ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ 2020ರ ವೇತನ ಪರಿಷ್ಕರಣೆ ಸೌಲಭ್ಯ 2020 ಜನವರಿ 1ರಿಂದ 2023 ಮಾರ್ಚ್‌ನಿಂದೀಚೆಗೆ ಸಿಕ್ಕಿಲ್ಲದಿರುವ ಬಗ್ಗೆ ಚರ್ಚಿಸಲು ಸಾರಿಗೆ ಸಚಿವರ ಭೇಟಿ ಮಾಡಿದ ಮೈಸೂರು ವಿಭಾಗದ ನಿವೃತ್ತ ನೌಕರರಿಗೆ ನೀವು ಎಂಡಿ ಅನ್ಬುಕುಮಾರ್ ಭೇಟಿ ಮಾಡಿ ಎಂದು ಸಚಿವರು ಹೇಳಿದ್ದಾರೆ.
ಇಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಸಾರಿಗೆ ಕೇಂದ್ರ ಕಚೇರಿಗೆ ಬೆಳಗ್ಗೆಯೇ ಬಂದು ಕಾದು ಕುಳಿತ ನಿವೃತ್ತ ಅಧಿಕಾರಿಗಳು ಮತ್ತು ನೌಕರರಾದ ನಟರಾಜ್, ನಾಗಮಣಿ, ದೇವರಾಜು, ರಾಮ್ ಪ್ರಸಾದ್ ಇತರರು ಸಂಜೆವರೆಗೂ ಕಾದು ಕಾದು ಸುಸ್ತಾಗಿದ್ದಾರೆ.
ಇನ್ನೇನು ಬಂದದಾರಿಗೆ ಸುಂಕವಿಲ್ಲ ಎಂಬುಂತೆ ಸಾರಿಗೆ ಸಚಿವರು ಮತ್ತು ಎಂಡಿ ಅವರಿಗೆ ಕಾದು ಕಾದು ನಿರಾಸೆಗೊಂಡು ಇನ್ನೇನು ವಾಪಸ್ ಹೋಗೋಣ ಎಂಬಷ್ಟರಲ್ಲಿ ಸಾರಿಗೆ ಸಚಿವ ರಾಮುಲಿಂಗಾರೆಡ್ಡಿ ಅವರು ಆಗಮಿಸಿದ್ದಾರೆ. ಸದ್ಯ ಬಂದರಲ್ಲ ಎಂಬ ಖುಷಿಯಲ್ಲಿ ಈ ನಿವೃತ್ತ ನೌಕರರ ನಿಯೋಗ ಅವರನ್ನು ಭೇಟಿ ಮಾಡಿ ಮನವಿ ಪತ್ರ ಕೊಟ್ಟಿದೆ. ಆದರೆ, ಈ ನಿಯೋಗದಲ್ಲಿದ್ದವರ ಮಾತನು ಕೇಳಿಸಿ ಕೊಳ್ಳದೆ ಉದಾಸೀನದಿಂದ ಸಚಿವರು ವರ್ತಿಸಿದ್ದಾರೆ.
ಅಲ್ಲದೆ ಈ ಬಗ್ಗೆ ಈಗಾಗಲೇ ನಾನು ಎಂಡಿ ಅವರ ಬಳಿ ಮಾತನಾಡಿದ್ದೇನೆ ಅವರನ್ನು ನೀವು ಭೇಟಿ ಮಾಡಿ ಎಂದು ಹೇಳಿದ್ದಾರೆ. ಬಳಿಕ ಎಂಡಿ ಅವರನ್ನು ಅವರ ಕೇರಿಯಲ್ಲಿ ಭೇಟಿ ಮಾಡಲು ಈ ನಿಯೋಗ ಹೋಗಿದೆ. ಆದರೆ, ಸಂಜೆ 5.30ರ ವರೆಗೂ ಎಂಡಿ ಅವರಿಗೆ ಕಾದುಕುಳೀತರು ಬರಲೇ ಇಲ್ಲ. ಇದರಿಂದ ವಯಸ್ಸಾದ ಜೀವಗಳು ತುಂಬ ಮನನೊಂದು ಮೈಸೂರಿಗೆ ನಿರಾಸೆಯಿಂದಲೇ ತೆರಳಿವೆ.
ಸಾರಿಗೆ ಸಚಿವರು ಮತ್ತು ಎಂಡಿ ಅನ್ಬುಕುಮಾರ್ ಅವರು ನಿವೃತ್ತ ನೌಕರರಿಗೆ ಎಲ್ಲ ಸೌಲಭ್ಯ ಕಲ್ಪಿಸಿಕೊಡುತ್ತೇವೆ ಇದರಲ್ಲಿ ಬೇರೆ ಮಾತಿಲ್ಲ ಎಂದು ಹೇಳಿಕೆ ನೀಡುವುದರಲ್ಲೇ ನಿವೃತ್ತ ನೌಕರರಿಗೆ ನಮ್ಮ ಬೇಡಿಕೆ ಈಡೇರಿಯೇ ಬಿಟ್ಟಿತ್ತು ಎಂಬಷ್ಟು ಆಸೆ ಹುಟ್ಟಿಸುತ್ತಾರೆ. ಬಳಿಕ ಆ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಬೇಜವಾಬ್ದಾರಿ ತೋರಿಸುತ್ತಾರೆ.
ಹಿಂಬಾಕಿಗಾಗಿ ಕಳೆದ ಅಕ್ಟೋಬರ್ 19ರಂದು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಿದರು. ಈ ವೇಳೆ ಸ್ವತಃ ಎಂಡಿ ಅನ್ಬುಕುಮಾರ್ ಅವರೆ ಬಂದು ಧರಣಿ ನಿರತರ ಮನವಿ ಸ್ವೀಕರಿಸಿ ಅತೀಶೀಘ್ರದಲ್ಲೇ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಆದರೆ, ಅವರು ಕೊಟ್ಟ ಭರವಸೆಯನ್ನು ಒಂದು ತಿಂಗಳು ಕಳೆಯುತ್ತದ ಬಂದರೂ ಇನ್ನೂ ಈಡೇರಿಸಿಲ್ಲ. ಇತ್ತ ಇಂದು ಮೈಸೂರಿನಿಂದ ಬಂದ ನಿವೃತ್ತರ ನಿಯೋಗಕ್ಕೂ ಸಿಗಲಿಲ್ಲ. ಈ ರೀತಿ ನಿವೃತ್ತ ನೌಕರರ ಅಲೆಸುವ ಬದಲಿಗೆ ಸರ್ಕಾರ ಮತ್ತು ಆಡಳಿತ ಮಂಡಳಿ ಇಂಥ ನಿರ್ಧಾರ ತೆಗೆದುಕೊಂಡಿದೆ ಎಂದು ಏನಾದರೊಂದು ತೀರ್ಮಾನ ತೆಗೆದುಕೊಂಡರೆ ನಾವು ನಿರಾಳರಾಗುತ್ತೇವೆ. ಅದನ್ನು ಬಿಟ್ಟು ಹೀಗೆ ತ್ರಿಶಂಕು ಸ್ಥಿತಿಯಲ್ಲಿಟ್ಟರೆ ಏನು ಮಾಡುವುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಶಕ್ತಿ ಯೋಜನೆಯಿಂದ ನಿಗಮಗಳ ವಾಹನಗಳಲ್ಲಿ ಜನದಟ್ಟಣೆಯೂ ಶೇ.60ರಿಂದ 89ಕ್ಕೆ ಏರಿಕೆಯಾಗಿದೆ. ಇದರಿಂದ ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಂಡಿದೆ. ಹೀಗಾಗಿ ಯಾವುದೇ ನೆಪವೊಡ್ಡದೇ ನಮಗೆ ಬರಬೇಕಾಗಿರುವುದನ್ನು ನ್ಯಾಯಯುತವಾ ಕೂಡುವುದಕ್ಕೇ ಆದೇಶ ಮಾಡಿ ಎಂದು ಒತ್ತಾಯಿಸಿದ್ದಾರೆ.
ಒಟ್ಟಾರೆ 2024 ಜನರಿಯಿಂದ ಮತ್ತೆ ನೌಕರರಿಗೆ ಮೂಲ ವೇತನ ಹೆಚ್ಚಳ ಮಾಡಬೇಕಿದೆ. ಆದರೆ, 2020ರ ಜನವರಿ ವೇತನ ಹೆಚ್ಚಳ ಹಿಂಬಾಕಿಯ ಬಗ್ಗೆಯೇ ಇನ್ನು ಸರ್ಕಾರ ನಿರ್ಧಾರ ತೆಗೆದುಕೊಂಡಿಲ್ಲ. ಈ ನಡುವೆ 2024ರ ಜನರಿಯಲ್ಲಿ ಮಾಡಬೇಕಿರುವ ವೇತನ ಹೆಚ್ಚಳದ ಬಗ್ಗೆ ಇನ್ನೇನು ಮಾಡುತ್ತೋ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.