NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಬೆಂಗಳೂನಿಂದ ಬಾಣಾವರಕ್ಕೆ ಟಿಕೆಟ್‌ ಪಡೆದು ತುಮಕೂರಿನಲ್ಲಿ ಇಳಿಯಲು ಮುಂದಾಗಿ ನಿನ್ನ ಮನೆ ಹಾಳಾಗ ಎಂದು ನಾಲಿಗೆ ಹರಿಯಬಿಟ್ಟ ಮಹಿಳೆ..

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ಹತ್ತಿದ ಮಹಿಳೆಯೊಬ್ಬರು ಬಾಣಾವರಕ್ಕೆ ಟಿಕೆಟ್‌ ಪಡೆದುಕೊಂಡಿದ್ದಾರೆ. ಆದರೆ, ತುಮಕೂರಿನಲ್ಲಿ ಇಳಿಯುವುದಕ್ಕೆ ಮುಂದಾಗಿದ್ದು, ಅದನ್ನು ಕೇಳಿದ ನಿರ್ವಾಹಕ ಮತ್ತು ಸಹ ಪ್ರಯಾಣಿಕರಿಗೆ ಅವಾಜ್‌ ಹಾಕಿದ್ದಾರೆ.

ಇದು ಶಕ್ತಿ ಯೋಜನೆ ಜಾರಿಯಾದ ಮೇಲೆ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿ ಭಾರಿ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಹೌದು! ಬೆಂಗಳೂರಿನಲ್ಲಿ ಬಸ್‌ ಹತ್ತಿದ ಮಹಿಳೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರಕ್ಕೆ ಟಿಕೆಟ್‌ ಪಡೆದುಕೊಂಡಿದ್ದಾಳೆ. ಆದರೆ, ಮಾರ್ಗಮಧ್ಯೆ ಅಂದರೆ ತುಮಕೂರಿನಲ್ಲಿ ಇಳಿಯುವುದಕ್ಕೆ ಮುಂದಾಗಿದ್ದಾಳೆ. ಈ ವೇಳೆ ನಿರ್ವಾಹಕರು ನೀವು ಹೀಗೆ ಇಳಿದು ಹೋದರೆ ನಮ್ಮ ಕೆಲಸ ಹೋಗುತ್ತದೆ ಹೀಗೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಅಲ್ಲದೆ ನೀವು ತುರ್ತು ಕೆಲಸದ ನಿಮಿತ್ತ ಇಲ್ಲೇ ಇಳಿಯಲೇ ಬೇಕು ಎಂದರೆ, ತುಮಕೂರು ಬಸ್‌ ನಿಲ್ದಾಣದಲ್ಲಿ ನಮ್ಮ ನಿಲ್ದಾಣಧಿಕಾರಿಯವರಿಗೆ ಈ ಟಿಕೆಟ್‌ ಕೊಟ್ಟು ಅವರಿಂದ ಅನುಮತಿ ಪಡೆದು ಇಳಿದುಕೊಳ್ಳಿ ಎಂದು ತಿಳಿಸಿದ್ದಾರೆ.

ಆದರೆ ಆ ಮಹಿಳೆ ನಿರ್ವಾಹಕರ ಮನವಿಗೆ ಸ್ಪಂದಿಸದೆ ಅವರಿಗೆ ಅವಾಜ್‌ ಹಾಕಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿರ್ವಾಹಕರನ್ನು ನಿಂದಿಸಿದ್ದು, ಏಕ ವಚನ ಪ್ರಯೋಗ ಮಾಡಿದ ಈಕೆಯೇ ನೀನು ನನ್ನನ್ನು ಏಕೆ ಹೇ ಎಂದೆ ಎಂದು ಅವಾಜ್‌ ಹಾಕಿದ್ದಾರೆ. ಇಲ್ಲ ನಾನು ನಿಮಗೆ ಆ ರೀತಿ ಹೇಳಿಲ್ಲ ಎಂದರೂ ಕೇಳದೆ ನಿರ್ವಾಹಕರನ್ನು ನಿಂದಿಸಿದ್ದಾಳೆ.

ಇನ್ನು ಈಕೆ ಕಂಡಕ್ಟರ್‌ ಜತೆ ಗಲಾಟೆ ಮಾಡುತ್ತಿರುವುದನ್ನು ಸಹ ಪ್ರಯಾಣಿಕರೊಬ್ಬರು ವಿಡಿಯೋ ಮಾಡುತ್ತಿದ್ದರು, ಈ ವೇಳೆ ಆ ಸಹ ಪ್ರಯಾಣಿಕರಿಗೂ ನನ್ನ ಅನುಮತಿ ಇಲ್ಲದೆ ಹೇಗೆ ನೀನು ವಿಡಿಯೋ ಮಾಡುತ್ತಿದ್ದೀಯೆ ಎಂದು ಬೆದರಿಸಿದ್ದಾಳೆ. ಆದರೆ ಆ ಸಹ ಪ್ರಯಾಣಿಕ ನೀವು ಗಲಾಟೆ ಮಾಡುತ್ತಿರುವುದಕ್ಕೆ ಮಾಡುತ್ತಿರುವುದು ಎಂದು ಪ್ರತ್ಯುತ್ತರ ನೀಡಿದ್ದಾರೆ.

