CrimeNEWSನಮ್ಮರಾಜ್ಯ

KSRTC: ಮಹಿಳಾ ಕಂಡಕ್ಟರ್‌ ಮೇಲೆ ಹಲ್ಲೆಗೈದ ಆರೋಪಿ ಪ್ರಯಾಣಿಕ ಜೈಲುಪಾಲು

ವಿಜಯಪಥ ಸಮಗ್ರ ಸುದ್ದಿ

ಗುಂಡ್ಲುಪಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಮಹಿಳಾ ಕಂಡಕ್ಟರ್‌ ಮೇಲೆ ಸೋಮವಾರ ಸಂಜೆ ಹಲ್ಲೆ ಮಾಡಿದ ಪ್ರಯಾಣಿಕ ಚಾಮರಾಜನಗರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಸೋಮವಾರ (ಅ.23) ಸಂಜೆ ಘಟನೆ ನಡೆದಿದ್ದು, ಕಂಡಕ್ಟರ್‌ ವಿಜಯಕುಮಾರಿ ಎಂಬುವರ ಮೇಲೆ ಹಲ್ಲೆ ಮಾಡಿದ ಅಬ್ದುಲ್‌ ಸ್ಟಿಫನ್‌ ಎಂಬಾತನೆ ಈಗ ಮಾಡಿದ ತಪ್ಪಿಗೆ ಜಾಮೀನು ರಹಿತ ಸಕ್ಷನ್‌ನಡಿ ಜೈಲು ಸೇರಿದ್ದಾನೆ.

ಘಟನೆ ವಿವರ: ಸೋಮವಾರ ಸಂಜೆ 4.30ರ ಸುಮಾರಿಗೆ ಮೈಸೂರು – ಗುಂಡ್ಲುಪೇಟೆ ನಡುವೆ ಕಾರ್ಯಾಚಣೆ ಮಾಡುತ್ತಿದ್ದ KSRTC ಬಸ್‌ (ಕೆಎ 10- ಎಫ್‌ 0355) ಗುಂಡ್ಲುಪೇಟೆ ಬಸ್‌ ನಿಲ್ದಾಣಕ್ಕೆ ಬರುತ್ತಿದ್ದಂತೆ ಮೈಸೂರು ಕಡೆಗೆ ಹೋಗುವ ಪ್ರಯಾಣಿಕರು ಓಡಿ ಬಂದಿದ್ದಾರೆ. ಈ ವೇಳೆ ನಿರ್ವಾಹಕಿ ವಿಜಯಕುಮಾರ್‌ ಅವರು ಬಸ್‌ ಒಳಗಡೆ ಇರುವ ಎಲ್ಲರೂ ಇಳಿದ ಬಳಿಕ ನೀವು ಬಸ್‌ ಹತ್ತಿ ಎಂದು ಪ್ರಯಾಣಿಕರಿಗೆ ಹೇಳಿದ್ದಾರೆ.

ಆದರೆ, ಆ ಪ್ರಯಾಣಿಕರಲ್ಲಿ ಒಬ್ಬನಾದ ಅಬ್ದುಲ್‌ ಎಂಬಾತ, ಎಲ್ಲರೂ ಇಳಿಯುವವರೆಗೂ ನಾವು ಕಾದುಕೊಂಡು ನಿಲ್ಲಬೇಕಾ ಎಂದು ಗಲಾಟೆ ಮಾಡಿ ಜನರು ಇಳಿಯುತ್ತಿರುವಾಗಲೇ ಬಸ್‌ ಹತ್ತಿದ್ದಾನೆ ಈ ವೇಳೆ ಸ್ವಲ್ಪ ಕಾಯಿರಿ ಎಂದ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕರೇ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿ ಗೂಸಾ ಕೊಡಲು ಮುಂದಾಗಿದ್ದಾರೆ.

ಈ ವೇಳೆ ಆತನಿಗೆ ಹೊಡೆಯುವುದು ಬೇಡ ಪೊಲೀಸ್‌ ಠಾಣೆಗೆ ಬಸ್‌ ತೆಗೆದುಕೊಂಡು ನಡೆಯಿರಿ ನಾವೇ ಬಂದು ಸಾಕ್ಷಿ ಹೇಳುತ್ತೇವೆ ಎಂದು ಒಳಗಿದ್ದ ಕೆಲ ಪ್ರಯಾಣಿಕರು ಹೇಳಿದ್ದಾರೆ. ಪೊಲೀಸ್‌ ಠಾಣೆ ಎನ್ನುತ್ತಿದ್ದಂತೆ ಆರೋಪಿ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದ್ದ, ಅಷ್ಟರಲ್ಲಿ ನಿಲ್ದಾಣದ ಅಧಿಕಾರಿಗಳು ಮತ್ತು ಪ್ರಯಾಣಿಕರು ಆತನ ಸುತ್ತುವರಿದು ಹಿಡಿದುಕೊಂಡಿದ್ದಾರೆ.

