ಬೆಂಗಳೂರು: ಕಾವೇರಿ ನೀರು ನಿಲ್ಲಿಸುವ ಬಗ್ಗೆ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯಸ್ಥರನ್ನು ಆಹ್ವಾನಿಸಿ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿ ನಿರಂತರ ಧರಣಿ ಕೈಬಿಡುವಂತೆ ಕೋರಿದ ಹಿನ್ನೆಲೆಯಲ್ಲಿ ಇಂದಿನಿಂದ ತಾತ್ಕಾಲಿಕವಾಗಿ ಚಳವಳಿಯನ್ನು ಕೈಬಿಡಲು ಸಮಿತಿ ತೀರ್ಮಾನಿಸಿದೆ ಎಂದು ಸಮಿತಿಯ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ನಗರ, ಕಾವೇರಿ ಅಚ್ಚು ಕಟ್ಟು ಭಾಗದಲ್ಲಿ ಕರ್ನಾಟಕ ಜಲ ಸಂರಕ್ಷಣ ಸಮಿತಿ 60 ದಿನಗಳಿಂದ ಚಳವಳಿ ನಡೆಸುತ್ತಿದ್ದರು ಬೆಂಗಳೂರು ನಗರ ಶಾಶಕರು ಬಾಯಿ ಬಿಡುತ್ತಿಲ್ಲ, ಜನರ ಸಂಕಷ್ಟ ಅರಿವಾಗಿಲ್ಲ ಅದಕ್ಕಾಗಿ ಅವರನ್ನು ಎಚ್ಚರಿಸಲು, ಐದು ದಿನದ ಒಳಗಾಗಿ ರಾಜ್ಯಪಾಲರ ಭರವಸೆಯಂತೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಚಳವಳಿಯನ್ನು ಬೆಂಗಳೂರಿನ ನಗರಾದ್ಯಂತ ವಿಸ್ತರಿಸಿ ಶಾಸಕರು, ಸಂಸದರ ಮನೆ ಮುಂದೆ ಬಾಯಿ ಬಡಿದುಕೊಳ್ಳುವ ಚಳವಳಿ ನಡೆಸ ಲಾಗುವುದು.
ಇನ್ನು ಆಗಲು ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಇದೇ ಅ. 24ರ ದಸರಾ ದಿನದಂದು ಕಾವೇರಿ ಅಚ್ಚು ಕಟ್ಟು ಭಾಗದ ಹೆದ್ದಾರಿ ಬಂದ್ ಚಳವಳಿ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿ 14ದಿನದಿಂದ ಮಾಡಿಕೊಂಡು ಬಂದಿರುವ ಈ ಚಳವಳಿ ಕೈ ಬಿಡಲಾಯಿತು ಎಂದು ತಿಳಿಸಿದರು.
ಇಂದಿನ ಚಳವಳಿಯಲ್ಲಿ ಕನ್ನಡ ಚಳವಳಿ ಗುರುದೇವ ನಾರಾಯಣ, ಸಮತ ಸೈನಿಕ ದಳದ ವೆಂಕಟಸ್ವಾಮಿ, ಕನ್ನಡ ರಕ್ಷಣಾ ವೇದಿಕೆ ರಾಜಪ್ಪ ಚಲನಚಿತ್ರ ನಟಿ ಭೂಮಿಕ, ಇತಿಹಾಸಕಾರ ಅರೆಹಳ್ಳಿ ಧರ್ಮೇಂದ್ರ, ಉಷಾ ಮೋಹನ್, ವಿಜಯಸಿಂಗ್, ಗ್ಯಾನ ಮಧು, ನೀಲಕಂಠಪ್ಪ, ರಾಜಣ್ಣ ಮುಂತಾದವರು ಇದ್ದರು.
ಜಲ ಸಂರಕ್ಷಣಾ ಸಮಿತಿಯ ಸದಸ್ಯರಿಂದ ರಾಜ್ಯಪಾಲರ ಭೇಟಿ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದೆಂದು ಒತ್ತಾಯಿಸಿ ಕರ್ನಾಟಕ ಜಲಸಂರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಯು ಇಂದು 14ನೇ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟವನ್ನು ಗಮನಿಸಿರುವ ಗೌರವಾನ್ವಿತ ರಾಜ್ಯಪಾಲರು ಸಮಿತಿಯ ಸದಸ್ಯರನ್ನು ಇಂದು ರಾಜಭವನಕ್ಕೆ ಕರೆಸಿಕೊಂಡು ಮನವಿಯನ್ನು ಕೂಲಂಕುಶವಾಗಿ ಆಲಿಸಿದರು.
ಇನ್ನು ಈ ವೇಳೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದರು ಜತೆಗೆ ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರದೊಂದಿಗೆ ಅತಿ ಶೀಘ್ರದಲ್ಲಿಯೇ ಚರ್ಚೆ ನಡೆಸುವುದಾಗಿ ಸೂಚಿಸಿದರು.
ರೈತ ಮುಖಂಡ, ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಸಂಚಾಲಕರಾದ ಕುರುಬೂರು ಶಾಂತಕುಮಾರ್ ನೇತೃತ್ವದ ನಿಯೋಗದಲ್ಲಿ ಕನ್ನಡ ಚಳವಳಿ ಮುಖಂಡರಾದ ಗುರುದೇವ್ ನಾರಾಯಣ್ ಕುಮಾರ್, ಕನ್ನಡಪರ ಹೋರಾಟಗಾರರಾದ ರಾಜಪ್ಪ, ಜ್ಞಾನ್ ಕಲ್ಲಹಳ್ಳಿ, ಮೋಹನ್ ಹಾಗೂ ಆಮ್ ಆದ್ಮಿ ಪಕ್ಷದ ದರ್ಶನ್ ಜೈನ್ ಭಾಗವಹಿಸಿದ್ದರು.