಗಿ (ಪದವಿ ಮಾತ್ರ ): 25% of PAI Cover ಗರಿಷ್ಠ ರೂ. 5 ಲಕ್ಷಗಳವರಗೆ, ಹೆಣ್ಣು ಮಕ್ಕಳ ವಿವಾಹಕ್ಕಾಗಿ (18 ರಿಂದ 25 ವರ್ಷದ ಒಳಗಿನ) 10% PAI Cover ಗರಿಷ್ಠ ರೂ. 5 ಲಕ್ಷಗಳ ವರಗೆ ಲಭ್ಯವಿದೆ.
ಅಪಘಾತ ಸಂಭವಿಸಿದಾಗ ಕುಟುಂಬದವರು ಅಪಘಾತ ನಡೆದ ಸ್ಥಳಕ್ಕೆ ಹೋಗಲು ಗರಿಷ್ಠ ರೂ. 20,000 ವರಗೆ ಸಂಚಾರ ವೆಚ್ಚ (ಇಬ್ಬರು ಕುಟುಂಬ ಸದಸ್ಯರ ಸಾರಿಗೆ ವೆಚ್ಚ ಮಾತ್ರ). ಮೃತದೇಹವನ್ನು ತರಲು ಗರಿಷ್ಠ ರೂ. 20,000 ವರಗೆ ಸಂಚಾರ ವೆಚ್ಚ (ಎಲ್ಲ ಖಾತೆದಾರರಿಗೆ), ಆಂಬುಲೆನ್ಸ್ ವೆಚ್ಚ ಗರಿಷ್ಠ ರೂ. 15,000ಗಳವರಗೆ, ಮೇಲ್ಕಂಡ ಸೌಲಭ್ಯಗಳ ಜತೆಗೆ ಇತರೇ ಉಳಿತಾಯ ಖಾತೆಗಳಲ್ಲಿರುವ ಸಾಮಾನ್ಯ ಸೌಲಭ್ಯಗಳು ಅಂದರೆ, ಎಟಿಎಂ ಶೂನ್ಯ ಬ್ಯಾಲೆನ್ಸ್, ಆನ್‌ಲೈನ್ ಬ್ಯಾಂಕಿಂಗ್, ಸಾಲ ಇತ್ಯಾದಿ ಸೇವೆಗಳನ್ನು ನೀಡುತ್ತಾರೆ.
ಈಗಾಗಲೇ SBI ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ ನೌಕರರು ಅದನ್ನು Corporate Salary Package(CSP)ಗೆ ಬದಲಾಯಿಸಲು ಬ್ಯಾಂಕ್‌ಗೆ ಮನವಿ ಮಾಡಬೇಕು. SBI ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರುವ ಎಲ್ಲ ನೌಕರರು ಅರ್ಜಿ ಭರ್ತಿ ಮಾಡಿ ಬ್ಯಾಂಕ್‌ಗೆ ಸಲ್ಲಿಸಬೇಕು.
ವಿಮೆಯ ಮಾಹಿತಿ : ನೌಕರರು ತಮ್ಮ ಉಳಿತಾಯ ಖಾತೆಯನ್ನು CSP ಖಾತೆಯಾಗಿ ಪರಿವರ್ತಿಸಿರುವ ಕುರಿತು ಖಚಿತಪಡಿಸಿಕೊಳ್ಳುವುದು. ವೇತನವನ್ನು CSP ನಿಂದ ಬೇರೆ ಬ್ಯಾಂಕ್‌ಗೆ ವರ್ಗಾಯಿಸಿಕೊಳ್ಳಲು ಇಚ್ಛಿಸುವ ನೌಕರರು SBI ಬ್ಯಾಂಕ್‌ನಿಂದ NOC ಪಡೆದುಕೊಳ್ಳಲು ನಮೂನೆಯನ್ನು ಸಹ ನೀಡಲಾಗಿದೆ. ನೌಕರರು CSP ಗೆ Overdraft ಪಡೆಯಲು ಕೋರುವ ನಿಗದಿತ ನಮೂನೆಯನ್ನು ನೀಡಲಾಗಿದೆ. ಈ ಯೋಜನೆ ಅಡಿ ಅಪಘಾತ ವಿಮಾ ಸೌಲಭ್ಯವನ್ನು ಪಡೆಯಲು ಇರುವ ನಿಬಂಧನೆಗಳ ವಿವರಗಳನ್ನು ನಮೂನೆಯನ್ನು ನಮೂನೆ-5ರಲ್ಲಿ ನೀಡಲಾಗಿದೆ.
ಒಂದು ವೇಳೆ CSP ಖಾತೆಯನ್ನು ಹೊಂದಿರುವ ಸಿಬ್ಬಂದಿಯು ಬೇರೆ ಬ್ಯಾಂಕುಗಳಲ್ಲಿ ತನ್ನ ವೇತನ ಖಾತೆಯನ್ನು ತೆರೆಯಲು ಇಚ್ಛಿಸಿದ್ದಲ್ಲಿ ಕಡ್ಡಾಯವಾಗಿ SBI ಬ್ಯಾಂಕಿನಿಂದ ಆಕ್ಷೇಪಣಾ ರಹಿತ ದೃಢೀಕರಣ ಪತ್ರವನ್ನು ಪಡೆಯಬೇಕಿರುತ್ತದೆ. ನಂತರ ಅವರ CSPಬ್ಯಾಂಕ್ ಖಾತೆಯು ಸಾಮಾನ್ಯ ಉಳಿತಾಯ ಖಾತೆಯಾಗಿ ಬದಲಾಗುವುದು ಮತ್ತು ಅವರು ಈ ಮೇಲ್ಕಂಡ ವಿಮಾ ಹಾಗೂ ಇತರೇ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ.
ಅಪಘಾತ ನಡೆದ ದಿನಾಂಕದ ಹಿಂದಿನ 3 ತಿಂಗಳಲ್ಲಿ ನಿರಂತರವಾಗಿ ಅವರ ವೇತನವು CSP-SBI ಬ್ಯಾಂಕ್ ಖಾತೆಗೆ ಜಮಾ ಆಗಿರಬೇಕು. ಒಂದು ವೇಳೆ ವೇತನವು ಜಮಾ ಆಗದೇ ಇದ್ದ ಪಕ್ಷದಲ್ಲಿ ಅವರ CSPಬ್ಯಾಂಕ್ ಖಾತೆಯು ಸಾಮಾನ್ಯ ಉಳತಾಯ ಖಾತೆಯಾಗಿ ಬದಲಾಗುವುದು ಮತ್ತು ಅವರು ಈ ಮೇಲ್ಕಂಡ ವಿಮಾ ಹಾಗೂ ಇತರೇ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ. ಬ್ಯಾಂಕ್‌ನವರಿಗೆ ಅಪಘಾತ ನಡೆದ 90 ದಿನಗಳ ಒಳಗೆ ಅಪಘಾತದ ಮಾಹಿತಿಯನ್ನು ನೀಡಬೇಕು. ಪೂರಕ ದಾಖಲೆಗಳನ್ನು 180 ದಿನಗಳ ಒಳಗೆ ಸಲ್ಲಿಸಬೇಕು.