VIJAYAPATHA.IN > ವಿಜಯಪಥ > NEWS > Crime > KSRTC ಬಸ್- ಬೈಕ್ ನಡುವೆ ಅಪಘಾತ: ಒಬ್ಬ ಸವಾರ ಸಾವು ಮತ್ತೊಬ್ಬನಿಗೆ ಗಾಯ
ದೇವನಹಳ್ಳಿ: ಕೆಎಸ್ಆರ್ಟಿಸಿ ಬಸ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ದೇವನಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ವೆಂಕಟಗಿರಿಕೋಟೆ ಸಮೀಪ ನಡೆದಿದೆ.
ಅಪಘಾತದಲ್ಲಿ ಬೈಕ್ ಹಿಂಬದಿ ಕುಳಿತಿದ್ದ ವಡಿವೇಲು (45) ಎಂಬುವರು ಮೃತಪಟ್ಟಿದ್ದು, ಬೈಕ್ ಓಡಿಸುತ್ತಿದ್ದ ಮಧು ಎಂಬುವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದು ಭಾನುವಾರ ಆಗಿರುವುದರಿಂದ ತಮ್ಮ ಕೆಲಸಕ್ಕೆ ರಜೆ ಇದ್ದ ಕಾರಣ ಮಧು ಮತ್ತು ಪಡಿವೇಲು ಇಬ್ಬರು ಈಶಾ ಫೌಂಡೇಶನ್ಗೆ ತೆರಳಲು ಬುಲೆಟ್ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿಯಾಗಿದೆ ಈ ಅವಘಡ ಸಂಭವಿಸಿದೆ.
ಇನ್ನು ಬಸ್ ಬೈಕ್ಗೆ ಡಿಕ್ಕಿ ಹೊಡೆದ ರಭಸಕ್ಕೆ ಹಿಂಬದಿ ಕುಳಿತ್ತಿದ್ದ ವಡಿವೇಲು ಹಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರೆ, ಬೈಕ್ ಚಲಾಯಿಸುತ್ತಿದ್ದ ಮಧು ಸಣ್ಣ-ಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Related
admin.savhn