NEWSನಮ್ಮಜಿಲ್ಲೆನಮ್ಮರಾಜ್ಯ

BWSSBಯಲ್ಲಿರುವಂತೆ ಸಾರಿಗೆ ನಿಗಮಗಳಲ್ಲೂ ಮುಖ್ಯ ವೇತನ ಶ್ರೇಣಿ ಪದ್ಧತಿ ಅಳವಡಿಸಿ : ನೌಕರರ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೆಎಸ್ಆರ್ಟಿಸಿಯಲ್ಲಿ ವಾರ್ಷಿಕ ವೇತನ ಬಡ್ತಿಗಳು 14, ಅವುಗಳ ಅವಧಿ ಹುದ್ದೆವಾರು 2,3,4,5,6  ಹೀಗೆ ಬೇರೆ ಬೇರೆ ಆಗಿವೆ, ಕಾರಣ ಮುಖ್ಯ ವೇತನ ಶ್ರೇಣಿ ಪದ್ದತಿ ಅಳವಡಿಸಿಕೊಂಡಿಲ್ಲದಿರುವುದು. ಇನ್ನು BWSSBಯಲ್ಲೂ ಕೂಡ 12 ರೀತಿ ವಾರ್ಷಿಕ ವೇತನ ಬಡ್ತಿಗಳಿವೆ, ಅವುಗಳ ಅವಧಿ ಎಲ್ಲ ಹುದ್ದೆಗಳಿಗೆ ಒಂದೆ ಆಗಿದೆ, ಕಾರಣ ಅಲ್ಲಿ ಮುಖ್ಯ ವೇತನ ಶ್ರೇಣಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ಅದೇ ರೀತಿ ಸಾರಿಗೆ ನಿಗಮಗಳಲ್ಲೂ ವಾರ್ಷಿಕ ವೇತನ ಬಡ್ತಿಗಳು ಎಷ್ಟೇ ಇದ್ದರೂ ಅವುಗಳ ಅವಧಿ ಎಲ್ಲ ಹುದ್ದೆಗಳಿಗೂ ಒಂದೆ ಆಗಬೇಕು. ಅದಕ್ಕೆ ಮುಖ್ಯ ವೇತನ ಶ್ರೇಣಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ನೌಕರರು ವಿಜಯಪಥಕ್ಕೆ ವಿವರವಾಗಿ ತಿಳಿಸಿದ್ದಾರೆ.

ಇನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಅಧಿಕಾರಿಗಳು ಮತ್ತು ನೌಕರರು ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ಕಳೆದ 2018ರಲ್ಲಿ ಆದ ವೇತನ ಪರಿಷ್ಕರಣೆ ವೇಳೆ ಶೇ.33ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.

ಅದೇ ರೀತಿ ಕೆಪಿಟಿಸಿಎಲ್‌ನಲ್ಲೂ ಅಧಿಕಾರಿಗಳು ಮತ್ತು ನೌಕರರು ಎಂದು ಭಾಗಮಾಡದೆ ಅವರ ಹುದ್ದೆಗೆ ತಕ್ಕುದಾದ ವೇತನವನ್ನು ಕಾಲಕಾಲಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಅಲ್ಲದೆ ಮುಂಬಡ್ತಿಯನ್ನು ಕೂಡ ಕೊಡಲಾಗುತ್ತಿದೆ.

BWSSB ಮಂಡಳಿಯ ಅಧಿಕಾರಿ/ನೌಕರರಿಗೆ ಹಾಗೂ ಪಿಂಚಣಿದಾರರಿಗೆ 01.07.2018 ರಿಂದ ಕ್ರಮವಾಗಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ನಿಗದೀಕರಣ ಹಾಗೂ ಪರಿಷ್ಕೃತ ಪಿಂಚಣಿ, ಪರಿಷ್ಕೃತ ವೇತನ ಶ್ರೇಣಿಗಳು, ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಕಾಲಮಿತಿ ವೇತನ ಬಡ್ತಿಗಳು, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಹಾಗೂ ಇತರೆ ಭತ್ಯೆಗಳನ್ನು ಹೆಚ್ಚಳ ಮಾಡಿ ಆದೇಶಿಸಲಾಗಿದೆ.

