ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನಾಂಕ ಮತ್ತು ಸಮಯವನ್ನು ಶೀಘ್ರದಲ್ಲೇ ತನ್ನ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ಪ್ರಕಟಿಸಲಿದೆ.
ಈ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆಯಾದ ಬಳಿಕ, ಪರೀಕ್ಷಾ ಫಲಿತಾಂಶ 2020 ಮಂಡಳಿಯ ಅಧಿಕೃತ ವೆಬ್‌ಸೈಟ್ kseeb.kar.nic.in ನಲ್ಲಿ ಲಭ್ಯವಿರಲಿದೆ. ವಿದ್ಯಾರ್ಥಿಗಳು ತಮ್ಮ ಸ್ಕೋರ್‌ಗಳನ್ನು ವೀಕ್ಷಿಸಲು ಅಧಿಕೃತ ಪುಟದಲ್ಲಿ ತಮ್ಮ ರೋಲ್ ನಂಬರ್‌ಅನ್ನು ಭರ್ತಿ ಮಾಡಬೇಕು.
ವೆಬ್‌ಸೈಟ್ ನಲ್ಲಿ ಹೇಗೆ ಪರಿಶೀಲಿಸುವುದು?
ಹಂತ 1: ಅಧಿಕೃತ ವೆಬ್‌ಸೈಟ್ – karresults.nic.in ಗೆ ಹೋಗಿ
ಹಂತ 2: ಎಸ್‌ಎಸ್‌ಎಲ್‌ಸಿ ಫಲಿತಾಂಶಗಳು 2020 ಕರ್ನಾಟಕ ಮಂಡಳಿಯ ನೇರ ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: ರೋಲ್ ಸಂಖ್ಯೆ ಮತ್ತು ಕೇಳಿದ ಇತರ ವಿವರಗಳನ್ನು ನಮೂದಿಸಿ
ಹಂತ 4: “ಸಲ್ಲಿಸು” ಕ್ಲಿಕ್ ಮಾಡಿ
ಹಂತ 5: ಫಲಿತಾಂಶ 2020 ಪರದೆಯ ಮೇಲೆ ಕಾಣಿಸುತ್ತದೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮೂಲತಃ ಮಾರ್ಚ್ 27 ರಿಂದ ಏಪ್ರಿಲ್ 9, 2020 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಕೊರೊನಾ ಸಂಬಂಧಿತ ಲಾಕ್‌ಡೌನ್ ಕಾರಣ ಮುಂದೂಡಲಾಯಿತು. ನಂತರ ಪರೀಕ್ಷಾ ಮಂಡಳಿಯು ಜೂನ್ 25 ರಿಂದ ಜುಲೈ 4 ರವರೆಗೆ ಪರೀಕ್ಷೆಯನ್ನು ನಡೆಸಿತು.
ಜೂನ್, ಜುಲೈನಲ್ಲಿ 10 ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ 8.40 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈಗ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಎಸ್‌ಎಸ್‌ಎಲ್‌ಸಿ ಮಂಡಳಿಯ ಅಧಿಕಾರಿಗಳ ಪ್ರಕಾರ, 8,48,203 ವಿದ್ಯಾರ್ಥಿಗಳು ಪರೀಕ್ಷೆಯನ್ನು ರಾಜ್ಯಾದ್ಯಂತ 2,879 ಪರೀಕ್ಷಾ ಕೇಂದ್ರಗಳಲ್ಲಿ ಬರೆದಿದ್ದಾರೆ.