NEWSನಮ್ಮಜಿಲ್ಲೆನಮ್ಮರಾಜ್ಯ

KSRTC ತುಮಕೂರು: ಅಮ್ಮ ನಿಧನರಾಗಿದ್ದಕ್ಕೆ  ನೌಕರನಿಗೆ ರಜೆ ಬದಲು ಮೆಮೋ ಕೊಟ್ಟು ಅಮಾನವೀಯ ವರ್ತನೆ ತೋರಿದ  ಡಿಸಿ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಿಗಮಗಳಲ್ಲಿ ಅಧಿಕಾರಿಗಳು V/s ನೌಕರರು ಎಂಬಂತಹ ಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿ ನೌಕರರ ಭಾವನೆಗಳ ಜತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಕಿರುಕುಳದ ಮೇಲೆ ಕಿರುಕುಳ ನೀಡುವುದರಲ್ಲಿ ನಿರತರಾಗಿದ್ದು ಅಮಾನವೀಯ ವರ್ತನೆ ಹೆಚ್ಚಾಗಿದೆ.

ಈ ಸಾರಿಗೆ ನಿಗಮಗಳಲ್ಲಿರುವ ಬಹುತೇಕ ಅಧಿಕಾರಿಗಳು ಅಪ್ಪ ಅಮ್ಮನಿಲ್ಲದೆ ತಾವೇ ತಾವಾಗಿ ಜನ್ಮತಾಳಿ ಭುವಿಗೆ ಬಂದಂತೆ  ವರ್ತಿಸುತ್ತಿದ್ದಾರೆ. ಅಂದರೆ ಇವರಿಗೆ ಅಪ್ಪ ಅಮ್ಮನ ಪ್ರೀತಿ ವಾತ್ಸಲ್ಯ, ಸಹೋದರ, ಸಹೋದರಿಯರ ಮತ್ತು ಸಂಬಂಧಿಕರ ಒಡನಾಟ  ಇಲ್ಲದ ರೀತಿಯಲ್ಲಿ ಬೆಳೆದವರಂತೆ ಕಾಣುತ್ತಿದೆ.

ಇದಕ್ಕೇನೋ ಗೊತ್ತಿಲ್ಲ? ನೌಕರರ ಅಮ್ಮ ಅಪ್ಪ ಮರಣಹೊಂದಿದರೂ ಅವರಿಗೆ ರಜೆ ಕೊಡದೆ ಕಾಡುತ್ತಿದ್ದಾರೆ ಅನಿಸುತ್ತಿದೆ. ನೋಡಿ ಇತ್ತೀಚೆಗಷ್ಟೆ ಅಂದರೆ ಇದೇ ಸೆ.6ರಂದು “ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿಗಳು!” ಎಂಬ ಶೀರ್ಷಿಕೆಯಡಿ ವರದಿ ಪ್ರಸಾರವಾಗಿದೆ.

ಈ ಬೆನ್ನಲ್ಲೇ ಇದೇ ರೀತಿ ಕಿರುಕುಳಕ್ಕೆ ಒಳಗಾಗಿದ್ದ ನೌಕರರೊಬ್ಬರ ಪ್ರಕರಣ ಮುಚ್ಚಿಹೋಗುತ್ತಿತ್ತು. ಆದರೆ, ವಿಜಯಪಥದಲ್ಲಿ ಈ ವರದಿ ಪ್ರಸಾರವಾದ್ದರಿಂದ ತಮಗಾದ ನೋವು ಕಿರುಕುಳವನ್ನು ಎಳೇಎಳೆಯಾಗಿ ಬಿಚ್ಚಿಟ್ಟಿದ್ದಾರೆ ತಿಪಟೂರು ಘಟಕದ ಸಾರಿಗೆ ನೌಕರ.

ಹೌದು! ವಿಜಯಪಥ ಡಿಜಿಟಲ್‌ ಮೀಡಿಯಾದಲ್ಲಿ ವರದಿ ಬರುತ್ತಿದ್ದಂತೆ ತುಮಕೂರು ವಿಭಾಗದ ತಿಪಟೂರು ಘಟಕದಲ್ಲಿ ಮುಚ್ಚಿ ಹೋಗಿದ್ದ ಅದೇ ರೀತಿಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ನಿರ್ವಾಹಕರು ಡಿಜಿಟಲ್‌ ಮೀಡಿಯಾ ಗಮನಕ್ಕೆ ತಂದಿದ್ದಾರೆ.

ನಿಗಮದ ತುಮಕೂರು ವಿಭಾಗದ ತಿಪಟೂರು ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿರುವ ಮಂಜುನಾಥ್ ಅವರು 15.6.2024 ರಂದು ಡ್ಯೂಟಿ ಮೇಲೆ ಇದ್ದ ಸಂದರ್ಭದಲ್ಲಿಯೇ ಅವರ ತಾಯಿ ನಿಧನರಾಗಿರುವ ಬಗ್ಗೆ ಮಾಹಿತಿ ಬಂದಿದ್ದು ಆ ವಿಷಯವನ್ನು ಘಟಕದ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ತಿಳಿಸಿ ಮಾರ್ಗ ಮಧ್ಯದಲ್ಲೇ ಬೇರೆ ವ್ಯವಸ್ಥೆ ಮಾಡಿದ ಬಳಿಕ ಅವರ ತಾಯಿಯ ಅಂತ್ಯಕ್ರಿಯೆಗೆ ಹೋಗಿದ್ದಾರೆ.

