Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಕೊಳ್ಳೇಗಾಲ : ವಾರದ ರಜೆ ಸೇರಿ 3ದಿನ ನೌಕರರು ರಜೆ ಹಾಕಿಕೊಂಡರೆ 13ದಿನದ ವೇತನ ಕಟ್‌ !!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ವೇತನಕ್ಕೆ ನೇರವಾಗಿಯೇ ಕತ್ತರಿ ಹಾಕುವ ಕೆಲಸವನ್ನು ನಿಗಮಗಳ ಮೇಲಧಿಕಾರಿಗಳೇ ಶುರುವಿಟ್ಟುಕೊಂಡಿದ್ದಾರೆ.

ಈ ಮೂಲಕ ಬಹುತೇಕ ನೌಕರರಿಗೆ ತಿಂಗಳಿಗೆ ಸಿಗಬೇಕಿರುವ ವೇತನ ಸಿಗದೆ ಬೇಸತ್ತುಹೋಗುತ್ತಿದ್ದಾರೆ. ಇನ್ನು ವಿಷಯವನ್ನು ಯಾರ ಬಳಿ ಹೇಳಿಕೊಂಡರು ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮೂಲಗಳ ನಿಖರ ಮಾಹಿತಿ ಪ್ರಕಾರ ಹೇಳುವುದಾದರೆ ಕೊಳ್ಳೇಗಾಲ ಕೆಎಸ್‌ಆರ್‌ಟಿಸಿ ಡಿಪೋನಲ್ಲಿ ಕೆಲಸ ಮಾಡುತ್ತಿರುವ ಚಾಲನಾ ಸಿಬ್ಬಂದಿಗಳು ವಾರದ ರಜೆ ಸೇರಿದಂತೆ ಎರಡು ದಿನ ರಜೆ ತೆಗೆದುಕೊಂಡರೆ ಆ ಎರಡು ದಿನಗಳ ರಜೆಯ ಜತೆಗೆ ವಾರದ ರಜೆಯನ್ನು ರದ್ದು ಮಾಡಿ ದರ್ಪ ಮೆರೆಯುತ್ತಿದ್ದಾರೆ.

ಅಲ್ಲದೆ ತಿಂಗಳ ವೇತನದ ಕೊನೆಯ ದಿನಗಳಲ್ಲಿ (ತಿಂಗಳ 21ನೇ ತಾರೀಖಿನಲ್ಲಿ) ಕಡ್ಡಾಯವಾಗಿ ಹಾಜರಾಗಬೇಕು ಇಲ್ಲದಿದ್ದರೆ ರಜೆ ಹಾಕಿಕೊಂಡಿರುವುದನ್ನು ರದ್ದು ಮಾಡಿ ಸುಮಾರು 13 ದಿನಗಳ ವೇತನವನ್ನು ಕಟ್ಟು ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದು, ಇದರಿಂದ ನೌಕರರು ಸರಿಯಾಗಿ ವೇತನ ಸಿಗದೆ ಪರದಾಡುವ ಸ್ಥಿತಿ ತಲುಪಿದ್ದಾರೆ. ಇನ್ನು ಈ ಬಗ್ಗೆ ಕೇಳಬೇಕಾದ ಡಿಸಿಗಳು ಇದಕ್ಕೂ ನಮಗೂ ಯಾವುದೇ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ನೌಕರರಿಗೆ ಸಹಿಸಲಾಗದ ತಲೆನೋವಾಗಿ ಪರಿಣಮಿಸುತ್ತಿದೆ.

ಇನ್ನು ಬಿಎಂಟಿಸಿಯಲ್ಲೂ ಇದೇ ಚಾಳಿಯನ್ನು ಅಧಿಕಾರಿಗಳು ಮುಂದುವರಿಸಿದ್ದು ವಾರದ ರಜೆಯ ಹಿಂದಿನ ಅಥವಾ ಮುಂದಿನ ದಿನಗಳಲ್ಲಿ ಕೆಲಸ ಮಾಡಿದ್ದರೆ ವಾರದ ರಜೆ ಕೊಡಬೇಕು ಆದರೆ, ಇಲ್ಲಿಯೂ ಕೂಡ ಅದನ್ನು ಗಾಳಿಗೆ ತೂರಿ ವಾರದ ರಜೆಯ ಹಿಂದೆ ಮುಂದೆ ರಜೆ ಹಾಕಿಕೊಂಡು ಆ ರಜೆ ರದ್ದಾದರೆ ವಾರದ ರಜೆಯನ್ನೂ ಕಟ್‌ ಮಾಡುತ್ತಾರೆ. ಇದರಿಂದ ಬಹುತೇಕ ನೌಕರರಿಗೆ ವಾರದ ರಜೆಯೂ ಸಿಗುತ್ತಿಲ್ಲ, ಜತೆಗೆ ಗೈರುಹಾಜರಿ ತೋರಿಸಲಾಗುತ್ತಿದೆ.

