NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಅಪಘಾತ- ಅಪರಾಧ ಮಾಡದ 34 ಚಾಲಕರಿಗೆ ಬೆಳ್ಳಿ ಪದಕ ನೀಡಿ ಸನ್ಮಾನ

ವಿಜಯಪಥ ಸಮಗ್ರ ಸುದ್ದಿ

ಕಾರಟಗಿ: ಸಂಕಷ್ಟದ ವೇಳೆ ವೈದ್ಯ ಜಾಗರೂಕತೆ ಮೆರೆದು ಒಬ್ಬನ ಪ್ರಾಣ ಉಳಿಸಬಹುದು, ಆದರೆ, ಬಸ್‌ ಚಾಲಕ ಜಾಗರೂಕನಾದರೆ ನೂರು ಜನರ ಪ್ರಾಣ ಉಳಿಸುತ್ತಾನೆ ಎಂಬುವುದಕ್ಕೆ ನೂರಾರು ಸಾವಿರಾರು ನಿದರ್ಶನಗಳನ್ನು ಕೊಡಬಹುದು. ಅಂಥ ಚಾಲಕರ ಕರ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಪ್ರಶಸ್ತಿ ನೀಡಿದರೆ ಅದು ಶ್ಲಾಘನೀಯ ಕಾರ್ಯವೇ ಸರಿ.

ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗ ಆಯೋಜಿಸಿದ್ದ ಕಾರಟಗಿಯ ನೂತನ ಬಸ್‌ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ನಿಗಮದ ಅಪಘಾತ ರಹಿತವಾಗಿ 2017, 2018 ಮತ್ತು 2019ರಲ್ಲಿ ಚಾಲನೆ ಮಾಡಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಲಾಯಿತು.

ವೈದ್ಯರು ಒಮ್ಮೆ ಆಪರೇಷನ್‌ ಮಾಡಿ ಓರ್ವನ ಪ್ರಾಣವನ್ನು ಕಾಪಾಡಬಹುದು. ಆದರೆ ಚಾಲನೆ ವೇಳೆ ಸಂಕಷ್ಟ ಎದುರಾದರೆ ಚಾಲಕ ಜಾಗರೂಕ ಜವಾಬ್ದಾರಿಯಿಂದ ನಡೆದುಕೊಂಡರೆ ಬಸ್‌ನಲ್ಲಿ ಪ್ರಯಾಣಿಸುವ ನೂರು ಜನರ ಪ್ರಾಣ ರಕ್ಷಿಸಬಹುದು. ಇಂದು ಅಪಘಾತ, ಅಪರಾಧ ರಹಿತ ಬಸ್‌ ಚಾಲನೆ ಮಾಡಿ ಬೆಳ್ಳಿ ಪದಕ ಪಡೆದಿರುವುದು ಶ್ಲಾಘನೀಯ. ಇವರ ಸಾಧನೆ ಇತರೆ ನೌಕರರಿಗೆ ಮಾದರಿ ಆಗಲಿ.

ಕೆಎಸ್‌ಆರ್‌ಟಿಸಿಗೆ ಬೆಳ್ಳಿಯ ಹೊಳಪಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಯೂನಿಫಾರ್ಮ್‌ ಕಾರಣಕ್ಕೆ ಪೊಲೀಸ್‌ ಇಲಾಖೆ, ಕೆಎಸ್‌ಆರ್‌ಟಿಸಿ ನಡುವೆ ಒಂದು ಮಾನಸಿಕ ಸಂಬಂಧವಿದೆ. ಚಾಲಕ ವೃತ್ತಿ ಎನ್ನುವುದು ಒಂದು ಜವಾಬ್ದಾರಿ ಕೆಲಸ. ಇದನ್ನು ಸಮರ್ಥವಾಗಿ ಮಾಡಿರುವುದರಿಂದ ಇಲ್ಲಿ 34 ಜನ ಚಾಲಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ. ಈ ಗೌರವ ಪಡೆದವರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ.

