NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಫೆ.19ರಂದು 2024ರ ವೇತನ ಪರಿಷ್ಕರಣೆ, 2020ರ 38 ತಿಂಗಳ ಹಿಂಬಾಕಿಗೆ ಆಗ್ರಹಿಸಿ ಸಾರಿಗೆ ನೌಕರರ ಬೆಂಗಳೂರು ಚಲೋ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿದ್ದು, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ಇದೇ ಫೆ.19ರಂದು ಬೆಂಗಳೂರು ಚಲೋ ಹಮ್ಮಿಕೊಂಡಿವೆ.

KSRTC ಸೇರಿದಂತೆ ಕರ್ನಾಟಕದ ನಾಲ್ಕೂ ಸರ್ಕಾರಿ ಸಾರಿಗೆ ನಿಗಮಗಳ ನೌಕರರು ಸರ್ಕಾರದ ವಿರುದ್ಧ ಸಮರ ಸಾರಲು ಸಿದ್ದರಾಗಿದ್ದಾರೆ. ವೇತನ ಪರಿಷ್ಕರಣೆ ಹಾಗೂ ದೀರ್ಘಕಾಲದಿಂದ ಬಾಕಿ ಇರುವ ಶೇ.15ರಷ್ಟು ವೇತನ ಹೆಚ್ಚಳವಾಗಿರುವ 38 ತಿಂಗಳ ಹಿಂಬಾಕಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಬೆಂಗಳೂರು ಚಲೋಗೆ ಕರೆ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸಿಬ್ಬಂದಿ ಮತ್ತು ಕಾರ್ಮಿಕರ ಜಂಟಿ ಸಮಿತಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದ ಎಚ್‌.ವಿ.ಸುಬ್ಬರಾವ್ ಅವರು ಜ.28ರಂದು ನಿಧನರಾದ್ದರಿಂದ ಕಳೆದ ಜ.29ರಂದು ಫ್ರೀಡಂಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಚಲೋ ಪ್ರತಿಭಟನೆಯನ್ನು ಮುಂದೂಡಲಾಗಿತ್ತು.

ಸಾರಿಗೆ ನೌಕರರ ಮುಖಂಡ ಸುಬ್ಬರಾವ್ ನಿಧನರಾದ ಕಾರಣ ಅಂದು ನಡೆಯಬೇಕಿದ್ದ ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿದ್ದ ಜಂಟಿ ಕ್ರಿಯಾ ಸಮಿತಿ ಫೆ.19ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದೆ. ಅಂದು ರಾಜ್ಯದ ಮೂಲೆ ಮೂಲೆಗಳಿಂದ ಬರೋ ಸಾವಿರಾರು ಸಾರಿಗೆ ನೌಕರರು ಫ್ರೀಡಂಪಾರ್ಕ್‌ನಲ್ಲಿ ಜಮಾಯಿಸಲಿದ್ದಾರೆ. ಬೆಳ್ಳಗ್ಗೆ 10 ಗಂಟೆಯಿಂದ 4ಗಂಟೆವರೆಗೂ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಪ್ರಮುಖವಾಗಿ ಎರಡು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಲೋ ನಡೆಸಲಾಗುತ್ತಿದೆ.

ಸರ್ಕಾರದ ಎದುರು ಸಾರಿಗೆ ನೌಕರರು ಎರಡು ಬೇಡಿಕೆ ಇಟ್ಟಿದ್ದು, ಈ ಪೈಕಿ 2020ರ ಜನವರಿ 1ರಿಂದ 2023ರ ಫೆಬ್ರವರಿ 28ರವರೆಗಿನ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ನೀಡಬೇಕು. 2024 ಜನವರಿ 1ರಿಂದ 4ವರ್ಷಗಳಿಗೊಮ್ಮೆ ಆಗುತ್ತಿರುವ ವೇತನ ಒಪ್ಪಂದ ಮಾಡಬೇಕು ಎಂದು ಆಗ್ರಹಿ ಈ ಚಲೋ ಹಮ್ಮಿಕೊಂಡಿದ್ದಾರೆ.

ಇನ್ನೂ ಸಾರಿಗೆ ಸಂಘಟನೆಗಳ ಮತ್ತೊಂದು ಸಂಘಟನೆಯಾದ ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟವೂ ಸಹ ಪ್ರತಿಭಟನೆಗೆ ಮುಂದಾಗಿದ್ದು, ಶಿವರಾತ್ರಿ ನಂತರ ಫೆಬ್ರವರಿ 23ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ. ಇನ್ನೂ ಸಾರಿಗೆ ಇಲಾಖೆ ಪ್ರತಿಭಟನಾ ನಿರತ ಸಾರಿಗೆ ನೌಕರರಿಗೆ ಶಾಕ್ ಕೊಟ್ಟಿದ್ದು, ಸಾರಿಗೆ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ ಡ್ಯೂಟಿಗೆ ಬಂದಿಲ್ಲ ಅಂದರೆ ‘ನೋ ವರ್ಕ್ ನೋ ಪೇ’ ಎಂದು ಕೆಎಸ್‌ಆರ್‌ಟಿಸಿ ಎಂ.ಡಿ ಅಕ್ರಂ ಪಾಷ ಈ ಹಿಂದೆಯೇ ಆದೇಶ ಹೊರಡಿಸಿದ್ದಾರೆ.

Deva
the authorDeva

Leave a Reply

error: Content is protected !!
Latest news
ಇಂದು ಕೇರಳದ ನೂತನ ಸಿಎಂಆಗಿ ವಿ.ಡಿ. ಸತೀಶನ್‌ ಪ್ರಮಾಣ ವಚನ ಸ್ವೀಕಾರ KSRTC ಜಂಟಿ ಸಮಿತಿ ಒಳೊಪ್ಪಂದ ಬಯಲು; 2.5 ಕೋಟಿ ರೂ.ಗೆ ಸೇಲಾದರ ನೀಚರು, ನೌಕರರ ದಾರಿತಪ್ಪಿಸುತ್ತಿರುವುದರ ಹಿಂದಿನ ಮರ್ಮ... ವಿಜಯಪಥ ವರದಿ ಪರಿಣಾಮ: ಎಚ್ಚೆತ್ತ BMTC ಅಧಿಕಾರಿಗಳು- ಆದೇಶದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿಯೇ ನೌಕರರಿಗೆ 11 ತ... ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ತಂತ್ರ: ಬಸ್ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವ ನೌಕರರಿಗೆ ಶಾಕ್ ... KSRTC: ಸರ್ಕಾರದ ಸಾಧನ ಸಮಾವೇಶದಲ್ಲಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಸಾರಿಗೆ ನೌಕರರ ಪ್ರತಿಭಟನೆ !? BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ! ಮೇ 20ರಿಂದ ಸಾರಿಗೆ ನೌಕರರ ಮುಷ್ಕರ ಮಾಡೇ ತೀರುತ್ತೇವೆ: ವಿಜಯಭಾಸ್ಕರ್ KSRTC: ಮೇ 20 ರಿಂದ ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಎಂಟಿಸಿ-ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘ ಬೆಂಬಲ ವಿಜಯಪಥ ವರದಿಗೆ ಎಚ್ಚೆತ್ತ NWKRTC: ನೌಕರರಿಗೆ 11ತಿಂಗಳ ಹಿಂಬಾಕಿ ಪಾವತಿಯಾಗಿದೆ- ಸ್ಪಷ್ಟನೆ ನೀಡಿ ಸಿಬ್ಬಂದಿ ಗೊಂದಲ ನ... ಸಾರಿಗೆ ನೌಕರರಿಗೆ ಶೇ.12.5 ರಷ್ಟು ವೇತನ ಹೆಚ್ಚಳ ತೀವ್ರ ಖಂಡನೀಯ: ನೌಕರರ ಹಕ್ಕಿಗಾಗಿ ಹೋರಾಟಕ್ಕೆ ಸಿದ್ಧ: ಬೀದರ್‌ ಬಿಎಂ...