NEWSನಮ್ಮಜಿಲ್ಲೆಮೈಸೂರು

ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದ ಚಿರತೆ: ಪ್ರಾಣದ ಹಂಗು ತೊರೆದು ಅಮ್ಮನ ರಕ್ಷಿಸಿದ ಮಗಳು

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ಚಿರತೆ ನುಗ್ಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮನೆಯಲ್ಲಿದ್ದ ಸುಜಾತಾ ಎಂಬ ಮಹಿಳೆ ಸಮಯಪ್ರಜ್ಞೆ ಮೆರೆದು, ಚಿರತೆ ಇದ್ದ ಕೊಠಡಿಯಿಂದ ತನ್ನ ತಾಯಿಯನ್ನು ರಕ್ಷಿಸಿ ಬಾಗಿಲು ಹಾಕಿದ್ದಾರೆ.

ಹೌದು! ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿರತೆಗಳ ಆತಂಕ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಕಾಡಿನ ಅಂಚಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ನೇರವಾಗಿ ಜನರ ಮಧ್ಯೆ ಬಂದು ಮನೆಗೇ ನುಗ್ಗುತ್ತಿವೆ.

ಇಂದು ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ಇಂತಹದ್ದೇ ಒಂದು ಮೈ ನಡುಗಿಸುವ ಘಟನೆ ನಡೆದಿದ್ದು, ಮನೆಯ ಕೊಠಡಿಯೊಳಗೆ ನುಗ್ಗಿದ ಚಿರತೆಯನ್ನು ಕಂಡು ಬೆಚ್ಚಿಬಿದ್ದ ಕುಟುಂಬವೊಂದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ.

ಸಿದ್ದಾರ್ಥ ಬಡಾವಣೆಯ ನಿವಾಸಿ ಸುರೇಶ್ ಎಂಬುವವರ ಮನೆಗೆ ಇಂದು ಬೆಳ್ಳಂಬೆಳಿಗ್ಗೆ ಚಿರತೆ ನುಗ್ಗಿದೆ. ಮನೆಯ ಮುಂಭಾಗದ ಬಾಗಿಲು ತೆರೆದಿದ್ದನ್ನು ಕಂಡ ಚಿರತೆ, ನೇರವಾಗಿ ಒಳಗಿನ ಕೊಠಡಿಯೊಂದಕ್ಕೆ ನುಗ್ಗಿದೆ. ಈ ಸಮಯದಲ್ಲಿ ಮನೆಯಲ್ಲಿ ಸುರೇಶ್ ಅವರ ಪತ್ನಿ ಸುಜಾತ ಮತ್ತು ಅವರ ತಾಯಿ ಶೈಲಜಾ ಮಾತ್ರ ಇದ್ದರು.

ಅಮ್ಮನನ್ನು ರಕ್ಷಿಸಿದ ಮಗಳು: ಚಿರತೆ ನೇರವಾಗಿ ಅಜ್ಜಿ ಶೈಲಜಾ ಅವರು ಇದ್ದ ಕೊಠಡಿಯೊಳಗೆ ನುಗ್ಗಿದೆ. ಕಣ್ಣೆದುರೇ ಕಾಡುಪ್ರಾಣಿಯನ್ನು ಕಂಡ ಶೈಲಜಾ ಆಘಾತಕ್ಕೊಳಗಾಗಿದ್ದಾರೆ. ಆದರೆ, ತಕ್ಷಣವೇ ಕಾರ್ಯಪ್ರವೃತ್ತರಾದ ಸುರೇಶ್ ಅವರ ಪತ್ನಿ ಸುಜಾತ, ಪ್ರಾಣದ ಹಂಗು ತೊರೆದು ಅದ್ಭುತ ಧೈರ್ಯ ತೋರಿದ್ದಾರೆ. ಚಿರತೆ ದಾಳಿ ಮಾಡುವ ಮೊದಲೇ ತನ್ನ ತಾಯಿಯನ್ನು ಚಾಣಾಕ್ಷತನದಿಂದ ಕೊಠಡಿಯಿಂದ ಹೊರಕ್ಕೆ ಎಳೆದು ತಂದು, ಹೊರಗಿನಿಂದ ಕೊಠಡಿಯ ಬಾಗಿಲು ಲಾಕ್ ಮಾಡಿದ್ದಾರೆ. ಸುಜಾತ ಅವರ ಈ ಸಮಯಪ್ರಜ್ಞೆ ಮತ್ತು ಅಪ್ರತಿಮ ಧೈರ್ಯದಿಂದಾಗಿ ಇಂದು ಒಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಮನೆಯೊಳಗೆ ಚಿರತೆ ಇರುವುದನ್ನು ಖಚಿತಪಡಿಸಿಕೊಂಡ ಕುಟುಂಬಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಚಿರತೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಚಿರತೆಯು ಸದ್ಯ ಮನೆಯ ಒಂದು ಕೊಠಡಿಯಲ್ಲೇ ಬಂಧಿಯಾಗಿದ್ದು, ಅದನ್ನು ಅರಿವಳಿಕೆ ಮದ್ದು ನೀಡಿ ಸೆರೆಹಿಡಿದಿದ್ದಾರೆ.

