KSRTC- ಫೋನ್ ಪೇ ಹಗರಣ- ₹20 ಸಾವಿರ ಲಂಚ ಕೊಟ್ಟ ಡಿಸಿ, ಡಿಟಿಒ ಅಮಾನತುಮಾಡಿ: ಎಂಡಿ ಭೇಟಿ ಮಾಡಿದ ನಾಗರಾಜ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ತುಮಕೂರು ವಿಭಾಗದಲ್ಲಿ ನಡೆದಿರುವ ಫೋನ್ ಪೇ ಹಗರಣದ ಬಗ್ಗೆ ಸಲ್ಲಿಸಿದ್ದ ದೂರು ಪ್ರಕರಣವನ್ನು ಮುಚ್ಚಿ ಹಾಕಲು 20000 ರೂ.ಗಳನ್ನು ಲಂಚವಾಗಿ ನನಗೆ ನೀಡಿರುವ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ಹಾಗೂ ವಿಭಾಗೀಯ ಸಂಚಲನಾಧಿಕಾರಿಯಾದ ಕೆ.ಬಸವರಾಜು ಅವರನ್ನು ಅಮಾನುತು ಪಡಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕ ವಿ.ಅನುಕುಮಾರ್ ಅವರಿಗೆ ಸಿ.ನಾಗರಾಜು ಗೂಳೂರು ದಾಖಲೆ ಸಹಿತ ದೂರು ಸಲ್ಲಿಸಿದ್ದಾರೆ.
ಗುರುವಾರ ಬೆಂಗಳೂರಿನ ಶಾಂತಿನಗರದಲ್ಲಿರುವ ಸಂಸ್ಥೆ ಕೇಂದ್ರ ಕೇಚೇರಿಗೆ ಹೋಗಿ ಜಾಗೃತ ವಿಭಾಗದ ನಿರ್ದೇಶಕಿ ನಂದಿನಿ ಅವರಿಗೆ ಲಂಚದ ರೂಪದಲ್ಲಿ ಕೊಟ್ಟಿದ್ದ 20000 ರೂ. ಹಣದ ಜತೆಗೆ ದಾಖಲೆಗಳನ್ನು ನೀಡಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸಂಬಂಧಿಸಿದಂತೆ ತುಮಕೂರು ವಿಭಾಗದ ಡಿಸಿ ಮತ್ತು ಡಿಟಿಒ ಸಂಸ್ಥೆಯ ಮಾನ ಮರ್ಯಾದಿ ಕಳೆದು ಸಾವಿರ ರೂಪಾಯಿಗಾಗಿ ಭಿಕ್ಷೆ ಬೇಡುತ್ತಿದ್ದಾರೆ. ಹೀಗಾಗಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡು ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ತುಮಕೂರು ಬಸ್ ನಿಲ್ದಾಣದ ಸಂಚಾರ ನಿಯಂತ್ರಕರಿಂದ ಲಂಚ ವಸೂಲಿ ಮಾಡಿರುವ ಬಗ್ಗೆಯೂ ತನಿಖೆ ನಡೆಸಿ ಈ ಅಕ್ರಮದ ಹಿಂದೆ ಇರುವ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅಮಾನುತು ಮಾಡುವ ಮೂಲಕ ಭ್ರಷ್ಟರ ಹೆಡೆಮುರಿಕಟ್ಟಬೇಕು ಎಂದು ಕೋರಿದ್ದಾರೆ.
ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ವಿಭಾಗೀಯ ಸಂಚಲನಾಧಿಕಾರಿ ಬಸವರಾಜು ಅವರು ನನ್ನ ಮೇಲೆ ಇಲ್ಲ ಸಲ್ಲದ ರೀತಿಯಲ್ಲಿ ಒತ್ತಡ ತಂದು 03-01-2025 ರಂದು ನೀಡಿರುವ ದೂರಿನ ಅರ್ಜಿಯನ್ನು ವಾಪಸ್ ಪಡೆಯುವಂತೆ ಪೀಡಿಸುತ್ತಿದ್ದಾರೆ. ಅಲ್ಲದೆ ಇವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾಕ್ಷಿ ನಾಶಪಡಿಸಲು ಪ್ರಯತ್ನಿಸಿರುತ್ತಾರೆ ಎಂದು ಆರೋಪಿಸಿದರು.
ಜ.12ರಂದು 20 ಸಾವಿರ ಕೊಟ್ಟರು: 12-01-2025ರ ಭಾನುವಾರ ಮಧ್ಯಾಹ್ನ 12ರ ಸಮಯದಲ್ಲಿ ನನ್ನ ಸ್ನೇಹಿತರು ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಕಾರಣ ಹಾಗೂ ನಾನು ಬಸ್ ನಿಲ್ದಾಣದಲ್ಲಿರುವಾಗ ನಿಗಮ ತುಮಕೂರು ವಿಭಾಗದ ತುಮಕೂರು ಘಟಕ-1ಕ್ಕೆ ಸೇರಿದ ತುಮಕೂರು ನಗರದ ನೂತನ ಬಸ್ ನಿಲ್ದಾಣ ಡಿ. ದೇವರಾಜ ಅರಸ್ ಬಸ್ ನಿಲ್ದಾಣದ ಸಹಾಯಕ ಸಂಚಾರ ನರೀಕ್ಷಕ (ಎ.ಟಿ.ಐ) ಬಿ.ಆರ್ ನಾಗರಾಜು ಅವರು ಫೋನ್ ಪೇ ಹಗರಣದ ಪ್ರಕರಣದ ಬಗ್ಗೆ ಮಾತನಾಡಲು ಬಸ್ ನಿಲ್ದಾಣದ ಸಂಚಾರ ನಿಯಂತ್ರಕರ ವಿಶ್ರಾಂತಿ ಕೊಠಡಿಗೆ ಕರೆದುಕೊಂಡು ಹೋದರು.
