NEWSನಮ್ಮಜಿಲ್ಲೆನಮ್ಮರಾಜ್ಯ

KKRTC: 26 ತಿಂಗಳ ಹಿಂಬಾಕಿ ಪಾವತಿಸಲು 3ದಿನದೊಳಗೆ ನೌಕರರ ಮಾಹಿತಿ ನೀಡಿ- ನಿಗಮದ ಡಿಸಿಗಳಿಗೆ ಲೆಕ್ಕಾಧಿಕಾರಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎಲ್ಲ ಅಧಿಕಾರಿ/ ನೌಕರರ 26 ತಿಂಗಳ ಹಿಂಬಾಕಿ ಬಿಲ್ಲಿನ ಮಾಹಿತಿಯನ್ನು 3 ದಿನಗಳಲ್ಲಿ ನೀಡಬೇಕು ಎಂದು ಕಲಬುರಗಿ-1, ವಿಜಯಪುರ, ಬೀದರ, ಯಾದಗೀರ, ಕೋಪ್ಪಳ, ಬಳ್ಳಾರಿ ಎಲ್ಲ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸಂಸ್ಥೆಯ ಉಪ ಮುಖ್ಯ ಲೆಕ್ಕಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಅವರು, 26 ತಿಂಗಳ ಹಿಂಬಾಕಿ ಮೊತ್ತದ ಮಾಹಿತಿ ನೀಡುವ ಕುರಿತಂತೆ 1) ಸರ್ಕಾರದ ಆದೇಶ ಸಂಖ್ಯೆ: ಬಿಡಿ 12 ಸಾಪಂಟ 2023 ದಿ: 17.03.2023 ಹಾಗೂ 2) ಸರ್ಕಾರದ ಆದೇಶ ಸಂಖ್ಯೆ ಬಿಡಿ 12 ಟಿಪಿಟಿ 2023 ಬೆಂಗಳೂರು ದಿ: 18.02.2006.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ 2ರ ಸರ್ಕಾರದ ಆದೇಶದನ್ವಯ 2020ರ ವೇತನ ಪರಷ್ಕರಣೆಯ ಅಂಗವಾಗಿ 01.01.2021 ರಿಂದ 28.02.2023 ರವರೆಗೆ ಒಟ್ಟು 26 ತಿಂಗಳ ಹಿಂಬಾಕಿ ಮೊತ್ತ ಪಾವತಿಸಲು ಅನುಮೋದನೆ ನೀಡಿ ಆದೇಶಿಸಿದೆ.

ಆದರನ್ವಯ ನಿಗಮದ ಅಧಿಕಾರಿ/ ನೌಕರರ 01.01.2021 ರಿಂದ 28.02.2023 ರವರೆಗೆ ಹಿಂಬಾಕಿ ಮೊತ್ತದ ಬಿಲ್ಲನ್ನು ತಯಾರಿಸಿ ಮಾಹಿತಿ ನೀಡಲು ಹಲವಾರು ಬಾರಿ ವಿಭಾಗಗಳ ಲೆಕ್ಕಾಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದಾಗ್ಯೂ ಇಲ್ಲಿಯವರೆಗೆ ಯಾವುದೇ ದೃಡೀಕೃತ ಮಾಹಿತಿಯನ್ನು ಸಲ್ಲಿಸಿಲ್ಲ

ಆದ್ದರಿಂದ ಮೇಲಿನಂತೆ 26 ತಿಂಗಳ ಹಿಂಬಾಕಿ ಬಿಲ್ಲಿನ ಮಾಹಿತಿಯನ್ನು 3 ದಿನಗಳಲ್ಲಿ ನೀಡಲು ಈ ಮೂಲಕ ಕೋರಲಾಗಿದೆ ಎಂದು ಸಂಸ್ಥೆಯ ಉಪ ಮುಖ್ಯ ಲೆಕ್ಕಾಧಿಕಾರಿ ಹೊರಡಿಸಿರುವ ಆದೇಶದಲ್ಲಿ ತಾಕೀತು ಮಾಡಲಾಗಿದೆ.

Deva
the authorDeva

Leave a Reply

error: Content is protected !!
Latest news
ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ದೃಷ್ಟಿಯಿಂದ ಮಾವು-ಹಲಸು ಮೇಳ: ಸಚಿವ ಮುನಿಯಪ್ಪ ಕುಣಿಹಳ್ಳಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ಗಿಡ ನೆಟ್ಟು ಪರಿಸರ ಜಾಗೃತಿ ವಿದೇಶದಲ್ಲಿ ಕನ್ನಡ ಕಲಿಕೆ: ‘ಕರ್ನಾಟಕ ಸಂಘ ಕತಾರ್’ನ ಅಧ್ಯಕ್ಷ ಸುಬ್ರಮಣ್ಯ ಅಭಯ KARNATAKA- ಸರ್ಕಾರಿ ನೌಕರರಿಗೆ ಇನ್ನು ಮುಂದೆ ಬಯೋಮೆಟ್ರಿಕ್‌ ಬದಲಿಗೆ AI ಜಿಪಿಎಸ್‌ ಆಧರಿತ ಹಾಜರಾತಿ ಕಡ್ಡಾಯ: ಸಿಎಸ್‌... ಸಚಿವ ಸ್ಥಾನಕ್ಕೆ ಅಧಿಕೃತ ರಾಜೀನಾಮೆ ಕೊಟ್ಟ ರಾಮಲಿಂಗಾರೆಡ್ಡಿ: ಸಿಎಂ ಡಿಕೆಶಿ ಕೊಟ್ಟ ಮಾತು ತಪ್ಪಿದ್ದಕ್ಕೆ ಈ ನಿರ್ಧಾರ ಎ... KSRTC ನಾಲ್ಕೂ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ ಮೇ, ಜೂನ್‌ ತಿಂಗಳುಗಳ 860 ಕೋಟಿ ರೂ. ಅನುದಾನ ಬಿಡುಗಡೆ KKRTC: ಪ್ರತಿ ತಿಂಗಳು 1ರಂದೇ ವೇತನ ಆಗುತ್ತಿತ್ತು- ಈ ಬಾರಿ ಮೇ ತಿಂಗಳ ವೇತನ ಇನ್ನೂ ಆಗಿಲ್ಲ, ಗೊಂದಲದಲ್ಲಿ ನೌಕರರು! ರಾಜ್ಯದ ಎಲ್ಲ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌: ಹೊರಬಿದ್ದ ಸರ್ಕಾರದ ಅಧಿಕೃತ ಆದೇಶ ಕೊಟ್ಟ ಮಾತು ತಪ್ಪಿದ ಸಿಎಂ ಡಿಕೆಶಿ: ಅಸಮಾಧಾನಗೊಂಡ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ! ಸರ್ಕಾರದ 2 ಸಾವಿರ ರೂ. ಪಡೆಯಲು ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್‌ ಕಡ್ಡಾಯ