ಬಡಾವಣೆ ನಿವಾಸಿಗಳಲ್ಲಿ ಆತಂಕ: ನಗರದ ಮಧ್ಯಭಾಗದಲ್ಲಿರುವ ಸಿದ್ದಾರ್ಥ ಬಡಾವಣೆಗೆ ಚಿರತೆ ಬಂದಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಸುದ್ದಿ ಹರಡುತ್ತಿದ್ದಂತೆ ನೂರಾರು ಜನರು ಸುರೇಶ್ ಅವರ ಮನೆಯ ಬಳಿ ಜಮಾಯಿಸಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಮೈಸೂರು ನಗರದ ಸುತ್ತಮುತ್ತಲಿನ ಬೆಟ್ಟ ಮತ್ತು ಪೊದೆಗಳಿಂದ ಚಿರತೆಗಳು ನಗರಕ್ಕೆ ಲಗ್ಗೆ ಇಡುತ್ತಿರುವುದು ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಮ್ಮನನ್ನು ರಕ್ಷಿಸಿದ ಸುಜಾತ ಅವರ ಸಾಹಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Deva
the authorDeva

Leave a Reply

error: Content is protected !!
Latest news
ಸರ್ಕಾರಿ ನೌಕರ ಪರೋಕ್ಷವಾಗಿ ಬೇರೊಬ್ಬರ ಮೂಲಕ ಲಂಚ ಪಡೆದರೂ ಆತ ತಪ್ಪಿತಸ್ಥನೆ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಇಂದಿನಿಂದ ಜಾರಿ: ಕರೆಂಟ್‌ ಬಿಲ್‌ಕೊಟ್ಟ ದಿನದಿಂದ ರಜೆ ಹೊರತುಪಡಿಸಿ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಸರ್ಕಾರಿ ಸಾರಿಗೆ ಚಾಲನಾ, ತಾಂತ್ರಿಕಾ ಸಿಬ್ಬಂದಿ ಕಾರ್ಮಿಕರಲ್ಲ: “ಸಂಸ್ಥೆ ನಿಯಮಗಳ ಮೂಲಕ ಯಾರು ನೇಮಕವಾಗಿದ್ದಾರೋ ಅವರೇ ಅ... ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆ ಎಂಡಿಗಳಿಗೆ ಪತ್ರ ಬರೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಳೆ ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯ ವ್ಯತ್ಯಾಸ ತಿಳಿಯಲು ಸಾರಿಗೆ ನೌಕರರಿಂದ NWKRTC ಎಂಡಿ ಭೇಟಿ GBA East ತ್ಯಾಜ್ಯ ವಿಲೇವಾರಿ ಅಕ್ರಮ: 6 ವಾಹನಗಳ ವಶ- FIR ದಾಖಲು NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು