ಬೆಂಗಳೂರು: ಎಲೆಕ್ಟ್ರಿಕ್ ಬಸ್‌ಗಳನ್ನು ಹೆಚ್ಚಿಸುವ ನೆಪದಲ್ಲಿ ಸಾರಿಗೆ ನಿಗಮಗಳಿಗೆ ಖಾಸಗಿಯವರ ಪ್ರವೇಶಕ್ಕೆ ಕೇಂದ್ರದ ಬೃಹತ್ ಕೈಗಾರಿಕಾ ಸಚಿವಾಲಯ ಅವಕಾಶ ಮಾಡಿಕೊಟ್ಟಿದೆ. ಇದರ ವಿರುದ್ಧ ಜನಪ್ರತಿನಿಧಿಗಳು ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ ಎಂದು ಸಾರಿಗೆ ನಿಗಮಗಳ ನೌಕರರು ಮತ್ತು ಸಂಘಟನೆಗಳು ಆರೋಪಿಸುತ್ತಿವೆ.
ಬಿಎಂಟಿಸಿ ಸೇರಿ ಎಲ್ಲ ನಾಲ್ಕೂ ಸಾರಿಗೆ ನಿಗಮಗಳನ್ನು ಭಾಗಶಃ ಖಾಸಗಿಯವರಿಗೆ ನೀಡಲು ಒಂದೂವರೆ ದಶಕದ ಹಿಂದೆ ಆಗಿನ ರಾಜ್ಯ ಸರ್ಕಾರದ ಸಾರಿಗೆ ಸಚಿವರು ನಿರ್ಧರಿಸಿದ್ದರು. ಆಗ ನಿಗಮಗಳ ನೌಕರರು, ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಖಾಸಗಿಯವರಿಗೆ ಒಪ್ಪಿಸುವ ನಿರ್ಧಾರವನ್ನು ಕೈಬಿಡಲಾಗಿತ್ತು. ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ಆಗದ ಕೆಲಸವನ್ನು ಈಗಿನ ಕೇಂದ್ರ ಸರ್ಕಾರ ಮಾಡಲು ಹೊರಟಿದೆ.
ನಿಗಮಕ್ಕಿಲ್ಲ ಸಬ್ಸಿಡಿ: ಎಲೆಕ್ಟ್ರಿಕ್ ವಾಹನಗಳನ್ನು ಪ್ರೋತ್ಸಾಹಿಸಲು ಬೃಹತ್ ಕೈಗಾರಿಕಾ ಸಚಿವಾಲಯವು ಫೇಮ್-2 ಯೋಜನೆ ರೂಪಿಸಿತ್ತು. ಈ ಯೋಜನೆಯಡಿ ಬಸ್‌ಗಳಿಗೆ ₹ 39 ಲಕ್ಷದಿಂದ ₹ 50 ಲಕ್ಷದವರೆಗೆ ಸಬ್ಸಿಡಿ ಸಿಗುತ್ತದೆ. ಆದರೆ, ಈ ಸಬ್ಸಿಡಿ ಖಾಸಗಿ ಕಂಪನಿಗಳಿಗಷ್ಟೇ ಸಿಗಲಿದ್ದು, ಸಾರಿಗೆ ನಿಗಮಗಳಿಗೆ ಇಲ್ಲ. ಮಾತ್ರವಲ್ಲ, ಉತ್ಪಾದನಾ ಕಂಪನಿಗಳಿಗೇ ಮುಂದೆ ಬಸ್‌ಗಳನ್ನೂ ನಿರ್ವಹಿಸಲು ಅವಕಾಶ ನೀಡಲಾಗಿದೆ.
ಈಗಾಗಲೇ ಬಿಎಂಟಿಸಿಯಲ್ಲಿ 513 ಇವಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಕೆಎಸ್‌ಆರ್‌ಟಿಸಿಗೆ 50 ಇವಿ ಬಸ್‌ಗಳು ಬಂದಿವೆ. ಮುಂದೆ 300 ಹವಾನಿಯಂತ್ರಣ ರಹಿತ, 200 ಹವಾನಿಯಂತ್ರಿತ ಬಸ್‌ಗಳು ಬರಲಿವೆ. ಈಗ ದೂರದ ಊರಿಗೆ ಎಸಿ ಬಸ್‌ಗಳಿವೆ. ಎಲೆಕ್ಟ್ರಿಕ್ ಬಸ್‌ಗಳು ಬಂದರೆ ಕೆಎಸ್‌ಆರ್‌ಟಿಸಿಯಿಂದಲೂ ಹತ್ತಿರದ ನಗರಗಳಿಗೆ ಎಸಿ ಬಸ್‌ಗಳು ಸಂಚರಿಸಲಿವೆ.
ಇನ್ನು ವಿಶೇಷ ಅಂದರೆ ಈ ಬಸ್‌ಗಳಲ್ಲಿ ನಿರ್ವಾಹಕರು ಮಾತ್ರ ನಿಗಮದವರಾಗಿರುತ್ತಾರೆ ಕಾರಣ ಹೊಸದಾಗಿ ಬರುವ ನಿರ್ವಾಹಕರಿಗೆ ಇದನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಚಾಲಕ, ತಾಂತ್ರಿಕ ಸಿಬ್ಬಂದಿ, ವಾಹನ ನಿರ್ವಹಣೆ ಎಲ್ಲವೂ ಖಾಸಗಿ ಕಂಪನಿಯದ್ದಾಗಿರುತ್ತದೆ. ಏಕೆಂದರೆ ಇದನ್ನು ಕಲಿತವರೆ ಬರುವುದರಿಂದ.
ಮುಚ್ಚಲಿವೆ ಕಾರ್ಯಾಗಾರಗಳು: ಹಿಂದೆ ಟಾಟಾ, ಲೈಲೆಂಡ್ ಸೇರಿದಂತೆ ಯಾವುದೇ ಕಂಪನಿಯಿಂದ ಬಸ್ ಚಾಸಿಗಳನ್ನು ಮಾತ್ರ ಖರೀದಿಸಲಾಗುತ್ತಿತ್ತು. ಆಯಾ ನಿಗಮಗಳ ಕಾರ್ಯಾಗಾರದಲ್ಲಿ ಅದಕ್ಕೆ ‘ಬಾಡಿ’ ಕಟ್ಟಲಾಗುತ್ತಿತ್ತು. ಕಾರ್ಯಾಚರಣೆ ಆರಂಭವಾದ ಮೇಲೆ ಏನೇ ತೊಂದರೆ ಕಾಣಿಸಿಕೊಂಡರೂ ಈ ಕಾರ್ಯಾಗಾರಗಳಲ್ಲಿಯೇ ರಿಪೇರಿ ಮಾಡಲಾಗುತ್ತಿತ್ತು.
ಆದರೆ, ಈಗ ಪೂರ್ಣ ತಯಾರಾದ ಎಲೆಕ್ಟ್ರಿಕ್ ಬಸ್‌ಗಳನ್ನು ಒಡಂಬಡಿಕೆಯ ಆಧಾರದಲ್ಲಿ ನಿಗಮಗಳಿಗೆ ತೆಗೆದುಕೊಳ್ಳಲಾಗುತ್ತಿದೆ. ನಿಗಮಗಳ ಕಾರ್ಯಾಗಾರಗಳಲ್ಲಿ ಈ ಬಸ್‌ಗಳಿಗೆ ಸಂಬಂಧಿಸಿದ ಯಾವುದೇ ಕೆಲಸಗಳು ನಡೆಯುವುದಿಲ್ಲ. ಇವಿ ಬಸ್‌ಗಳು ಹೆಚ್ಚಾದಂತೆ ಒಂದೊಂದೇ ಕಾರ್ಯಾಗಾರಗಳು ಮುಚ್ಚಲಿವೆ ಎಂದು ತಾಂತ್ರಿಕ ಸಿಬ್ಬಂದಿ ತಿಳಿಸಿದ್ದಾರೆ.
ಅಧಿಕ ಪಾವತಿ: ಒಂದು ಬಿಎಂಟಿಸಿ ಬಸ್ ಒಂದು ಕಿ.ಮೀ.ಗೆ ಸರಾಸರಿ ₹ 35ರಿಂದ ₹ 36 ಆದಾಯ ಗಳಿಸುತ್ತದೆ. ಎಲೆಕ್ಟ್ರಿಕ್ ಬಸ್‌ಗಳಿಗೆ ಈಗಿನ ಒಪ್ಪಂದದ ಪ್ರಕಾರ ಕಿ.ಮೀ.ಗೆ ₹ 51.5 ಪಾವತಿಸಬೇಕು. ಅಂದರೆ ಆದಾಯಕ್ಕಿಂತ ಕನಿಷ್ಠ ₹ 15 ಹೆಚ್ಚು ಪಾವತಿ ಮಾಡಬೇಕು. ‘ಹೀಗೆಯೇ ಮುಂದುವರಿದರೆ ನಿಗಮಗಳಲ್ಲಿ ಬಸ್‌ಗಳ ಕಾರ್ಯಾಚರಣೆ ನಷ್ಟದ ಕಾರ್ಯ ಎಂದು ಕೆಲವೇ ವರ್ಷಗಳಲ್ಲಿ ಬಿಂಬಿತವಾಗಲಿದೆ. ಇನ್ನು ಇದರಿಂದ ಖಾಸಗಿಯವರಿಗೆ ಹಸ್ತಾಂತರಿಸುವ ಕೆಲಸ ಸುಲಭವಾಗಲಿದೆ ಎಂಬುವುದು ಸರ್ಕಾರದ ಲೆಕ್ಕಾಚಾರ.
