NEWSನಮ್ಮಜಿಲ್ಲೆನಮ್ಮರಾಜ್ಯ

KKRTC: 2021ರ ಮುಷ್ಕರ ವೇಳೆ ಡ್ಯೂಟಿಮೇಲೆ ಹಲ್ಲೆಗೊಳಗಾಗಿ ಅಂಗಊನಗೊಂಡ ನೌಕರನಿಗೆ ಡ್ಯೂಟಿ ಕೊಡದೇ ಟಾರ್ಚರ್‌ ಕೊಡುತ್ತಿರುವ ಅಧಿಕಾರಿಗಳು

ಎಂ.ಜಿ.ಅಲಮೇಲ ಚಾಲಕ.
ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದ ಆಡಳಿತಾಧಿಕಾರಿ ಮತ್ತು ಸಹಾಯಕ ಕಾರ್ಮಿಕಾಧಿಗಳ ಬೇಜವಾಬ್ದಾರಿ ನಡೆಯಿಂದ ನೌಕರನೊಬ್ಬ ಕಳೆದ 2021ರ ಏಪ್ರಿಲ್‌ನಿಂದ ಈವರೆಗೆ ಕೇವಲ 6-7 ತಿಂಗಳಷ್ಟೇ ಡ್ಯೂಟಿ ಮಾಡಿದ್ದು, ಈಗ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾನೆ.

ಹೌದು! ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2021ರ ಏಪ್ರಿಲ್‌ 7ರಿಂದ 21ರವರೆಗೆ ರಾಜ್ಯದ ನಾಲ್ಕೂ ನಿಗಮಗಳ ನೌಕರರು ಬಸ್‌ಗಳನ್ನು ನಿಲ್ಲಿಸಿ ಮುಷ್ಕರ ಮಾಡಿದ್ದರು. ಈ ವೇಳೆ ಕೆಲ ನೌಕರರು ಅಧಿಕಾರಿಗಳ ಮಾತು ಕೇಳಿ ಡ್ಯೂಟಿಗೆ ಹೋಗಿದ್ದರು. ಹೀಗೆ ಹೋದವರಲ್ಲಿ ಕೆಲವರ ಸ್ಥಿತಿಯಂತು ಈಗ ಹೇಳತೀರದಾಗಿದೆ.

ಮುಷ್ಕರದ ಸಮಯದಲ್ಲಿ ಡ್ಯೂಟಿಗೆ ಹೋದ ವೇಳೆ ಕೆಲವರು ಹಲ್ಲೆಗೊಳಗಾದರು. ಆ ವೇಳೆ ದೈಹಿಕವಾಗಿ ಅಂಗ ಊನರಾದರು. ಅಂದು ಡಿಎಂ, ಡಿಸಿಗಳೇ ಖುದ್ದು ಸ್ವತಃ ತಾವೆ ನಿಂತು ಹಲ್ಲೆಗೊಳಗಾದವರ ಪರನಿಂತು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ಎಫ್‌ಐಆರ್‌ ಕೂಡ ಆಗಿದ್ದು, ಇನ್ನೂ ಕೇಸ್‌ ನಡೆಯುತ್ತಲೇ ಇವೆ.

ಈ ನಡುವೆ ಹಲ್ಲೆಗೊಳಗಾಗಿ ಅಂಗ ಊನತೆಯಿಂದ ಬಳಲುತ್ತಿರುವ ಚಾಲಕ ಮತ್ತು ನಿರ್ವಾಹಕರಿಗೆ ಲೈಟ್‌ಡ್ಯೂಟಿ ಕೊಡುವ ಬದಲಿಗೆ ಅರವನ್ನು ಅಧಿಕಾರಿಗಳು ಕಾಡುತ್ತಿದ್ದಾರೆ. ಇದರಿಂದ ನೌಕರರು ವಿಧಿ ಇಲ್ಲದೆ ಅತ್ತ ಚಾಲಕ ಅಥವಾ ನಿರ್ವಾಹಕನ ಡ್ಯೂಟಿಯನ್ನೂ ಮಾಡಲಾಗದೆ. ಇತ್ತ ಲೈಟ್‌ಡ್ಯೂಟಿಯೂ ಸಿಗದೆ ಕುಟುಂಬ ನಿರ್ವಾಹಣೆ ಹೇಗೆ ಎಂಬ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಿದ್ದಾರೆ.

ಅಂದು ನಾವು ಅಧಿಕಾರಿಗಳ ಮಾತು ಕೇಳದೇ ಹೋಗಿದ್ದರೆ ಇಂದು ನಮ್ಮ ಡ್ಯೂಟಿ ನಾವು ಮಾಡಿಕೊಂಡು ಇರಬಹುದಿತ್ತು. ಆದರೆ, ಅಧಿಕಾರಿಗಳ ಮಾತು ಕೇಳಿ ಡ್ಯೂಟಿಗೆ ಹೋಗಿದ್ದರಿಂದ ಹಲ್ಲೆಗೊಳಗಾಗಿ ಅಂಗವಿಕಲರಾಗಿದ್ದೇವೆ. ಇತ್ತ ಡ್ಯೂಟಿಯನ್ನು ಕೊಡದೆ ಅಧಿಕಾರಿಗಳು ನಮ್ಮನ್ನು ಕಾಡುತ್ತಿದ್ದಾರೆ ಎಂದು ಕೆಲ ನೌಕರರು ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ.

ಅವರಲ್ಲಿ ಕೆಕೆಆರ್‌ಟಿಸಿ ವಿಜಯಪುರ ವಿಭಾಗದ ಚಾಲಕ ಎಂ.ಜಿ. ಅಲಮೇಲ, (ಬಿಲ್ಲೆ ಸಂಖ್ಯೆ 10189) ಅವರು ಒಬ್ಬರು. ಅಲಮೇಲ ಅವರು 2021ರ ಏಪ್ರಿಲ್‌ನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರದ ವೇಳೆ ಅಧಿಕಾರಿಗಳ ಮಾತು ಕೇಳಿ ಡ್ಯೂಟಿ ಮಾಡಿದರು. ಈ ವೇಳೆ ಹಲ್ಲೆಗೊಳಗಾದರು. ಆಗ ಮೊಣಕಾಲಿನ ಮೂಳೆ ಮುರಿದಿದ್ದು, ಮೊಳಕಾಲಿನ ಕೀಲುಕೂಡ ನಜ್ಜಿದಂತಾಗಿದೆ.

ಈ ಬಗ್ಗೆ ವೈದ್ಯರು ಕೂಡ ಮೊಣಕಾಲಿನ ಕೀಲಿಗೆ ಪೆಟ್ಟುಬಿದ್ದು ಸಮಸ್ಯೆಯಾಗಿದೆ. ಹೀಗಾಗಿ ಇವರು ಚಾಲನಾ ಡ್ಯೂಟಿ ಮಾಡುವುದು ಕಷ್ಟಸಾಧ್ಯ ಎಂದು ಮೂವರು ವೈದ್ಯರು ಪರೀಕ್ಷಿಸಿ ಪ್ರಮಾಣ ಪತ್ರವನ್ನು ನೀಡಿದ್ದಾರೆ.

ಆದರೆ, ವಿಜಯಪುರ ವಿಭಾಗದ ಸಹಾಯಕ ಕಾರ್ಮಿಕ ಅಧಿಕಾರಿ ದಿಲ್‌ಶಾದ್‌ ಬೇಗಂ ಜಮಾದಾರ್‌ ಮತ್ತು ಇದೇ ವಿಭಾಗದ ಆಡಳಿತಾಧಿಕಾರಿ ಎಸ್.ಎನ್.ಹಜೇರಿ ಅವರು ಈ ಚಾಲಕನಿಗೆ ಲೈಟ್‌ಡ್ಯೂಟಿ ಕೊಡುವ ಬದಲು ಈಗ ಬೆಂಗಳೂರಿನ ಜಯನಗರದಲ್ಲಿರುವ ಸಂಜಯ್‌ಗಾಂಧಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರಮಾಣ ಪತ್ರ ತರುವಂತೆ ಹೇಳಿ ಡ್ಯೂಟಿ ಕೊಡದೆ ಅಲೆಸುತ್ತಿದ್ದಾರೆ.

ಇತ್ತ ಡ್ಯೂಟಿಗಾಗಿ ಚಾಲಕ ಬೆಂಗಳೂರು ಮತ್ತು ಕಲಬುರಗಿಯಲ್ಲಿರುವ ಕೇಂದ್ರ ಕಚೇರಿಗಳ ಜತೆಗೆ ಇತ್ತ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಆದರೂ ಇನ್ನು ಡೂಟಿ ಸಿಕ್ಕಿಲ್ಲ. ಇನ್ನು ಈ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದನ್ನು ಕೆಕೆಆರ್‌ಟಿಸಿ ನಿಗಮದ ಎಂಡಿ ರಾಚಪ್ಪ ಅವರ ಗಮನಕ್ಕೆ ತರಬೇಕು ಎಂದು ಕೇಂದ್ರ ಕಚೇರಿಗೂ ಹೋಗಿದ್ದಾರೆ. ಆದರೆ, ಭದ್ರತಾ ಸಿಬ್ಬಂದಿ ಇವರನ್ನು ಒಳಗೆ ಬಿಟ್ಟಿಲ್ಲ.

ಇನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರಮಾಣಪತ್ರ ತರೋಣ ಎಂದು ಬೆಂಗಳೂರಿಗೆ ಯಾವಾಗ ಹೋಗಬೇಕು ಎಂದು ಈ ಅಧಿಕಾರಿಗಳನ್ನು ಕೇಳಿದರೆ ವೈದ್ಯರು ಯಾವಾಗ ಕರೆಯುತ್ತಾರೋ ಅವಾಗ ಹೋಗು ಎಂದು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಎಂ.ಜಿ.ಅಲಮೇಲ ಆರೋಪ ಮಾಡಿದ್ದಾರೆ.

ಇನ್ನು ಮುಷ್ಕರ ಸಮಯದಲ್ಲಿ ಮೊದಲು ನೀವು ಡ್ಯೂಟಿಗೆ ಹೋಗಿ ಅಮೇಲೆ ಎಲ್ಲವನ್ನು ನೋಡೋಣ ಎನ್ನುತ್ತಿದ್ದ ಕೆಲ ಸಂಘಟನೆಗಳ ಮುಖಂಡರು ಡ್ಯೂಟಿ ಮಾಡಿದ ಈತನ ಸಮಸ್ಯೆಯನ್ನು ಆಲಿಸದೆ ಎಲ್ಲಿಗೆ ಹೋಗಿದ್ದಾರೆ ಎಂಬ ಪ್ರಶ್ನೆಯನ್ನು ಕೆಲ ನೌಕರರು ಮಾಡುತ್ತಿದ್ದಾರೆ.

ಒಟ್ಟಾರೆ, ಈ ಅಧಿಕಾರಿಗಳ ಮಾತು ಕೇಳಿದಕ್ಕೆ ಈಗ ಇದೇ ಅಧಿಕಾರಿಗಳು ಕಿರುಕುಳ ಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ಎಂಡಿ ರಾಚಪ್ಪ ಮತ್ತು ಸಾರಿಗೆ ಸಚಿವರು ಗಮನ ಹರಿಸಿ ಇಂಥ ನೌಕರರ ಸಮಸ್ಯೆಯನ್ನು ಬಗೆಹರಿಸುವರೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು