
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅದರಲ್ಲೂ ವಿಜಯಪುರ ವಿಭಾಗದಲ್ಲಿ ಇವರ ಬಹುತೇಕ ಎಲ್ಲ ಘಟಕ ವ್ಯವಸ್ಥಾಪಕರು ಸೇರಿದಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳೂ ಅಂಕುಶವಿಲ್ಲದ ಆನೆಯಂತಾಗಿದ್ದಾರೆ. ಅಂದರೆ ನಾವು ಮಾಡಿದ್ದೆ ರೂಲ್ಸ್, ನಾವು ಹೇಳಿದಂತೆ ಕೇಳಬೇಕು ಎಂದು ಸಂಸ್ಥೆಯ ನೌಕರರನ್ನು ಜೀತದಾಳುಗಳಂತೆ ತಮ್ಮ ವೈಯಕ್ತಿಕ ಕೆಲಸಕ್ಕೆ ದೂಡುತ್ತಿದ್ದಾರೆ.
ಹೌದು! ಇದೇ ಏಪ್ರಿಲ್ 9 ರಂದು ನಿಗಮದ ವಿಜಯಪುರ ಘಟಕ 1 ರ ಘಟಕ ವ್ಯವಸ್ಥಾಪಕ ಸಂಗನಗೌಡ ಬಿರಾದಾರ ಅವರು ತಮ್ಮ ಸ್ವಂತ ವಾಹನ ಕೆಎ 48 M3941 ಕಾರನ್ನು ಘಟಕಕ್ಕೆ ತಂದು ಘಟಕದ ತಾಂತ್ರಿಕ ಸಿಬ್ಬಂದಿಗಳ ಮುಖಾಂತರ ಇಂಜಿನ್ ಆಯಿಲ್ ಬದಲಾವಣೆ, ಗ್ರೀಸಿಂಗ್, ಪಂಚೇರ್ ಹಾಕಿಸಿಕೊಂಡಿದ್ದು ಅಲ್ಲದೆ ವಾಷಿಂಗ್ ಕೂಡ ಮಾಡಿಸಿಕೊಂಡಿದ್ದಾರೆ.
ಇದಿಷ್ಟೇ ಅಲ್ಲದೆ ಕಾರಿಗೆ ಸಂಬಂಧಿಸಿದ ಇನ್ನಿತರೇ ಕೆಲಸಗಳನ್ನು ಕಾನೂನು ಬಾಹಿರವಾಗಿ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಗಳಿಂದ ಮಾಡಿಸಿಕೊಂಡಿದ್ದಾರೆ. ಇವರು ಈ ಹಿಂದೆಯೂ ವಿಜಯಪುರ ವಿಭಾಗದ ಇಂಡಿ ಘಕದ ಡಿಎಂ ಆಗಿದ್ದಾಗ ನೌಕರರಿಗೆ ಕಿರುಕುಳ ಕೊಡುತ್ತಿದ್ದರು ಎಂದು KKCC ಸೆಕ್ರೆಟರಿ ಅಲ್ಪ ಸಂಖ್ಯಾತರ ಘಟಕದ ಯಾಕೂಬ ನಾಟಿಕಾರ ಅವರು ಭ್ರಷ್ಟಚಾರದ ಆರೋಪ ಮಾಡಿದ್ದರಿಂದ ವಿಜಯಪುರ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ.
ಆದರೆ ಇಲ್ಲಿಯೂ ಕೂಡ ಅವರು ಮತ್ತೆ ತಮ್ಮ ಹಳೆ ಚಾಳಿಯನ್ನೇ ಮುಂದು ವರೆಸಿದ್ದಾರೆ. ಜತೆಗೆ ತಮ್ಮ ಸ್ವಂತ ಕಾರನ್ನು ಸರ್ವಿಸ್ ಮಾಡಿಕೊಡುವಂತೆ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಗೆ ಆದೇಶಿಸಿ ಅದನ್ನು ರೆಡಿ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಇಂಡಿ ಘಟದ ಡಿಎಂ ಕರ್ಮಕಾಂಡ: 1ರಿಂದ5 ದಿನ ರಜೆಗೆ ₹6K ಕೊಡಿ ಇಲ್ಲ ಗೈರು ತೋರಿಸುವೆ ಅಂತ ಬೆದರಿಸಿ ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ
ತಮ್ಮ ಸ್ವಂತ ವಾಹನವನ್ನು ಸಂಸ್ಥೆಯ ಘಕದಲ್ಲಿ ನಿರ್ವಹಣೆ ಮಾಡಿಸುವುದು ಸಂಸ್ಥೆಯ ನಿಯಮದಡಿ ದೊಡ್ಡ ಅಪರಾಧವಾಗುತ್ತದೆ. ಇನ್ನು ಮತ್ತೊಂದು ಶಾಂಕಿಂಗ್ ನ್ಯೂಸ್ ಎಂದರೆ ತಮ್ಮಸ್ವಂತ ವಾಹನಕ್ಕೆ ಘಟಕದಲ್ಲಿ ಹಗಲಲ್ಲೇ ಡೀಸೆಲ್ ಸಹ ತುಂಬಿಸಿರುತ್ತಾರೆ ಎಂಬ ಆರೋಪ ಇವರ ಮೇಲೆ ಇದೆ. ಸಂಸ್ಥೆಯ ಡೀಸೆಲ್ ಬಳಸಿದ್ದರಿಂದ ನಿಗಮಕ್ಕೆ ಆರ್ಥಿಕವಾಗಿಯೂ ಭಾರಿ ನಷ್ಟವಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.
ಇನ್ನು ವಿಜಯಪುರ ವಿಭಾಗದಲ್ಲಿ ರಿಉವ ವಿಭಾಗೀಯ ನಿಯಂತ್ರಣಾಧಿಕಾರಿ ಈ ಹಿಂದೆ ಇದೇ ವಿಭಾಗದಲ್ಲಿ ಭಾರಿ ಭ್ರಷ್ಟಾಚಾರ ಮಾಡಿ ವರ್ಗಾವಣೆ ಆಗಿದ್ದ ವ್ಯಕ್ತಿ ಈಗ ಮತ್ತೆ ಇದೇ ವಿಭಾಗಕ್ಕೆ ಬಂದು ಒಕ್ಕರಿಸಿದ್ದು ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ನಾರಯಣಪ್ಪ ಕುರುಬರ ಇವರಿಗೆ ದೂರು ಕೊಟ್ಟರೆ ನಮ್ಮನ್ನೇ ಅಮಾನತು ಮಾಡುತ್ತಾರೆ ಎಂದು ಸಿಬ್ಬಂದಿಗಳು ಹೆದರಿ ಇವರು ಹೇಳಿದಂತೆ ಕೇಳುತ್ತಿದ್ದಾರೆ.
ಒಟ್ಟಾರೆ ವಿಜಯಪುರ ವಿಭಾಗದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿನಂತೆ ಇಲ್ಲಿ ಇರುವ ಬಹುತೇಕ ಅಧಿಕಾರಿಗಳು ಸಂಸ್ಥೆಯ ನೌಕರರನ್ನು ಮತ್ತು ಸಂಸ್ಥೆಯ ವಸ್ತುಗಳನ್ನು ದುರುಪಯೋಗಪಡಿಸಿಕೊಂಡು ದೌಲತ್ ಮರೆಯುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಎಂಡಿ ರಾಚಪ್ಪ ಹಾಗೂ ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ಅವರು ಕಡಿವಾಣ ಹಾಕಬೇಕು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ರಾಮಲಿಂಗಾರೆಡ್ಡಿ ಅವರು ಕೂಡ ಈ ವಿಷಯದಲ್ಲಿ ತುರ್ತಾಗಿ ಕಟ್ಟುನಿಟ್ಟಿನ ಆದೇಶ ಮಾಡಿ ವಿಜಯಪುರ ಘಟಕದ ಘಟಕ ವ್ಯವಸ್ಥಾಪಕ ಸಂಗನಗೌಡ ಬಿರಾದಾರ ಹಾಗೂ ವೈಯಕ್ತಿಕ ವಾಹನವನ್ನು ಘಟಕದಲ್ಲಿ ಸರ್ವಿಸ್ ಮಾಡುವುದಕ್ಕೆ ಬಿಟ್ಟ ಭದ್ರತಾ ಸಿಬ್ಬಂದಿ ಅವರ ವಿರುದ್ಧವೂ ಕೂಡಲೇ ಇಲಾಖಾ ವಿಚಾರಣೆ ಬಾಕಿ ಇರಿಸಿ ವಿಚಾರಣಾ ಪೂರ್ವ ಅಮಾನತು ಮಾಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.