CRIMENEWSನಮ್ಮರಾಜ್ಯ

KKRTC: ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಹನ ಅಪಘಾತ- ವಿಚಾರಣೆ ಪೂರ್ವ ಅಧಿಕಾರಿಗಳ ಅಮಾನತು ಮಾಡಿ: ನಾಟಿಕಾರ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಇಂಡಿ: ಇತ್ತೀಚೆಗೆ ಮಾರಿಹಾಳ ಬಳಿ (ಬೆಳಗಾವಿ ಸಮೀಪ ಸಾಮ್ರಾ ಹತ್ತಿರ ) ಟಿಪ್ಪರ್‌ಗೆ ಲಾರಿ ಸಡನ್ನಾಗಿ ಬ್ರೇಕ್ ಹಾಕಿದ್ದರಿಂದ ಹಿಂದೆ ಬಂದ ಕಲ್ಯಾಣ ಕರ್ನಾಟ ರಸ್ತೆ ಸಾರಿಗೆ ನಿಗಮ ಇಂಡಿ ಘಟಕದ ಬಸ್‌ ಬ್ರೇಕ್ ಹಾಕಿದರು ಬ್ರೇಕ್ ಹಿಡಿಯದೆ ಟಿಪ್ಪರ್‌ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ನ ಮುಂದಿನ ಗ್ಲಾಸ್‌ ಹಾಗೂ ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡಿದ್ದ ಘಟನೆ ನಡೆದಿದೆ.

ಈ ಘಟನೆಗೆ ಬಸ್‌ನಲ್ಲಿನ  ಹಲವು ದೋಷಗಳೇ ಕಾರಣವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಚಾಲಕರು ಲಿಖಿತವಾಗಿ ಹಾಗೂ ಮೌಖಿಕವಾಗಿ ತಿಳಿಸಿದ್ದರೂ ಅದನ್ನು ಸರಿಪಡಿಸಿದೆ ನಿರ್ಲಕ್ಷ್ಯ ತಾಳಿದ್ದರ ಪರಿಣಾಮ ಈ ರೀತಿಯ ಅಪಘಾತ ನಡೆದಿದೆ. ಹೀಗಾಗಿ ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ವಿಚಾರಣೆ ಪೂರ್ವ ಅಮಾನತುಗೊಳಿಸಬೇಕು ಹಾಗೂ ಚಾಲಕರಿಗೆ ಯಾವುದೇ ಶಿಕ್ಷೆ ನೀಡಬಾರದು ಎಂದು KPCC ಅಲ್ಪ ಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಯಾಕೂಬ ನಾಟಿಕಾರ ಒತ್ತಾಯಿಸಿದ್ದಾರೆ.

ಘಟನೆ ನಡೆಯುವ ಮೂರು ದಿನಗಳ ಮುಚ್ಚಿತವಾಗಿಯೇ ಬಸ್‌ ಸಾರ್ವಜನಿಕ ಸೇವೆಗೆ ಯೋಗ್ಯವಾಗಿಲ್ಲ ಎಂದು ಚಾಲಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅದನ್ನು ಸರಿ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಚಾಲನಾ ಸಿಬ್ಬಂದಿ ಹಾಗೂ ಜನರ ಪ್ರಾಣಗಳ ಜತೆಗೆ ಚೆಲ್ಲಾಟವಾಡುವ ಈ ಬೇಜವಾಬ್ದಾರಿತನದ ಅಧಿಕಾರಿಗಳು ಚಾಲಕರನ್ನು ಹೆದರಿಸಿ ಕಳಿಸಿದ್ದಾರೆ. ಪರಿಣಾಮ ಅಪಘಾತ ಸಂಭವಿಸಿದೆ.

ಅಧಿಕಾರಿಗಳ ನಿರ್ಲಕ್ಷ್ಯದ ವಿವರವೂ ಇಲ್ಲಿದೆ: ಬಸ್‌ ಅಪಘಾತವಾಗಿದ್ದು ಫೆ.6ರಂದು ಆದರೆ, 4.2.2026ರಂದು ವಾಹನ ಸಂಖ್ಯೆ KA 28 F 2432 ರೂಟ್ ನಂಬರ್ 13 /14 ಇಂಡಿ ಇಂದ ವಾಸ್ಕೋ ರೂಟ್‌ಗೆ ಹೋಗುವಾಗ ಚಾಲಕ ಶವರಿ (ಬಿಲ್ಲೆ ಸಂಖ್ಯೆ 10730) ಅವರು ವಾಹನ ಚೆಕ್ ಮಾಡಿಕೊಂಡು ವಾಹನ ರಸ್ತೆಗೆ ಇಳಿಸಲು ಯೋಗ್ಯವಲ್ಲ, ಬ್ರೇಕ್ ಸರಿ ಇಲ್ಲ ಜತೆಗೆ ಡೀಸೆಲ್ ಸೋರುತ್ತಿದೆ ಅಲ್ಲದೆ ನಾಲ್ಕನೇ ಗೇರು ಸರಿಯಾಗಿ ಬೀಳುತ್ತಿಲ್ಲ ಎಂಬ ಬಗ್ಗೆ ಅಂದು ಶಿಫ್ಟ್ ಇಂಚಾರ್ಜ್ ಇದ್ದವರಿಗೆ ತಿಳಿದ್ದಾರೆ. ಆದರೂ ಕೂಡ ಆ ಶಿಫ್ಟ್ ಇಂಚಾರ್ಜ್ ರಿಪೇರಿ ಮಾಡದೆ ಹಾಗೆ ಇವತ್ತಿನ ದಿವಸ ಹೋಗಿ ಬಾ ನಾಳೆ ನಾವು ಸರಿಪಡಿಸುತ್ತೇವೆ ಎಂದು ಬೇಜವಬ್ದಾರಿಯಿಂದ ಹೇಳಿ ಕಳಿಸಿದ್ದಾರೆ.

ಇನ್ನು 5.2.2026 ವಾಸ್ಕೋದಿಂದ ಹಾಗೆ ಹೀಗೆ ಮಾಡಿ ಮರಳಿ ಬಂದು ಲಾಗ್ ಶೀಟ್ ನಂ.5325115ರ ಮೇಲೆ ವಾಹನದ ದೋಷದ ಬಗ್ಗೆ ಚಾಲಕ ಶವರಿಯವರು ವಿವರವಾಗಿ ಎಲ್ಲವನ್ನು ನಮೂದಿಸಿದ್ದಾರೆ. ಆದರೂ ಕೂಡ ಅದನ್ನು ಸರಿಪಡಿಸದೆ ಮತ್ತೆ 6.2.26 ರಂದು ಚಾಲಕ ಚಾಂದ್ ಶೇಕ್ (ಬಿಲ್ಲೆ ಸಂಖ್ಯೆ 4188) ಅವರನ್ನು ಇದೇ ವಾಹನ ( KA 28 F 2432)ಕ್ಕೆ ಡ್ಯೂಟಿ ಹತ್ತಿಸಿದ್ದಾರೆ.

ಈ ಚಾಲಕರು ಕೂಡ ವಾಹನದ ದೋಷದ ಬಗ್ಗೆ ಹೇಳಿದ್ದಾರೆ. ವಾಹನದ ರಾಚೋಟ್ ಹೋಗಿದೆ ಅದನ್ನು ಹಾಕಿ ಕೊಡಿ ಸರ್ ಎಂದು ಇಂಚಾರ್ಜ್‌ ಇದ್ದ ಗಿರೀಶ್ ಜಂಪಾ ಅವರಲ್ಲಿ ಮನವಿ ಮಾಡಿದ್ದಾರೆ. ಆದರೂ ಈ ಗಿರೀಶ್ ಜಂಪಾ ಅವರು ಅದಕ್ಕೆ ಏನು ಆಗುವುದಿಲ್ಲ ರಾಚೋಟ್‌ಗಳು ಇಲ್ಲ ಇದೊಂದು ಡ್ಯೂಟಿ ಮಾಡಿಕೊಂಡು ಬನ್ನಿ ಬಂದ ನಂತರ ಹಾಕಿ ಕೊಡುತ್ತೇವೆ ಎಂದು ಹೇಳಿ ಕಳಿಸಿದ್ದಾರೆ.

