NEWSನಮ್ಮಜಿಲ್ಲೆನಮ್ಮರಾಜ್ಯಲೇಖನಗಳು

KSRTC: ನಮ್ಮ ಸರಿ ಸಮಾನ ವೇತನ ಬೇಡಿಕೆಗೆ ತಣ್ಣೀರು ಎರಚಿತೆ ಸರ್ಕಾರ….!? ಎಡವಿತೆ ಕೂಟ..?

ವಿಜಯಪಥ ಸಮಗ್ರ ಸುದ್ದಿ

ಸಾರಿಗೆ ನಿಗಮಗಳ ಆಡಳಿತ ಮಂಡಳಿ ಹಾಗೂ ಸರ್ಕಾರ ಸಾರಿಗೆ ನೌಕರರ ಜೀವನದ ಸುಖ, ಸಂತೋಷ್, ಬಾಳಿನ ನೆಮ್ಮದಿ ಹಾಳು ಮಾಡಿ ಇಲ್ಲಸಲ್ಲದ ಮಾನಸಿಕ ಕಿರುಕುಳ ನೀಡುವುದರ ಜೊತೆಗೆ, ಸಾಂವಿಧಾನಿಕ ಕಾನೂನುಗಳಿಗೆ ಮಾನ್ಯತೆ ನೀಡದೆ ನಮ್ಮ ಹಕ್ಕುಗಳಾದ ಸಮಾನತೆ, ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ.

ಇನ್ನು ಮನಗೆ ಮೂಲಭೂತ ಸೌಕರ್ಯ, ನಿಗಮಗಳ ಅಭಿವೃದ್ಧಿ ಕಾರ್ಯ ಕಡೆ ಗಮನ ನೀಡದೇ ಸಾರಿಗೆ ನೌಕರರು ಆತ್ಮಹತ್ಯೆ ಮಾಡಿ ಕೊಳ್ಳುವ ಪರಿಸ್ಥಿತಿಗೆ ದುಡಿರುವ ಕಾರ್ಯಾಂಗ ಹಾಗೂ ಶಾಸಕಾಂಗ ತನ್ನ ದರ್ಪ ಮೆರೆಯುತ್ತಿವೆ. ಇಂತಹ ಸಾಹಸಕ್ಕೆ ಕೆಲವೊಂದು ಸಂಘಟನೆಗಳು ಹಾಗೂ ನಾಯಕರು ಸಹಾಯ ಹಾಗೂ ಬೆಂಬಲವಾಗಿ ನಿಂತುಕೊಂಡಿರುವುದು ವಿಪರ್ಯಾಸ.

ಸಾರಿಗೆ ನೌಕರರ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಆಯೋಗ ಮಾದರಿಯಲ್ಲಿ ನೀಡಬೇಕೆಂದು ಮನವಿ, ಮುಷ್ಕರ ಮಾಡಿದ ಪ್ರತಿಫಲ ವಜಾ, ಅಮಾನತು, ವರ್ಗಾವಣೆ, FIR ಹೀಗೆ ಹತ್ತಾರು ಶಿಕ್ಷೆಗಳನ್ನು ಕೊಟ್ಟರು. ಆದರೂ ಸಹಿತ ಸಾರಿಗೆ ನೌಕರರು ಪ್ರಜಾ ಪ್ರಭುತ್ವದಲ್ಲಿ ಶಾಂತಿಯುತವಾಗಿ ಅನೇಕ ರೀತಿಯಲ್ಲಿ ಸತ್ಯಾಗ್ರಹ, ಸಮಾವೇಶ ಮಾಡಿದರು. ಈ ವೇಳೆ ಸರ್ಕಾರ ಕೊಡುತ್ತಿರುವ ಭರವಸೆಯನ್ನೇ ನಂಬಿ ಸ್ಪಂದಿಸುತ್ತಿರುವ ನೌಕರರು. ಈಗ ನಮ್ಮ ಕನಸು ನನಸಾಗದೇ ನನೆಗುದಿಗೆ ಬಿದ್ದಿದೆ.

