ಶಿವಮೊಗ್ಗ: ಕೆಲವರಿಗೆ ಇದು ಅಚ್ಚರಿ ಎನಿಸಬಹುದು, ಇನ್ನೂ ಕೆಲವರಿಗೆ ಇದು ಸುಳ್ಳು ಎನಿಸಲುಬಹುದು. ಆದರೆ, ಮೇಲಧಿಕಾರಿಗಳು ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮೌಖಿಕವಾಗಿ ಮಾಡುವ ಆದೇಶದಿಂದ ಹೆದರಿ ಹಲವು ರೀತಿಯ ರೋಗಗಳಿಗೆ ತುತ್ತಾಗುವುದು ಸತ್ಯ ಎಂದು ತಜ್ಞವೈದ್ಯರೆ ದೃಢಪಡಿಸಿದ್ದಾರೆ.
ಈ ರೀತಿಯ ನೂರಾರು ನಿದರ್ಶನಗಳು ನಮ್ಮ ಕಣ್ಣಮುಂದೆ ಇವೆ. ಅದಕ್ಕೆ ಮತ್ತೊಂದು ಎಂಬಂತೆ ಪ್ರಸ್ತುತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ವಿಭಾಗದ ಸಾಗರ ಘಟಕದ ಬಹುತೇಕ ಎಲ್ಲ ಸಿಬ್ಬಂದಿಗಳು ಅದರಲ್ಲೂ ವಿಶೇಷವಾಗಿ ಚಾಲಕ ಹಾಗೂ ನಿರ್ವಾಹಕರು ದಿನೇದಿನೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಏಕೆ ಹೀಗೆ? ಇವರ ಸಮಸ್ಯೆಯಾದರೂ ಏನು ಎಂದು ವಿಚಾರಿಸಿದಾಗ ನೌಕರರು ಎದುರುಸುತ್ತಿರುವುದು ಮಾನಸಿಕ ಕಿರುಕುಳ ಅದು ಕೂಡ ಅವರ ಮೇಲಧಿಕಾರಿಗಳಿಂದ ಎಂಬ ಸತ್ಯ ಬಯಲಾಗಿದೆ. ಮೇಲಧಿಕಾರಿಗಳ ಕಿರುಕುಳದಿಂದ ಹೆದರಿ ಒತ್ತಡಕ್ಕೆ ಸಿಲುಕುತ್ತಿರುವ ನೌಕರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೃದಯ ಹಾಗೂ ಸಕ್ಕರೆ ಖಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಇದಕ್ಕೆ ಅಧಿಕಾರಿಗಳ ಅಸಡ್ಡೆ ಹಾಗೂ ಭ್ರಷ್ಟಾಚಾರವೂ ಒಂದು ಕಾರಣ ಎಂದು ನೌಕರರು ದೂರುತ್ತಿದ್ದಾರೆ. ನಾವು ಸಮಯಕ್ಕೆ ಸರಿಯಾಗಿ ಊಟ ಮಾಡಲು ಆಗುತ್ತಿಲ್ಲ. ಈ ಕಾರಣದಿಂದ ಇಂತಹ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುತ್ತಿರಿವಿರಿ ಎಂದು ವೈದ್ಯರು ಹೇಳುತ್ತಿದ್ದಾರೆ.
ಈ ಬಗ್ಗೆ ನಾವು ಕೂಡ ಸಾಕಷ್ಟು ಬಾರಿ ವಿಭಾಗೀಯ ಉನ್ನತ ಅಧಿಕಾರಿಗಳ ಮುಂದೆ ನಮ್ಮ ಅಳಲು ತೋಡಿಕೊಂಡೆವು ಆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ವಿಜಯಪಥ ವರದಿಗಾರರು ಮುಂದೆ ಬಿಚ್ಚಿಟ್ಟಿದ್ದಾರೆ.
ಇನ್ನು ಈಗಾಗಲೆ ವಿಭಾಗೀಯ (DTO)ಸಂಚಾರಾಧಿಕಾರಿಯ ಮೇಲೆ ಭ್ರಷ್ಟಾಚಾರದ ಹಲವು ದೂರು ಕೂಡ ಇದೆ. ಅಲ್ಲದೆ ಮಹಿಳಾ ಕಂಡಕ್ಟರ್ ಒಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪದ ಬಗ್ಗೆ ವಿಜಯಪಥ ಕೂಡ ವರದಿ ಮಾಡಿತ್ತು. ಆದರೂ ಆ ಅಧಿಕಾರಿಯ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಈವರೆಗೂ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಹೀಗಾಗಿ ಅವರ ಕಿರುಕುಳ ಇನ್ನು ಹೆಚ್ಚಾಗಿದೆ ಎಂ ಆರೋಪ ಕೇಳಿ ಬಂದಿದೆ.
ಮಾರ್ಗಮಧ್ಯೆ ಇರುವ ಹೋಟೆಲ್‌ಗಳಿಂದ ಕಮೀಷನ್ ಪಡೆದು ವ್ಯಾಪಕ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ವಿಭಾಗೀಯ ನೌಕರರು ಆರೋಪ ಮಾಡುತ್ತಿದ್ದಾರೆ. ಸಾಗರದಿಂದ ಬೆಂಗಳೂರು ಮಾರ್ಗ ಸಂಖ್ಯೆ 29/30 ಸಾಗರ ನಿಲ್ದಾಣದಿಂದ ನಿರ್ಗಮಿಸುವ ಸಮಯ ಬೆಳಗ್ಗೆ 10.15. ಅದು ತಿಪಟೂರಿನಲ್ಲಿರುವ ಹೋಟೆಲ್ ಒಂದನ್ನು ತಲುಪುವ ಸಮಯ ಸಂಜೆ 4.20 ಆಗಿರುತ್ತದೆ.
ಮತ್ತೆ ಮಾರ್ಗ ಸಂಖ್ಯೆ 61/62 ಸಾಗರ ನಿಲ್ದಾಣದಿಂದ ನಿರ್ಗಮಿಸುವ ಸಮಯ ಬೆಳಗ್ಗೆ 10.30. ತಿಪಟೂರಿನ ಹೋಟೆಲ್ ತಲುಪುವುದು ಸಾಯಂಕಾಲ 4 ಗಂಟೆ 40 ನಿಮೀಷಕ್ಕೆ. ಈ ನಡುವೆ ನೌಕರರ ಊಟದ ಸಮಯ ಮೀರಿಹೋಗಿರುತ್ತದೆ. ಹೀಗಾಗಿ ಗ್ಯಾಸ್ಟ್ರಿಕ್‌ನಿಂದಾಗಿ ಹೃದಯ ಸಂಬಂಧಿತ ಕಾಯಿಲೆ, ಸಕ್ಕರೆ ಕಾಯಿಲೆಯಂತಹ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಇನ್ನಿ ಈ ಮಾರ್ಗದ ಬಸ್‌ಗಳಲ್ಲಿ ಓಡಾಡುವ ಪ್ರಯಾಣಿಕರು ಸಹ ಸಕ್ಕರೆ ಕಾಯಿಲೆ ಸೇರಿ ಇತರ ಸಮಸ್ಯೆ ಇರುವಂತ ಪ್ರಯಾಣಿಕರು ಸಹ ಚಾಲನಾ ಸಿಬ್ಬಂದಿ ಬಳಿ ಗಲಾಟೆ ಮಾಡುತ್ತಿರುತ್ತಾರೆ. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳಾದ ಘಟಕ ವ್ಯವಸ್ಥಾಪಕರು ಹಾಗೂ ವಿಭಾಗೀಯ ಸಂಚಾರ ಅಧಿಕಾರಿಗಳಿಗೆ ವಿಷಯ ತಿಳಿಸಿದರು ಅಂತಹ ಪ್ರಯಾಣಿಕರಿಗೆ ಹಾರಿಕೆ ಉತ್ತರ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೀಗಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್ ಮತ್ತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ನಿತ್ಯ ಈ ಮಾರ್ಗ ಸೇರಿದಂತೆ ಹಲವು ಮಾರ್ಗಗಳಲ್ಲಿ ನೌಕರರು ಹಾಗೂ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಡಿಟಿಒ ಅಧಿಕಾರಿಯ ಕರ್ಮ ಕಾಂಡವನ್ನು ಬಯಲಿಗೆಳೆದು ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಮೂಲಕ ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ಅನುವು ಮಾಡಿಕೊಡಬೇಕು ಎಂದು ನೌಕರರು ಎಂಡಿ ಅವರಲ್ಲಿ ಕೋರಿಕೊಂಡಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)