ಬೆಳಗಾವಿ: ಸುವರ್ಣ ಸೌಧದ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಿರತ 6ಮಂದಿ ನೌಕರರು ಅಸ್ವಸ್ಥಗೊಂಡು ಆಸ್ಪತ್ರೆಗೆ ಗುರುವಾರ ದಾಖಲಿಸಲಾಗಿದ್ದು ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಸತ್ಯಾಗ್ರಹದ ನೇತೃತ್ವ ವಹಿಸಿರುವ ಚಂದ್ರಶೇಖರ್ ಅವರಿಗೆ ಲೋಬಿಪಿ (ಸುಮಾರು 72ಕ್ಕೆ ಇಳಿದಿತ್ತು) ಇದ್ದ ಕಾರಣ ಬೆಳಗಾವಿಯ ಪೊಲೀಸ್ ವರಿಷ್ಠಾಧಿಕಾರಿಗಳೇ ಅವರನ್ನು ಗುರುವಾರ ರಾತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.
ಚಂದ್ರು ಸೇರಿದಂತೆ ಈಗಾಗಲೇ ಆಸ್ಪತ್ರೆಗೆ ದಾಖಲಿಸಲಾಗಿರುವ 6 ಮಂದಿಗೂ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದು, ಇವರ ಹೊರತಾಗಿ ಮತ್ತೆ ಸಾರಿಗೆಯ ಮಹಿಳಾ ಸಿಬ್ಬಂದಿ ಸೇರಿದಂತೆ ಐವರು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತಿದ್ದಾರೆ.
ಗುರುವಾರ ರಾತ್ರಿಯಿಂದಲೇ ಅನ್ನ ಆಹಾರ ತ್ಯಜಿಸಿ ಉಪವಾಸ ಕುಳಿತಿರುವ ಸಾರಿಗೆ ಸಿಬ್ಬಂದಿಗಳಾದ ಜಯಂತ್ ಮರ್ಗಿ, ಜಿ.ಸಂತೋಷ ಕುಮಾರ್, ಎಸ್. ಅನಿಲ್ ಕುಮಾರ್, ಎಚ್.ಪಿ. ಮಂಜಮ್ಮ, ಡಿ. ಕೇಶವನ್ ಅವರು ಉಪವಾಸ ಸತ್ಯಾಗ್ರಹವನ್ನು ಮುಂದುರಿಸುತ್ತಿದ್ದಾರೆ.
ನಿನ್ನೆ ನಡೆದಿದ್ದು ಏನು: ಗುರುವಾರ ಮಧ್ಯಾಹ್ನ ಹೈಬಿಪಿಯಿಂದ ಉಪವಾಸ ನಿರತ ನಾಗರಿಕರಾದ (ಸಂಸ್ಥೆಗೆ ಸಂಬಂಧವಿಲ್ಲದ ವ್ಯಕ್ತಿ) ಬಸವರಾಜು ಎಂಬುವರು ಅವರ ಬಳಿಕ ಸಾರಿಗೆ ನೌಕರರಾದ ಕೃಷ್ಣ ಗುಡುಗುಡಿ ಆನಂತರ ಲೋಕೇಶ್, ಬಶೀರ್ ಮತ್ತು ಜಯಶ್ರೀ ಅವರು ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಸತ್ಯಾಗ್ರಹ ನಿರತ ಸ್ಥಳದಿಂದ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ದಾಖಲು ಮಾಡಲಾಗಿದೆ.
ಇನ್ನು ಈ ಐವರನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದಂತೆ ಲೋ ಬಿಪಿಯಿಂದ ಬಳಲುತ್ತಿದ್ದ ಚಂದ್ರಶೇಖರ್ ಅವರನ್ನು ಪೊಲೀಸ್ ಅಧಿಕಾರಿಗಳೇ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ನಮ್ಮ ಪ್ರಾಣ ಹೋದರೂ ಸರಿ ನಾವು ಆಸ್ಪತ್ರೆಗೆ ಬರುವುದಿಲ್ಲ ಎಂದು ಚಂದ್ರು ಹಠ ಹಿಡಿದಿದ್ದಾರೆ. ಆಗ ನಿಮ್ಮ ಹೋರಾಟಕ್ಕೆ ನಾನು ಅನುವು ಮಾಡಿಕೊಟ್ಟಿದ್ದೇವೆ. ಅದರಂತೆ ನಾವು ನಮ್ಮ ಕರ್ತವ್ಯ ಮಾಡಲು ಅನುವು ಮಾಡಿಕೊಡಿ ಎಂದು ಮನವೊಲಿಸುವ ಮೂಲಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಿನ್ನೆ ಆಸ್ಪತ್ರೆಗೆ ದಾಖಲಾಗಿರುವ ಈ 6ಮಂದಿ ನೌಕರರಿಗೂ ಚಿಕಿತ್ಸೆ ಮುಂದುವರಿದಿದ್ದು ಅವರನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ವೈದ್ಯರು ತಿಳಿದಿದ್ದಾರೆ.