ಇನ್ನು ನಿಮ್ಮಂಥವರು ಮಾಡುವ ತಪ್ಪಿಗೆ ನಿರ್ವಾಹಕರು ಕೆಲಸ ಕಳೆದುಕೊಂಡು ಮನಗೆ ಹೋಗುತ್ತಿದ್ದಾರೆ. ಅದೇರೀತಿ ಇಂದು ತನಿಖಾಧಿಕಾರಿಗಳು ಬಂದು ಟಿಕೆಟ್‌ ಚೆಕ್‌ ಮಾಡುವ ವೇಳೆ ನೀವು ಇಲ್ಲ ಎಂದು ಈ ನಿರ್ವಾಹಕರನ್ನು ಅಮಾನತು ಮಾಡಿದರೆ ಅವರ ಕುಟುಂಬಕ್ಕೆ ನೀವು ಒತ್ತಾಸೆಯಾಗುತ್ತೀರ ಎಂದು ಮತ್ತೊಬ್ಬ ಸಹಪ್ರಯಾಣಿಕರು ಆಕೆಯನ್ನು ತರಾಟೆಗೆ ತೆದುಕೊಂಡಿದ್ದಾರೆ.

ಒಟ್ಟಾರೆ, ಇತ್ತ ಅಧಿಕಾರಿಗಳು ನಾನಾ ಕಾರಣಗಳನ್ನು ನೀಡಿ ಚಾಲನಾ ಸಿಬ್ಬಂದಿಗೆ ಕಿರುಕುಳು ನೀಡುತ್ತಿದ್ದು ಅದರಿಂದ ತಪ್ಪಿಸಿಕೊಂಡು ಹೇಗೋ ಡ್ಯೂಟಿಗೆ ಬಂದರೆ ಇಲ್ಲಿ ಕೆಲ ಪ್ರಯಾಣಿಕರು ಈ ರೀತಿ ಅಸಭ್ಯವಾಗಿ ವರ್ತಿಸುವ ಮೂಲಕ ಕಿರುಕುಳ ನೀಡುತ್ತಾರೆ. ಇದರಿಂದ ನಿತ್ಯ ಚಾಲನಾ ಸಿಬ್ಬಂದಿ ಒತ್ತಡದಲ್ಲೇ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು, ಹಲವು ಕಾಯಿಲೆಗಳೀಗೆ ತುತ್ತಾಗುತ್ತಿದ್ದಾರೆ.

ಇನ್ನು ಈ ಬಗ್ಗೆ ಕೇಳಬೇಕಾದ ಸರ್ಕಾರ ಇದಾವುದು ನಮಗೆ ಸಂಬಂಧಿಸಿದ್ದೇ ಅಲ್ಲ ಎಂಬಂತೆ ವರ್ತಿಸುತ್ತಿದೆ. ಅಲ್ಲದೆ ಅಧಿಕಾರಿಗಳು ಕೂಡ ಪ್ರಯಾಣಿಕರನ್ನು ಓಲೈಸಿಕೊಳ್ಳುವುದಕ್ಕೆ ಈ ಸಿಬ್ಬಂದಿಗಳ ವಿರುದ್ಧವೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡುವುದು, ಅಮಾನತು ಮಾಡುವ ಕೆಲಸಕ್ಕೆ ಮುಂದಾಗುತ್ತಿದೆ. ಇದು ಕೊನೆಯಾಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಈ ನಿಟ್ಟಿಲ್ಲಿ ಕ್ರಮಕ್ಕೆ ಸಂಸ್ಥೆ ಮತ್ತು ಸರ್ಕಾರ ಮುಂದಾಗಬೇಕು ಎಂದು ಸಿಬ್ಬಂದಿ ಆಗ್ರಹ ಪೂರ್ವಕವಾಗಿ ಮನವಿ ಮಾಡಿದ್ದಾರೆ.

Vijayapatha - ವಿಜಯಪಥ

Leave a Reply

error: Content is protected !!
LATEST
BMTC ಅಧಿಕಾರಿಗಳ ವಾಹನಗಳಿಗೂ ಖಾಸಗಿ ಚಾಲಕರ ನೇಮಕಕ್ಕೆ ಟೆಂಡರ್‌ ಕರೆದ ಸಂಸ್ಥೆ KSRTC ಮಡಿಕೇರಿ: ವೇತನ ಬಿಡುಗಡೆ ಆಗ್ರಹಿಸಿ ಪ್ರತಿಭಟನೆಗೆ ಇಳಿದ ಗುತ್ತಿಗೆ ಚಾಲಕರು KSRTC ನೌಕರರ ನಂಬಿಸಲು ಹೋದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಂದಲೇ ಅವರ ಊಸರವಳ್ಳಿ ಬಣ್ಣ ಬಯಲು..! KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್!