ಸರ್ಕಾರ ಮಾತು ಕೊಟ್ಟಿರುವ ಹಾಗೂ 2020 ರಲ್ಲಿ ಲಿಖಿತವಾಗಿ ಕೊಟ್ಟಿರುವ ಬೇಡಿಕೆಗಳು ಈಡೇರಿಸುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಒಂದು ರೀತಿ ಮಾತು ತಪ್ಪಿರುವ ಬಿಜೆಪಿ ರಾಜ್ಯ ಸರ್ಕಾರ ಮೂರನ್ನು ಬಿಟ್ಟಂತೆ ವರ್ತಿಸುತ್ತಿದೆ. ಕಾರಣ ಬೆಳಗಾಂವಿ ಅಧಿವೇಶನ ಸಮಯದಲ್ಲಿ ಸಂಸ್ಥೆಯ ದೈನಂದಿನ ಕಾರ್ಯಾಚರಣೆಗೆ ಅಡಚಣೆ ಆಗದ ರೀತಿಯಲ್ಲಿ ಸಾಗರೋಪಾದಿಯಲ್ಲಿ ನೌಕರರ ಸೇರಿದ್ದು, ಇತಿಹಾಸ ಸೃಷ್ಟಿಸಿದರು ಇದು ಸರ್ಕಾರಕ್ಕೆ ನುಂಗಲಾರದ ತುಪ್ಪವಾಗಿ ಚಟಮಡಿಸಿ ಬಿಟ್ಟಿತು.

ಅಲ್ಲದೆ ಮತ್ತೊಮ್ಮೆ ಎಲ್ಲಿ 2021ರ ಏಪ್ರಿಲ್‌ ನೆನಪಿಸುತ್ತಾರೋ ಎಂಬ ಭಯದಲ್ಲಿ ಮತ್ತೆ 6 ತಿಂಗಳುಗಳ ಕಾಲ ಸಾರಿಗೆ ನೌಕರರು ಯಾವಿದೇ ಮುಷ್ಕರ ಮಾಡುವಂತಿಲ್ಲ ಎಂದು ತರಾತುರಿಯಲ್ಲಿ ಆದೇಶವನ್ನು ಹೊರಡಿಸಿ ನಮ್ಮ ಕೈಗಳನ್ನು ಕಟ್ಟಿಹಾಕಿದೆ. ಆದರೆ ಇದರ ಕೈ ಕಟ್ಟಿಹಾಕುವ ಕಾಲ ನಮಗೂ ಬರಲಿದೆ. ಆ ವೇಳೆ ನಾವು ಈ ಮಾನಗೇಡಿ ಸರ್ಕಾರಕ್ಕೆ ಪಾಠಕಲಿಸೋಣ ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಿರಿ. ಇಲ್ಲ ನಮ್ಮ ಕೋಪದ ಕೆಂಗಣ್ಣಿಗೆ ಗುರಿಯಾವುದು ಬೇಡ ಎಂದರೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಲೇ ಬೇಕು ಸ್ಪಂದಿಸಲಿದೆ ಎಂಬ ನಂಬಿಕೆ ಇಟ್ಟು ಕಾಯೋಣ.

ಇನ್ನು ಸಾರಿಗೆ ನೌಕರರು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಕೂಟದ ವತಿಯಿಂದ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹದಲ್ಲಿ , ಸರ್ಕಾರ ನಮ್ಮ ಬೇಡಿಕೆಗಳು ಈಡೇರಿಸುತ್ತದೆ ಎನ್ನುವ ಆಶಾ ಭಾವನೆಯಿಂದ ಬೆಳಗಾವಿಗೆ ಬಂದಿದ್ದರು. ಆದರೆ ನಮ್ಮ ಶಾಶ್ವತ ಪರಿಹಾರಗಳಲ್ಲೊಂದಾದ ವೇತನ ಆಯೋಗ ಮಾದರಿಯಲ್ಲಿ ವೇತನದ ಬೇಡಿಕೆಗೆ ಸರ್ಕಾರ ತಣ್ಣೀರು ಎರೆಚಿದೆ.

ಬೆಳಗಾಂವಿ ಅಧಿವೇಶನದಲ್ಲಿ ಸರ್ಕಾರದ ಮುಖವಾಡ ಕಳಚಿದೆ: ನಾಲ್ಕು ದಶಕಗಳಿಂದ ಸಂಸ್ಥೆಯಲ್ಲಿ ತಾರತಮ್ಯ, ಅಸಮಾನತೆ, ಅಂಧ ಕಾನೂನು ಹೋಗಲಾಡಿಸುವ ಪಕ್ಷ ಅದು ನಮ್ಮ ಸರ್ಕಾರ ಎಂದು ಸಾವಿರಾರು ನೌಕರರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಸರ್ಕಾರದ ಮುಖವಾಡ, ನಡೆ, ಬಡವರ ಕಾಳಜಿ ಎಷ್ಟು ಇದೆ ಎನ್ನುವುದು ಬೆಳಗಾಂವಿ ಅಧಿವೇಶನ ಸಂದರ್ಭದಲ್ಲಿ ಬಯಲಾಗಿದೆ.

