NEWSನಮ್ಮಜಿಲ್ಲೆನಮ್ಮರಾಜ್ಯ

KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃಷ್ಣ ಘೋಷಣೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ವೇಳೆ ಏನು ಕಾಂಗ್ರೆಸ್‌ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಸಾರಿಗೆ ನೌಕರರಿಗೆ ಭರವಸೆ ಕೊಟ್ಟಿರುವ ಭರವಸೆಯನ್ನು ಈಡೇರುಸುವುದಕ್ಕೆ ನಮ್ಮ ಪಕ್ಷ ಸಿದ್ಧವಿದೆ ಎಂದು ಪಕ್ಷದ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಪ್ರೊ. ಕೆ.ಈ. ರಾಧಾಕೃಷ್ಣ ಘಂಟಘೋಷವಾಗಿ ಹೇಳಿದರು.

ಸಾರಿಗೆ ನೌಕರರ ಒಕ್ಕೂಟ ನಗರದ ಟೌನ್‌ಹಾಲ್‌ನಲ್ಲಿ ಇಂದು ಆಯೋಜಿಸಿದ್ದ ಸಾಧಕರಿಗೆ ಮತ್ತು ಮುಷ್ಕರ ವೇಳೆ ನಿವೃತ್ತರಾದ ನೌಕರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೌಕರರ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾರಿಗೆ ಇಲಾಖೆ ನೌಕರರ ಮತ್ತು ನಿಗಮದ ನೌಕರರ ವಿಚಾರ ಬಂದಾಗ ವೇತನದಲ್ಲಿ ವ್ಯತ್ಯಾಸವಿರುವುದು ಕಾಣುತ್ತಿದೆ. ಹೀಗಾಗಿ ಅಂದು ಪ್ರಣಾಳಿಕೆ ಸಿದ್ಧಪಡಿಸುವ ಸಮಯದಲ್ಲಿ ನಾನು ಸುಲಭವಾಗಿ ಕೂಟದ ಪದಾಧಿಕಾರಿಗಳು ತಂದ ಬೇಡಿಕೆಯನ್ನು ಒಪ್ಪಿಕೊಳ್ಳಲಿಲ್ಲ. ಕಾರಣ ದಾಖಲೆಗಳು ಬೇಕು ಎಂದು. ಅದನ್ನು ಚಂದ್ರು ಅವರು ಕೂಡಲೇ ಒದಗಿಸಿದ್ದರಿಂದ ಒಪ್ಪಿ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಹೀಗಾಗಿ ಈ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಹೇಳಿದರು.

ನಾನು ಮೊದಲು ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಗಳ ಶ್ರಮ ಮಾತ್ರ ಹೆಚ್ಚಿದೆ ಎಂದು ಅಂದುಕೊಂಡಿದ್ದೆ. ಆದರೆ, ಇದರ ಒಳವೊಕ್ಕು ನೋಡಿದಾಗ ಇಲ್ಲಿ ಯಾರ ಶ್ರಮ ಹೆಚ್ಚು ಎಂಬುದರ ಅರಿವಾಯಿತು. ಹೀಗಾಗಿ ನೌಕರರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂದು ಹೇಳಿದರು.

ಇನ್ನು ಸಾರಿಗೆ ನೌಕರರ ವರ್ಗವೇ ಸಮಾಜದಲ್ಲಿ ಒಂದು ವರ್ಗ. 1.06ಲಕ್ಷ ಜನ ಅಂದರೆ ಕುಟುಂಬದ 5 ಸದ್ಯರು ಸೇರಿದರೆ 5 ಲಕ್ಷ ಜನರಿರುವ ಒಂದು ಗುಂಪು ಎಂದರೂ ತಪ್ಪಾಗುವುದಿಲ್ಲ. ಹೀಗಾಗಿ ಅಂದು ಸಿದ್ದರಾಮಯ್ಯ ಅವರಿಗೆ ಇದನ್ನು ವಿವರಿಸಿದೆ.

ಸಾರಿಗೆ ನಿಗಮಗಳಲ್ಲಿ ಶೇ.90ರಷ್ಟು ಜನ ಒಬಿಸಿ, ಎಸ್‌ಸಿ, ಎಸ್ಟಿ ಜನವಿದ್ದಾರೆ ಎಂದು ತಿಳಿಸಿ ಅವರಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಹೇಳಿದೆ ಕೂಡಲೇ ಸಿದ್ದರಾಮಯ್ಯ ಅವರು ಪ್ರಣಾಳಿಕೆಯಲ್ಲಿ ಸೇರಿಸಿ ಎಂದು ಹೇಳಿ ಸೇರಿಸಿದ್ದಾರೆ. ಹೀಗಾಗಿ ಈ ಭರವಸೆಯನ್ನು ಈಡೇರಿಸುತ್ತೇವೆ ಯಾರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಇನ್ನು ರಾಜ್ಯದಲ್ಲಿ 76 ಬೇರೆ ಬೇರೆ ನಿಗಮಗಳಿವೆ ಅವುಗಳಲ್ಲಿರುವಂತೆ ಸಮಾನವಾದ ಎಲ್ಲ ಸವಲತ್ತುಗಳನ್ನು ಪಡೆಯುವುದು ನಮ್ಮ ಅಂದರೆ ಸಾರಿಗೆ ನೌಕರರ ಹಕ್ಕಷ್ಟೇ ಅಲ್ಲ ಮಾನವೀಯ ಹಕ್ಕು ಕೂಡ ಆಗಿದೆ. ಇದನ್ನು ಮಾಡೇ ಮಾಡುತ್ತೇವೆ ಎಂದು ಹೇಳಿದರು.

ವಿಜಯಪಥದಲ್ಲಿ ಬಂದ ಸುದ್ದಿ ಪ್ರಸ್ತಾಪ ಮಾಡಿದ ರಾಧಾಕೃಷ್ಣ: ಎಟಿಐ ಒಬ್ಬರು ಹೋಟೆಲ್‌ಗೆ ಹೋಗಿ ಚಾಲನ ಸಿಬ್ಬಂದಿಯೊಬ್ಬರಿಗೆ ಫೋನ್‌ ಮಾಡಿ ಊಟಕ್ಕೆ ಫೋನ್‌ ಫೇ ಮಾಡುವುದಕ್ಕೆ ಕೇಳಿದ ಬಗ್ಗೆ ವಿಜಯಪಥದಲ್ಲಿ ವರದಿ ಪ್ರಕಟವಾಗಿರುವುದರ ಬಗ್ಗೆ ಪ್ರಸ್ತಾಪಿಸಿ, ಅಧಿಕಾರಿಗಳು/ ಸಿಬ್ಬಂದಿಗಳು ಯಾವ ಮಟ್ಟಕ್ಕೆ ಇಳಿದಿದ್ದಾರೆ ನೋಡಿ ಎಂದು ಬೇಸರ ವ್ಯಕ್ತಪಡಿಸಿದರು.

ಚಾಲನಾ ಸಿಬ್ಬಂದಿಗಳಿಗೆ ಸೊಂಟ, ಮಂಡಿ ನೋವು: ಇನ್ನು ನಿರಂತವಾಗಿ 8 ರಿಂದ 12 ಗಂಟೆಗಳ ವರೆಗೆ ಕೆಲಸ ಮಾಡುತ್ತಿರುವ ಚಾಲಕರು ಮತ್ತು ನಿರ್ವಾಹಕರಿಗೆ ಸೊಂಟ- ಮಂಡಿ ನೋವು ಹೆಚ್ಚಾಗಿ ಕಾಡುತ್ತಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ಸಿಗವಂತ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಇನ್ನು ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ. ಈ ಬಗ್ಗೆ ಯಾರು ಯೋಚನೆ ಮಾಡದೆ ನೆಮ್ಮದಿಯಿಂದ ನಿಮ್ಮ ಕೆಲಸ ನೀವು ಮಾಡಿ ಎಂದು ಕೊನೆಯಲ್ಲಿ ಹಳೆ ತಮ್ಮ ಮಾತುಗಳನ್ನು ಮುಗಿಸಿದರು ರಾಧಾಕೃಷ್ಣ.

1 Comment

  • ರಾಧಾಕೃಷ್ಣ ಸಾರ್, ನಾನು ಒಬ್ಬ ನಿವೃತ್ತ ನೌಕರ, ಈಗ ಸಮಾನ ವೇತನ ಸಿಕ್ಕರೆ ನನಗೇನು ಲಾಭವಿಲ್ಲ. ಆದರೆ ನಾನು ದುಡಿದಂತ ಸಂಸ್ಥೆಯಲ್ಲಿನ ನೌಕರರಿಗೆ ಸಮಾನ ವೇತನ ಸಿಕ್ಕರೆ ನನ್ನಷ್ಟು ಸಂತೋಷ ಪಡುವ ವೆಕ್ತಿ ಯಾರೂ ಇಲ್ಲ. ನಾನು ಸಂಸ್ಥೆಗೆ ಸೇರಿದಾಗ ನಮ್ಮ ವೇತನ ಸರ್ಕಾರಿ ನೌಕರರಿಗಿಂತ ಹೆಚ್ಚಿತ್ತು, ಆದರೆ ಬರಬರುತ್ತಾ 4ವರ್ಷಗಳಿಗೊಮ್ಮೆ 4, % 5% ಮಾತ್ರ ಏರಿಕೆ ಮಾಡಿ ನಮ್ಮನ್ನು ಮೂಲೆ ಗುಂಪು ಮಾಡಿಬಿಟ್ರು, ಅನ್ಯಾಯವನ್ನು ಪ್ರಶ್ನೆ ಮಾಡಬೇಕಾದ ನಾಯಕ ಶಿಖಾಮಣಿಗಳು ತಮ್ಮ ಸ್ವಾರ್ಥಕ್ಕಾಗಿ ಇದಕ್ಕೆಲ್ಲ ಸಮ್ಮತಿ ಸೂಚಿಸಿ ನೌಕರರ ಬಾಯಲ್ಲಿ ಮಣ್ಣು ಹಾಕಿಬಿಟ್ರು,ಸರ್ಕಾರಿ ನೌಕರಿಯ ಆಶ್ವಾಸನೆ ಕೊಟ್ಟ ಬೇವರ್ಸಿಗಳು ವಚನ ಭ್ರಷ್ಟಾರಾಗಿ ಅಧಿಕಾರ ಕಳಕೊಂಡ್ರು. ಈಗ ನೀವು ಇವರ ಕಷ್ಟಗಳನ್ನು ಅರಿತು ಸರಿಸಮಾನ ವೇತನ ಕೊಡುತ್ತೇವೆಂದು ಪ್ರಣಾಳಿಕೆಯಲ್ಲಿ ಸೇರಿಸಿ ಈಗ ಖಂಡಿತ ಕೊಡಿಸುತ್ತೇನೆ ಎಂದು ಹೇಳಿರುವುದು ನೌಕರರಲ್ಲಿ ಮಿಂಚಿನ ಸಂಚಾರ ಉಂಟು ಮಾಡಿರುತ್ತೀರಿ. ಅದು ನೆರವೇರಿಸಿ ನೌಕರರಿಗೆ ಒಳ್ಳೆಯದಾಗಲಿ ಅಂತ ಪ್ರಾರ್ಥಿಸುತ್ತೇನೆ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು