NEWSನಮ್ಮಜಿಲ್ಲೆನಮ್ಮರಾಜ್ಯ

KSRTC- ತಪ್ಪುಮಾಡಿದವರ ಬೆತ್ತಲೆಗೊಳಿಸಲು ನಾವು ಸಿದ್ಧ ನೀವು ಸಿದ್ಧರಿದ್ದೀರಾ?: ಜಯರಾಮ್‌ ರಾಥೋಡ್‌ ಸವಾಲು

ಒಗ್ಗಟ್ಟಾಗಿ ಸೇರಿದಾಗಲೆಲ್ಲ ಒಂದೊಂದು ಕಥೆ ಸೃಷ್ಟಿ: ಕೂಟದ ವಿರುದ್ಧ ಕುಸುಮಾ ಓಂ ಪ್ರಕಾಶ್‌ ಆರೋಪಕ್ಕೆ ತಿರುಗೇಟು

ಕುಸುಮಾ ಓಂ ಪ್ರಕಾಶ್‌, ಜಯರಾಮ್‌ ರಾಥೋಡ್‌.
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಒಗ್ಗಟ್ಟಾಗಿ ಸೇರಿದಾಗಲೆಲ್ಲ ಒಂದೊಂದು ಕಥೆ ಸೃಷ್ಟಿ ಮಾಡಿ ಕಾರ್ಮಿಕರನ್ನು ಒಡೆದು ಆಳುವ ನೀತಿ ಅನುಸರಿಸುವ ಕೆಲಸ ಕೂಟದವದ್ದಾಗಿದೆ ಎಂದು ಕುಸುಮಾ ಓಂ ಪ್ರಕಾಶ್‌ ಎಂಬುವರು ಆರೋಪ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿರುವ ಅವರು, ಮುಂದುವರಿದು ಜಂಟಿಯಾಗಿ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆದು ಮಾತನಾಡುವಾಗ ಚಂದ್ರ ನನ್ನ ಮಾತು ನೀವೆಲ್ಲ ಕೇಳಿ ಎಂದು ಬಂದಿರುವ ಎಲ್ಲ ಹಿರಿಯ ನಾಗರಿಕರಿಗೆ ತಾಕೀತು ಮಾಡಿ ಅವರನ್ನು ಉದ್ರೇಕಗೊಳಿಸಿ ಎದ್ದು ಆಚೆ ಬಂದು ಅವರು ಹೀಗೆಂದರು ಹಾಗೆಂದರು ಎಂದು ಸುಳ್ಳು ಸುಳ್ಳು ಹೇಳಿ ಅಪಪ್ರಚಾರ ಮಾಡಿ ಯಾವ ಕೆಲಸ ಆಗದೇ ಕಾರ್ಮಿಕ-ಕಾರ್ಮಿಕರ ಮಧ್ಯೆ ಕಿತ್ತಾಟ ಮಾಡುವಂತೆ ಮಾಡುತ್ತಾನೆ ಎಂದು ಏಕವಚನದಲ್ಲೇ ದೂರಿದ್ದಾರೆ.

ಇನ್ನು ಇದುವರೆವಿಗೂ ನಡೆದಿದ್ದು ಇದೇ ಫೇಸ್‌ಬುಕ್‌ನಲ್ಲಿ ಸಾಲದೇ ವಿಜಯಪಥ ಎಂಬ ದಿನ ಪತ್ರಿಕೆಯಲ್ಲಿ ಹಾಕಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಈಗ ಒಂದಾಗೋದು ಹೇಗೆ? ಬೇಕೆಂದೇ ಮಾಡುತ್ತಿರುವ ಇವರ ಸುಳ್ಳುಗಳನ್ನು ಕೇಳಿಸಿಕೊಳ್ಳುತ್ತಿರುವವರ ಸಂಖ್ಯೆ ಎಷ್ಟು 99.9% ಅಲ್ಲವೇ? ಹಾಗಿದ್ದರೆ ಏಕಾಏಕಿ ಇವರೇ ಎಲ್ಲವನ್ನೂ ಮಾಡುತ್ತಾರೆ ಅದನ್ನು ಚಾತಕ ಪಕ್ಷಿಯಂತೆ ಕಾದು ನೋಡಬೇಕಿದೆ.. ನೋಡಿ ಅಷ್ಟೇ ಎಂದು ಸಾರಿಗೆ ನೌಕರರ ಕಾಲನ್ನು ಎಳೆದಿದ್ದಾರೆ.

ಅಲ್ಲದೆ ನಯಾ ಪೈಸೆ ಕೊಡಿಸಲಾಗುವುದಿಲ್ಲ ಕೂಟದವರಿಂದ ಬರೆದಿಟ್ಟು ಕೊಳ್ಳಿ. ಈಗಾಗಲೇ 2020ರ ಉದಾಹರಣೆ ಕಣ್ಣುಮುಂದೆ ಇದೆ ಮುಂದೆಯೂ ಇದೇರೀತಿ ಇರೋದು ಇವರ ಹಾರಾಟ ತೂರಾಟ ಚೀರಾಟ ನೋಡ್ತಾ ಇರಿ ಎಂದು ವ್ಯಂಗ್ಯವಾಡಿದ್ದಾರೆ.