ಆಗ ಚಾಲಕ ಚಾಂದ್‌ ಮೇಲಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ಹೋಗಿದ್ದಾರೆ. ಹೋದ ನಂತರ ಮಾರಿಹಾಳ ಬಳಿ ( ಬೆಳಗಾವಿ ಸಮೀಪ ಸಾಮ್ರಾ ಹತ್ತಿರ ) ಮುಂದೆ ಟಿಪ್ಪರ್ (KA 22 AA 1518) ಹೋಗುತ್ತಿದ್ದು ಸಡನ್ನಾಗಿ ಬ್ರೇಕ್ ಹಾಕಿದೆ. ಈ ವೇಳೆ ಹಿಂದೆ ಇದ್ದ ಬಸ್‌ ಬ್ರೇಕ್ ಹಾಕಿದರೂ ಬ್ರೇಕ್ ಹತ್ತದೇ ಮುಂದೆ ಬ್ರೇಕ್‌ ಹಾಕಿದ್ದ ಟಿಪ್ಪರ್ಗೆ ಗುದ್ದಿದೆ. ಇದರಿಂದ ಬಸ್‌ನ ಮುಂದಿನ ಭಾಗ ಡ್ಯಾಮೇಜ್ ಆಗಿದೆ. ಜತೆಗೆ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಈ ವಾಹನದ ಚಾಲಕ ಮತ್ತು ನಿರ್ವಾಹಕಕರಿಗೂ ಗಾಯಗಳಾಗಿವೆ.

ಅಪಘಾತದ ವಿಷಯ ತಿಳಿದ ಮಾರಿಹಾಳ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಬಸ್‌ಅನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಇನ್ನು ಅಪಘಾತ ಸ್ಥಳಕ್ಕೆ ಬೆಳಗಾವಿ ವಿಭಾಗದ ಸಂಚಾರ ಅಧಿಕಾರಿಗಳು (DTO) ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಹ ಭೇಟಿನೀಡಿ ವಾಹನ ಪರಿಶೀಲನೆ ಮಾಡಿದ್ದಾರೆ. ಆದಕಾರಣ ಇಂಡಿ ಘಟಕದ ಸಿಫ್ಟ್‌ ಇಂಚಾರ್ಜ್ ಈರಣ್ಣ ಕಾಂಬಳೆ, ಗಿರೀಶ್ ಜಂಪಾ, ಪಾರು ಪತ್ತೇಗಾರ್ ಮತ್ತು ಘಟಕ ವ್ಯವಸ್ಥಾಪಕ ರೇವಣಸಿದ್ಧ ಖೈನೂರು ಅವರನ್ನು ವಿಚಾರಣೆ ಪೂರ್ವ ಅಮಾನತುಗೊಳಿಸಿ ಚಾಲಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ KPCC ಅಲ್ಪ ಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಯಾಕೂಬ ನಾಟಿಕಾರ ಒತ್ತಾಯಿಸಿದ್ದಾರೆ.

ಅಲ್ಲದೆ ಘಟಕ ವ್ಯವಸ್ಥಾಪಕ ರೇವಣಸಿದ್ಧ ಖೈನೂರು ಅವರು ಸಿಂದಗಿ ಮತ್ತು ಇಂಡಿ ಘಟಕದಲ್ಲಿ ಮಾಡಿರುವ ಭ್ರಷ್ಟಾಚಾರ,ವಲಂಚಾವತಾರ, ಆದಾಯಕಿಂತ ಹೆಚ್ಚಿಗೆ ಮಾಡಿರುವ ಆಸ್ತಿ ಹಾಗೂ ಇನ್ನಿತರೇ ಅಕ್ರಮಗಳ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಲು ಸಾಕ್ಷಿ ಸಮೇತ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು KA 28 F 2432 ವಾಹನದಲ್ಲಿರುವ ದೋಷಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ಕೂಡ ಸುಮಾರು 2ಸಾರಿವ ರೂಪಾಯಿ ದಂಡವನ್ನು ವಿಧಿಸಿದ್ದು, ಆ ದಾಖಲೆಗಳು ಹಾಗೂ ಬಸ್‌ ರಿಪೇರಿ ಮಾಡಿಕೊಡಿ ಎಂದು ಲಾಗ್‌ ಶೀಟ್‌ನಲ್ಲಿ ಬಸ್‌ನಲ್ಲಿ ಆಗಿರುವ ಸಮಸ್ಯೆಗಳನ್ನು ವಿವರಿಸಿರುವ ದಾಖಲೆಗಳು ಪತ್ರಿಕೆಗೆ ಲಭ್ಯವಾಗಿವೆ.

Megha
the authorMegha

Leave a Reply

error: Content is protected !!