ಇನ್ನು ಇದಕ್ಕೂ ಮೊದಲು ಮಂಜುನಾಥ್ ಅವರ ತಾಯಿ ಅನಾರೋಗ್ಯದ ಕಾರಣ ಮುಂಗಡವಾಗಿ ಜೂ.16 ಮತ್ತು 17ರಂದು ಎಚ್‌ಆರ್‌ಎಂಎಸ್ ಮೂಲಕ ರಜೆ ಪಡೆದುಕೊಂಡಿದ್ದರು. 18ನೇ ತಾರೀಖು ಅವರ ವಾರದ ರಜೆ ಇತ್ತು.

ಇನ್ನು ಜೂ.18ರಂದು ಮಂಜುನಾಥ್‌ ಸ್ನೇಹಿತರ ಮೂಲಕ ಘಟಕಕ್ಕೆ ರಜೆ ಅರ್ಜಿ ಸಲ್ಲಿಸಿ, ನಮ್ಮ ತಾಯಿಯ ಕಾರ್ಯಗಳೆಲ್ಲವೂ ಮುಗಿಯಲು 20 ದಿನಗಳು ಬೇಕಾಗಿರುವುದರಿಂದ 20 ದಿನಗಳ ರಜೆ ಕೊಡಬೇಕು ಎಂದು ಮನವಿ ಮಾಡಿದ್ದರು. ಆದರೆ ಅದನ್ನು ಪಡೆದುಕೊಂಡರೂ ರಜೆ ಮಂಜೂರು ಮಾಡದೆ ಘಟಕದ ಸಂಚಾರಿ ಶಾಖೆ ಹಾಗೂ ಘಟಕ ವ್ಯವಸ್ಥಾಪಕರು ಗೈರುಹಾಜರಿ ತೋರಿಸಿ ಅಮಾನವೀಯ ವರ್ತನೆ ತೋರಿದ್ದಾರೆ.

ಅಷ್ಟೇ ಅಲ್ಲದೇ ಒಬ್ಬ ಸಹೋದ್ಯೋಗಿಯ ತಾಯಿ ನಿಧನರಾದರೂ ಮಾನವೀಯತೆ ತೋರದೆ ತಮ್ಮ ಅಧಿಕಾರದ ದರ್ಪದಿಂದ ಅವರ ಮೇಲೆ ಗೈರು ಹಾಜರಿ ಪ್ರಕರಣವನ್ನು ದಾಖಲಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಜುನಾಥ್‌ ಅವರಿಗೆ ಆಪಾದನಾ ಪತ್ರವನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳು ನೀಡಿದ್ದಾರೆ.

ಇನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್‌ ಅವರು ಕೂಡ ಈ ಬಗ್ಗೆ ಪರಿಶೀಲಿಸದೆ ಡಿಪೋ ಮಟ್ಟದ ಅಧಿಕಾರಿಗಳು ಸಲ್ಲಿಸುವ ವರದಿ ಆಧರಿಸಿ ಈ ರೀತಿ ಆಪಾದನ ಪತ್ರವನ್ನು ನೀಡಿ ಇವರು ಕೂಡ ಮಾನವೀಯತೆ ಮರೆತು ನಡೆದುಕೊಂಡಿರುವುದು ಎಷ್ಟು ಸರಿ. ಅಂದರೆ ಈ ಡಿಸಿ ಕೂಡ ಡಿಪೋ ಮಟ್ಟದ ಅಧಿಕಾರಿಗಳಂತೆ ನೌಕರರ ಮೇಲೆ ದಬ್ಬಾಳಿಕೆ ಮೆರೆಯಲು ನಿಂತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ.

ಇನ್ನು ಡಿಪೋಗಳಲ್ಲಿ ಈ ರೀತಿ ನಡೆಯುತ್ತಿದ್ದರೆ ಚಾಲನಾ ಸಿಬ್ಬಂದಿಗಳು ಯಾವ ರೀತಿ ಕೆಲಸ ನಿರ್ವಹಿಸಬೇಕು? ಅವರಲ್ಲಿ ಮನೋವ್ಯತೆ ಉಂಟಾಗಿ ಕಿನ್ನತೆಗೆ ಜಾರುತ್ತಿದ್ದು ಅಪಘಾತಗಳ ಸಂಖ್ಯೆ ಏರುತ್ತಿದೆ. ಇದೇ ರೀತಿ ಪದೇಪದೇ ಅಧಿಕಾರಿಗಳು ನಡೆದುಕೊಂಡರೆ ಹೇಗೆ? ಡಿಸಿ ಡಿಎಂಗಳು ಮತ್ತು ಅವರ ಅಧೀನದಲ್ಲಿ ಕೆಲಸ ಮಾಡುವ ಇತರ ಅಧಿಕಾರಿಗಳು/ ಸಿಬ್ಬಂದಿಗಳ ದರ್ಪಕ್ಕೆ ಕಡಿವಾಣ ಹಾಕಲು ಮೇಲಧಿಕಾರಿಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ?

ಸಾರಿಗೆ ಸಚಿವರು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಏನು ಮಾಡುತ್ತಿದೆ ಎಂಬುವುದೇ ಗೊತ್ತಾಗುತ್ತಿಲ್ಲ. ಇನ್ನಾದರೂ ಈ ರೀತಿ ನೌಕರರಿಗೆ ಕಿರುಕುಳ ಕೊಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ನೊಂದ ನೌಕರರು ಒತ್ತಾಯಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು