NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಆಕಸ್ಮಿಕ ಅಪಘಾತವಾದಾಗ ಚಾಲಕರ ಪರ ಕಾನೂನು ಹೋರಾಟ ಮಾಡದ ನಿಗಮಗಳು- ಕೈಕಟ್ಟಿ ಕುಳಿತ ಸಂಘಟನೆಗಳು..!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾಯಂ ಉದ್ಯೋಗಿಗಳಾಗಿ ಚಾಲನಾ ಸಿಬ್ಬಂದಿ ಕರ್ತವ್ಯ ನಿರ್ಹಿಸುತ್ತಿದ್ದಾರೆ. ಆದರೆ ಬಸ್‌ ಅಪಘಾತವಾದಾಗ ಆ ಜವಾಬ್ದಾರಿಯನ್ನು ಸಂಸ್ಥೆ ತೆಗೆದುಕೊಳ್ಳುವ ಬದಲಿಗೆ ಚಾಲನಾ ಸಿಬ್ಬಂದಿಗಳನ್ನೇ ಹೊಣೆಮಾಡಲಾಗುತ್ತಿದೆ ಎಂಬ ಆರೋಪವಿದೆ.

ಹೌದು! ಬಸ್‌ ರಸ್ತೆಯಲ್ಲಿ ಚಲಿಸುತ್ತಿದೆ ಎಂದರೆ ಆಕಸ್ಮಿಕವಾಗಿ ಅಪಘಾತವಾಗುವುದು ಸಾಮಾನ್ಯ. ಈ ಸಂದರ್ಭದಲ್ಲಿ ನಿಗಮದ ವಕೀಲರು ತಮ್ಮ ಚಾಲನಾ ಸಿಬ್ಬಂದಿಗಳ  ಪರವಾಗಿ ನ್ಯಾಯಾಲಯದ ಮೆಟ್ಟಿಲೇರಿ ಅಪಘಾತವಾಗಿರುವುದಕ್ಕೆ  ಚಾಲನಾ ಸಿಬ್ಬಂದಿಗಳ  ಬಂಧನವಾಗುವ ಸಾಧ್ಯತೆ ಇದೆ ಎಂದು ಮುಂದಾಗಿಯೇ ಕಾನೂನು ಪಾಲನೆ ಮಾಡುವ ದೃಷ್ಟಿಯಿಂದ ನೀರೀಕ್ಷಣಾ ಜಾಮೀನು (Anticipatory bail) ಪಡೆದುಕೊಳ್ಳಬೇಕು.

ಆದರೆ, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಅಪಘಾತವಾದರೆ ಆ ಬಗ್ಗೆ ಸಂಸ್ಥೆಯ ವಕೀಲರು Anticipatory bailಗೆ ಅರ್ಜಿ ಹಾಕುವುದಿಲ್ಲ ಬದಲಿಗೆ ಚಾಲನಾ ಸಿಬ್ಬಂದಿಗಳ  ಕುಟುಂಬದವರು ಜಾಮೀನು ಪಡೆಯುವುದಕ್ಕೆ ಕೋರ್ಟ್‌ ಮೊರೆಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾವುದೇ ಚಾಲನಾ ಸಿಬ್ಬಂದಿಗಳು ಉದ್ದೇಶಪೂರ್ಕವಾಗಿ ಅಪಘಾತ ಎಸಗುವುದಿಲ್ಲ. ಹೀಗಿದ್ದರೂ ಸಾರಿಗೆ ನಿಗಮಗಳು ಏಕೆ ತಮ್ಮ ಉದ್ಯೋಗಿಗಳಿಗೆ ಜಾಮೀನು ಕೊಡಿಸಿ ನಂತರ ಅಪಘಾತಕ್ಕೆ ಕಾರಣ ಏನು ಎಂಬುದನ್ನು ಸಂಬಂಧಪಟ್ಟ ಪೊಲೀಸ್‌ ಠಾಣೆಯ Investigating Officer (IO) ತನಿಖಾಧಿಕಾರಿಗೆ ಮಾಹಿತಿ ಕೊಡುವುದಿಲ್ಲ ಎಂಬ ಪ್ರಶ್ನೆ ನೌಕರರನ್ನು ಕಾಡುತ್ತಿದೆ.

ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ ಆದೇಶವೊಂದನ್ನು ಹೊರಡಿಸಿದೆ. ಉದ್ದೇಶಪೂರ್ವಕವಾಗಿ ಅಪಘಾತ ಮಾಡದಿದ್ದರೆ ಅಂಥವರಿಗೆ ಮೌಖಿಕವಾಗಿ ಎಚ್ಚರಿಕೆ ನೀಡಬೇಕು ಎಂದು. ಇದನ್ನು ಗಮನದಲ್ಲಿ ಇಟ್ಟುಕೊಂಡು ಸಂಬಂಧಪಟ್ಟ ಸಂಸ್ಥೆಯ ವಕೀಲರು ತಮ್ಮ ಸಂಸ್ಥೆಯ ಚಾಲನಾ ಸಿಬ್ಬಂದಿಗಳಿಂದ ನಡೆದ ಆಕಸ್ಮಿಕ ಅಪಘಾತ ಸಂಬಂಧ ಬೇಲ್‌ ಪಡೆದು ಚಾಲನಾ ಸಿಬ್ಬಂದಿಗಳ  ರಕ್ಷಣೆ ಮಾಡಬೇಕಲ್ಲವೇ?

