Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಆತ್ಮಹತ್ಯೆ ಮಾಡಿಕೊಂಡ ಭೀಮಾಶಂಕರ್ ಕುಟುಂಬಕ್ಕೆ ಸಂಸ್ಥೆಯಿಂದ 10 ಲಕ್ಷ ಇನ್ಶೂರೆನ್ಸ್‌ ಹಣ ಬಿಡುಗಡೆ

ವಿಜಯಪಥ ಸಮಗ್ರ ಸುದ್ದಿ

ಸೇಡಂ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸೇಡಂ ಘಟಕದಲ್ಲಿ ಚಾಲಕ ಕಂ ನಿರ್ವಾಹಕ ಭೀಮಾಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಇನ್ಶೂರೆನ್ಸ್ ಹಣ 10 ಲಕ್ಷ ರೂ.ಗಳನ್ನು ನಿಗಮದ ಅಧಿಕಾರಿಗಳು ಚೆಕ್‌ ಮೂಲಕ ತಲುಪಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು ಕಲ್ಯಾಣ ಕರ್ನಾಟಕ ಕೇಂದ್ರ ಕಚೇರಿಗೆ ಭೇಟಿ ನೀಡಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಈ ಸಂಬಂಧ ಸುದೀರ್ಘ ಚರ್ಚೆ ಮಾಡಿದ್ದರು.

ಮೃತ ಭೀಮಾಶಂಕರ್ ಅವರ ಕುಟುಂಬಕ್ಕೆ ಬರಬೇಕಿರುವ ಎಲ್ಲ ಸವಲತ್ತುಗಳನ್ನು ತುರ್ತಾಗಿ ನೀಡಬೇಕೆಂದು ಒತ್ತಾಯಿಸಿದ್ದರು. ಆ ವೇಳೆ ಅಧಿಕಾರಿ ವರ್ಗದವರು ತುರ್ತಾಗಿ ಸಂತ್ರಸ್ತರಿಗೆ ಬರಬೇಕಿರುವ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು. ಅದರಂತೆ ಇದೇ 23ರಂದು 10 ಲಕ್ಷ ರೂ. ಇನ್ಶೂರೆನ್ಸ್ ಹಣವನ್ನು ಸಂತಸ್ತರಿಗೆ ಬಿಡುಗಡೆ ಮಾಡಿದ್ದಾರೆ.

ಇದಿಷ್ಟೇ ಅಲ್ಲದೆ ಸಂಸ್ಥೆಯಲ್ಲಿ ಬರಬೇಕಿರುವ ಎಲ್ಲ ಸವಲತ್ತುಗಳನ್ನು ತುರ್ತಾಗಿ ನೀಡಬೇಕು ಹಾಗೂ ಮೃತರ ಪತ್ನಿಗೆ ಅನುಕಂಪದ ನೌಕರಿಯನ್ನು ಶೀಘ್ರವಾಗಿ ನೀಡಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಒತ್ತಾಯಿಸಿದೆ.

ಮೃತ ಭೀಮಾಶಂಕರ್ ಅವರ ಕುಟುಂಬಕ್ಕೆ ತುರ್ತಾಗಿ ಸ್ಪಂದಿಸಿರುವುದಕ್ಕೆ ಕೆಎಸ್‌ಆರ್ಟಿಸಿ ನೌಕರರ ಸಂಘವು ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಅವರಿಗೆ  ಸಮಸ್ತ ನೌಕರರ ಪರವಾಗಿ ಅಭಿನಂದನೆ ಸಲ್ಲಿಸಿದೆ.

Leave a Reply

error: Content is protected !!
LATEST
ಸಿಡ್ನಿಯಲ್ಲಿ 2025ರ ನೂತನ ವರ್ಷ ಸ್ವಾಗತಿಸಿದ ಮಿಲಿಯನ್‌ಗಿಂತಲೂ ಹೆಚ್ಚು ಜನರು KSRTC: 4 ಸಾರಿಗೆ ನಿಗಮಗಳು 2,000 ಕೋಟಿ ರೂ. ಸಾಲ ಪಡೆಯಲು ಒಪ್ಪಿದ ಸರ್ಕಾರ ವರ್ಲ್ಡ್ ಆಫ್ ರೆಕಾರ್ಡ್ಸ್: ವಿಶ್ವ ದಾಖಲೆ ಸೇರಿದ 1.9 ವರ್ಷದ ಜನ್ವಿತಾ BBMP ಪೂರ್ವ ವಲಯ: ಪಾದಚಾರಿ ಮಾರ್ಗ ಒತ್ತುವರಿ, ಪ್ಲೆಕ್ಸ್ ಬ್ಯಾನರ್ ತೆರವು ದೆಹಲಿ ರೈತರ ಹೋರಾಟ ಬೆಂಬಲಿಸಿ ಮೈಸೂರಿನಲ್ಲಿ ಪೆಂಜಿನ ಮೆರವಣಿಗೆ ಪ್ರತಿಭಟನೆ ಜ.1ರಿಂದ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿ ಸ್ಥಗಿತ ಬಿ.ಎಡ್‌  ವಿದ್ಯಾರ್ಥಿಗಳ ವಿಶೇಷ ಪ್ರೋತ್ಸಾಹ ಧನದ ಅರ್ಜಿ ಸಲ್ಲಿಕ್ಕೆ ಅವಧಿ ವಿಸ್ತರಣೆ ಜ.6ರಿಂದ KSRTC ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಜಾರಿ: ನಿರ್ದೇಶಕರ ಆದೇಶ ಸಾರಿಗೆ ಕಾರ್ಮಿಕರ ಬೀದಿಗೆ ತಂದಿದ್ದು ಹೊಸ ಸಂಘಟನೆ ಮುಖಂಡ ನಾವಲ್ಲ: ಜಂಟಿ ಪದಾಧಿಕಾರಿ ಡಿ.31ರಂದು ಜಗಜಿತ್ ಸಿಂಗ್ ದಲೈವಾಲರ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ಪಂಜಿನ ಪ್ರತಿಭಟನಾ ಮೆರವಣಿಗೆ