01.07.2018 ರಿಂದ ಪರಿಷ್ಕರಿಸಲಾದ ವೇತನ ಶ್ರೇಣಿಗಳು ಈ ಮುಂದಿನಂತಿವೆ: ಈ ಪರಿಷ್ಕೃತ ವೇತನ ಶ್ರೇಣಿಗಳು 2018 ಜುಲೈ 01 ರಿಂದ ಜಾರಿಗೆ ಬರುತ್ತದೆ ಹಾಗೂ ಇದರ ಅವಧಿಯು 01.07.2018 ರಿಂದ ಐದು ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ. ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ನಿಗದಿ ಮಂಡಳಿಯ ಅಧಿಕಾರಿ/ನೌಕರರ ಪ್ರಾರಂಭಿಕ ವೇತನವನ್ನು ಸಂವಾದಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮುಂದಿನ ವಿಧಾನದಲ್ಲಿ ನಿಗದಿಪಡಿಸತಕ್ಕದ್ದು.

01.07.2018ರಲ್ಲಿ ಇದ್ದಂತಹ ಮೂಲ ವೇತನದ ಶೇ. 33 ರಷ್ಟು ಹೆಚ್ಚಳ, 01.07.2017ರಿಂದ ಮೂಲ ವೇತನ ಮೇಲೆ ಮೇಲೆ ಲಭ್ಯವಿರುವ ಶೇ. 45.25 ರಷ್ಟು ತುಟ್ಟಿಭತ್ಯೆ. (ಈಗಾಗಲೇ 01.04.2018 ರಿಂದ “ಅಧಿಕ ಮೂಲ ವೇತನ” ಎಂದು ಪರಿಗಣಿಸಲಾಗಿರುವ ಮೊತ್ತ).

ಮೂಲ ವೇತನ ಎಂದರೆ ಮಂಡಳಿಯ ಅಧಿಕಾರಿ/ ನೌಕರರು ಪ್ರಸಕ್ತ ಶ್ರೇಣಿಯಲ್ಲಿ 2018ರ ಜುಲೈ 1 ರಂದು ಅಥವಾ ಆ ತರುವಾಯ ಯಾವುದೇ ದಿನಾಂಕದಂದು “ಪರಿಷ್ಕೃತ ಶ್ರೇಣಿಯಲ್ಲಿ” ವೇತನವನ್ನು ಪುನಃ ನಿಗದಿಪಡಿಸಲಾಗುವ ದಿನಾಂಕದಂದು ಪಡೆಯುತ್ತಿದ್ದ ಮೂಲವೇತನ ಮತ್ತು ಅದು ಮುಂದಿನವುಗಳನ್ನು ಒಳಗೊಂಡಿರುತ್ತದೆ ಅಂದರೆ,

ಅ) ವಾರ್ಷಿಕ ವೇತನ ಬಡ್ತಿ, ಆ) ಪ್ರಸಕ್ತ ಶ್ರೇಣಿಯಲ್ಲಿ ಗರಿಷ್ಠ ವೇತನಕ್ಕಿಂತ ಹೆಚ್ಚಿಗೆಯಾಗಿ ನೀಡಲಾದ ಸ್ಥಗಿತ ವೇತನ ಬಡ್ತಿ, ಇ) ವೈಯಕ್ತಿಕ ವೇತನ. (ಸಣ್ಣ ಕುಟುಂಬ ವೇತನ ಬಡ್ತಿ ಹೊರತುಪಡಿಸಿ). ಹೀಗೆ ಸೇರಿಸಿ ಹೆಚ್ಚಿಸಿದ ನಂತರ ಬರುವ ಉಪಲಬ್ಧವನ್ನು ಸಂವಾದಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ  ನಿಗದಿಪಡಿಸತಕ್ಕದ್ದು ಎಂದು ಆದೇಶಿಸಲಾಗಿದೆ.