ಬಳಿಕ ಗುಂಡ್ಲುಪೇಟೆ ಪೊಲೀಸ್‌ ಠಾಣೆಗೆ ಆರೋಪಿ ಅಬ್ದುಲ್‌ ಸ್ಟಿಫನ್‌ ಸಹಿತ ಪ್ರಯಾಣಿಕರಿದ್ದ ಬಸ್‌ನಲ್ಲೇ ಹೋಗಿ ಕಂಡಕ್ಟರ್‌ ದೂರು ನೀಡಿದ್ದಾರೆ. ಕಂಡಕ್ಟರ್‌ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು ಆತನ ವಿರುದ್ಧ ಐಪಿಸಿ 1860, 332 ಮತ್ತು 354 ರಡಿ ಬಂಧಿಸಿ ಚಾಮರಾಜನಗರ ಜೈಲಿಗೆ ಕಳುಹಿಸಿದ್ದಾರೆ. ಸದ್ಯ ಈಗ ಕಂಬಿ ಎಣಿಸುತ್ತಿದ್ದಾನೆ.

ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ ಶಿಕ್ಷ ತಪ್ಪಿದ್ದಲ್ಲ: ಕರ್ತವ್ಯ ನಿರತ ಚಾಲನಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ ಪ್ರಯಾಣಿಕರು ಎಂಥ ಸಮಸ್ಯೆಗೆ ಸಿಲುಕುತ್ತಾರೆ ಎಂಬುದಕ್ಕೆ ಇದು ತಾಜಾ ನಿದರ್ಶನವಾಗಿದೆ. ಪ್ರಯಾಣಿಕರು ಕೂಡ ಸಾರಿಗೆ ಬಸ್‌ ಚಾಲಕರು ಮತ್ತು ನಿರ್ವಾಹಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಇಲ್ಲ ನಾವು ಮಾಡಿದ್ದೆ ಸರಿ ಎಂದು ನಡೆದುಕೊಂಡರೆ. ಈ ರೀತಿ ಕಂಬಿ ಎಣಿಸಬೇಕಾಗುತ್ತದೆ. ಹೀಗಾಗಿ ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ ಶಿಕ್ಷ ತಪ್ಪಿದ್ದಲ್ಲ ಎಂಬುದರ ಬಗ್ಗೆ ಪ್ರಯಾಣಿಕರು ಅರಿತುಕೊಳ್ಳಬೇಕು.

ವಕೀಲರಾದ ಎಚ್‌.ಬಿ.ಶಿವರಾಜು ಹೇಳಿದ್ದೇನು?: ಈ ಹಿಂದೆ ಚಾಲನಾ ಸಿಬ್ಬಂದಿ ಹಲ್ಲೆಗೊಳಗಾದರೆ ಅವರನ್ನು ನಿಗಮದ ಅಧಿಕಾರಿಗಳೇ ಬೆದರಿಸಿ ದೂರು ದಾಖಲಿಸದಂತೆ ತಡೆಯುತ್ತಿದ್ದರು. ಈಗ ಕಾಲ ಬದಲಾಗುತ್ತಿದ್ದು ಅಧಿಕಾರಿಗಳ ಮನಸ್ಸುಕೂಡ ಬದಲಾಗಿದೆ. ಹೀಗಾಗಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು, ಅವರು ಪ್ರಯಾಣಿಕರಾಗಿರಲಿ ಇಲ್ಲ ನಮ್ಮ ನೌಕರರೇ ಆಗಿರಲಿ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದು ನಿಜಕ್ಕೂ ಒಳ್ಳೆ ಬೆಳವಣಿಗೆಯೆ ಎಂದು ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು ತಿಳಿಸಿದ್ದಾರೆ.

ಈ ಹಲ್ಲೆ ಸಂಬಂಧ ವಿಷಯ ತಿಳಿಯುತ್ತಿದಂತೆ ಶಿವರಾಜು ಅವರು ಸಂಬಂಧ ಸಾರಿಗೆ  ಮತ್ತು ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿ  ಪ್ರಕರಣ ದಾಖಲಿಸಲು ನಿರಂತರವಾಗಿ ಶ್ರಮಿಸಿದ್ದಾರೆ.

Leave a Reply

error: Content is protected !!
LATEST
KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