ಇನ್ನು ರಾಜ್ಯ ಸರ್ಕಾರ 21 ದಿನಗಳ ಸಾರ್ವತ್ರಿಕ ರಜೆ ನೀಡಿದ್ದರೂ ಈ ಸಾರಿಗೆ ಸಂಸ್ಥೆಗಳ ನೌಕರರಿಗೆ ಅದು ಅನ್ವಯವಾಗುತ್ತಿಲ್ಲ. ಆದರೆ ವರ್ಷದಲ್ಲಿ ಸರ್ಕಾರ ಘೋಷಣೆ ಮಾಡೋ ಈ 21ದಿನಗಳ ಸಾರ್ವತ್ರಿಕ ರಜಾ ದಿನಗಳನ್ನು ನಮಗೂ ಕೊಡಿ ಎಂದರೆ ನಿಮಗೆ ಅನ್ವಯವಾಗೋದಿಲ್ಲ. ನಾವು ಕೊಡೋ ರಜೆಯನ್ನು ತಗೊಬೇಕು ಅಷ್ಟೇ ಎಂದು ಕಾನೂನು ಬಾಹಿರ ನಿಯಮವನ್ನು ಅಳವಡಿಸಿಕೊಂಡಿದ್ದಾರೆ ಅಧಿಕಾರಿಗಳು.

ಸಾರ್ವತ್ರಿಕ ರಜಾ ದಿನಗಳನ್ನು ಬಿಟ್ಟು ನಿಗಮದಿಂದಲೇ ತಮಗೆ ಇಷ್ಟ ಬಂದ ಐದು ದಿನಗಳ ಸಾರ್ವತ್ರಿಕ ರಜಾ ದಿನಗಳನ್ನು ಮಾತ್ರ ನೌಕರರಿಗೆ ನೀಡಲಾಗುತ್ತಿದೆ. ಇದೂ ಕೂಡ ಹಿಂದೂಗಳಿಗೆ ಮುಸ್ಲಿಮರ ಹಬ್ಬಗಳಂದು, ಮುಸ್ಲಿಂ ಸಮುದಾಯದ ನೌಕರರಿಗೆ ಹಿಂದೂಗಳ ಹಬ್ಬದಂದು ರಜೆ ಕೊಡುವುದು ಅಧಿಕಾರಿಗಳ ನಡೆಯಾಗಿದೆ.

ಇನ್ನು ಈ ಮೋದಲೇ ಹೇಳಿದಂತೆ ಒಂದು ದಿನ ರಜೆ ಹಾಕಿದರೆ 2 ದಿನ ವೇತನಕ್ಕೆ ಕತ್ತರಿ ಹಾಕಲಾಗುತ್ತಿದೆ. ಒಂದು ದಿನ ನೌಕರರು ರಜೆಯನ್ನು ಹಾಕಿದ್ರೆ 2 ದಿನದ ವೇತನ ಕಟ್ ಮಾಡುತ್ತಿದ್ದಾರೆ. ಹೀಗೆ ಮಾಡಿದ್ರೆ ಕೆಲಸ ಮಾಡೋದು ಹೇಗೆ ಎಂಬುವುದು ನೌಕರರ ಅಳಲಾಗಿದೆ.

8 ಗಂಟೆ ಒಟಿ ಮಾಡಿದರೆ 3-4 ಗಂಟೆ ಒಟಿ ಹಣ ಕೊಡುವುದು ಅದು ತಮ್ಮ ಜೇಬಿನಿಂದ ಕೊಡುತ್ತಿರುವರಂತೆ ಕೆಂಗಣ್ಣು ಬೀರಿ ಅಧಿಕಾರಿಗಳು ಮಂಜೂರು ಮಾಡುವರು ಎಂಬ ಆರೋಪ ದಶಕಗಳಿಂದಲೂ ಕೇಳಿ ಬರುತ್ತಿದೆ. ಆದರೆ ಈವರೆಗೂ ಈ ಬಗ್ಗೆ ಅಧಿಕಾರಿಗಳ ವಿರುದ್ಧ ಯಾವುದೇ ತನಿಖೆ ನಡೆಸದಿರುವುದು ಮಾತ್ರ ಸೋಜಿಗವಾಗಿದೆ.