ಖಾಸಗಿ ಕೈಗೆ ಡಿಪೋಗಳು: ಬಿಎಂಟಿಸಿಗೆ ಇವಿ ಬಸ್‌ಗಳನ್ನು ಟಾಟಾ ಮೋಟಾರ್ಸ್ ಕಂಪನಿ ಪೂರೈಸುತ್ತಿದೆ. ಅವರಿಗೆ ಈಗಾಗಲೇ 10 ಡಿಪೊಗಳನ್ನು ಬಿಟ್ಟು ಕೊಡಲಾಗಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ ಈ ನಾಲ್ಕು ನಿಗಮಗಳು ದೇಶದಲ್ಲಿಯೇ ಉತ್ತಮ ನಿಗಮಗಳಾಗಿವೆ. ಹೀಗೆ ಖಾಸಗೀಕರಣ ಮುಂದುವರಿದರೆ ಮುಂದಿನ ದಿನಗಳಲ್ಲಿ ಉತ್ತರ ಭಾರತದ ನಿಗಮಗಳಂತೆ ದುರ್ಬಲಗೊಳ್ಳಲಿವೆ ಎಂದು ನೌಕರರು ಹೇಳುತ್ತಿದ್ದಾರೆ.
ಒತ್ತಡ ಹೇರದ ರಾಜ್ಯ ಸರ್ಕಾರ: ವಿವಿಧ ಸಾರಿಗೆ ಒಕ್ಕೂಟಗಳು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ. ಎಲೆಕ್ಟ್ರಿಕ್ ಬಸ್‌ಗಳನ್ನು ನಿಗಮಗಳೇ ಖರೀದಿ ಮಾಡಬೇಕು ಎಂದು ಒಕ್ಕೂಟಗಳ ಸದಸ್ಯರು ಒತ್ತಾಯಿಸಿದ್ದಾರೆ. ಆ ಸಂದರ್ಭದಲ್ಲಿ ಖರೀದಿಗೆ ನಮಗೆ ಅವಕಾಶ ನೀಡಬೇಕು.
ಇನ್ನು ಸಬ್ಸಿಡಿಯನ್ನು ನಮಗೆ ಒದಗಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂಬುವುದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆಯಾಗಿದೆ. ಇದನ್ನು ಹೊರತುಪಡಿಸಿ ಕೇಂದ್ರ ಸರ್ಕಾರದ ಆದೇಶವನ್ನು ರದ್ದುಪಡಿಸಲು ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿಲ್ಲ ಇದು ಹಲವು ಅನುಮಾನಕ್ಕೆ ದಾರಿ ಮಾಡಿಕೊಡುತ್ತಿದೆ.
Related
You Might Also Like
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ
ಬೆಂಗಳೂರು: ಪತ್ನಿ ಹಾಗೂ ಪತ್ನಿ ತಂದೆಯ ಅಂದರೆ ಮಾನನ ಕಿರುಕುಳದಿಂದ ಮಾನಸಿಕವಾಗಿ ಭಾರಿ ನೋವು ಅನುಭವಿಸಿದ ಹೆಡ್‌ಕಾನ್‌ಸ್ಟೇಬಲ್ ಒಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯದ...
9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ
ಮಂಗಳೂರು: ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದ ಆರೋಪಿ ಪಿಡಿಒಗೆ ಮಂಗಳೂರಿನ 3ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು 3 ವರ್ಷದ...
KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ಕುಣಿಗಲ್ ಘಟಕದ ಚಾಲಕ ಮನನೊಂದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದು, ವಿಷಯ ತಿಳಿದ ಕೂಡಲೇ ಅಧಿಕಾರಿಗಳು...
KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಬೇಡಿಕೆಗಳ ಈಡೇರಿಕಗಾಗಿ ಜಂಟಿ ಕ್ರಿಯಾ ಸಮಿತಿ ಇದೇ ಡಿ.31ರಂದು ಮುಷ್ಕರಕ್ಕೆ ಕರೆ ನೀಡಿದೆ. ಅದರ ಮುಂದುವರಿದ ಭಾಗವಾಗಿ...
ಸರ್ಕಾರದ ನಡೆಯೇ BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG
ಬೆಂಗಳೂರು: ರಾಜ್ಯ ಸರ್ಕಾರದ 5 ಮಹತ್ವದ ಗ್ಯಾರಂಟಿ ಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಕರ್ನಾಟಕದಲ್ಲಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಎಲ್ಲಿ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದಾದ ಯೋಜನೆ...
KSRTC ಕುಣಿಗಲ್: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರೊಬ್ಬರ ಮೇಲೆ ಲಾ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದರೂ ಸಹ ಅವರನ್ನು ಬಂಧಿಸದಿರುವುದಕ್ಕೆ ಅಸಮಾಧಾನಗೊಂಡ ಹಲ್ಲೆಗೊಳಗಾದ ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ....
KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ
ಸಾರಿಗೆ ನೌಕರರತ್ತ ಒಮ್ಮೆ ನೋಡಿ l ವೇತನ ಹೆಚ್ಚಳ ಸಮಸ್ಯೆಗೆ ಇತಿಶ್ರೀ ನಿಮ್ಮಿಂದ ಸಾಧ್ಯ ಬೆಂಗಳೂರು: ತಿಂಗಳು ಪೂರ್ತಿ ದುಡಿದರೂ ಸರಿಯಾದ ಸಮಯಕ್ಕೆ ವೇತನ ಸಿಗದೆ, ಸಿಕ್ಕ...
BMTC: ಆಧಾರ್ ಕಾರ್ಡ್ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಆಧಾರ್ ಕಾರ್ಡ್ ಯಾವುದೇ ಭಾಷೆಯಲ್ಲಿರಲಿ ಅದು ಕರ್ನಾಟಕ ರಾಜ್ಯದ್ದಾಗಿದ್ದರೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ನೀಡಬೇಕು...
ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್
ಹಾವೇರಿ: ಚೆಲಿಸುತ್ತಿದ್ದ ಬಸ್ ಹತ್ತಲು ಹೋಗಿ ವೃದ್ಧೆಯೊಬ್ಬರು ಕೆಳಗೆ ಬಿದ್ದ ಪರಿಣಾಮ ಬಸ್ಸಿನ ಹಿಂಬದಿ ಚಕ್ರ ಹರಿದು ಎರಡು ಕಾಲುಗಳು ತುಂಡಾಗಿರುವ ಘಟನೆ ನಗರದ ಕೇಂದ್ರ ನಿಲ್ದಾಣದಲ್ಲಿ...
KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್ ಬಂಧನ
ಮಡಿಕೇರಿ: ನಿತ್ಯ ತಾನು ಬಸ್ ಚಲಾಯಿಸುತ್ತಿದ್ದ ಮಾರ್ಗವನ್ನು ಬದಲಾಯಿಸಿ ಬೇರೆ ಮಾರ್ಗಕ್ಕೆ ಕರ್ತವ್ಯಕ್ಕೆ ನಿಯೋಜಿಸಿದ್ದಕ್ಕೆ ಸಹೋದ್ಯೋಗಿ ನಿರ್ವಾಹಕನೆ ಕಾರಣ ಕಾರಣ ಎಂದು ನಿರ್ವಾಹಕನ ಮೇಲೆ ಮುಗಿಬಿದ್ದು ಸಾರ್ವಜನಿಕ...
KKRTC ರಾಯಚೂರು: ಲಿಂಗಸುಗೂರು ಘಟಕ ವ್ಯವಸ್ಥಾಪಕ, ಡಿಸಿ ಅಮಾನತಿಗೆ ಕರವೇ ಆಗ್ರಹ
ಲಿಂಗಸಗೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಲಿಂಗಸುಗೂರು ಘಟಕದಲ್ಲಿ ಚಾಲಕ ಹಾಗೂ ನಿರ್ವಾಹಕರಿಗೆ ಘಟಕ ವ್ಯವಸ್ಥಾಪಕರು ದಿನನಿತ್ಯ ಒಂದಿಲೊಂದು ರೀತಿಯಲ್ಲಿ ಕಿರುಕುಳು ನೀಡುತ್ತಿದ್ದು...
ಮೈಸೂರು: ಸಾಲದ ಸುಳಿಗೆ ಸಿಲುಕಿದ KSRTC ಕಂಡಕ್ಟರ್: ನಾಲೆಗೆ ಹಾರಿ ಆತ್ಮಹತ್ಯೆ
ಮೈಸೂರು: ಸಾಲದ ಸುಳಿಯಲ್ಲಿ ಸಿಲುಕಿ ಅದನ್ನು ತೀರಿಸಲಾಗದೆ ಮನಸ್ಸಿನಲ್ಲಿ ಭಾರಿ ನೋವು ಅನುಭವಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ವಿಭಾಗದ ನಿರ್ವಾಹಕರೊಬ್ಬರು ನದಿಗೆ ಹಾರಿ...