ಕುಸುಮಾ ಓಂ ಪ್ರಕಾಶ್‌ ಅವರ ಈ ಆರೋಪ ವ್ಯಂಗ್ಯಕ್ಕೆ ಕೂಟದ ಪದಾಧಿಕಾರಿ ಜಯರಾಮ್‌ ರಾಥೋಡ್‌ ಅವರು, ತಿರುಗೇಟು ನೀಡಿದ್ದಾರೆ. ನೀವು ಬರೆದಿರುವುದು ಅರ್ಥವಾಯಿತು. ಈಗ ಒಂದು ಕೆಲಸ ಮಾಡಿ, ನಾವು ಸುಳ್ಳುಬುರುಕರೋ ನೀವು ಸುಳ್ಳುಬುರುಕರೋ ಎಂಬುದನ್ನು ನೌಕರರ ಮುಂದೆಯೇ ಬಹಿರಂಗಪಡಿಸೋಣ.

ಅದಕ್ಕೆ ಒಂದು ವೇದಿಕೆ ಆಯೋಜನೆ ಮಾಡೋಣ. ಆ ವೇದಿಕೆಯಲ್ಲಿ ಕೂಟದ ಏನು ಅಜಂಡವಿದೆ, ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಿಗೂ ಇರುವ ವೇತನ ವ್ಯತ್ಯಾಸದ ಬಗ್ಗೆ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಪಕ್ಷ ಏನು ಭರವಸೆ ಕೊಟ್ಟಿದೆಯೋ ಅದೇ ರೀತಿ ಸಾರಿಗೆ ನೌಕರರ ಧ್ಯೇಯೋದ್ದೇಶಗಳು ನಿಮಗೂ ಬೇಕಿದೆ ಅನ್ನೋದೆ ಆಗಿದ್ದರೆ ಈ ವೇದಿಕೆಯಲ್ಲಿ ಬಹಿರಂಗ ಪಡಿಸಲು ಮುಂದಾಗಿದೆ.

ಆ ವೇದಿಕೆಯಲ್ಲಿಯೇ ನೀವು ಈ ಹಿಂದೆ ಚಂದ್ರು ಒಂದು ತಂಡ ಮಾಡಿಕೊಂಡು ನಮ್ಮ ಮಾತಿಗೆ ಬೆಲೆಕೊಡದೆ ಎದ್ದು ಬಂದುಬಿಟ್ರು ಅನ್ನೋ ಆರೋಪ ಮಾಡುತ್ತಿದ್ದೀರಲ್ಲ ಆ ಬಗ್ಗೆ ನೀವು ಪ್ರಮಾಣ ಮಾಡಿ ಏನಂತ ಅಂದರೆ ಪಕ್ಕದ ರಾಜ್ಯಗಳಲ್ಲಿ ನೌಕರರ ಧ್ಯೇಯೋದ್ದೇಶದಂತೆ ಕಾರ್ಮಿಕರಿಗೆ ಹೋರಾಟ ಅಥವಾ ಚಳವಳಿ ಮಾಡಿ ಅಲ್ಲಿನ ಕಾರ್ಮಿಕರಿಗೇನು ಒಳ್ಳೆದು ಮಾಡಿದ್ದಾರೆ. ಅದೇರೀತಿ ನಾವು ಕೂಡ ನಿಷ್ಕಲ್ಮಶ ಮನಸ್ಸಿನಿಂದ ಪ್ರಮಾಣ ಮಾಡಿ ಆ ಸಭೆಗೆ ನಾನು ಕೂಡ ಬರುತ್ತೇನೆ.

ಅಲ್ಲದೆ ಆ ವೇದಿಕೆಯಲ್ಲೇ ಯಾರು ತಪ್ಪು ಸರಿ ಸಂದೇಶ ನೀಡುತ್ತಿದ್ದಾರೆ ಎಂಬುದ ಬಗ್ಗೆ ಚರ್ಚೆ ಮಾಡೋಣ. ಅದನ್ನು ಆಡಿಯೋ ವಿಡಿಯೋಗಳನ್ನು ಚಿತ್ರೀಕರಣ ಮಾಡೋಣ. ಅಲ್ಲೆ ಯಾರು ನೌಕರರನ್ನು ಯಾಮಾರಿಸಿದ್ದಾರೆ ಎಂಬುವುದು ಸಾಬೀತಾಗುತ್ತದೋ ಅವರನ್ನು ಬೆತ್ತೆಲೆಗೊಳಿಸೋಣ. ಇದಕ್ಕೆ ನಾವು ಸಿದ್ಧರಿದ್ದೇವೆ ನೀವು ಸಿದ್ಧರಿದ್ದಾರ. ಇಲ್ಲವೆಂದರೆ ದಿನಬೆಳಗಾದರೆ ಬಯಿಬಡಿದುಕೊಳ್ಳುವುದನ್ನು ಬಿಟ್ಟು ಸೈಲೆಂಟಾಗಿರಿ ಎಂದು ತಾಕೀತು ಮಾಡಿದ್ದಾರೆ.

ಎಚ್ಚರಿಕೆ: ವಿಜಯಪಥದ ಬಗ್ಗೆ ಸುಖಸುಮ್ಮನೇ ಯಾರನ್ನೋ ಓಲೈಸಿಕೊಳ್ಳುವುದಕ್ಕೆ ಅಪಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಹೀಗೆಯೇ ಮುಂದುವರಿದರೆ ಅಂಥವರ ವಿರುದ್ಧ ಕಾನೂನು ಕ್ರಮಕ್ಕೆ ವಿಜಯಪಥ ಕಾನೂನು ವಿಭಾಗವು ಮುಂದಾಗಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು