KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋಣ
ಬೆಂಗಳೂರು: ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಬಂದು ಉದ್ಭವವಾಗುವ ಈ ಮಹಾನುಭಾವ ತಮ್ಮ ಸ್ವಾರ್ಥ ಹಾಗೂ ಆರ್ಥಿಕವಾಗಿ ಸಬಲರಾಗಲು ಸರ್ಕಾರದ ಹಾಗೂ ಸಾರಿಗೆ ನಿಗಮದ ಆಡಳಿತ ಮಂಡಳಿಯ ಮುಂದೆ ನೌಕರರನ್ನು ಹರಕೆಯ ಕುರಿಯಾಗಿ ಬಲಿ ಕೊಡುತ್ತ ಬಂದಿದ್ದು ರೂಢಿಯಾಗಿದೆ.
ಒಮ್ಮೆ ಯೋಚಿಸಿ ನೋಡಿ ನಮ್ಮ ಹಿರಿಯರು ದೇವರಿಗೆ ತಮ್ಮನ್ನು ಹಾಗೂ ಕುಟುಂಬವನ್ನು ಚೆನ್ನಾಗಿಡಲಿ ಅಂತ ವರ್ಷಕ್ಕೆ ಹಾಗೂ ಎರಡು ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಕುರಿಗಳನ್ನು ಹರಕೆಯ ರೂಪದಲ್ಲಿ ಬಲಿಕೊಡುತ್ತಾರೆ ಎಂಬುವುದು ನಮ್ಮ ಸಾಕಷ್ಟು ಜನರಿಗೆ ತಿಳಿದಿರುವ ವಿಷಯ. ಈಗ ಪ್ರಸ್ತುತ ನಮ್ಮ ಸಾರಿಗೆ ನಿಗಮದಲ್ಲೂ ಇದೇ ನಡೆಯುತ್ತಿದೆ.
ಸಂಸ್ಥೆ ಆರಂಭದ ದಿನಗಳಲ್ಲಿ ನಿಗಮದಲ್ಲಿ ಚಾಲಕ, ನಿರ್ವಾಹಕರು ಹೆಚ್ಚಿನ ವಿದ್ಯಾಭ್ಯಾಸವಿಲ್ಲದೆ ಮತ್ತು ಈಗಿನ ಹಾಗೆ ಸಾಮಾಜಿಕ ಜಾಲತಾಣ ಪ್ರಬಲವಿಲ್ಲದ ಕಾರಣ ಸಂಸ್ಥೆಯಲ್ಲಿ ತಮ್ಮ ಮೇಲೆ ಯಾವ ರೀತಿಯ ಮೋಸ ವಂಚನೆ ನಡೆಯುತ್ತಿದೆ ಎಂಬುವುದು ತಿಳಿಯುತ್ತಿರಲಿಲ್ಲ.
ಕಾಲಂತರ ಹೇಗೆ ಹರಿಯೋ ನದಿಯಲ್ಲಿ ನೀರು ನಿಲ್ಲದಿಲ್ವೋ ಹಾಗೆ ವಿದ್ಯಾಭ್ಯಾಸ ಕಡಿಮೆ ಇರುವ ಹಿರಿಯರು ನಿವೃತ್ತಿ ಹೊಂದಿದಂತೆ ವಿದ್ಯಾವಂತ ನೌಕರರು ಬರಲಾರಂಭಿಸಿದರು. ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಪಡಲಾರಂಭಿಸಿದರು. ಹಾಗೆ ತಿಳಿಯಲಾರಂಭಿಸಿದ್ದೆ ಆ ಮಹಾನುಭಾವರ ಅಸಲಿ ಸತ್ಯವನ್ನು ಒಂದೊಂದೇ ಹೊರಗೆ ಬರಲಾರಂಭಿಸಿದವು.
ಸ್ನೇಹಿತರೆ ಇದೆ ಮಹಾನುಭಾವರು ಪಕ್ಕದ ತೆಲಂಗಾಣ ರಾಜ್ಯದಲ್ಲಿ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಪ್ರತಿಭಟಿಸುವ ಸಮಯದಲ್ಲಿ ತಾವು ಸಹ ಭಾಗವಹಿಸಿ ಅಲ್ಲಿಯ ನೌಕರರಿಗೆ ಸರ್ಕಾರದ ಮೇಲೆ ಒತ್ತಡ ಹಾಕಿ ಸರ್ಕಾರಿ ನೌಕರರೆಂದು ಘೋಷಣೆ ಮಾಡಿಸಿದರು.
ಅದೇ ನಮ್ಮ ಕರ್ನಾಟಕದ ವಿಷಯಕ್ಕೆ ಬಂದರೆ ತಮಗೆ ಲಾಭದಾಯಕವಾದ ಈ ವೇತನ ಪರಿಸ್ಕರಣೆ ಎಂಬ ಚೌಕಾಸಿ ಅನಿಷ್ಟ ಪದ್ಧತಿಯನ್ನು ಮುಂದುವರಿಸಲು ಪಟ್ಟು ಹಿಡಿಯುತ್ತಾರೆ ಎಂದರೆ ಇದರಲ್ಲಿ ನೌಕರರ ಹಿತಾಸಕ್ತಿಗಿಂತ ತಮ್ಮ ವೈಯಕ್ತಿಕ ಲಾಭಕ್ಕೋಸ್ಕರನೇ ಮಾಡುತ್ತಿದ್ದಾರೆ ಎನ್ನೊ ಅನುಮಾನ ಕಾಡುತ್ತದೆ. ಇದಕ್ಕೆಲ್ಲ ಆ ಮಹಾನುಭಾವರೇ ಉತ್ತರಿಸಬೇಕು.
ಸದ್ಯದ ಪರಿಸ್ಥಿತಿಯಲ್ಲಿ ನೌಕರರು ಯಾರು ಹರಿಕೆಯ ಕುರಿಯಾಗಲು ಇಚ್ಛಿಸುವುದಿಲ್ಲ. ಹಾಗೆಯೇ ಮಧ್ಯವರ್ತಿಯ ಸ್ವಹಿತಾಸಕ್ತಿಗೆ ಬಲಿಯಾಗಲು ಯಾರು ಮುಂದೆ ಬರುವುದಿಲ್ಲ. ನೌಕರನಿಗೆ ಏನು ಬೇಕು ಏನು ಬೇಡ ಎಂದು ಯೋಚಿಸುವಷ್ಟು ವಿದ್ಯಾ ಬುದ್ಧಿವಂತರಿದ್ದಾರೆ ಹಾಗಾಗಿ ನಮಗೆ ಶಾಶ್ವತ ಪರಿಹಾರ ಸರಿಸಮಾನ ವೇತನ ಆಯೋಗ ಮಾದರಿಯೇ ಬೇಕು ಎಂದು ಸರ್ಕಾರದ ಮುಂದೆ ಪಟ್ಟು ಹಿಡಿಯುತ್ತಿರುವುದು.
ಒಬ್ಬ ಸರ್ಕಾರಿ ಕಾರು ಚಾಲಕ ಹಬ್ಬ ಹರಿದಿನ ವಾರದ ರಜೆ, FH, GH ಅಂತೆ ಪಡೆದು ಕೈ ತುಂಬಾ ಸಂಬಳ ಪಡೆದು ಕುಟುಂಬದೊಂದಿಗೆ ಎಲ್ಲಾ ರೀತಿಯ ಸುಖ ಸಂತೋಷದಿಂದಿರುತ್ತಾರೆ ಹಾಗೂ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಾರೆ.
ಅದೇ ನಾವು ಹಬ್ಬ ಹರಿದಿನ ಎನ್ನದೆ ಕೆಲವು ಬಾರಿ ವಾರದ ರಜೆ ಕೂಡ ಪಡೆಯದೆ ಫುಟ್ಪಾತ್‌ನಲ್ಲಿ ತಿಂದು ಎಲ್ಲೋ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಮಲಗಿ ಮತ್ತು ಹಗಲು ರಾತ್ರಿ ಎನ್ನದೆ ಕಷ್ಟಪಡುವ ನಮಗೆ ತನ್ನ ಕೆಲಸಕ್ಕೆ ತಕ್ಕಂತೆ ಸಂಬಳ ಕೇಳುತ್ತಿರುವುದು ತಪ್ಪೇನಿಲ್ಲ ಎನ್ನುವುದು ಅರಿತಿದ್ದಾರೆ.
ಯಾರದೊ ಆರ್ಥಿಕ ಲಾಭಕ್ಕಾಗಿ ಈ ನಾಲ್ಕು ವರ್ಷಕ್ಕೊಮ್ಮೆ ಚೌಕಾಸಿ ಪದ್ಧತಿ ಅನ್ನೋದು ಬಿಟ್ಟು ನಮಗೆ ಶಾಶ್ವತ ಪರಿಹಾರ, ಶ್ರಮಕ್ಕೆ ತಕ್ಕಂತೆ ಫಲ, ಸರಿಸಮಾನ ವೇತನ ಪಡೆಯಬೇಕೆಂಬುದಾಗಿ ದೃಢವಾಗಿ ನಿಚ್ಚಯಿರುತ್ತಾರೆ. ಇದನ್ನು ಯಾವುದೇ ಶಕ್ತಿ ತಂತ್ರ ಕುತಂತ್ರ ಮಾಡಿದರು ಹಿಂಜರಿಯುದಿಲ್ಲ.
ಹಾಗಾಗಿ ಸ್ನೇಹಿತರೆ, ಯಾವುದೆ ಕಾರಣಕ್ಕೂ ನೌಕರರ ವಿರೋಧಿ ಅನಿಷ್ಟ ನೀತಿ ಚೌಕಾಸಿ ಪದ್ದತಿಯನ್ನು ವಿರೋಧಿಸುತ್ತಾ, ಇದೆ 31-12-2024 ರ ಮುಷ್ಕರಕ್ಕೆ ಬೈಂಬಲಿಸದೆ, ನಮ್ಮ ಗುರಿ, ಧ್ಯೇಯ, ಸರಿಸಮಾನ ವೇತನ ಎಂಬುದನ್ನು ಒಗ್ಗಟ್ಟಿನಿಂದ ಸಂದೇಶ ಸಾರುವ ಮುಖಾಂತರ ಕರ್ತವ್ಯಕ್ಕೆ ಹಾಜರಾಗೋಣ. ಸರ್ಕಾರದ ಮಟ್ಟದಲ್ಲಿ ಈಗಾಗಲೇ ಸರಿ ಸಮಾನ ವೇತನದ ಕುರಿತು ಸಿದ್ಧತೆ ನಡೆದಿದೆ. ಹಾಗಾಗಿ ಈ ನೌಕರರ ವಿರೋಧಿ ಮುಷ್ಕರಕ್ಕೆ ಬೆಂಬಲವಿಲ್ಲ ಎಂದು ಸಂಕಲ್ಪದಿಂದ ಕರ್ತವ್ಯಕ್ಕೆ ಹಾಜರಾಗೋಣ ಎಂದು ನೌಕರರು ಹೇಳುತ್ತಿದ್ದಾರೆ.