ಈ ಸರ್ಕಾರದಲ್ಲಿ ಹಲವಾರು ಶಿಕ್ಷೆಗಳನ್ನು ಅನುಭವಿಸಿದವರು ವೇತನ ಆಯೋಗ ಮಾದರಿಯಲ್ಲಿ ವೇತನ ನೀಡಿದ್ದರೆ ಎಲ್ಲವನ್ನೂ ಮರೆತು ಸರ್ಕಾರದ ಮೇಲೆ ವಿಶ್ವಾಸ ಇರುತಿತ್ತು. ಆದರೆ ಇಂತಹ ಸರ್ಕಾರ ಮುಂದೆಂದೂ ಬರಲೇ ಬಾರದು ಎನ್ನುವ ತೀರ್ಮಾನಕ್ಕೆ ನಾವುಗಳು ಬರಬೇಕಾಗುವ ಎಲ್ಲ ಲಕ್ಷಣಗಳು ನಮ್ಮ ನೌಕರರಲ್ಲಿ ಮೂಡುವಂತೆ ಮಾಡಿದೆ. ಅಡ್ಡ ದಾರಿಯಲ್ಲಿ ಸರ್ಕಾರ ತನ್ನೆಲ್ಲಾ ಮುಖವಾಡವನ್ನು ಬಯಲು ಮಾಡಿಕೊಂಡಿದೆ.

ಕೆಟ್ಟ ಪರಿಣಾಮ  ಎದುರಿಸುವ ಕಾಲ ಸನ್ನಿಹಿತ: !! ಸರ್ವೇ ಜನ ಸುಖಿನೋ ಭವಂತು !! ಎನ್ನುವ ಮಂತ್ರದೊಂದಿಗೆ ಜನರ ಬಾಳಿಗೆ ಮುಳ್ಳಾಗಿರುವ ಸರ್ಕಾರ ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮವನ್ನು ಎದುರಿಸುವ ಕಾಲ ಸನ್ನಿಹಿತವಾಗಿದೆ ಮಿತ್ರರೇ, ಇಲ್ಲಿಯ ತನಕ ಏನೆಲ್ಲಾ ಆಗಿದ್ದನ್ನು ಮರೆಯದೆ ಮುಂದಿನ ದಿನಗಳಲ್ಲಿ ನಾವು ಏನು ಮಾಡಬೇಕು ಎನ್ನುವುದು ಜನವರಿ ಕೊನೆಯ ದಿನಗಳಲ್ಲೀ ತೀರ್ಮಾನಿಸೋಣ.

ಈಗಾಗಲೇ ಕೂಟದ ಯೋಜನೆಗಳು ಹಾಗೂ ಯೋಚನೆಗಳೂ ಎಲ್ಲೊ ಒಂದು ಕಡೆ ವ್ಯರ್ಥ ಆಗುತ್ತಿದೆ. ಕನಸುಗಳು ನನಸಾಗಿ ಉಳಿಯುತ್ತಿವೆ. ಮಧ್ಯಸ್ಥಿಕೆಯಲ್ಲಿ ಬಲವಾದ ವ್ಯಕ್ತಿತ್ವ ಹೊಂದಿರುವರ ಕೊರತೆ ಇದೆ ಎಂದು ನಮ್ಮೆಲ್ಲಾ ಸಾರಿಗೆ ನೌಕರರು ಮಾತನಾಡುತ್ತಿದ್ದಾರೆ. ಕೂಟದಲ್ಲಿ ಇನ್ಮುಂದೆ ಯಾವುದೇ ಕಾರಣಕ್ಕೂ ಹಿನ್ನಡೆ ಆಗದ ಹಾಗೆ ನೊಡ್ಕೊಳ್ಳಬೇಕು ಎನ್ನುವ ವಿಚಾರ ಕೆಲವು ವಿಭಾಗಗಳಿಂದ ಬರುತ್ತಿದೆ. ರಾಜ್ಯ ಕಮಿಟಿ ಎಷ್ಟರ ಮಟ್ಟಿಗೆ ಬದಲಾವಣೆ ತರುತ್ತದೆ ಎಂದು ಕಾದು ನೋಡಬೇಕು.

ಸದ್ಯದ ಮಟ್ಟಿಗೆ ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಂಘಟನೆಯು ಕೊರತೆ ಅನುಭವಿಸಬೇಕಾಗುತ್ತದೆ. ಈಗಾಗಲೇ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರೀಕ್ಷೆಪಟ್ಟಷ್ಟು ಸಫಲತೆ ಕಾಣದೇ ಇರುವುದಕ್ಕೆ ಎಲ್ಲರೂ ಘಾಸಿಗೊಂಡಿದ್ದಾರೆ. ನೌಕರರ ಮನದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿದೆ.

” ಸಂಘಟನೆ ಬಲ ಪಡಿಸಲು ಪಂಚ ಸೂತ್ರ “:  ಒಂದು ಸುಸಜ್ಜಿತವಾಗಿ ಘಟಕ, ವಿಭಾಗ, ವಲಯ ಮಟ್ಟದ ಪದಾಧಿಕಾರಿಗಳ ಆಯ್ಕೆ ನಿಯಮದ ಪ್ರಕಾರ. 2)ಸಂಘಟನೆಯು ಆರ್ಥಿಕವಾಗಿ ಬಲಗೊಳಿಸಬೇಕು. 3)ಸಮಾನ ಮನಸ್ಕರ ವೇದಿಕೆ ಇನ್ನಷ್ಟು ಬಲ ಗೊಳಿಸಬೇಕು. 4)ಎಲ್ಲ ವಿಭಾಗ, ಘಟಕ ವಲಯ ಮಟ್ಟದಲ್ಲಿ ಅಧಿಕಾರ ನೀಡಬೇಕು. 5)ಬೇರೆ ಸಂಘಟನೆಗಳಿಂದ ಬರುವವರನ್ನು ಸ್ವಾಗತಿಸಬೇಕು. ಕಾನೂನು ಸಲಹೆಗಾರ ನೇಮಿಸಿ ಅವರ ಮಾರ್ಗದಲ್ಲಿ ಮುನ್ನಡೆಯಬೇಕು. ಮಾತುಕತೆಯ, ಸಂಧಾನ ಏರ್ಪಡಿಸಬೇಕು.

ಸಂಘಟನೆಯ ಮುಖಂಡರು ಆದ್ಯತೆ ನೀಡಿ ಸಮಾನವಾಗಿ ಅಧಿಕಾರ, ನಿರ್ಧಾರ ತೆಗೆದುಕೊಳ್ಳುವ ಹಾಗೂ ಸಲಹೆ ಸೂಚನೆಗಳ ಮೇರೆಗೆ ಮುಂದುವರಿಯಬೇಕು. ಸಮಾನತೆ ಕಾಣುವುದರ ಜೊತೆಗೆ ಎಲ್ಲರ ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕು. ಇವೆಲ್ಲವೂ ಅಚ್ಚುಕಟ್ಟಾಗಿ ಮುಂದುವರಿದರೆ ಎಲ್ಲವೂ ಸಫಲತೆ ಕಾಣಲಿವೆ.

ಈಗಾಗಲೇ ನೌಕರರಲ್ಲಿ ಅಸಮಾನತೆ, ಹತಾಶೆ, ಅಸೂಯೆ, ಆತಂಕ ವಾತಾವರಣ ಸೃಷ್ಟಿಯಾಗಿದ್ದು ಇದನ್ನು ಹೋಗಲಾಡಿಸಲು ಕಮಿಟಿಯು ಮುಂದಿನ ದಿನಗಳಲ್ಲಿ ಅನುಕೂಲಕರವಾದ ವಾತಾವರಣ ಸೃಷ್ಟಿಸುವುದು ಕೆಲವು ಬದಲಾವಣೆ ತರುವುದಕ್ಕೆ ಮೇಲಿನ ಎಲ್ಲವುಗಳು ಅನಿವಾರ್ಯವಾಗಿವೆ. ಹೀಗಾಗಿ ಜನವರಿ ತಿಂಗಳಲ್ಲಿ ರಾಜ್ಯ ಕೋರ್‌ ಕಮಿಟಿ ಸಭೆ ಕರೆದು ಆಗುಹೋಗುಗಳ ಬಗ್ಗೆ ಚರ್ಚಿಸಬೇಕು ಎಂಬ ಸಲಹೆಗಳು ಬಂದಿವೆ.

ಧನ್ಯವಾದಗಳೊಂದಿಗೆ
ನೊಂದ ಸಾರಿಗೆ ನೌಕರರು, ಹುಬ್ಬಳ್ಳಿ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು