NEWS

KSRTC ಬೆಂಗಳೂರು: ತಿರುಪತಿಗೆ ಚಿಂತಾಮಣಿ –  ಕಡಪ ಮಾರ್ಗವಾಗಿ ಹೆಚ್ಚಿನ ಬಸ್‌ ಸೌಲಭ್ಯ ಕಲ್ಪಿಸಿ; ಪ್ರಯಾಣಿಕ ಶ್ರೀಸಾಯಿ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಐಟಿಪಿಎಲ್ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ನಿರ್ವಾಹಕರು ಕರ್ನಾಟಕ ಮತ್ತು ಆಂಧ್ರ ಗಡಿಯಿಂದ ಬೆಂಗಳೂರಿನಿಂದ ಕಡಪ ಮತ್ತು ಮದನಪಲ್ಲಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬ ತೊಂದರೆ ನೀಡುತ್ತಿದ್ದಾರೆ. ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಸಮರ್ಪಕವಾಗಿ ಇದ್ದರೆ ಈ ಸಮಸ್ಯೆ ಆಗುವುದಿಲ್ಲ ಎಂದು ಶ್ರೀ ಸಾಯಿ ತಿಳಿಸಿದ್ದಾರೆ.

ಪ್ರತಿದಿನ ನಾವು ಈ ಮಾರ್ಗವಾಗಿ ಬಸ್‌ನಲ್ಲೇ ಪ್ರಯಾಣ ಮಾಡುತ್ತಿದ್ದೇವೆ. ಈ ಮಾರ್ಗಗಳಲ್ಲಿ ಸಮರ್ಪಕವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಇಲ್ಲದ ಕಾರಣ ಖಾಸಗಿ ಬಸ್‌ನವರ ಉಪಟಳ ಹೆಚ್ಚಾಗಿದೆ. ತಮಗೆ ಇಷ್ಟಬಂದ ರೀತಿಯಲ್ಲಿ ಪ್ರಯಾಣ ದರ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಈ ಮಾರ್ಗಗಳಲವಲಿ ಪ್ರಯಾಣಿಸುವವರು ಸಮರ್ಪಕವಾದ ಬಸ್‌ಗಳಿಲ್ಲದೆ ಬಸ್‌ ಟಾಪ್‌ನ ಮೇಲೆ ಕುಳಿತು ಪ್ರಯಾಣಿಸುತ್ತಿದ್ದಾರೆ. ಇದರಿಂದ ಹಲವು ತೊಂದರೆಗಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ ನಮಗೆ ದಯವಿಟ್ಟು ಅಂತಾರಾಜ್ಯ ಕೆಎಸ್‌ಆರ್‌ಟಿಸಿ ಬಸ್‌ ಸೇವೆಯನ್ನು ಹೆಚ್ಚಿಸಿ ಕರ್ನಾಟಕ ಮತ್ತು ಆಂಧ್ರದ ಗಡಿಗಳಿಂದ ಕರ್ನಾಟಕ ಮತ್ತು ಆಂಧ್ರದ ಗಡಿಭಾಗದ ಖಾಸಗಿ ಬಸ್‌ನವರಿಗೆ ಕಡಿವಾಣಹಾಕ ಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಿನಿಂದ ಚಿಂತಾಮಣಿ – ಮದನಪಲ್ಲಿ – ರಾಯಚೋತಿ – ಕಡಪ ಮತ್ತು ಬೆಂಗಳೂರಿನಿಂದ ಚಿಂತಾಮಣಿ -ಮದನಪಲ್ಲಿ ಮತ್ತು ಮದನಪಲ್ಲಿ ಮೂಲಕ ಕೆಎಸ್ಆರ್ಟಿಸಿ ಆದಾಯವನ್ನು ಕಳೆದುಕೊಳ್ಳುತ್ತಿರುವ ಕರ್ನಾಟಕ ಮತ್ತು ಆಂಧ್ರ ಸರ್ಕಾರದಿಂದ ಗೆಜೆಟ್ ಅಧಿಸೂಚನೆಯನ್ನು ದಯವಿಟ್ಟು ಅನುಮೋದಿಸಿ ಮತ್ತು ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನಿಂದ ತಿರುಪತಿಗೆ ಯಲಹಂಕ – ಚಿಂತಾಮಣಿ – ಮದನಪಲ್ಲಿ – ಪೈಲರ್ ತಿರುಪತಿ ಮಾರ್ಗದ ಪ್ರಯಾಣಿಕರು ನಮಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆಯನ್ನು ಪ್ರತಿ ಅರ್ಧಗಂಟೆಗೆ ಒಂದರಂತೆ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂವಾಗಲಿದೆ ಎಂದು ಒತ್ತಾಯಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ ಸೇವೆಯನ್ನು ಕರ್ನಾಟಕ ಮತ್ತು ಆಂಧ್ರದ ಗಡಿಗಳಲ್ಲಿ ದಿನನಿತ್ಯ ಮತ್ತು ಬೆಂಗಳೂರಿನಿಂದ ಕಡಪಕ್ಕೆ ವಾರಾಂತ್ಯ ಮತ್ತು ಹಬ್ಬದ ವಿಶೇಷ ದಿನಗಳಲ್ಲೂ ಭಾರಿ ಬೇಡಿಕೆಯಿದೆ. ನಿತ್ಯ ಬೆಳಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಬಸ್‌ ಸೇವೆ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಕರ್ಯ ಕಲ್ಪಿಸುವುದರಿಂದ ನಿಗಮಕ್ಕೂ ಆದಾಯ ಹೆಚ್ಚಾಗಲಿದೆ. ಈ ಮಾರ್ಗವಾಗಿ ಚಿಕ್ಕಬಳಾಪುರ ವಿಭಾಗದ ಚಿಂತಾಮಣಿ ಡಿಪೋನಿಂದ ಬಸ್‌ಗಳ ಕಾರ್ಯಾಚರಣೆ ಮಾಡಬೇಕು. ಇದರಿಂದ ನಿಗಮಕ್ಕೂ ಹೆಚ್ಚಿನ ಆದಾಯ ಬರಲಿದೆ ಎಂದು ತಿಳಿಸಿರುವ ಅವರು, ಈಗಾಗಲೇ ಈ ಎರಡು ರಾಜ್ಯಗಳ ನಡುವೆ ಬಸ್‌ಗಳು ಸಂಚರಿಸುವುದಕ್ಕೆ ಒಪ್ಪಂದವಾಗಿದ್ದು, ಇನ್ನೂ ಕೂಡ ಅದು ಜಾರಿಗೆ ಬಂದಿಲ್ಲ. ಇದನ್ನು ಜಾರಿ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಕೆಎಸ್‌ಅರ್‌ಟಿಸಿ ಎಂಡಿ ಅನ್ಬುಕುಮಾರ್‌ ಅವರನ್ನು ವಿಜಯಪಥ ದೂರವಾಣಿ ಮೂಲಕ ಸಂಪರ್ಕಿಸಿತಾದರೂ ಅವರು ಫೋನ್‌ ಕರೆಯನ್ನು ಸ್ವೀಕರಿಸಲಿಲ್ಲ.

Leave a Reply

error: Content is protected !!
LATEST
2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