ಅಲ್ಲಿ ನೀವು 03-01-2025 ರಂದು ನೀಟಿರುವ ಫೋನ್ ಪೇ ಹಗರಣದ ಪ್ರಕರಣದ ಬಗ್ಗೆ ಸಲ್ಲಿಸಿರುವ ದೂರು ಅರ್ಜಿಯನ್ನು ವಾಪಸ್ ಪಡೆದು ಪ್ರಕರಣವನ್ನು ಮುಚ್ಚಿಹಾಕುವಂತೆ ತಿಳಿಸಿ ತುಮಕೂರು ಬಸ್ ನಿಲ್ದಾಣದ ಶಿವಮೊಗ್ಗ ಅಂಕಣದ ಆಗಮನ-ನಿರ್ಗಮನಗಳ ಪುಸ್ತಕದ 17-07-2024 ರ ಪುಟ ಸಂಖ್ಯೆ 15-16ರ, ನಾಲ್ಕು ಹಾಳೆಗಳ ಮಧ್ಯೆ ಸುತ್ತಿ ನನ್ನ ಪ್ಯಾಂಟಿನ ಜೇಬಿಗೆ 20 ಸಾವಿರ ರೂ. ಹಣವನ್ನು ನಾಗರಾಜು ಅವರು ಬಲವಂತದಿಂದ ಏಕಾಏಕಿ ಇಟ್ಟರು.
ಈಗ ನಾನು (ನಾಗರಾಜು) ದೂರು ಮನವಿ ಪತ್ರದೊಂದಿಗೆ ನನಗೆ ನೀಡಿದ ಹಣದ ಕ್ರಮಸಂಖ್ಯೆಯಲ್ಲಿ ತಿಳಿಸಿರುವ ವಿವರದಂತೆ 500 ರೂ.ಗಳ ಮುಖ ಬೆಲೆಯ ಒಟ್ಟು 40 ನೋಟುಗಳ ಮೊತ್ತ 20000 ರೂಪಾಯಿ ನಗದು ಹಣವನ್ನು ಅಡಕಗೊಳಿಸಿರುತ್ತೇನೆ. ಹಾಗೂ ತುಮಕೂರು ಬಸ್ ನಿಲ್ದಾಣದ ಶಿವಮೊಗ್ಗ ಅಂಕಣದ ಆಗಮನ-ನಿರ್ಗಮನಗಳ ನಾಲ್ಕು ಪುಟಗಳ ಹಾಳೆಯಲ್ಲಿ ಸುತ್ತಿಕೊಟ್ಟಿದ್ದ ಹಾಳೆಯನ್ನು ಸಹ ಲಗತ್ತಿಸಿದ್ದೇನೆ.
ಈ ರೀತಿ ಫೋನ್ ವೇ ಹಗರಣ ನಡೆಸಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಹಾಗೂ ವಿಭಾಗೀಯ ಸಂಚಲನಾಧಿಕಾರಿಯಾದ ಕೆ.ಬಸವರಾಜು ಅವರು ಈ ಹಗರಣವನ್ನು ಮುಚ್ಚಿಹಾಕಲು ನನಗೆ ಲಂಚದ ರೂಪದಲ್ಲಿ ಈ ರೀತಿ 20,000 ರೂ.ಗಳ ಹಣವನ್ನು ನೀಡಿದ್ದು, ಈ ಇಬ್ಬರು ಅಧಿಕಾರಿಗಳ ವಿರುದ್ಧ ದಯೇ ದಕ್ಷಿಣೆ ತೋರದೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅಮಾನತುಪಡಿಸಿ ತುಮಕೂರು ವಿಭಾಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕೊನೆ ಮೊಳೆ ಹೊಡೆಯಬೇಕು ಎಂದು ಎಂಡಿ ಅವರಲ್ಲಿ ಮನವಿ ಮಾಡಿದ್ದಾರೆ.
ಇನ್ನು ಈಗಾಗಲೇ ಮತ್ತೊಂದು ಪ್ರಕರಣದಲ್ಲಿ ಅಮಾನುತುರುವ ಸಂಚಾರ ನಿಯಂತ್ರಕ ಎಸ್.ಪುಟ್ಟರಾಜು ಅರು ಕೇವಲ 5 ರೂಪಾಯಿ ಲಂಚ ಪಡೆದರು ಎಂಬ ಕಾರಣ ನೀಡಿ ಅಮಾನತು ಮಾಡಲಾಗಿದೆ. ಆದರೆ ಈ ರೀತಿ ಲಕ್ಷ ಲಕ್ಷಗಟ್ಟಲೆ ಭ್ರಷ್ಟಾಚಾರವೆಸಗುತ್ತಿರುವ ಈ ಇಬ್ಬರು ಅಧಿಕಾರಿಗಳು ಸೇರಿ ಫೋನ್ ಪೇ ಹಗರಣವನ್ನು ಮುಚ್ಚಹಾಕಲು ಸಹಾಯಕ ಸಂಚಾರ ನಿರೀಕ್ಷಕ ಬಿ.ಆರ್.ನಾಗರಾಜು ಅವರ ಮೂಲಕ 20000 ರೂ. ಕೊಡಿಸುವಂತೆ ಮಾಡಿ ಭ್ರಷ್ಟಾಚಾರವೆಸಗಿರುವ ಇವರಿಗೆ ಯಾವ ಶಿಕ್ಷೆ ವಿಧಿಸುತ್ತೀರೋ ಅದು ನಿಮ್ಮ ಕೈಯಲೇ ಇದೆ ಎಂದು ಮನವಿ ಮಾಡಿದ್ದಾರೆ.