KSRTC ನಿವೃತ್ತ ನೌಕರರಿಗೆ ಫ್ರೀ ಪಾಸ್ ಕೊಡಿ: ಹಣ ಕಟ್ಟಿದ ಮೇಲೆ ಪಾಸ್ ನೀಡುವುದು ಸಲ್ಲ
![](https://vijayapatha.in/wp-content/uploads/2024/05/8-May-ksrtc-logo.jpg)
ಬೆಂಗಳೂರು: ರಾಜಕಾರಣಿಗಳಿಗೆ ಹಾಗೂ ಸ್ವತಂತ್ರ್ಯ ಹೋರಾಟಗಾರರು ಸೇರಿದಂತೆ ಹಲವಾರು ಜನರಿಗೆ ಈಗಲೂ ಸಹ ಸಾರಿಗೆ ಸಂಸ್ಥೆ ಫ್ರೀ ಪಾಸ್ಗಳನ್ನು ನೀಡಿದೆ.
ಆದರೆ ಸಂಸ್ಥೆಯಲ್ಲಿ (30) ಮೂವತ್ತಕ್ಕೂ ಹೆಚ್ಚು ವರ್ಷಗಳು ದುಡಿದು ನಿವೃತ್ತರಾದಂತಹ ನೌಕರರಿಗೆ ಪ್ರತಿ ವರ್ಷ 500 ಅವರ ಪತ್ನಿಗೆ 500 ಒಟ್ಟಿಗೆ ರೂ.1000 ವರ್ಷಕ್ಕೆ ಕಟ್ಟಿಸಿಕೊಂಡು ಪಾಸನ್ನು ನೀಡುತ್ತಿದ್ದಾರೆ ಇದು ಸರಿಯಲ್ಲ.
ಸರ್ಕಾರ ಹಾಗೂ ಆಡಳಿತ ಮಂಗಳಿಗಳು ಮಾಡುತ್ತಿರುವ ಈ ತಾರತಮ್ಯತೆಯನ್ನು ಸಾರಿಗೆ ನಿವೃತ್ತ ನೌಕರರು ಈಗಲೂ ಸಹ ಸಹಿಸಿಕೊಂಡು ಹೋಗುತ್ತಿದ್ದಾರೆ.
ಆದರೆ ಇನ್ನು ಮುಂದಾದರೂ ಹಾಲಿ ನೌಕರರು ಸಂಬಂಧಪಟ್ಟವರನ್ನು ಒತ್ತಾಯಿಸಿ ಈ ಕ್ರಮ ಸರಿ ಇಲ್ಲವೆಂದು ಸರ್ಕಾರ ಹಾಗೂ ಸಾರಿಗೆ ಅಧಿಕಾರಿಗಳ ಮೇಲೆ ಒತ್ತಡ ತರುವ ಬಗ್ಗೆ ಯೋಚನೆ ಮಾಡಬೇಕಿದೆ.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀವು ಸಹ ನೀವೇ ದುಡಿದಂತ ಈ ಸಂಸ್ಥೆಗಳಲ್ಲಿ ಹಣ ಕೊಟ್ಟು ಓಡಾಡುವ ಕಾಲ ದೂರವೇನು ಇಲ್ಲ. ಆದ್ದರಿಂದ ಸಂಘಟನೆಯ ನಾಯಕರು ಇದನ್ನು ಲಘುವಾಗಿ ತೆಗೆದು ಕೊಳ್ಳದೆ ನಿಮ್ಮ ನಿಮ್ಮ ಅಜೆಂಡಾಗಳಲ್ಲಿ ಮುಖ್ಯವಾಗಿ ಈ ವಿಷಯವನ್ನು ಸೇರಿಸಬೇಕು ಹಾಗೂ ಇದರ ವಿರುದ್ಧವು ಸಹ ತಾವು ಧ್ವನಿ ಎತ್ತಬೇಕೆಂದು ನೌಕರರು ಮನವಿ ಮಾಡಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)