ಆದರೆ, ಇದಾವುದನ್ನು ಮಾಡದೆ, ಅಪಘಾತಕ್ಕೆ ಚಾಲನಾ ಸಿಬ್ಬಂದಿಗಳೆ ನೇರ ಹೊಣೆ ಎಂಬಂತೆ ನಡೆದುಕೊಳ್ಳುವುದು ಬಳಿಕ ತಮ್ಮ ಉದ್ಯೋಗಿಯ ಬಗ್ಗೆ ಅಸಡ್ಡೆ ಭಾವನೆ  ಬೆಳೆಸಿಕೊಂಡು ಶಿಕ್ಷೆಯಾದರೆ ಚಾಲನಾ ಸಿಬ್ಬಂದಿಗಳಿಗಲ್ಲವೇ ಎಂದು ಸುಮ್ಮನಾಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ಅಪಘಾತದ ಬಳಿಕ ಚಾಲನಾ ಸಿಬ್ಬಂದಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುವುದರಿಂದ ಅವರ ಕುಟುಂಬ ಬೀದಿಗೆ ಬರುತ್ತಿದೆ ಎಂಬುವುದರ ಅರಿವು ಇಲ್ಲದವರಂತೆ ನಡೆದುಕೊಳ್ಳುವುದು ನಿಮಗದಲ್ಲೇ ರೂಪಿತವಾಗಿರುವ ನಿಯಮಗಳಿಗೆ ವಿರುದ್ಧವಲ್ಲವೇ ಎಂದು ಕೇಳುತ್ತಿದ್ದಾರೆ.

ಆಕಸ್ಮಿಕವಾಗಿ ನಡೆಯುವ ಅಪಘಾತಕ್ಕೆ ಚಾಲನಾ ಸಿಬ್ಬಂದಿಗಳು ಶಾಶ್ವತವಾಗಿ ಉದ್ಯೋಗ ಕಳೆದುಕೊಳ್ಳುವ ಜತೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಿದೆ. ಇದಕ್ಕೆ ಯಾರು ಹೊಣೆ, ನೌಕರರ ಪರವಾಗಿ ನಾವಿದ್ದೇವೆ ಎಂದು ಹೇಳುವ 28ಕ್ಕೂ ಹೆಚ್ಚು ಸಂಘಟನೆಗಳಿರುವ ಮುಖಂಡರು ಈ ಬಗ್ಗೆ ಏಕೆ ಇನ್ನು ಧ್ವನಿ ಎತ್ತಿಲ್ಲ ಮಾತ್ತೆತ್ತಿದರೆ ಒಬ್ಬರ ವಿರುದ್ಧ ಒಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡು ವಾಟ್ಸ್‌ಆಪ್‌ನಲ್ಲಿ ಕಾಲ ಕಳೆಯುವುದು ನಿಮಗೆ ಶೋಭೆ ತರುತ್ತದೆಯೇ ಎಂದು ನೌಕರರು ಪ್ರಶ್ನಿಸಿದ್ದಾರೆ.

ಇನ್ನಾದರೂ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಗಳಿಗೆ ಈ ರೀತಿಯ ತೊಂದರೆ ಆದರೆ ಸಂಬಂಧಪಟ್ಟ ಘಟಕದ ವ್ಯವಸ್ಥಾಪಕರ ಮೂಲಕ ಅಂದರೆ ಸಂಸ್ಥೆಯಿಂದ ವಕೀಲರ ನೇಮಕ ಮಾಡಿ ಆಕಸ್ಮಿಕವಾಗಿ ನಡೆದ ಅಪಘಾತಕ್ಕೆ ಚಾಲನಾ  ಸಿಬ್ಬಂದಿಗಳು ಶಿಕ್ಷೆ ಅನುಭವಿಸದಂತೆ ನೋಡಿಕೊಳ್ಳಬೇಕು. ಮತ್ತೆ ಇದರಿಂದ ಚಾಲನಾ ಸಿಬ್ಬಂದಿಗಳ  ಕುಟುಂಬ ಬೀದಿಗೆ ಬೀಳದಂತೆ ಎಚ್ಚರ ವಹಿಸಬೇಕು. ಈ ಜವಾಬ್ದಾರಿ ಸಂಘಟನೆಗಳ ಮುಖಂಡರದ್ದೂ ಆಗಿದೆ.

ನಿಗಮದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಆಗುವ ಅಪಘಾತಕ್ಕೆ ಸಂಸ್ಥೆಯೇ ಹೊಣೆ ಹೊರಬೇಕು, ಅದನ್ನು ಬಿಟ್ಟು ಚಾಲನಾ ಸಿಬ್ಬಂದಿಗಳ  ಮೇಲೆಯೇ ಹೊಣೆಹಾಕಿ ಸಿಬ್ಬಂದಿಗಳು ಜೈಲಿಗೆ ಹೋದರು ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸಬಾರದು. ಈಗಾಗಲೇ ತಮ್ಮದಲ್ಲದ ತಪ್ಪಿಗೆ ಸಂಸ್ಥೆಯ ಹಲವವಾರು ಚಾಲನಾ ಸಿಬ್ಬಂದಿಗಳು ಜೈಲು ಶಿಕ್ಷೆ ಅನುಭವಿಸಿ ಕೆಲಸವನ್ನು ಕಳೆದುಕೊಂಡಿರುವ ನಿದರ್ಶನಗಳು ಬಹಳಷ್ಟಿವೆ.

ಹೀಗಾಗಿ ಇನ್ನಾದರೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಸಂಬಂಧಪಟ್ಟ ಡಿಸಿ, ಡಿಎಂ ಸೇರಿದಂತೆ ಕಾನೂನು ವಿಭಾಗದ ಅಧಿಕಾರಿಗಳಿಗೆ ಕಾನೂನಾತ್ಮಕವಾಗಿ ಚಾಲನಾ ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಕ್ಕೆ ಸೂಚನೆ ನೀಡಬೇಕು ಎಂದು ನೊಂದ ನೌಕರರು ಮನವಿ ಮಾಡಿದ್ದಾರೆ.

ಇನ್ನು ಇತ್ತೀಚೆಗಷ್ಟೇ ತುಮಕೂರಿನ ಬಸ್‌ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತ ಸಂಬಂಧ ಈಗಾಗಲೇ ಚಾಲಕ ಮತ್ತು ನಿರ್ವಾಹಕರು ಬಂಧಿಯಾಗಿದ್ದಾರೆ.  ಅವರದಲ್ಲದ ತಪ್ಪಿಗೆ ಎರಡು ಜೀವಗಳು ಹೋಗಿವೆ. ಇದನ್ನು ಯಾವರೀತಿ ಪರಿಹರಿಸಬೇಕು ಎಂಬ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಯೋಚನೆ ಮಾಡಬೇಕಿದೆ. ಜತೆಗೆ ತಮ್ಮ ಚಾಲನಾ ಸಿಬ್ಬಂದಿಗಳಿಗೆ  ಶಿಕ್ಷೆಯಾಗದಂತೆ ನೋಡಿಕೊಳ್ಳಬೇಕಿದೆ.

ಸದ್ಯದ ಪರಿಸ್ಥಿತಿ ಗಮನಿಸಿದರೆ ಇಲ್ಲಿ ಚಾಲನಾ ಸಿಬ್ಬಂದಿಗಳ  ಕುಟುಂಬವೇ ವಕೀಲರನ್ನು ನೇಮಕಮಾಡಿಕೊಂಡು ಶಿಕ್ಷೆಯಿಂದ ಪಾರುಮಾಡಲು ಎಣಗಾಡುತ್ತಿವೆ.  ಹಾಗಾದರೆ ಇದರ ಹೊಣೆಯನ್ನು ಹೊರಬೇಕಿರುವುದು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಯಾವುದೇ ಕಾನೂನು ಹೋರಾಟ ಮಾಡುವುದಕ್ಕೆ ಮತ್ತು ಈಗ ಜೈಲು ಸೇರಿರುವ ಚಾಲನಾ ಸಿಬ್ಬಂದಿಗಳ  ಹೊರತರುವುದಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಇನ್ನು ಕೆಲ ಸಾರಿಗೆ ಸಂಘಟನೆಗಳು   ಜೈಲು ಸೇರಿರುವ ಚಾಲನಾ ಸಿಬ್ಬಂದಿಗಳ  ಹೊರತರುವುದಕ್ಕೆ ಶ್ರಮಿಸುತ್ತಿರುವ ಬಗ್ಗೆಯೂ ಮಾಹಿತಿ ಇದೆ. ಅದೇನೆ ಇರಲಿ ಸಂಸ್ಥೆಯ ನೌಕರರಿಗೆ ಆಗಿರುವ ಸಮಸ್ಯೆಯನ್ನು ಸಂಸ್ಥೆಯಿಂದಲೇ ಸರಿಪಡಿಸುವ ಕೆಲಸವಾಗಬೇಕು. ಅವರು ಕೂಡ ಸಂಸ್ಥೆಯ ಒಬ್ಬ ಉದ್ಯೋಗಿಯಾಗಿದ್ದು ಕರ್ತವ್ಯದಲ್ಲಿ ಇರುವಾಗ ಆಗಿರುವ ಆಕಸ್ಮಿಕ ಘಟನೆಯ ಜವಾಬ್ದಾರಿಯನ್ನು ಸಂಸ್ಥೆಯೂ ತೆಗೆದುಕೊಳ್ಳಬೇಕಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು