NEWSನಮ್ಮಜಿಲ್ಲೆನಮ್ಮರಾಜ್ಯ

KSRTC : ನೌಕರರ ವಿರುದ್ಧದ ಸೇಡಿನ ಶಿಸ್ತು ಕ್ರಮ ರದ್ದುಪಡಿಸಬೇಕು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ತೀರ್ಮಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೆಎಸ್ಆರ್ಟಿಸಿ ಸ್ಟಾಫ್ ವರ್ಕರ್ಸ್‌ ಫಡರೇಷನ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಪ್ರಮುಖವಾಗಿ ಮೂರು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಜಂಟಿ ಕ್ರಿಯಾ ಸಮಿತಿಯು ಸಾರಿಗೆ ನಿಗಮಗಳ ಆಡಳಿತ  ವರ್ಗಕ್ಕೆ 1.01.2020 ರಿಂದ ವೇತನ  ವಿಮರ್ಶೆ ಹಾಗೂ ಇತರ ಸೌಲಭ್ಯಗಳಿಗೆ ಬೇಡಿಕೆಯನ್ನು ಸಲ್ಲಿಸಿದ ನಂತರ ಆಡಳಿತ ವರ್ಗ ವಿಳಂಬವಿಲ್ಲದೆ ಜಂಟಿಕ್ರಿಯಾ ಸಮಿತಿ ಜೊತೆ ಚರ್ಚಿಸಿ ಉಭಯ ಸಮ್ಮತ ಒಪ್ಪಂದಕ್ಕೆ ಮುಂದಾಗಿ ಜಾರಿಮಾಡಬೇಕು.

ಕಳೆದ ಮುಷ್ಕರದ ಸಂದರ್ಭದಲ್ಲಿ ವಜಾ ಆಗಿರುವ ನೌಕರರನ್ನು ಕೂಡಲೇ ಕೆಲಸಕ್ಕೆ ವಾಪಸ್‌ ತೆಗೆದುಕೊಳ್ಳಬೇಕು ಹಾಗೂ ಸೇಡಿನ ಮತ್ತು ಇತರ ಶಿಸ್ತಿನ ಕ್ರಮಗಳಿಂದ ಶಿಕ್ಷೆ ಅನುಭವಿಸುತ್ತಿರುವ ನೌಕರರ ವಿರುದ್ಧದ ಸೇಡಿನ ಶಿಸ್ತು ಕ್ರಮಗಳನ್ನು ರದ್ದುಪಡಿಸಬೇಕು.

ಸಾರಿಗೆ ನೌಕರರು ನ್ಯಾಯಪಡೆಯುವ ದೃಷ್ಟಿಯಿಂದ ತಮ್ಮ ವೈಷಮ್ಯಗಳನ್ನು ಮರೆತು ಜಂಟಿಕ್ರಿಯಾ ಸಮಿತಿಯ ಅಡಿರಿಯಲ್ಲಿ ಐಕ್ಯತೆಯನ್ನು ಸಾಧಿಸಿ ತಮ್ಮ ದೃಢ ನಿರ್ಧಾರವನ್ನು ಪ್ರಕಟಿಸಬೇಕೆಂಬ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಈ ಮಹತ್ತರ ಸಭೆಯು ನಾಲ್ಕು ರಸ್ತೆ ಸಾರಿಗೆ ನಿಗಮಗಳಾದ ಕೆಎ‌ಸ್‌ಆರ್ಟಿಸಿ, ಬಿಎಂಟಿಸಿ, ವಾಕರಸಾರ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರ ಪರಿಸ್ಥಿತಿಯನ್ನು ಸಮಗ್ರವಾಗಿ ವಿಶ್ಲೇಷಣೆ ಮಾಡಿ ಅವರ ನೋವು ಮತ್ತು ವೇದನೆಗಳಿಗೆ ಸಾರಿಗೆ ನಿಗಮಗಳ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲವೆಂದು ಅಭಿಪ್ರಾಯಪಡಲಾಗಿದೆ.

ಇನ್ನು ಕಳೆದ ಏಪ್ರಿಲ್ 21ರ ಮುಷ್ಕರದ ನಂತರ ಸಾರಿಗೆ ನಿಗಮಗಳ ಅಧಿಕಾರ ವರ್ಗ ಕಾರ್ಮಿಕರ, ವಿರುದ್ಧ ತನ್ನ ದಬ್ಬಾಳಿಕೆಯನ್ನು ತೀವ್ರಗೊಳಿಸಿದೆ. ಘಟಕ ಮಟ್ಟದಲ್ಲಿ ನೌಕರರ ಕಿರುಕುಳ ಮತ್ತು ಶೋಷಣೆ ಹೆಚ್ಚಾಗಿದೆ.

ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂಸ್ಥೆಯ ಆಡಳಿತದ ಯಾವುದೇ ಮಟ್ಟದಲ್ಲಿಯೂ ಚರ್ಚೆಯಾಗದೇ ಅವರ ಸಮಸ್ಯೆಗಳು ಉಲ್ಬಣಿಸುತ್ತಿವೆ.

ಇನ್ನು 01.01.202) ರಿಂದ ವೇತನ ಪರಿಷ್ಕರಣೆಯ ಬಗ್ಗೆ ಕಾರ್ಮಿಕ ಸಂಘಟನೆಗಳು ಬೇಡಿಕೆಗಳನ್ನು ಸಲ್ಲಿಸಿ ಎರಡೂವರೆ ವರ್ಷ ಕಳೆದರೂ ಆಡಳಿತ ವರ್ಗ ಕಾರ್ಮಿಕರ ನೋವುಗಳಿಗೆ ಪರಿಹಾರ ನೀಡುವ ಬಗ್ಗೆ ದಿವ್ಯ ಮೌನ ತಾಳಿದೆ, ಮತ್ತೊಂದು ಕಡೆ ನೌಕರರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ.

ಮುಷ್ಕರದ ಸಂಬಂಧವಾಗಿ ಮುಷ್ಕರ ನಿರತ ಕಾರ್ಮಿಕರ ವಿರುದ್ಧ ಆಡಳಿತ, ವರ್ಗ ಅತಿರೇಕದ ಸೇಡಿನ ಕ್ರಮಗಳನ್ನು ತೆಗೆದುಕೊಂಡಿದ್ದು ಇನ್ನೂ ಕೂಡ ಸರಿಪಡಿಸಿಲ್ಲ. ಇದರಿಂದ ಮುಷ್ಕರದಲ್ಲಿ ಭಾಗವಹಿಸಿದ್ದ ಒಂದೇ ಕಾರಣಕ್ಕಾಗಿ ಸಾವಿರಾರು ನೌಕರರನ್ನು ಮತ್ತು ಅವರ ಕುಟುಂಬದವರನ್ನು ಬೀದಿಪಾಲು ಮಾಡಿರುವುದನ್ನು ಸಭೆಯಲ್ಲಿ ಒಮ್ಮತದಿಂದ ಖಂಡಿಸಲಾಗಿದೆ.

ಈ ಸಂದರ್ಭದಲ್ಲಿ ಸುಧೀರ್ಘ ಚರ್ಚೆಯ ನಂತರ ಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿ. ಈ ಮೇಲಿನ ಮೂರು ಅಂಶಗಳನ್ನು ಜಾರಿಮಾಡುವಂತೆ ಸಾರಿಗೆ ನಿಗಮಗಳ ಆಡಳಿತ ಮಂಡಳಿಯನ್ನು ಒತ್ತಾಯಿಸಿದೆ.

ಜಂಟಿ ಸಭೆಯಲ್ಲಿ ಕೆಎಸ್ಆರ್ಟಿಸಿ ಸ್ಟಾಫ್ ವರ್ಕರ್ಸ್‌ ಫಡರೇಷನ್‌ ಪರವಾಗಿ ಎಚ್.ವಿ.ಅನಂತ ಸುಬ್ಬರಾವ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಪರವಾಗಿ ಬಿ.ಜಯದೇವರಾಜೇ ಅರಸ್‌, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿ.ಐ.ಟಿ.ಯು) ಪರವಾಗಿ ಎಚ್.ಡಿ. ರೇವಪ.

ಕೆ.ಎಸ್.ಆರ್.ಟಿ.ಸಿ & ಬಿಎಂಟಿಸಿ ಯುನೈಟೆಡ್’ ಎಂಪ್ಲಾಯೀಸ್ ಯೂನಿಯನ್ ಪರವಾಗಿ   ಕೆ.ಆರ್‌. ವಿಜಯಕುಮಾರ್, ಕೆಎಸ್‌ಆರ್ಟಿಸಿ ಎಸ್‌ಸಿ & ಎಸ್ಟಿ ಎಂಪ್ಲಾಯೀಸ್ ಯೂನಿಯನ್‌ ಪರವಾಗಿ ವೆಂಕಟರಮಣಪ್ಪ, ಕ.ರಾ.ರ.ಸಾ ಸಂಸ್ಥೆ ಪ.ಜಾ, ಪ.ಪಂಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಎಂ. ಮಲ್ಲಿಕಾರ್ಜುನ ಮೂರ್ತಿ  ಭಾಗವಹಿಸಿದ್ದರು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...