1.20 ಲಕ್ಷ ನೌಕರರು: ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳಿಂದ 1.07 ಲಕ್ಷ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಬಹುದೊಡ್ಡ ಸಂಸ್ಥೆಗಳು ಚಾಲಕ ಮತ್ತು ನಿರ್ವಾಹಕರ ಕೊರತೆಯನ್ನು ಇಂದು ಎದುರಿಸುತಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಈಗಾಗಲೇ ಸಾರಿಗೆ ಸಚಿವರು ತಿಳಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಈಗಾಗಲೇ ನೂರಾರು ಬಾರಿ ರಾಷ್ಟ್ರಮಟ್ಟದಲ್ಲಿ ನಿಗಮಗಳು ಪ್ರಶಸ್ತಿ ಪಡೆದುಕೊಂಡಿವೆ.

ಇನ್ನು ಕೆಕೆಆರ್‌ಟಿಸಿ ನಿಗಮದಿಂದ ಉತ್ತಮವಾಗಿ ಕೆಲಸ ಮಾಡುವ ಚಾಲಕರನ್ನು ಗುರುತಿಸುವ ಕೆಲಸವನ್ನು  ಮಾಡಲಾಗಿದೆ. ಈ ಹಿಂದೆ ಕೇವಲ ಚಿನ್ನದ ಪದಕ ನೀಡಲಾಗುತ್ತಿತ್ತು. ಈಗ ಬೆಳ್ಳಿ ಪದಕ ಕೂಡ ನೀಡಲಾಗುತ್ತಿದೆ. ಇದು ನೌಕರರ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.

ಪದಕ ಪಡೆದ ಚಾಲಕರು: ಯಾವುದೇ ಅಪಘಾತ ಮತ್ತು ಅಪರಾಧ ಮಾಡದ 34 ಚಾಲಕರಿಗೆ ಬೆಳ್ಳಿ ಪದಕ ನೀಡಲಾಯಿತು. ಕಪ್ಪಳ ಘಟಕದ ಶರಣಪ್ಪ, ಮಂಜುನಾಥ, ಲೋಕನಗೌಡ, ಇಸ್ಮಾಯಿಲ್‌ಸಾಬ್‌, ಶರಣಪ್ಪ, ಮಂಜುನಾಥಗೌಡರ್‌, ಎಂ.ಟಿ.ಚರ್ಚಿಹಾಳಮಠ, ಈಶಪ್ಪ, ಸಿದ್ದಲಿಂಗಪ್ಪ, ಜಿ.ಎಸ್‌. ಸಜ್ಜನ್‌, ರವೀಂದ್ರ, ನಾಗರಾಜ ಕಾರಿಕಾಯಿ, ಜಗದೀಶ್‌ ಜಂತ್ಲಿ, ಮಂಜುನಾಥ ಶಂಕಿನ್‌, ಕುಷ್ಟಗಿ ಘಟಕದ ಪ್ರಕಾಶ, ದುರುಗಪ್ಪ, ಮಲ್ಲಪ್ಪ, ಜಗದೀಶ, ಮುತ್ತಣ್ಣ, ಎಂ.ಡಿ.ಸಲೀಂ ಎನ್‌.ಕಾಯಿಗಡ್ಡಿ, ಮುರ್ತುಜಾಸಾಬ್‌, ಯಲಬುರ್ಗಾ ಘಟಕದ ರವಿಕುಮಾರ್‌ ಭಜಂತ್ರಿ, ಸುರೇಶ್‌ ಧನ್ನೂರ, ಮಲ್ಲಪ್ಪ ಸಂಗಳದ, ಸಂಗಪ್ಪ ವಡ್ಡರ್‌, ಗಂಗಾವತಿ ಘಟಕದ ನಾಗರಾಜ, ಹನುಮಂತ ಹಮನಿ, ಮಹಾಲಿಂಗಯ್ಯ, ಬಸವರಾಜ ಪೂಜಾರ್‌ ಹಾಗೂ ವೀರೇಶ್‌ ಒಂಟೇಲಿ ಪದಕ ಪಡೆದವರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