
ಚಾಮರಾಜನಗರ: ಸಾಮಾನ್ಯವಾಗಿ ಯಾರಾದರು ಇದು ನಮ್ಮ ಆಸ್ತಿ ಎಂದರೆ ಹೂಂ ಬಂದುಬಿಡು ಇದು ನಿಮ್ಮ ತಾತ ಆಸ್ತಿ ಎಂದು ಹೇಳುತ್ತಾರೆ. ಆದರೆ ಈಗ ಅಂಥ ತಾತನ ಆಸ್ತಿಯನ್ನು ದಾನವಾಗಿ ಕೊಟ್ಟಿದ್ದರೂ ಆ ಆಸ್ತಿಯ ಖಾತೆ ಮಾಡಿಕೊಂಡಿ ಎಂದು ತಿನ್ನಲು ಗತಿಯಿಲ್ಲದ ಬಡವೆ ಒಬ್ಬಳು ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ.
ಆ ಬಡ ಹೆಂಗಸು ಯಾರು ಅಲ್ಲ ಮೈಸೂರು ರಾಜಮನೆತನದ ಹಿರಿಯ ಸೊಸೆ ಪ್ರಮೋದಾ ದೇವಿ ಒಡೆಯರ್. ಹೌದು! ಇವರಿಗೇಕೆ ಈ ದುರಾಸೆ ಮತ್ತು ದುರ್ಬುದ್ಧಿ ಬಂದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಅಂದಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ನೂರಾರು ಕುಟುಂಬಗಳು ಚೆನ್ನಾಗಿರಬೇಕು ಎಂಬ ದೃಷ್ಟಿಯಲ್ಲಿ 1,035 ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ.
ಆದರೆ ಈಗ ಆ ಆಸ್ತಿ ನಮಗೆ ಸೇರಬೇಕು ಅದನ್ನು ಖಾತೆ ಮಾಡಿಕೊಂಡು ಎಂದು ಪ್ರಮೋದಾ ದೇವಿ ಒಡೆಯರ್ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇವರ ಈ ನಡೆಯಿಂದ 4 ಸಾವಿರಕ್ಕೂ ಹೆಚ್ಚಿನ ಮಂದಿ ತಲೆ ಬಿಸಿಮಾಡಿಕೊಂಡು ಆತಂಕದಲ್ಲಿ ಕುಳಿತಿದ್ದಾರೆ.
ವಿವರ: ಸಿದ್ದಯ್ಯನಪುರ ಗ್ರಾಮಸ್ಥರಿಗೆ ಮೈಸೂರು ಮಹಾರಾಜರು ಕೊಟ್ಟಿರುವ ಆಸ್ತಿಯನ್ನು ಖಾತೆ ಮಾಡಿಕೊಡುವಂತೆ ಮೈಸೂರಿನ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮಸ್ಥರ ಆತಂಕ ಮೂಡುವಂತೆ ಮಾಡಿದ್ದಾರೆ.
ಸಿದ್ದಯನಪುರದ ಮೂಲ ಹೆಸರು ಜಯಚಾಮರಾಜೇಂದ್ರ ಪುರಂ. ಈಗ ಆ ಗ್ರಾಮದ ಜನರನ್ನು ಅಲ್ಲಿಂದ ಒಕ್ಕಲೆಬ್ಬಿಸಲು ಪ್ರಮೋದಾ ದೇವಿ ಒಡೆಯರ್ ಹೊರಟಿದ್ದಾರೆ. ಈಗಾಗಲೇ ಸಿದ್ದಯನಪುರ ಗ್ರಾಮದಲ್ಲಿ 4,000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇಂದಿಗೂ ಗ್ರಾಮಸ್ಥರು ಮನೆಯ ದೇವರ ಕೋಣೆಯಲ್ಲಿ ಮಹಾರಾಜರ ಫೋಟೋವನ್ನು ಇಟ್ಟು ಪೂಜಿಸುತ್ತಿದ್ದಾರೆ. ಅಲ್ಲದೆ ಪ್ರತಿ ವರ್ಷ ಅವರು ಮಹಾರಾಜರ ಹುಟ್ಟುಹಬ್ಬವನ್ನು ಭಾವಚಿತ್ರ ಮೆರವಣಿಗೆ ನಡೆಸುವ ಮೂಲಕ ಆಚರಿಸುತ್ತಿದ್ದಾರೆ.
ಜಯಚಾಮರಾಜೇಂದ್ರ ಒಡೆಯರ್ ನಮಗೆ 1,035 ಎಕರೆ ಭೂಮಿಯನ್ನು ದಾನ ಮಾಡಿದ್ದರು. 1982 ರಲ್ಲಿ ಸಚಿವರಾಗಿದ್ದ ಬಿ.ರಾಚಯ್ಯ ಅವರ ಕಾಲದಲ್ಲಿ ಸರ್ಕಾರ ನಮಗೆ ಸಾಗುವಳಿ ಪ್ರಮಾಣಪತ್ರ ನೀಡಿದೆ. ನಾವು ಇನ್ನೂ ಮಹಾರಾಜರ ಹೆಸರಿನಲ್ಲಿ ವಾಸಿಸುತ್ತಿದ್ದೇವೆ. ಈಗ ಖಾತೆಯನ್ನು ಪ್ರಮೋದಾ ದೇವಿಗೆ ಮಾಡಿಕೊಟ್ಟರೆ ಇಡೀ ಗ್ರಾಮದ ಜನರೆಲ್ಲರೂ ಮೈಸೂರು ಅರಮನೆಗೆ ಹೋಗುತ್ತದೆ. ಅವರು ನಮಗೆ ಹಿಟ್ಟು ಮತ್ತು ಬಟ್ಟೆಗಳನ್ನು ಕೊಟ್ಟು ನೋಡಿಕೊಳ್ಳಲಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಪ್ರಮೋದಾ ದೇವಿಯ ಹೆಸರಿಗೆ ಖಾತೆ ಮಾಡಿದರೆ, ಇಡೀ ಗ್ರಾಮವನ್ನು ಸ್ಥಳಾಂತರಿಸಬೇಕಾಗುತ್ತದೆ. ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಗ್ರಾಮಸ್ಥರು ಎಲ್ಲಿಗೆ ಹೋಗಬೇಕು? ನಾವು ಇದ್ರು ಇಲ್ಲೇ ಸತ್ರು ಇಲ್ಲೇ ಸಾಯುತ್ತೇವೆ ಎಂದು ಸಿದ್ದಯನಪುರ ಗ್ರಾಮಸ್ಥರು ದೇವಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿ ಇತ್ತ ಅಳಲು ತೋಡಿಕೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ವಿವಿಧ ಭಾಗಗಳಲ್ಲಿ 4,500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರ ಖಾಸಗಿ ಆಸ್ತಿ ಎಂದು ಪ್ರಮೋದಾ ದೇವಿ ಪತ್ರ ಬರೆದಿದ್ದರು. ಸಿದ್ದಯ್ಯನಪುರ ಗ್ರಾಮವು ಈ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಮೈಸೂರು ಮಹಾರಾಜರು ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದದ ಪ್ರಕಾರ, 4,500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರ ಖಾಸಗಿ ಆಸ್ತಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.