NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಎಲ್ಲ ನೌಕರರ ಫೆಬ್ರವರಿ ತಿಂಗಳ ವೇತನದಲ್ಲಿ 200 ರೂ. ಬದಲಿಗೆ 300 ರೂ. ವೃತ್ತಿ ತೆರಿಗೆ ಕಡಿತಗೊಳಿಸಲು ಎಂಡಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆಯ ಎಲ್ಲ ನೌಕರರ ಫೆಬ್ರವರಿ ತಿಂಗಳ ವೇತನದಲ್ಲಿ ವೃತ್ತಿ ತೆರಿಗೆ 300 ರೂ. ಕಡಿತ ಮಾಡಿ ವೃತ್ತಿ ತೆರಿಗೆ ಇಲಾಖೆಗೆ ಪಾವತಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ತಿಳಿಸಿದ್ದಾರೆ.

ಈ ಸಂಬಂಧ ಶನಿವಾರ ಫೆ.7ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲ ಹಿರಿಯ/ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ಪ್ರಾದೇಶಿಕ ಕಾರ್ಯಾಗಾರ/ಕಾರ್ಯ ನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದ್ದಾರೆ.

ಈ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ 2025 ರ ಕರ್ನಾಟಕ ಅಧಿನಿಯಮ ಅನ್ವಯ ಅನುಸೂಚಿಯನ್ನು ಕೆಳಗಿನಂತೆ ತಿದ್ದುಪಡಿ ಮಾಡಲಾಗಿದೆ.

ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ ಅಧಿನಿಯಮ, 1976 (1976ರ ಕರ್ನಾಟಕ ಅಧಿನಿಯಮ 35)ರ ಅನುಸೂಚಿಯಲ್ಲಿನ ಕ್ರಮ ಸಂಖ್ಯೆ 01 ರಲ್ಲಿ (3) ನೇ ಕಾಲಂನಲ್ಲಿನ ನಮೂದುಗಳಿಗೆ ಬದಲಾಗಿ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು ಅಂದರೆ, ವರ್ಷದಲ್ಲಿ ಎಲ್ಲ ತಿಂಗಳಲ್ಲೂ ತಿಂಗಳಿಗೆ 200 ರೂ. (ಫೆಬ್ರವರಿ ತಿಂಗಳನ್ನು ಹೊರತುಪಡಿಸಿ). ಕಡಿತಗೊಳಿಸತಕ್ಕದ್ದು, ಆದರೆ ಫೆಬ್ರವರಿ ತಿಂಗಳಲ್ಲಿ ಮಾತ್ರ 300 ರೂ. ವೃತ್ತಿ ತೆರೆಗೆ ಕಡಿತಗೊಳಿಸುವಂತೆ ತಿಳಿಸಲಾಗಿದೆ.

ಆದುದರಿಂದ ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ 2025-26ನೇ ಸಾಲಿನಿಂದ ಅನ್ವಯವಾಗುವಂತೆ ಪ್ರತಿ ವರ್ಷ “ಫೆಬ್ರವರಿ” ತಿಂಗಳಲ್ಲಿ ಮಾತ್ರ ಎಲ್ಲ ಅರ್ಹ ಅಧಿಕಾರಿ/ಸಿಬ್ಬಂದಿಗಳ ತಿಂಗಳ ವೇತನದಲ್ಲಿ ವೃತ್ತಿ ತೆರಿಗೆ 200 ರೂ.ಗಳ ಬದಲಾಗಿ 300 ರೂ.ಗಳನ್ನು ಕಡಿತಗೊಳಿಸಿ ನಿಯಮಾನುಸಾರ ವೃತ್ತಿ ತೆರಿಗೆ ಇಲಾಖೆಗೆ ಪಾವತಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

Megha
the authorMegha

Leave a Reply

error: Content is protected !!
Latest news
BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ! ಮೇ 20ರಿಂದ ಸಾರಿಗೆ ನೌಕರರ ಮುಷ್ಕರ ಮಾಡೇ ತೀರುತ್ತೇವೆ: ವಿಜಯಭಾಸ್ಕರ್ KSRTC: ಮೇ 20 ರಿಂದ ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಎಂಟಿಸಿ-ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘ ಬೆಂಬಲ ವಿಜಯಪಥ ವರದಿಗೆ ಎಚ್ಚೆತ್ತ NWKRTC: ನೌಕರರಿಗೆ 11ತಿಂಗಳ ಹಿಂಬಾಕಿ ಪಾವತಿಯಾಗಿದೆ- ಸ್ಪಷ್ಟನೆ ನೀಡಿ ಸಿಬ್ಬಂದಿ ಗೊಂದಲ ನ... ಸಾರಿಗೆ ನೌಕರರಿಗೆ ಶೇ.12.5 ರಷ್ಟು ವೇತನ ಹೆಚ್ಚಳ ತೀವ್ರ ಖಂಡನೀಯ: ನೌಕರರ ಹಕ್ಕಿಗಾಗಿ ಹೋರಾಟಕ್ಕೆ ಸಿದ್ಧ: ಬೀದರ್‌ ಬಿಎಂ... ಚಿನ್ನ ಇಂದು ಬಲುಭಾರ: 1ಗ್ರಾಂ 22K ಚಿನ್ನದ ಬೆಲೆ ₹1275 ಏರಿಕೆ, ಬೆಳ್ಳಿ ₹20 ಸಾವಿರ ಏರಿಕೆ NWKRTC: ನೌಕರರಿಗೆ 11ತಿಂಗಳ ಬದಲಿಗೆ 8 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಕಿದ್ದಾರಾ? ಗೊಂದಲದಲ್ಲಿ ಸಿಬ್ಬಂದಿ! "ನಷ್ಟದ ನೆಪದಲ್ಲಿ ವೇತನ ತಡೆಹಿಡಿಯಲು" ಅವಕಾಶ ಇಲ್ಲ: ಭಾರತ ಸಂವಿಧಾನ ಮಿಲನ ಕಳನಾಯಕ ಖ್ಯಾತಿಯ, ಹಿಟ್ಲರ್ ಕಲ್ಯಾಣ’ ಧಾರವಾಹಿಯ ಹೀರೋ ದಿಲೀಪ್ ರಾಜ್ ಇನ್ನಿಲ್ಲ KSRTC ನೌಕರರ ವೇತನ ಪರಿಷ್ಕರಣೆಯ ಆದೇಶದಲ್ಲೇನಿದೆ, ನೌಕರರಿಗೆ ಎಷ್ಟು ತಿಂಗಳ ಹಿಂಬಾಕಿ ಕೊಡಬೇಕು..?