ಇನ್ನು ನೌಕರರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಇದ್ದಕ್ಕೆ ಈಗಾಗಲೇ ಅನೇಕ ಘಟನೆಗಳು ಸಾಕ್ಷಿಯಾಗಿವೆ. ನೌಕರರು ಒಂದು ಶಿಫ್ಟ್ ಮುಗಿಸಿ, ಮತ್ತೊಂದು ಶಿಫ್ಟ್ ಒಟಿಯಾಗಿ ಕೆಲಸ ಮಾಡಿದರೆ ಮಾಡೋದು 8 ಗಂಟೆ ಒಟಿಯಾದರೂ ನೌಕರರಿಗೆ ಸಂಪೂರ್ಣ ಒಟಿ ನೀಡದೇ, 4 ಗಂಟೆಗೆ ಒಟಿಯ ಹಣವನ್ನು ಮಾತ್ರ ವೇತನದಲ್ಲಿ ಸೇರಿಸುತ್ತಿದ್ದಾರೆ.

ಒಟಿಯನ್ನು ಇಂತಿಷ್ಟು ಸಮಯದವರೆಗೆ ಮಾತ್ರವೇ ಮಾಡಬೇಕು ಎಂಬುದು ಕಾರ್ಮಿಕ ನಿಯಮ ಹೇಳುತ್ತದೆ. ಆದರೆ ಅದನ್ನು ಮೀರಿ 8 ಗಂಟೆಯ ಒಟಿ ಮಾಡಿಸಿಕೊಳ್ಳುತ್ತಿರೋದು ಆಘಾತಕಾರಿ ಸಂಗತಿ. ಜತೆಗೆ ಇದೇ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಅಪಘಾತಕ್ಕೂ ಕಾರಣವಾಗುತ್ತಿದೆ ಎಂಬುದರ ಬಗ್ಗೆ ಇತ್ತೀಚೆಗೆ ನಡೆಸಿದ ತನಿಖೆಯೊಂದು ಬಹಿರಂಗ ಪಡಿಸಿದೆ.

ಹೀಗಾಗಿ ಈ ಬಗ್ಗೆ ಸಾರಿಗೆ ಸಚಿವರು ಗಮನಹರಿಸಿ ಸಂಬಂಧಪಟ್ಟ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ವಿವಿಧ ಮಟ್ಟದ ಅಧಿಕಾರಿಗಳ ಜತೆ ತುರ್ತಾಗಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಂಡರೆ ಮುಂದಾಗುವ ಇನಷ್ಟು ಅಪಘಾತಗಳನ್ನು ತಪ್ಪಿಸುವ ಜತೆಗೆ ನೌಕರರು ಒತ್ತಡದಲ್ಲಿ ಕೆಲಸ ಮಾಡುವುದು ತಪ್ಪಿಸಬಹುದಾಗಿದೆ.

ಇದರ ಜತೆಗೆ ಪ್ರಮುಖವಾಗಿ ವಾರದ ರಜೆಯನ್ನು ಕಡ್ಡಾಯವಾಗಿ ಅಧಿಕಾರಿಗಳು ನೀಡಬೇಕು. ಈ ವೇಳೆ ಯಾವುದೆ ಗೈರು ಹಾಜರಿಯನ್ನು ತೋರಿಸದೆ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ನೇರವಾಗಿ ತಲುಪಿಸುವ ಕೆಲಸವಾಗಬೇಕು. ಈ ಬಗ್ಗೆ ಸಚಿವರು ಮತ್ತು ಎಂಡಿಗಳು ಗಮನ ಹರಿಸಬೇಕು ಎಂಬುವುದು ನೌಕರರ ಮನವಿಯಾಗಿದೆ.

1 Comment

  • ಸಾರಿಗೆ ನಿಗಮದ ಆ ನೌಕರರು ಈ ದೌರ್ಜನ್ಯ ಸಲುವಾಗಿ ಬಾದಿತರೆಲ್ಲರೂ ತಮ್ಮ ತಮ್ಮ ಹಂತದಲ್ಲಿ ಕಾರ್ಮಿಕ ಆಯುಕ್ತರರಿಗೆ ದೂರು ನೀಡಲು ಮುಂದಾಗಬೇಕು. ಈ ಮುಂದಾಗದಿರುವ ದೌರ್ಬಲ್ಯ ವೇ ಆಡಳಿತ ವರ್ಗದವರಿಗೆ ಮೇಲುಗೈ ಆಗಿರುವುದು.

    ಪ್ರಚಾರವನ್ನು ಬಿಟ್ಟು ತಮ್ಮ ತಮ್ಮ ಹಂತದ ಕಾನೂನು ಹೋರಾಟ ಕ್ಕೆ ಮೊದಲು ಮುಂದಾಗಿ. ಸರ್ಕಾರದ ಗಮನಕ್ಕೆ ಬರಲಿ.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್