30.06.2018ರ ನಂತರ ನೇಮಕವಾದ ಸಂಬಂಧದಲ್ಲಿ ಪ್ರಸ್ತುತ ಹೊಂದಿರುವ ವೇತನ ಶ್ರೇಣಿಗೆ ಸಮನಾದ ಪರಿಷ್ಕೃತ ಶ್ರೇಣಿಯನ್ನು ವಿಸ್ತರಿಸಿ ಕನಿಷ್ಟ ವೇತನವನ್ನು ನಿಗದಿಪಡಿಸುವುದು. ತದನಂತರ ಹಿಂದಿನ ವೇತನ ಶ್ರೇಣಿಯಲ್ಲಿ ವಾರ್ಷಿಕ ವೇತನ ಬಡ್ತಿಗಳೇನಾದರೂ ಗಳಿಸಿದ್ದ ಪಕ್ಷದಲ್ಲಿ ಸದರಿ ದಿನಾಂಕಕ್ಕೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವಾರ್ಷಿಕ ವೇತನ ಬಡ್ತಿಗಳನ್ನು ಬಿಡುಗಡೆಗೊಳಿಸಿ ವೇತನವನ್ನು ನಿಗದಿಗೊಳಿಸಬೇಕು ಎಂದು ತಿಳಿಸಲಾಗಿದೆ.

ಈ ಪದ್ಧತಿಯನ್ನೇ ಸಾರಿಗೆ ನಿಗಮಗಳಲ್ಲೂ ಅಳವಡಿಸಿಕೊಂಡರೆ ನೌಕರರು ಮತ್ತು ಅಧಿಕಾರಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಬರುವುದಿಲ್ಲ. ಜತೆಗೆ ವೇತನ ಪರಿಷ್ಕರಣೆ ವೇಳೆ ಅಧಿಕಾರಿಗಳು ದರ್ಪ ಮೆರೆಯುವುದು ನಿಲಲ್ಲುತ್ತದೆ. ಕಾರಣ ಎಲ್ಲರಿಗೂ ಅವರವರ ಹುದ್ದೆಗೆ ತಕ್ಕಂತೆ ವೇತನ ಪರಿಷ್ಕರಣೆ ಆಗುವುದರಿಂದ ತಾರತಮ್ಯತೆ ಹೋಗುತ್ತದೆ. ಜತೆಗೆ ವೇತನ ಹೆಚ್ಚಳವಾಗಬೇಕು ಎಂದಾಗ ಅಧಿಕಾರಿಗಳು ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯತೆ ಇರುತ್ತದೆ.

ಆದರೆ, ಈಗ ಸಾರಿಗೆ ಅಧಿಕಾರಿಗಳು ಮತ್ತು ನೌಕರರ ನಡುವೆ ಎರಡು ಸ್ಲ್ಯಾಬ್‌ಗಳಿವೆ ಇದರಿಂದ ನೌಕರರ ಪ್ರತಿಭಟನೆ ಮಾಡಿ ವೇತನ ಹೆಚ್ಚಳ ಮಾಡಿಕೊಂಡರು ಅದರ ಹೆಚ್ಚನ ಲಾಭ ಅಧಿಕಾರಿಗಳಿಗೆ ಸಿಗುತ್ತಿದೆ. ಇದರಿಂದ ಅವರು ಏನು ಗೊತ್ತಿಲ್ಲದಂತೆ ಒಳಗೊಳಗೆ ವೇತನವನ್ನು ಹೆಚ್ಚಳ ಮಾಡಿಕೊಂಡು ನೌಕರರಿಗೆ ಕಿರುಕುಳ ಕೊಡುವುದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಇದಕ್ಕೆ ಕಡಿವಾಣ ಬೀಳಬೇಕು ಎಂದರೆ ಈ ಮೇಲೆ ಉದಾಹರಣೆ ನೀಡುರಯವಂತೆ BWSSBಯಲ್ಲಿ ಇರುವಂತೆ ಮುಖ್ಯ ವೇತನ ಶ್ರೇಣಿ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ಇದರಿಂದ  ಯಾವುದೇ ಸಂಘಟನೆಗಳಾದರೂ ಲಾಬಿಮಾಡದೆ ನೌಕರರು ಮತ್ತು ಅಧಿಕಾರಿಗಳ ನಡುವೆ ಉತ್ತಮ ಸೇತುವೆಯಾಗಿ ಕೆಲಸ ಮಾಡುವುದಕ್ಕೂ ಅನುಕೂಲವಾಗಲಿದೆ ಎಂದು ನೌಕರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...